ಕರಡಿಗೆ ತಂಪು ಪಾನೀಯದ ಬಾಟಲಿಯನ್ನು ಕುಡಿಯಲು ಕೊಡುತ್ತಿರುವ ಆಘಾತಕಾರಿ ಘಟನೆ ಛತ್ತೀಸ್ಗಡದ ದ ಕಂಕೇರ್ ಜಿಲ್ಲೆಯಲ್ಲಿ ನಡೆದಿದೆ. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವಿಡಿಯೊ ವೈರಲ್ ಆಗುತ್ತಿದ್ದಂತೆ, ಇಗನ್ನು ಗಮನಕ್ಕೆ ತೆಗೆದುಕೊಂಡಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ದೃಢಪಡಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ಯುವಕರನ್ನು ಗುರುತಿಸಲು ಪ್ರಯತ್ನಗಳು ನಡೆಯುತ್ತಿವೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.ಆಗಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
Read More »ಪ್ರಾಣಿಗಳನ್ನು ಬೇಟೆಯಾಡಲು ಹಾಕಲಾದ ಅಕ್ರಮ ವಿದ್ಯುತ್ ಬಲೆಗೆ ಸಿಲುಕಿ ಕರಡಿಯೊಂದು ಸಾವು.
ಮಹಾಸಮುಂದ್ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಹಾಕಲಾದ ಅಕ್ರಮ ವಿದ್ಯುತ್ ಬಲೆಗೆ ಸಿಲುಕಿ ಕರಡಿಯೊಂದು ಸಾವನ್ನಪ್ಪಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಹಲವಾರು ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ವನ್ಯಜೀವಿಗಳನ್ನು ಸೆರೆಹಿಡಿಯಲು ಅಥವಾ ಕೊಲ್ಲಲು ಉದ್ದೇಶಪೂರ್ವಕವಾಗಿ ವಿದ್ಯುತ್ ತಂತಿಗಳನ್ನು ಹಾಕಲಾಗಿದೆ ಎನ್ನಲಾಗಿದೆ.
Read More »ಇಬ್ಬರು ಹೆಣ್ಣುಮಕ್ಕಳ ಜೊತೆ ವಿಷಸೇವಿಸಿ ಆತ್ಮಹತ್ಯೆಗೆ ಯತ್ನ: ತಾಯಿ ಸಾವು; ಪುತ್ರಿಯರು ಬಚಾವ್!
ಲಕ್ಷ್ಮೀ ತನ್ನ ಇಬ್ಬರು ಪುತ್ರಿಯರಾದ 7 ವರ್ಷದ ತನು ಹಾಗೂ ಗೌತಮಿಗೆ ವಿಷಬೆರಸಿದ ಜ್ಯೂಸ್ ನೀಡಿ ಕುಡಿಯುವಂತೆ ಹೇಳಿದ್ದಳು. ಆದರೆ ಮಗಳು ತನು ಜ್ಯೂಸ್ ಬೇಡ ಎಂದು ಕುಡಿದಿರಲಿಲ್ಲ. ವಿಷಬೆರೆಸಿದ್ದ ಜ್ಯೂಸ್ ಕುಡಿದಿದ್ದ ತಾಯಿ ಲಕ್ಷ್ಮೀ ಒದ್ದಾಡುತ್ತಿರುವುದನ್ನು ಕಂಡು ತನು ಮನೆಯಿಂದ ಹೊರಬಂದು ರಸ್ತೆಯಲ್ಲಿ ಹೋಗುತ್ತಿದವರಿಗೆ ತನ್ನ ತಾಯಿಯನ್ನು ರಕ್ಷಿಸುವಂತೆ ಕಣ್ಣೀರಿಟ್ಟಿದ್ದಾಳೆ. ಸ್ಥಳಕ್ಕಾಗಮಿಸಿದ ಸ್ಥಳೀಯರು ಲಕ್ಷ್ಮೀಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.ಆತ್ಮಹತ್ಯೆಗೂ ಮುನ್ನ ಲಕ್ಷ್ಮೀ ತನ್ನ ಪತಿಗೆ ಇದು ತನ್ನ ಕೊನೆಯ ಕರೆ …
Read More »ನೂತನ ಪ್ರಧಾನಿ ಸುಶೀಲಾ ಪತಿ ವಿಮಾನ ಹೈಜಾಕ್ ಮಾಡಿದ್ದ ಆರೋಪಿ!
ನೇಪಾಳದಲ್ಲಿ ಇದೀಗ ಮಧ್ಯಂತರ ಸರ್ಕಾರ ರಚನೆಯಾಗಿದೆ. ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಕರ್ಕಿ ಅವರಿಗೆ ನೇಪಾಳದ ಉನ್ನತ ಸ್ಥಾನ ದೊರೆಯುತ್ತಿರುವ ಹೊತ್ತಿನಲ್ಲೇ ಅವರ ಪತಿಯ ಹೆಸರೂ ಮುನ್ನಲೆಗೆ ಬಂದಿದೆ.ಅವರು ಇದೀಗ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.ಹೈಜಾಕ್ ಆದ ವಿಮಾನದಲ್ಲಿ ಬಾಲಿವುಡ್ ನಟಿ ಮಾಲಾ ಸಿನ್ಹಾ ಸಹ ಇದ್ದರು. ಅವರು ನೇಪಾಳ ಮೂಲದ ತಮ್ಮ ಪತಿ ಸಿ.ಪಿ.ಲೋಹಾನಿ ಜತೆಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
Read More »ಬಸ್ಸಿನಲ್ಲಿ 12 ವರ್ಷದ ಹುಡುಗಿಯ ಮೊಬೈಲ್ ಕಿತ್ತುಕೊಂಡು ಕಿಸ್ ಕೇಳಿದ ಕಂಡಕ್ಟರ್ ಮೇಲೆ ಎಫ್ಐಆರ್!
ಅಕ್ಕನ ಊರಿನಿಂದ ವಾಪಸ್ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಸ್ಲೀಪರ್ ಬಸ್ನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಚಾಲಕನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ ಕುಟುಂಬಸ್ಥರು ಆರೋಪಿಯನ್ನು ಹಿಡಿದು ಥಳಿಸಿದ ನಂತರ ಹೈಗ್ರೌಂಡ್ ಪೊಲೀಸರಿಗೆ ಒಪ್ಪಿಸಿದ್ದಾರೆ.
Read More »ಕಳ್ಳರಿಂದ 2 ಕೆ.ಜಿ ಬಂಗಾರ ಜಪ್ತಿ ಮಾಡಿ, 250 ಗ್ರಾಂ ಲೆಕ್ಕ ತೋರಿಸಿದ ಪೊಲೀಸಪ್ಪನ ವಿರುದ್ಧ ಐಜಿಪಿಗೆ ದೂರು!
ಕಳ್ಳತನ ಪ್ರಕರಣಗಳ ತನಿಖೆ ವೇಳೆ ಕಳ್ಳರಿಂದ ವಶಪಡಿಸಿಕೊಂಡಿದ್ದ ಚಿನ್ನವನ್ನು ಕದ್ದ ಆರೋಪದ ಮೇಲೆ ಸೂರ್ಯನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂಜೀವ್ ಕುಮಾರ್ ಮಹಾಜನ್ ಮತ್ತು ಅವರ ಕ್ರೈಂ ಸಿಬ್ಬಂದಿ ವಿರುದ್ಧ ಕೇಂದ್ರ ವಲಯ ಐಜಿಪಿ ಲಾಬೂರಾಮ್ ಅವರಿಗೆ ದೂರು ನೀಡಲಾಗಿದೆ.ತನಿಖೆ ಕೈಗೊಂಡ ಇನ್ಸ್ಪೆಕ್ಟರ್ ಸಂಜೀವ್ ಮಹಾಜನ್ ಮತ್ತು ತಂಡ, ಪ್ರಕರಣಕ್ಕೆ ಸಂಬಂಧಿಸಿದ ಮಾರ್ವಾಡಿಗಳನ್ನು ವಶಕ್ಕೆ ಪಡೆದು ಖಾಸಗಿ ಲಾಡ್ಜ್ವೊಂದರಲ್ಲಿ ಕೂಡಿಹಾಕಿ ಚಿನ್ನವನ್ನು ರಿಕವರಿ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
Read More »ಗುಡಿಬಂಡೆ: ಕೆರೆಯಲ್ಲಿ ಹೂತಿಟ್ಟಿದ್ದ ಶವ ಪತ್ತೆ.
ಮೇಡಿಮಾಕಲಹಳ್ಳಿ ಕ್ರಾಸ್ ಬಳಿಯ ಕೋಳಿಫಾರ್ಮ್ನಲ್ಲಿ ವಿದ್ಯುಕ್ ಕೆಲಸ ಮಾಡುವಾಗ ವಿದ್ಯುತ್ ತಂತಿ ತಗುಲಿ ಮೃತಪಟ್ಟ ವ್ಯಕ್ತಿಯ ಶವವನ್ನು ಯಾರಿಗೂ ತಿಳಿಯದಂತೆ ಕೆರೆಯಲ್ಲಿ ಹೂತು ಹಾಕಲಾಗಿತ್ತು. ಆ ಶವವನ್ನು ಪೊಲೀಸರು ಮತ್ತು ಕಂದಾಯ ಅಧಿಕಾರಿಗಳ ಸಮ್ಮುಖದಲ್ಲಿ ಗುರುವಾರ ಕೆರೆಯಿಂದ ಹೊರತೆಗೆಯಲಾಗಿದೆ.ಮೃತನನ್ನು ಬೀಚಗಾನಹಳ್ಳಿ ಗ್ರಾಮದ ರವಿ ಎಂದು ಗುರುತಿಸಲಾಗಿದೆ.
Read More »ಫೋನ್ ಮಾಡಿದ ಯುವಕನಿಗೆ ಅವಾಚ್ಯವಾಗಿ ನಿಂದಿಸಿದ ಆರೋಪ; ಅಬ್ದುಲ್ ರಜಾಕ್ ವಿರುದ್ಧ FIR.
ಕೊಪ್ಪಳ ಜಿಲ್ಲೆಯ ಕವಲೂರು ಓಣಿ ನಿವಾಸಿ, ವಾಲ್ಮೀಕಿ ಸಮುದಾಯಕ್ಕೆ ಸೇರಿದ ಯುವಕ ಮಂಜುನಾಥ್ ನಾಯಕ್ ಎಂಬುವವರಿಗೆ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಜಾತಿನಿಂದನೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ.ಫೋನ್ ಇಡಲೋ ಸುವ್ವರ್..’ ಎಂದು ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಮಂಜುನಾಥ ಆರೋಪಿಸಿದ್ದಾರೆ. ಈ ಕುರಿತು ಅವರು ಆಡಿಯೋ ರೆಕಾರ್ಡಿಂಗ್ ಸಹಿತ ನಗರ ಠಾಣೆಗೆ ದೂರು ನೀಡಿದ್ದಾರೆ.
Read More »ಮದ್ದೂರು ಗಣೇಶ ಗಲಾಟೆ ಕೇಸ್: ಇನ್ಸ್ ಪೆಕ್ಟರ್ ಶಿವಕುಮಾರ್ ಸಸ್ಪೆಂಡ್.
ಮದ್ದೂರಲ್ಲಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದು, ಗಲಾಟೆಯಾಗಿತ್ತು. ಈ ಪ್ರಕರಣದಲ್ಲಿ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್ ತಲೆದಂಡವಾಗಿದೆ. ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ.
Read More »2ನೇ ಮಹಡಿಯಿಂದ ಬಿದ್ದು ಯುವತಿ ದಾರುಣ ಸಾವು!
ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದವಿದ್ಯಾರ್ಥಿನಿಯೊಬ್ಬಳು ಮನೆಯ ಮಹಡಿಯಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪ್ರಿಯಾಂಕಾ (19) ಮೃತಪಟ್ಟ ದುರ್ಧೈವಿ. ಈಕೆ ಮಹೇಶ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು.ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ (ಯುಡಿಆರ್) ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





