Breaking News

BigTv News

ಶಾಲಾ ವಾಹನಕ್ಕೆ ಟ್ಯಾಂಕರ್‌ ಡಿಕ್ಕಿ; ಆರು ವಿದ್ಯಾರ್ಥಿಗಳಿಗೆ ಗಂಭೀರ ಗಾಯ!

ಸಿಮೆಂಟ್ ತುಂಬಿದ್ದ ಟ್ಯಾಂಕ‌ರ್ ಹಾಗೂ ಶಾಲಾ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಆರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಗರದ ಹೊರ ವಲಯದ ನಾಗನಹಳ್ಳಿ ರಿಂಗ್ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಚಂದ್ರಕಾಂತ ಪಾಟೀಲ ಪಬ್ಲಿಕ್ ಶಾಲೆಗೆ ಸೇರಿದ ಶಾಲಾ ವಾಹನ ರಾಮಮಂದಿರ ಕಡೆಯಿಂದ ನಾಗನಹಳ್ಳಿ ರಿಂಗ್ ರಸ್ತೆಯತ್ತ ಬರುತ್ತಿತ್ತು.ವಾಡಿಯಿಂದ ಸಿಮೆಂಟ್ ತುಂಬಿಕೊಂಡು ಹೊರಟ್ಟಿದ್ದ ವೇಳೆ ಅಪಘಾತ ಸಂಭವಿಸಿದೆ ಎಂದು ಮೂಲಗಳು ಹೇಳಿವೆ. ಅಪಘಾತದಲ್ಲಿ ಶಾಲಾ ವಾಹನದ ಮುಂಭಾಗ ನಜ್ಜುಗುಜ್ಜಾಗಿದ್ದು, ಮುಂದಿನ …

Read More »

ಮಗುವಿಗೆ ಆಸ್ಪತ್ರೆಯಲ್ಲಿ ಇಲ್ಲಿ ಕಚ್ಚಿ ಸಾವು!

ಹುಟ್ಟಿದ ಕೂಡಲೇ ಆ ಹೆಣ್ಣು ಮಗುವನ್ನು ಪೋಷಕರು ತೊರೆದಿದ್ದರು. ಹುಟ್ಟಿನಿಂದಲೇ ಹಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದ ಆ ಮಗುವನ್ನು ಪೋಷಕರು ತೊರೆದ ನಂತರ ಆಸ್ಪತ್ರೆಯವೇ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಇರಿಸಿ ಆ ಮಗುವಿಗೆ ಚಿಕಿತ್ಸೆ ನೀಡಲಾಗ್ತಿತ್ತು.ಮಗುವಿನ ಮೇಲೆ ಎನ್‌ಐಸಿಯುನಲ್ಲೇ ಇಲಿಯೂ ದಾಳಿ ಮಾಡಿ ಮಗುವಿನ ಭುಜ ಹಾಗೂ ಬೆರಳುಗಳನ್ನು ಕಚ್ಚಿ ಗಾಯಗೊಳಿಸಿತ್ತು. ಪರಿಣಾಮ ಮಗು ಸಾವನ್ನಪ್ಪಿದೆ.

Read More »

ಆಸ್ತಿಗಾಗಿ ತಂದೆ ಆಶ್ಲೀಲ ಮೆಸೇಜ್ ಹರಿಬಿಟ್ಟು ಬ್ಲಾಕ್ ಮೇಲ್, ಪುತ್ರ ಅರೆಸ್ಟ್!

ಮಂಡ್ಯದಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದ್ದು, ಆಸ್ತಿಗಾಗಿ ಮಗನಿಂದಲೇ ತಂದೆಗೆ ಬ್ಲಾಕ್ ಮೇಲ್ ಮಾಡಿದ್ದಾನೆ. ವಾಟ್ಸಪ್ ಗ್ರೂಪ್ ಗೆ ಅಪ್ಪನ ಅಶ್ಲೀಲ ಸಂದೇಶ ಕಳಿಸಿ ತಂದೆಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಮಗನ ವಿರುದ್ದ ರೊಚ್ಚಿಗೆದ್ದ ತಂದೆಯಿಂದ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಬೆದರಿಕೆ ಹಾಕಿದ ಆರೋಪಿ ಮಗನನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.ಪ್ರಣವ್ (25) ತಂದೆಗೆ ಬ್ಲಾಕ್ ಮೇಲ್ ಮಾಡಿದ ಕಿರಾತಕ ಮಗ ಎಂದು ತಿಳಿದುಬಂದಿದೆ.ದುಶ್ಚಟಗಳಿಗೆ ಬಲಿಯಾಗಿ ವಿರೋಧಿಗಳ ಜೊತೆ ಸೇರಿ ಆಸ್ತಿಗಾಗಿ …

Read More »

ಕೋಟಿಗಟ್ಟಲೆ ವಂಚನೆ ಆರೋಪದ ಬೆನ್ನಲ್ಲೇ ‘ಬಾಸ್ಟಿಯನ್’ ರೆಸ್ಟೋರೆಂಟ್‌ಗೆ ಶಿಲ್ಪಾ ಶೆಟ್ಟಿ ಬೀಗ..!

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಇಬ್ಬರೂ 60 ಕೋಟಿ ರೂಪಾಯಿಗಳ ಗಂಭೀರ ವಂಚನೆ ಆರೋಪ ಎದುರಿಸುತ್ತಿದ್ದಾರೆ.ಮುಂಬೈನ ಪ್ರಸಿದ್ಧ ಮತ್ತು ಹೈ ಪ್ರೊಫೈಲ್ ರೆಸ್ಟೋರೆಂಟ್ ‘ಬಾಸ್ಟಿಯನ್ ಬಾಂದ್ರಾ’ ಅನ್ನು ಶಾಶ್ವತವಾಗಿ ಮುಚ್ಚಲಾಗುತ್ತಿದೆ. ಈ ಕುರಿತು ಸ್ವತಃ ಶಿಲ್ಪಾ ಶೆಟ್ಟಿಯವರೇ ತಮ್ಮ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್ ಹಾಕಿಕೊಳ್ಳುವ ಮೂಲಕ ಈ ಮಾಹಿತಿಯನ್ನು ನೀಡಿದ್ದಾರೆ.ಶಿಲ್ಪಾ ಮತ್ತು ರಂಜಿತ್ ಬಿಂದ್ರಾ …

Read More »

ಮಂಗಳೂರು: ಕಾಲೇಜಿಗೆ ತೆರಳಿದ ಯುವತಿ ನಾಪತ್ತೆ!

ಕಾಟಿಪಳ್ಳ ಗ್ರಾಮದ ಗಣೇಶಕಟ್ಟೆ ನಿವಾಸಿ ಪ್ರಜ್ಞಾ (18) ಎಂಬವರು ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಸಿ.ಎ ವ್ಯಾಸಂಗ ಮಾಡುತ್ತಿದ್ದರು.ಸೆಪ್ಟೆಂಬರ್ 1 ರಂದು ಕಾಲೇಜು ಸಮವಸ್ತ್ರ ಧರಿಸಿ ಕಾಲೇಜಿಗೆ ಹೋಗುವುದಾಗಿ ತಾಯಿಯಲ್ಲಿ ತಿಳಿಸಿ ಹೋದವರು ಮನೆಗೆ ಬಾರದೆ ಕಾಣೆಯಾಗಿರುವ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಾಣೆಯಾದ ದಿನ ಬ್ಲೂ ಬಣ್ಣದ ಅರ್ಧ ತೋಳಿನ ಕಾಲೇಜು ಸಮವಸ್ತ್ರ ಶರ್ಟ್ ಹಾಗೂ ಕಪ್ಪು ಬಣ್ಣದ ಕಾಲೇಜು ಸಮವಸ್ತ್ರ ಪ್ಯಾಂಟ್ ಧರಿಸಿದ್ದರು. ಕಾಣೆಯಾದವರ …

Read More »

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್ ನಿಂದ ಚಿನ್ನಾಭರಣ ಕದ್ದ ನಾಲ್ವರು ಸಿಬ್ಬಂದಿ ಅರೆಸ್ಟ್.

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್ ನಿಂದ ಚಿನ್ನಾಭರಣ ಕದ್ದ ಪ್ರಕರಣಕ್ಕೆ ಸಂಬಂಧಿದಂತೆ ವಿಮಾನ ನಿಲ್ದಾಣದ ನಾಲ್ಕು ಮಂದಿ ಸಿಬ್ಬಂದಿಯನ್ನು ಬಜ್ಪೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ಮಂಗಳೂರು ತಾಲೂಕು ಕಂದಾವರದ ನಿವಾಸಿ ನಿತಿನ್, ಮೂಡುಪೆರಾರದ ನಿವಾಸಿಗಳಾದ ಸದಾನಂದ ಮತ್ತು ರಾಜೇಶ್ ಮತ್ತು ಬಜಪೆ ನಿವಾಸಿ ಪ್ರವೀಣ್ ಫೆರ್ನಾಂಡಿಸ್ ಎಂದು ಗುರುತಿಸಲಾಗಿದೆ.ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಹಿಳಾ ಪ್ರಯಾಣಿಕರೊಬ್ಬರು ಅಗಸ್ಟ್ 30 ರಂದು ಆಗಮಿಸಿದ್ದರು. ಈ ವೇಳೆ ಮಂಗಳೂರು …

Read More »

ನೀಟ್ ಪರೀಕ್ಷೆ ಬರೆದು ಗಾರೆ ಕೆಲಸಕ್ಕೆ ಬಂದಿದ್ದವ ಪಾಸ್.

ಓಡಿಶಾದ ಖುರ್ದಾ ಜಿಲ್ಲೆಯ ಪುಟ್ಟ ಹಳ್ಳಿಯ ಹತ್ತೊಂಬತ್ತು ವರ್ಷದ ಹುಡುಗ ಶುಭಂ ಸಬರ್‌ ಹನ್ನೆರಡನೇ ತರಗತಿಯ ಪರೀಕ್ಷೆ ಮುಗಿಸಿ, ನೀಟ್‌ ಪರೀಕ್ಷೆಯನ್ನೂ ಬರೆದು ಬೆಂಗಳೂರಿಗೆ ಬಂದಿದ್ದ! ಪಾಪ ನೀಟ್‌ ಪರೀಕ್ಷೆಗೆ ಓದಿ ಮಗ ಸುಸ್ತಾಗಿದ್ದಾನೆ ಎಂದು ಅವರಪ್ಪ ಬೆಂಗಳೂರಿನ ಪ್ರವಾಸಕ್ಕೆ ಕಳಿಸಿದ್ದಲ್ಲ. ಪರಿಶಿಷ್ಟ ಪಂಗಡಕ್ಕೆ ಸೇರಿದ ಶುಭಂ ಅಷ್ಟೆಲ್ಲ ಅನುಕೂಲವಿದ್ದವನಲ್ಲ. ತಂದೆಯ ಹತ್ತಿರ ಇರುವುದು ಇಷ್ಟೇ ಇಷ್ಟು ಜಮೀನು. ಅದರಲ್ಲಿ ಮನೆಯವರ ಹೊಟ್ಟೆ ತುಂಬಿಸುವುದೇ ಕಷ್ಟ! ನಾಲ್ಕು ಮಕ್ಕಳಲ್ಲಿ ಇವನೇ …

Read More »

ವಿಜಯಪುರದಲ್ಲಿ ಗುಂಡಿಕ್ಕಿ ರೌಡಿಶೀಟರ್ ಭೀಮನಗೌಡ ಬಿರಾದಾರ್ ಹತ್ಯೆ : ನಾಲ್ವರು ಆರೋಪಿಗಳು ಅರೆಸ್ಟ್.!

ವಿಜಯಪುರದಲ್ಲಿ ರೌಡಿಶೀಟರ್ ಭೀಮನಗೌಡ ಬಿರಾದಾರ್ ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ. ರೌಡಿಶೀಟರ್ ಭೀಮನಗೌಡ ಬೀರಾದಾರ್ ಮೇಲೆ ಫೈರಿಂಗ್ ಮಾಡಿ ಎಸ್ಕೇಪ್ ಆಗಿದ್ದರು. ಈಗಾಗಲೇ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳಾದ ರಜೀವುಲ್ಲಾಮಕಾನದಾರ್, ವಸೀಂ ಮಣಿಯಾರ್, ಫಿರೋಜ್ ಅವರಾದ್, ಮೌಲಾಲಿ ಲಾಡೇಸಾಬ್ ಜೋರಗಿ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Read More »

ಸಾಹಿತಿ ಎಸ್.ಎಂ.ಹಿರೇಮಠ ಅವರಿಗೆ ‘ಶ್ರೀಚೆನ್ನರೇಣುಕ ಬಸವ’ ಪ್ರಶಸ್ತಿ .

ಸಾಹಿತಿ ಹಾಗೂ ನಿವೃತ್ತ ಪ್ರಾಧ್ಯಾಪಕ ಕಲಬುರಗಿಯ ಎಸ್.ಎಂ.ಹಿರೇಮಠ ಅವರು ಹಾರಕೂಡ ಹಿರೇಮಠ ಸಂಸ್ಥಾನದ ಪ್ರಸಕ್ತ ಸಾಲಿನ `ಶ್ರೀಚೆನ್ನರೇಣುಕ ಬಸವ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಯು ₹1 ಲಕ್ಷ ನಗದು, ಎರಡು ತೊಲೆ ಚಿನ್ನದ ಪದಕ ಮತ್ತು ಫಲಕ ಒಳಗೊಂಡಿದೆ.ಎಸ್.ಎಂ.ಹಿರೇಮಠ ಅವರು 300ಕ್ಕೂ ಅಧಿಕ ಗ್ರಂಥ ರಚಿಸಿದ್ದಾರೆ. ಇವರು ಸಾಹಿತ್ಯ, ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗುತ್ತಿದೆ’ ಎಂದು ಹಿರೇಮಠದ ಪೀಠಾಧಿಪತಿ ಚನ್ನವೀರ ಶಿವಾಚಾರ್ಯರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ …

Read More »

ವಿಜಯಪುರ | ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ವಿದ್ಯುತ್‌ ಅವಘಡ: ಯುವಕ ಸಾವು .

ತಡರಾತ್ರಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ವಿದ್ಯುತ್‌ ಅವಘಡ ಸಂಭವಿಸಿ ಯುವಕನೊಬ್ಬ ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ವಿಜಯಪುರ ನಗರದ ರಾಮಪ್ರಸಾದ ಗಲ್ಲಿ ನಿವಾಸಿಯಾಗಿದ್ದ ಶಿವಾಜಿ ಅಲಿಯಾಸ್‌ ಶುಭಂ ಸಕ್ಪಾಲ್‌(21) ವಿದ್ಯುತ್‌ ತಗುಲಿ ಸಾವಿಗೀಡಾಗಿದ್ದಾರೆ.ಲಖನ್‌ ಚವ್ಹಾಣ ಮತ್ತು ಪ್ರಭು ಜಗತೆ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ವಾಹನಕ್ಕೆ ಹಾಗೂ ಡಿಜೆ ಸಿಸ್ಟಿಂಗೆ ವಿದ್ಯುತ್‌ ತಂತಿ ತಗಲದಂತೆ ಕೋಲಿನಿಂದ ಎತ್ತಿಹಿಡಿದುಕೊಂಡಿದ್ದ ವೇಳೆ ಯುವಕರಿಗೆ ವಿದ್ಯುತ್‌ ತಂತಿ ತಗುಲಿ ಅವಘಡ ಸಂಭವಿಸಿದೆ. ಈ ಕುರಿತು …

Read More »