Breaking News

BigTv News

ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ಅಪಘಾತದಲ್ಲಿ ಮೇಜರ್ ಟ್ವಿಸ್ಟ್; ಈ ಬಸ್ಸಲ್ಲಿ ಡ್ರೈವರ್ರೇ ಇರಲಿಲ್ಲ!

ಮಂಗಳೂರಿನ ಡಿಪೋದ ಕೆಎಸ್‌ಆರ್‌ಟಿಸಿ ಬಸ್ ತಲಪಾಡಿ ಬಸ್ ನಿಲ್ದಾಣದಲ್ಲಿ ಆಟೋಗೆ ಗುದ್ದಿ 5 ಜನರ ಸಾವಿಗೆ ಕಾರಣವಾಗಿದೆ. ಇದೀಗ ಮಾಧ್ಯಮಗಳಿಗೆ ಸಿಕ್ಕಿರುವ ಸಿಸಿಟಿವಿ ಕ್ಯಾಮೆರಾದ ವಿಡಿಯೋ ದೃಶ್ಯದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಇಳಿಜಾರಿನಲ್ಲಿ ಹಿಂದಕ್ಕೆ ಬಂದು ನಿಂತಿದ್ದ ಹಿಂಬದಿಯಿಂದಲೇ ಜೋರಾಗಿ ಗುದ್ದಿರುವುದು ಕಾಣುತ್ತದೆ.ಕಾಸರಗೋಡು ಕಡೆಯಿಂದ ಬಂದ ಬಸ್ ಆಟೋದಲ್ಲಿದ್ದ 6 ಮಂದಿಯನ್ನೂ ಬಲಿ ಪಡೆದಿದೆ. ಸ್ಥಳದಲ್ಲಿ ಬಸ್ಸಿಗೆ ಕಾಯುತ್ತಿದ್ದ ಇಬ್ಬರು ಪ್ರಯಾಣಿಕರು ಕೂಡ ಗಂಭೀರ ಗಾಯಗೊಂಡಿದ್ದಾರೆ. ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಬಂದು …

Read More »

ರಾಜ್ಯದಲ್ಲಿ ಹಂದಿ ಜ್ವರ ಪತ್ತೆ; ಫಾರ್ಮ್‌ನಲ್ಲಿ ಬೆಳೆಸಿದ 57 ಹಂದಿಗಳನ್ನು ಕೊಲ್ಲಲು ಆದೇಶ!

ಚಿಂತಾಮಣಿ ತಾಲೂಕಿನ ಹೆಬ್ರಿ ಗ್ರಾಮದ ಹಂದಿ ಫಾರ್ಮ್‌ವೊಂದರಲ್ಲಿ ಮಾರಕ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ಕಳೆದ ಕೆಲವು ದಿನಗಳಲ್ಲಿ ಸುಮಾರು 50 ಹಂದಿಗಳು ಸಾವನ್ನಪ್ಪಿದ್ದು, ಈ ಹಿನ್ನೆಲೆಯಲ್ಲಿ ಉಳಿದ 57 ಹಂದಿಗಳನ್ನು ಕಲ್ಲಿಂಗ್ ಮಾಡಲು ಪಶುಸಂಗೋಪನಾ ಇಲಾಖೆ ನಿರ್ಧರಿಸಿದೆ.ಆಫ್ರಿಕನ್ ಹಂದಿ ಜ್ವರವು ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಮಾತ್ರ ಹರಡುವ ರೋಗವಾಗಿದೆ. ಇದು ಮನುಷ್ಯರಿಗೆ ಹರಡುವುದಿಲ್ಲ. ಆದ್ದರಿಂದ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಇಲಾಖೆ ಅಧಿಕಾರಿಗಳು …

Read More »

ಕೊಳ್ಳೇಗಾಲ | ವಡಕೆಹಳ್ಳ ಅರಣ್ಯ ಪ್ರದೇಶದಲ್ಲಿ ಕಾಡಾನೆಯ ಕಳೇಬರ ಪತ್ತೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ವನ್ಯಜೀವಿಯ ವಲಯ ವ್ಯಾಪ್ತಿಯ ವಡಕೆಹಳ್ಳ ಅರಣ್ಯ ಪ್ರದೇಶದಲ್ಲಿ ಕಾಡಾನೆಯೊಂದು ಮೃತಪಟ್ಟಿದೆ. ಕೊಳ್ಳೇಗಾಲ ವನ್ಯಜೀವಿ ವಲಯ ಅರೆಪಾಳ್ಯ ಶಾಖೆಯ ಉಪವಲಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗಸ್ತು ಮಾಡುತ್ತಿರುವಾಗ ಆನೆ ಮೃತಪಟ್ಟಿರುವುದು ಕಂಡು ಬಂದಿದೆ.ಮೃತ ಆನೆಗೆ ಅಂದಾಜು 25 ವರ್ಷ ಇದ್ದು, ಎರಡು ದಂತಗಳನ್ನು ಅರಣ್ಯ ಇಲಾಖೆಯ ವಶಕ್ಕೆ ಪಡೆದುಕೊಂಡಿದೆ.ಮೇಲ್ನೋಟಕ್ಕೆ ಆನೆಯು ಸಹಜವಾಗಿ ಮೃತಪಟ್ಟಿದ್ದು, ವರದಿ ಬಂದ ನಂತರ ಆನೆಯ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬರಲಿದೆ.

Read More »

ಉಳ್ಳಾಲ: ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ SSI ಮಂತ್ರಾ 3.0 ಪ್ರಾರಂಭ.

ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯು ‘ಎಸ್‌ಎಸ್‌ಐ ಮಂತ್ರಾ 3.0 ರೊಬೊಟಿಕ್‌ ಸರ್ಜಿಕಲ್ ಸಿಸ್ಟಮ್’ ಪರಿಚಯಿಸಿದೆ.ಭಾರತದಲ್ಲೇ ತಯಾರಿಸಲಾದ ಈ ತಂತ್ರಜ್ಞಾನವು, ಗಂಭೀರ ಶಸ್ತ್ರಚಿಕಿತ್ಸೆಗಳಲ್ಲಿ ಜಾಗತಿಕ ಮಟ್ಟದ ಸಾಮರ್ಥ್ಯ ಹೊಂದಿದೆ ಎಂದು ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ವಿಜಯಕುಮಾರ್ ಹೇಳಿದರು.ವೈದ್ಯಕೀಯ ಅಧೀಕ್ಷಕ ಡಾ.ಹಬೀಬ್ ರಹಮಾನ್ ಎ.ಎ., ಯುರಾಲಜಿ ವಿಭಾಗದ ಮುಖ್ಯಸ್ಥ ಡಾ.ಮುಜೀಬ್ ರೆಹಮಾನ್, ಶಸ್ತ್ರಚಿಕಿತ್ಸಾ ಆಂಕಾಲಜಿ ಮುಖ್ಯಸ್ಥ ಡಾ.ಜಲಾಲುದ್ದೀನ್ ಅಕ್ಬರ್ ಸಮಗ್ರ ಮಾಹಿತಿ ನೀಡಿದರು. ಎಸ್‌ಎಸ್‌ ಇನೊವೇಷನ್ಸ್‌ ಇಂಟರ್ನ್ಯಾಷನಲ್ ಸಂಸ್ಥೆ ಅಧ್ಯಕ್ಷ ಡಾ.ಸುಧೀರ್ …

Read More »

ಉಡುಪಿ | 170 ಗಂಟೆ ನಿರಂತರ ಭರತನಾಟ್ಯ: ರೆಮೋನಾ ದಾಖಲೆ ಮುರಿದ ದೀಕ್ಷಾ.

ಗೋಲ್ಡನ್‌ ಬುಕ್‌ ಆಫ್‌ ವರ್ಲ್ಡ್‌ ರೆಕಾರ್ಡ್‌’ಗಾಗಿ ಬ್ರಹ್ಮಾವರ ತಾಲ್ಲೂಕಿನ ಆರೂರು ಗ್ರಾಮದ ಮುಂಡ್ಕಿನಜಡ್ಡುವಿನ ದೀಕ್ಷಾ ವಿ. ಅವರು ಆ. 21 ರಿಂದ ಆರಂಭಿಸಿರುವ 216 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನವು ಗುರುವಾರ ಸಂಜೆ 5.30ಕ್ಕೆ 170 ಗಂಟೆಗಳನ್ನು ದಾಟಿತು.ಈ ಮೂಲಕ ಅವರು ಮಂಗಳೂರಿನ ರೆಮೊನಾ ಇವೆಟ್‌ ಪಿರೇರಾ ಅವರ ಈ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ.ಮಣಿಪಾಲದ ರತ್ನ ಸಂಜೀವ ಕಲಾಮಂಡಲವು ದೀಕ್ಷಾ ಅವರಿಗೆ ಬೆನ್ನೆಲುಬಾಗಿ ನಿಂತಿದೆ. ದೀಕ್ಷಾ ಅವರ ನೃತ್ಯ ಗುರು …

Read More »

ಡಿಪೋ ಮ್ಯಾನೇಜರ್ ಕಿರುಕುಳ, ಕೆಎಸ್‌ಆರ್‌ಟಿಸಿ ಚಾಲಕ ಬಸ್‌ನಲ್ಲೇ ನೇಣು ಬಿಗಿದು ಸಾವಿಗೆ ಶರಣು!

ಜಿಲ್ಲೆಯ ಬೀದರ್ ಡಿಪೋ ನಂ.1ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಾರಿಗೆ ಬಸ್ ಚಾಲಕನೊಬ್ಬ ಡಿಪೋ ಮ್ಯಾನೇಜರ್ ಕಿರುಕುಳಕ್ಕೆ ಬೇಸತ್ತು ಆತ್ಮ8ಹತ್ಯೆ ಮಾಡಿಕೊಂಡಿರುವ ದುರ್ಘಟನೆ ಬೆಳಕಿಗೆ ಬಂದಿದೆ. ಆಣದೂರು ಗ್ರಾಮದ ನಿವಾಸಿ ರಾಜಪ್ಪ (59) ಬಳ್ಳಾರಿ-ಬೀದರ್ ಮಾರ್ಗದ ಸ್ಲಿಪರ್ ಕೋಚ್ ಬಸ್‌ನಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು.ದುಃಖಕರ ಸಂಗತಿಯಾಗಿಯೇ, ಅವರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಅದೇ ಬಸ್‌ನಲ್ಲಿಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Read More »

ಬಹುಕಾಲದ ಗೆಳೆಯ ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಖ್ಯಾತ ನಿರೂಪಕಿ ಅನುಶ್ರೀ.!

ಅನುಶ್ರೀ ಮತ್ತು ರೋಷನ್ ಬಹುಕಾಲದ ಗೆಳೆಯರು. ರೋಷನ್ ಕೊಡಗು ಮೂಲದ ಉದ್ಯಮಿಯಾಗಿದ್ದಾರೆ. ಇಬ್ಬರು ಕೂಡ ಅಪ್ಪು ಅಭಿಮಾನಿಗಳು. ಪರಸ್ಪರ ಒಬ್ಬರನೊಬ್ಬರನ್ನು ಅರಿತಿರುವ ಈ ಜೋಡಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಅರಿಶಿಣ ಶಾಸ್ತ್ರ ನೆರವೇರಿಸಲಾಗಿದ್ದು, ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ. ನಿರೂಪಕಿ ಅನುಶ್ರೀ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು. ಕೊಡಗು ಮೂಲದ ಉದ್ಯಮಿ ರೋಷನ್ ಜೊತೆಗೆ ನಿರೂಪಕಿ ಅನುಶ್ರೀ ಮದುವೆ ಇಂದು ನೆರವೇರಿದೆ.

Read More »

ಏರ್ ಶೋ’ ರಿಹರ್ಸಲ್ ವೇಳೆ F-16 ಫೈಟರ್ ಜೆಟ್ ಪತನಗೊಂಡು ಪೈಲಟ್ ಸಾವು.

ಗುರುವಾರ ಪೋಲೆಂಡ್‌ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಮುಂಬರುವ ವೈಮಾನಿಕ ಪ್ರದರ್ಶನಕ್ಕಾಗಿ ಪೂರ್ವಾಭ್ಯಾಸದ ಸಮಯದಲ್ಲಿ ಪೋಲಿಷ್ ವಾಯುಪಡೆಗೆ ಸೇರಿದ F-16 ಯುದ್ಧ ವಿಮಾನ ಅಪಘಾತಕ್ಕೀಡಾಗಿದೆ.ಕ್ರಾಕೋವಿಯನ್ ಒಬ್ಬ ಅನುಭವಿ ಯುದ್ಧ ಪೈಲಟ್ ಆಗಿದ್ದು, F-16 ನಲ್ಲಿ 1,000 ಗಂಟೆಗಳಿಗೂ ಹೆಚ್ಚು ಹಾರಾಟ ನಡೆಸಿದರು. ಅವರು ಪೊಜ್ನಾನ್ ಬಳಿಯ 31 ನೇ ಯುದ್ಧತಂತ್ರದ ವಾಯುನೆಲೆಯಲ್ಲಿ ಬೋಧಕರಾಗಿಯೂ ಸೇವೆ ಸಲ್ಲಿಸಿದರು.

Read More »

ಧಾರಾಕಾರ ಮಳೆಗೆ ಕೊಚ್ಚಿಹೋದ ಬೇಳೆಕಾಳು – ಬೀದಿಗೆ ಬಿದ್ದ ರೈತ!

ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನೂರಾರು ರೈತರು ಹೆಸರು ಫಸಲು ರಾಶಿ ಮಾಡಿ ದರ್ಗಾ ಆವರಣದಲ್ಲಿ ಒಣಗಲು ಹಾಕಿದ್ದರು. ಆದರೆ, ಇಡೀ ರಾತ್ರಿ ಸುರಿದ ಧಾರಾಕಾರ ಮಳೆಗೆ ಪಕ್ಕದಲ್ಲಿದ್ದ ಬೃಹತ್‌ ಹಳ್ಳ ಉಕ್ಕಿ ಹರಿದು ದರ್ಗಾ ಆವರಣ ಸಂಪೂರ್ಣ ಜಲಾವೃತವಾಗಿದೆ. ಬೆಳೆ ನಷ್ಟದಿಂದ ಅನ್ನದಾತ ಬೇಸರಗೊಂಡಿದ್ದಾನೆ.ವರುಣಾರ್ಭಟಕ್ಕೆ ಬೆಳೆ ಹಾನಿಯಾಗಿ ರೈತರು ಕಂಗಾಲಾಗಿದ್ದು, ಪರಿಹಾರ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 300 ಕ್ವಿಂಟಲ್‌ಗೂ ಅಧಿಕ ಹೆಸರು ಬೆಳೆ ಸಂಪೂರ್ಣ ಹಾನಿಯಾಗಿದ್ದು, ಲಕ್ಷಾಂತರ …

Read More »

ಗಣೇಶೋತ್ಸವ ವೇಳೆ ಶಿವಾಜಿ ಬ್ಯಾನರ್ ತೆರವು ವೇಳೆ ಗಲಾಟೆ: ಪರಿಸ್ಥಿತಿ ಉದ್ವಿಗ್ನ.

ಗಣೇಶೋತ್ಸವ ಹಿನ್ನೆಲೆಯಲ್ಲಿ ಶಿವಾಜಿ ಬ್ಯಾನರ್ ತೆರವಿಗೆ ಪೊಲೀಸರು ಮುಂದಾಗುತ್ತಿದಂತೆ ಗಲಾಟೆ ನಡೆದಿರ್ಯ್ವ ಘಟನೆ ದಾವಣಗೆರೆಯಲ್ಲಿ ನಡೆದಿದೆ.ದಾವಣಗೆರೆ ಜಿಲ್ಲೆಯ ಮಟಕಲ್ಲು ಪ್ರದೇಶದಲ್ಲಿ ಗಣೇಶೋತ್ಸವ ಆಚರಣೆ ಹಿನ್ನೆಲೆಯಲ್ಲಿ ಛತ್ರಪತಿ ಶಿವಾಜಿ ಬ್ಯಾನರ್ ಗಳನ್ನು ತೆರವು ಮಾಡಲು ಪೊಲೀಸರು ಮುಂದಾಗಿದ್ದರು.ಶಿವಾಜಿ ಅಫ್ಜಲ್ ಖಾನ್ ನನ್ನು ಕೊಲ್ಲುವ ಫ್ಲೆಕ್ಸ್ ಅವಳವಡಿಸಲಾಗಿತ್ತು. ಇದು ಕೋಮು ಪ್ರಚೋದನೆಗೆ ಕಾರಣವಾಗುತ್ತದೆ ಎಂದು ಪೊಲೀಸರು ಫ್ಲೆಕ್ಸ್ ತೆರವು ಮಾಡಲು ಮುಂದಾಗಿದ್ದಾರೆ. ಇದಕ್ಕೆ ಹಿಂದೂ ಯುವಕರ ಗುಂಪು ವಿರೋಧ ವ್ಯಕ್ತಪಡಿಸಿದೆ.ಸದ್ಯ ಸ್ಥಳದಲ್ಲಿ ಬಿಗುವಿನ …

Read More »