ಬೆಂಗಳೂರಿನ ಪರಪ್ಪನ ಅಗ್ರಹಾರದ ಆವರಣದಲ್ಲಿ ಕಾಂಪೌಂಡ್ ಬಳಿ ಕರಡಿ ಪ್ರತ್ಯಕ್ಷವಾಗಿದ್ದು, ಸಿಬ್ಬಂದಿಗಳ ಮೊಬೈಲ್ ನಲ್ಲಿ ಕರಡಿ ಓಡಾಟದ ದೃಶ್ಯ ಸೆರೆಯಾಗಿದೆ. ನಟ ದರ್ಶನ್ ಇರುವ ಸೆಲ್ ನ ಕಾಂಪೌಂಡ್ ಬಳಿ ಕರಡಿ ಕಾಣಿಸಿಕೊಂಡಿದೆ ಎನ್ನಲಾಗಿದೆ.ಕರಡಿ ಕಾಣಿಸಿಕೊಂಡ ಹಿನ್ನೆಲೆ ಎಚ್ಚರಿಕೆಯಿಂದ ಇರುವಂತೆ ಜೈಲಿನ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
Read More »ಸಿನಿಮಾ ಟಿಕೆಟ್ GST ಶೇ 12 ರಿಂದ ಶೇ 5ಕ್ಕೆ ಇಳಿಕೆ; ಸೆಪ್ಟೆಂಬರ್ 22 ರಿಂದ ಸಿಂಗಲ್ ಸ್ಕ್ರೀನ್ಗಳಿಗೆ ಬಿಗ್ ರಿಲೀಫ್!
ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯ ಬಳಿಕ, ಜಿಎಸ್ಟಿ ವ್ಯವಸ್ಥೆಯ ಅಡಿಯಲ್ಲಿ ಈಗಿರುವ ನಾಲ್ಕು ತೆರಿಗೆ ಹಂತಗಳನ್ನು ಎರಡು ಹಂತಗಳಿಗೆ ಇಳಿಸುವ ಪ್ರಸ್ತಾವಕ್ಕೆ ಜಿಎಸ್ಟಿ ಮಂಡಳಿಯು ಒಪ್ಪಿಗೆ ನೀಡಿದೆ. ಈ ಎರಡು ತೆರಿಗೆ ಹಂತಗಳ (ಶೇ 5 ಮತ್ತು ಶೇ 18) ಹೊಸ ವ್ಯವಸ್ಥೆಯು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿವೆ.ಕಡಿಮೆ ಬೆಲೆಯ ಟಿಕೆಟ್ಗಳ ಮೇಲಿನ ಶೇ 7 ರಷ್ಟು ತೆರಿಗೆ ಕಡಿತವು ದೇಶದಾದ್ಯಂತ ಸಿಂಗಲ್-ಸ್ಕ್ರೀನ್ ಥಿಯೇಟರ್ಗಳಲ್ಲಿ ಸಿನಿಮಾ ಪ್ರದರ್ಶನವನ್ನು …
Read More »ಸ್ನೇಹಿತನ ಜೊತೆ 500 ರೂ. ಬೆಟ್ಸ್ ಕಟ್ಟಿ ನದಿಗೆ ಹಾರಿದ ಯುವಕ ಸಾವು.
ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ನಿವಾಡಾ ಗ್ರಾಮದ 19 ವರ್ಷದ ಯುವಕನೊಬ್ಬ ತನ್ನ ಸ್ನೇಹಿತನ ಜೊತೆ 500 ರೂ. ಬೆಟ್ಸ್ ಕಟ್ಟಿ ನೀರಿಗೆ ಹಾರಿದ ನಂತರ ಯಮುನಾ ನದಿಯ ಬಲವಾದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ.ಅಪಾಯವನ್ನು ಲೆಕ್ಕಿಸದೇ ಯುವಕ ಜುನೈದ್ ಎಂಬಾತ ನೀರಿಗೆ ಜಿಗಿದಿದ್ದಾನೆ. ಆತನ ಸ್ನೇಹಿತ ಈ ದೃಶ್ಯವನ್ನ ಸೆರೆ ಹಿಡಿದಿದ್ದಾನೆ.ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗಿದೆ. ನಿರಂತರ ಶೋಧ ಕಾರ್ಯಾಚರಣೆಯ ಹೊರತಾಗಿಯೂ ಜುನೈದ್ ಎಂದು ಗುರುತಿಸಲಾದ ಯುವಕ ಪತ್ತೆಯಾಗಿಲ್ಲ.ಸ್ನೇಹಿತನ …
Read More »ಹೈಡ್ರಾಲಿಕ್ ಲಿಫ್ಟ್ ನಲ್ಲಿ ಯುವಕ ಸಾವು!
ಬೇಕ್ನ ಕೇಕ್ ತಯಾರಿಸುವ ಕಂಪನಿಯ ಹೈಡ್ರಾಲಿಕ್ ಲಿಫ್ಟ್ನಲ್ಲಿ ಹೋಗುತ್ತಿದ್ದಾಗ ತಲೆಗೆ ಪೆಟ್ಟು ಬಿದ್ದು ಯುವಕ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಬೆಟ್ಟಹಲಸೂರು ಗ್ರಾಮದ ಭೂಪೇಂದ್ರ ಚೌಧರಿ (19) ಮೃತ ಯುವಕ.ಕಟ್ಟಡದಲ್ಲಿ ಹೈಡ್ರೋಲಿಕ್ ಲಿಫ್ಟ್ ಅಪರೇಟ್ ಮಾಡುತ್ತಿದ್ದ ಬಿ.ಕೆ.ಲಕ್ಷ್ಮೀ, ಕಂಪನಿಯ ಮೇಲುಸ್ತುವಾರಿ ರಾಜಶೇಖರ್ ಸೇರಿ ಇತರರ ವಿರುದ್ಧ ಚಿಕ್ಕಜಾಲ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read More »ಚಲಿಸುತ್ತಿದ್ದ ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ.
ಜಮ್ಮು ಕಾಶ್ಮೀರದಲ್ಲಿ ರಾಂಬನ್ ಜಿಲ್ಲೆಯ ಮಹಿಳೆಯೊಬ್ಬರು ಬುಧವಾರ ಸುಂಬರ್ ನಿಂದ ಬನಿಹಾಲ್ ಗೆ ಪ್ರಯಾಣಿಸುತ್ತಿದ್ದ ರೈಲಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ.ಸುಂಬ್ಲರ್ ಗ್ರಾಮದ ಅಖ್ತಾರಾ ಬಾನೋ ಎಂದು ಗುರುತಿಸಲಾದ ಮಹಿಳೆ ಪ್ರಯಾಣದ ಮಧ್ಯದಲ್ಲಿ ಹೆರಿಗೆ ನೋವು ಅನುಭವಿಸಿದರು.ರೈಲ್ವೆ ರಕ್ಷಣಾ ಪೊಲೀಸ್ ತಂಡವು ಅವರಿಗೆ ಸಹಾಯ ಮಾಡಿದ್ದು, ಹೆರಿಗೆಯ ಸಮಯದಲ್ಲಿ ತಕ್ಷಣದ ಬೆಂಬಲ ನೀಡಿದೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆಂದು ಹೇಳಲಾಗಿದೆ.
Read More »ಚೀನಾಗೆ ತನ್ನ ವಿಶೇಷ ಕಾರು ತಂದ ರಷ್ಯಾದ ಅಧ್ಯಕ್ಷ .. ! ಮೋದಿ ಜೊತೆ ಪುಟಿನ್ ಪ್ರಯಾಣಿಸಿದ.
ಚೀನಾದ ಟಿಯಾಂಜಿನ್ ನಗರದಲ್ಲಿ ನಡೆದ SCO ಸಭೆಯಲ್ಲಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡ ಉಪಸ್ಥಿತರಿದ್ದರು. ಇನ್ನು ಈ ಸಭೆಗೆ ಅವರ ಬರುತ್ತಿದ್ದಾರೆ ಎಂದಾಗ ಸಾಮಾನ್ಯವಾಗಿಯೇ ಬಹಳಷ್ಟು ಕಟ್ಟುನಿಟಾದ ಭದ್ರತೆಗಳನ್ನು ಅಳವಡಿಸಲಾಗಿತ್ತು.ವಿಶೇಷ ಲಿಮೋಸಿನ್ ಕಾರನ್ನು ರಷ್ಯಾದಲ್ಲಿ ತಯಾರಿಸಲಾಗುತ್ತದೆ ಈ ಕಾರನ್ನು ರಷ್ಯಾದ ಔರಸ್ ಮೋಟಾರ್ಸ್ ತಯಾರಿಸಿದೆ. ಇದು ರಷ್ಯಾದಲ್ಲಿ ದೇಶೀಯ ತಂತ್ರಜ್ಞಾನದೊಂದಿಗೆ ತಯಾರಿಸಿದ ಮೊದಲ ರಾಜ್ಯ ವಾಹನವಾಗಿದೆ. ಈ ಕಾರು 4.4-ಲೀಟರ್ ಟ್ವಿನ್-ಟರ್ಬೊ V8 ಎಂಜಿನ್ ಹೊಂದಿದ್ದು, ಇದು ಸುಮಾರು …
Read More »ಆಗಷ್ಟೇ ಮಾಡಿದ ಹೊಸ ರಸ್ತೆಯ ಡಾಮರ್ ಕದ್ದು ಮನೆಗೆ ಹೊತ್ತೊಯ್ದ ಜನ!
ಮಳೆ ಸುರಿದರೆ ಸಾಕು ಸರ್ಕಾರ ಮಾಡಿದ ರಸ್ತೆಗಳೆಲ್ಲಾ ಗುಂಡಿ ಬಿದ್ದು ಹೋಗುತ್ತದೆ. ರಸ್ತೆಯನ್ನು ಸರಿಪಡಿಸುವಂತೆ ಜನ ಮನವಿ ಮಾಡಿದರೆ ಆಡಳಿತ ಅದಕ್ಕೆ ಅಲ್ಲಲ್ಲಿ ಡಾಮರ್ ಪ್ಯಾಚ್ ಅಥವಾ ಮಣ್ಣಿನ ಪ್ಯಾಚ್ ಹಾಕಿ ತಿಪ್ಪೆ ಸವರಿ ಬಿಡುತ್ತದೆ. ಒಂದು ಹಳ್ಳಿಗೆ ಡಾಮರ್ ರಸ್ತೆ ಆಗಬೇಕಾದರೆ ಆ ಊರಿನ ಜನ, ಜನಪ್ರತಿನಿಧಿಗಳು ನೂರಾರು ಮನವಿ ಮಾಡಿರುತ್ತಾರೆ.ಡಾಮರ್ ರಸ್ತೆಯಿಂದಲೇ ಡಾಮರ್ ಕಿತ್ತು ಜನ ಮನೆಗೊಯ್ದಿದ್ದಾರೆ. ಇಂತಹ ವಿಚಿತ್ರ ಹಾಗೂ ನಾಚಿಕೇಡಿನ ಘಟನೆ ಬಿಹಾರದಲ್ಲಿ ನಡೆದಿದೆ.
Read More »ರಾಜಸ್ತಾನ್ :ಡ್ಯಾಂಗೆ ಇಳಿದ ಯುವಕ ಮೃತ್ಯು!
ಕುಡಿದ ಮತ್ತಿನಲ್ಲಿ ಅಣೆಕಟ್ಟು ದಾಟಲು ಮುಂದಾಯ ಯುವಕ ನೀರು ಪಾಲಾದ ದಾರುಣ ಘಟನೆ ರಾಜಸ್ಥಾನದ ಸವಾಯಿ ಮಾಧೋಪುರದಲ್ಲಿ ನಡೆದಿದೆ.ಇಲ್ಲಿನ ಚೌತ್ ಕಾ ಬರ್ವಾರಾ ಉಪವಿಭಾಗ ಪ್ರದೇಶದಲ್ಲಿರುವ ಧೀಲ್ ಅಣೆಕಟ್ಟಿನಲ್ಲಿ ನೀರಿನಲ್ಲಿ ಸಾಹಸ ಪ್ರದರ್ಶನ ಮಾಡಲು ಹೋದ ಯುಕ ನೀರು ಪಾಲಾಗಿದ್ದಾನೆ.
Read More »ಉಡುಪಿ :ಏಕಾಏಕಿ ಬೆಂಕಿ ಕಾಣಿಸಿಕೊಂಡು ವಾಷಿಂಗ್ ಮೆಶಿನ್ ಸ್ಪೋಟ!
ಮಣಿಪಾಲ ಡಿಸಿ ಆಫೀಸ್ ರಸ್ತೆಯಲ್ಲಿರುವ ಅದಿತಿ ಪರ್ವ ಅಪಾರ್ಟ್ ಮೆಂಟ್ ನಲ್ಲಿ ವಾಷಿಂಗ್ ಮೆಶಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟಗೊಂಡ ಅವಘಡ ನಡೆದಿದೆ.ಸ್ಥಳಕ್ಕೆ ಅಗ್ನಿಶಾಮಕದಳದವರು ದೌಡಾಯಿಸಿದ್ದು, ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ, ಸಾರ್ವಜನಿಕರ ಸಹಕಾರದೊಂದಿಗೆ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
Read More »ದಾವಣಗೆರೆ: ದೇವಸ್ಥಾನಕ್ಕೆಂದು ಕರೆದೊಯ್ದು ಹೆತ್ತ ಮಗಳ ಮೇಲೆ ಅತ್ಯಾಚಾರಕ್ಕೆ ಮುಂದಾದ ಪಾಪಿ ತಂದೆ!
ದಾವಣಗೆರೆ ಜಿಲ್ಲೆಯ ಹದಡಿ ಪೊಲೀಸ್ ಠಾಣೆಯಲ್ಲಿ ಅಪ್ರಾಪ್ತ ಬಾಲಕಿಯ ತಾಯಿಯೇ ಕಾಮುಕ ಪತಿಯ ವಿರುದ್ಧ ಮಗಳ ಮೇಲೆ ಅತ್ಯಾಚಾರ ಯತ್ನ ಮಾಡಿದ ಆರೋಪವನ್ನು ಹೊರಿಸಿ ಪೋಕ್ಸೊ ಕೇಸ್ ದಾಖಲಿಸಿದ್ದಾರೆ. ಜಿಲ್ಲೆಯ ಗ್ರಾಮವೊಂದರ 17 ವರ್ಷದ ಅಪ್ರಾಪ್ತ ಬಾಲಕಿ ತಾನ ಬ್ಯೂಟಿಷಿಯನ್ ಆಗಬೇಕೆಂಬ ಕನಸನ್ನು ಹೊತ್ತು ತರಬೇತಿಗೆ ಸೇರಿಕೊಂಡಿದ್ದಳು. ಆದರೆ ಇದು ತಂದೆ ಗಣೇಶನಿಗೆ ಕಿಂಚಿತ್ತೂ ಇಷ್ಟವಿರಲಿಲ್ಲ. ಆಕೆ ಮೇಲೆ ಆತನಿಗೆ ಸದಾ ಅನುಮಾನವೇ ತುಂಬಿತ್ತು. ಹೀಗೆ ಅನುಮಾನದ ಪಿಶಾಚಿಯಾಗಿದ್ದ ಆತ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





