Breaking News

ಬಿಜೆಪಿ ಮುಳುಗುತ್ತಿರುವ ಹಡಗು; ಮೊದಲು ಪಕ್ಷದಲ್ಲಿದ್ದವರನ್ನು ಉಳಿಸಿಕೊಳ್ಳಲಿ..!

ಹುಬ್ಬಳ್ಳಿ: ಬಿಜೆಪಿ ಕುರಿತು ಶೆಟ್ಟರ್ ಅವರು ಬಿಜೆಪಿ ಪಕ್ಷ ಮುಳುಗುತ್ತಿರುವ ಹಡಗು ಬಿ.ಎಲ್ ಸಂತೋಷ್ ಅವರು ಮೊದಲು ಪಕ್ಷದಲ್ಲಿದವರನ್ನು ಉಳಿಸಿಕೊಳ್ಳಲಿ ಅವರ ಪಕ್ಷದ ಶಾಸಕರು ಮತ್ತು ಮಾಜಿ ಶಾಸಕರನ್ನು‌ ಉಳಿಸಿಕೊಂಡು, ಪಕ್ಷದ ಅಸ್ತಿತ್ವ ಉಳಸಿಕೊಂಡರೆ ಸಾಕಾಗಿದೆ. ಒಂದು ವೇಳೆ ಅವರ ಸಂಪರ್ಕದಲ್ಲಿ ಶಾಸಕರುಗಳು ಇದ್ದರೆ ನಾಳೆಯಿಂದಲೇ ಆಪರೇಶನ್ ಸ್ಟಾರ್ಟ್ ಮಾಡಲಿ ಅಂತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಬಿಎಲ್ ಸಂತೋಷ್ ಹೇಳಿಕೆ ವಿಚಾರವಾಗಿ, ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು,ಬೇರೆ ಪಕ್ಷದವರನ್ನು ಕರೆದುಕೊಂಡು ಬಂದು ಹೊಸ ಸರ್ಕಾರ ಮಾಡೋದನ್ನ ಬಿಜೆಪಿ ನಾಯಕರು ಬಿಟ್ಟು ಬಿಡಲಿ. ಬರೀ ಆಪರೇಶನ್ ಮಾಡಿ ಸರ್ಕಾರ ರಚನೆ ಮಾಡೋದಾ?. ಇಡೀ ರಾಷ್ಟ್ರದಲ್ಲಿ ಬೆಳಗ್ಗೆ ಇಂದ ಸಾಯಂಕಾಲವರೆಗೂ ಆಪರೇಶನ್ ಮಾಡೋದು, ಹಿರಿಯರನ್ನು ಕಡೆಗಣಿಸಿ ಹೊಸಬರನ್ನು ಕರೆದುಕೊಂಡು ಬರೋದು ನಿಮ್ಮ ಕೆಲಸದಿಂದ ಬಿಜೆಪಿ ಪಕ್ಷ ಅಧೋಗತಿಗೆ ಹೋಗ್ತೀದೆ‌ ಬಿಜೆಪಿ ಮುಳುಗುತ್ತಿರೋ ಹಡಗು.

ಬಿಜೆಪಿ ಪಕ್ಷ ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ತಿದೆ. ಇದಕ್ಕೆ ಕಾರಣ ಬಿಜೆಪಿ‌ ಕೆಲವೇ ಜನರ ಕೈಯಲ್ಲಿದೆ: ಅದರಿಂದ ಹೊರಬಂದ್ರೆ ಮಾತ್ರ ಭವಿಷ್ಯ. ಅದರಿಂದ ಹೊರಬರೋಕೆ ಆಗತ್ತೋ ಇಲ್ವೋ ಗೊತ್ತಿಲ್ಲ ? ಆದ್ರೆ ನಾನೇ ಹೊರಗೆ ಬಂದು ಬಿಟ್ಟಿದ್ದೆನೆ. ರಾಜ್ಯ ಬಿಜೆಪಿ ನಾಯಕರ ಪರಸ್ಥಿತಿ ಇಡೀ ಜಗತ್ತಿಗೆ ಗೊತ್ತಾಗಿದೆ. ದೆಹಲಿಯಲ್ಲಿ ಕೂತ ನಾಯಕರ ಈ ಬಗ್ಗೆ ಯೋಚನೆ‌ ಮಾಡಬೇಕು ಕರ್ನಾಟಕದಲ್ಲಿ ಬಿಜೆಪಿಗೆ ಒಂದು ಸಲವೂ ಬಹುಮತ ಬರಲಿಲ್ಲ ಆದ್ರೆ ಕಾಂಗ್ರೆಸ್ ಗೆ 136 ಸೀಟ್ ಬಂದಿದೆ ಎಂದರು

Share News

About BigTv News

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!

👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ …

Leave a Reply

Your email address will not be published. Required fields are marked *