Breaking News

BigTv News

ರೀಲ್ಸ್‌ ಮಾಡಲು ಹೋಗಿ ಜಲಪಾತದಲ್ಲಿ ಕೊಚ್ಚಿಕೊಂಡು ಹೋದ ಯೂಟ್ಯೂಬರ್‌!

ಒಡಿಶಾದ ಕೊರಾಪುಟ್ ಜಿಲ್ಲೆಯ ದುಡುಮಾ ಜಲಪಾತದಲ್ಲಿ ಈ ಘಟನೆ ನಡೆದಿದ್ದು, ರೀಲ್‌ಗಳನ್ನು ಚಿತ್ರೀಕರಿಸುವಾಗ ಯೂಟ್ಯೂಬರ್‌ ಒಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.ನೀರಿನಲ್ಲಿ ನಾಪತ್ತೆಯಾಗಿರುವ ಯೂಟ್ಯೂಬರ್‌ನನ್ನು ಗಂಜಾಂ ಜಿಲ್ಲೆಯ ಬೆರ್ಹಾಂಪುರದ 22 ವರ್ಷದ ಸಾಗರ್ ತುಡು ಎಂದು ಗುರುತಿಸಲಾಗಿದೆ.ಸಾಗರ್ ಡ್ರೋನ್ ಕ್ಯಾಮೆರಾ ಬಳಸಿ ಜಲಪಾತದಲ್ಲಿ ರೀಲ್‌ಗಳನ್ನು ರೆಕಾರ್ಡ್ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ. ಯೂಟ್ಯೂಬ್ ಚಾನೆಲ್‌ಗಾಗಿ ವಿವಿಧ ಪ್ರವಾಸಿ ಸ್ಥಳಗಳ ವಿಡಿಯೋಗಳನ್ನು ರೆಕಾರ್ಡ್ ಮಾಡಲು ತಮ್ಮ ಸ್ನೇಹಿತ ಅಭಿಜಿತ್ ಬೆಹೆರಾ ಅವರೊಂದಿಗೆ ಕೊರಾಪುಟ್‌ಗೆ …

Read More »

ಕಾಪು: ಮೂಳೂರು ಸಮೀಪ ಕಾರು ಪಲ್ಟಿ; ಓರ್ವ ಮೃತ್ಯು, ಮೂವರಿಗೆ ತೀವ್ರ ಗಾಯ !

ಕಾರೊಂದು ಪಲ್ಟಿಯಾದ ಪರಿಣಾಮ ಓರ್ವ ಮೃತಪಟ್ಟು ಮೂವರು ತೀವ್ರ ಗಾಯಗೊಂಡ ಘಟನೆ ಮೂಳೂರು ಸಮೀಪದ ಹಳ್ಳಿ ಮನೆ ಹೋಟೆಲ್ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶನಿವಾರ ನಸುಕಿನ ವೇಳೆ 3 ಗಂಟೆ ಸುಮಾರಿಗೆ ನಡೆದಿದೆ.ಮೃತರನ್ನು ಬೆಳ್ಮಣ್ ನ ಮಾರ್ವಿನ್ ಮೆಂಡೊನ್ಸಾ ಎಂದು ಗುರುತಿಸಲಾಗಿದೆ.ಆಂಬುಲೆನ್ಸ್ ಚಾಲಕರದ ಕೆ.ಎಂ.ಸಿರಾಜ್, ಹಮೀದ್ ಹಾಗೂ ಸಾಮಾಜಿಕ ಕಾರ್ಯಕರ್ತ ಜಮಾಲುದ್ದೀನ್ ಉಚ್ಚಿಲ ಸಹಕರಿಸಿದ್ದಾರೆ. ಸ್ಥಳಕ್ಕೆ ಕಾಪು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Read More »

ಅಫಜಲಪುರ: ನದಿ ಪಾತ್ರದ ಜನರನ್ನು ಸ್ಥಳಾಂತರಿಸಲು ಜಿಲ್ಲಾಧಿಕಾರಿ ಸೂಚನೆ.

ತಾಲ್ಲೂಕಿನ ನದಿ ಪಾತ್ರದಲ್ಲಿ ವಾಸಿಸುತ್ತಿರುವರನ್ನು ಮನವಲಿಸಿ, ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬೇಕು. ಈಗಾಗಲೇ ಗುರುತಿರುವ ಕಾಳಜಿ ಕೇಂದ್ರಗಳಿಗೆ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಅಧಿಕಾರಿಗಳಿಗೆ ಸೂಚಿಸಿದರು.ಅಫಜಲಪುರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲ್ಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಫಾಜಿಯಾ ತರನ್ನುಮ್‌ ಮಾತನಾಡಿದರು.

Read More »

ಯಾದಗಿರಿ | ಆಸ್ತಿ ಪರಭಾರೆ: ಪೌರಾಯುಕ್ತ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್.

ಮಹಿಳೆಯೊಬ್ಬರಿಗೆ ಸೇರಿದ್ದ ಜಮೀನಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆಸ್ತಿಯನ್ನು ಬೇರೊಬ್ಬರಿಗೆ ಪರಭಾರೆ ಮಾಡಿದ್ದ ಆರೋಪದಡಿ ಸುರಪುರ ನಗರಸಭೆಯ ಹಿಂದಿನ ಪೌರಾಯುಕ್ತ ಸೇರಿ ನಾಲ್ವರ ವಿರುದ್ಧ ಸುರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಗರಸಭೆಯ ಹಿಂದಿನ ಆಯುಕ್ತ ಜೀವನಕುಮಾರ್ (ಹಾಲಿ ಶಹಾಪುರ ನಗರಸಭೆ ಆಯುಕ್ತ), ನಿವೃತ್ತ ಅಧಿಕಾರಿ ಎಜಾಜ್ ಹುಸೇನ್, ಕರ ವಸೂಲಿಗಾರ (ಹಾಲಿ ಕಂದಾಯ ಅಧಿಕಾರಿ) ವೆಂಕಟೇಶ ಹಾಗೂ ಜಯಶೀಲ ಮುರುಳೀಧರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Read More »

ಅಪ್ರಾಪ್ತನಿಂದ ಆಘಾತಕಾರಿ ಕೃತ್ಯ: ದರೋಡೆ ಯತ್ನದ ವೇಳೆ ಬಾಲಕಿಗೆ 18 ಬಾರಿ ಇರಿದು ಕತ್ತು ಸೀಳಿ ಕೊಂದ ಬಾಲಕ ಅರೆಸ್ಟ್.

ಹುಡುಗಿ ರಜೆಯಿದ್ದ ಕಾರಣ ಮನೆಯಲ್ಲಿ ಒಬ್ಬಂಟಿಯಾಗಿದ್ದಳು. ದರೋಡೆ ಯತ್ನದ ಸಮಯದಲ್ಲಿ ಹುಡುಗಿ 10ನೇ ತರಗತಿ ಓದುತ್ತಿರುವ ಅವನನ್ನು ಗಮನಿಸಿ ಕೂಗಾಡಿದ್ದಳು.ದರೋಡೆ ಯತ್ನದ ಸಂದರ್ಭದಲ್ಲಿ 10 ವರ್ಷದ ಬಾಲಕಿಯನ್ನು ಇರಿದು ಕೊಂದಿದ್ದ ಬಾಲಾಪರಾಧಿ ಬಾಲಕನನ್ನು ಶುಕ್ರವಾರ ಹೈದರಾಬಾದ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಪೊಲೀಸರು ಆತನ ಮನೆ ಮೇಲೆ ದಾಳಿ ನಡೆಸಿ, ರಕ್ತಸಿಕ್ತ ಚಾಕು ಮತ್ತು ಬಟ್ಟೆಗಳನ್ನು ವಶಪಡಿಸಿಕೊಂಡರು, ಜೊತೆಗೆ ಮನೆಗಳಿಗೆ ಬೀಗ ಹಾಕುವುದು ಮತ್ತು ಕದಿಯುವುದು ಹೇಗೆ ಎಂಬುದರ ಕುರಿತು ಟಿಪ್ಪಣಿಗಳನ್ನು ಹೊಂದಿರುವ …

Read More »

ಹುಬ್ಬಳ್ಳಿ :ಪಾತ್ರೆ ವಿಚಾರಕ್ಕೆ ಗಲಾಟೆ: ತಂದೆಗೆ ಚಾಕುವಿನಿಂದ 4 ಬಾರಿ ಇರಿದ ಮಗ!

ಕ್ಷುಲ್ಲಕ ಕಾರಣಕ್ಕೆ ಮಗ ಚಾಕುವಿನಿಂದ ತಂದೆಗೆ ಇರಿದ ಘಟನೆ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಸದ್ಯ, ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ಯಲ್ಲಪ್ಪ ಅವರು ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಯಲ್ಲಪ್ಪ ಅವರ ಹೊಟ್ಟೆ, ಬೆನ್ನು, ಎದೆ ಸೇರಿದಂತೆ ನಾಲ್ಕು ಕಡೆ ಚಾಕುವಿನಿಂದ ಇರಿಯಲಾಗಿದೆ. ತಾಲೂಕಿನ ಅದರಗುಂಚಿ ಗ್ರಾಮದಲ್ಲಿ ನಡೆದಿದೆ. ಗಾಯಾಳು ಯಲ್ಲಪ್ಪ ಸಂಕುದ್​ (72) ಅವರನ್ನು ಹುಬ್ಬಳ್ಳಿ ಕಿಮ್ಸ್​​ ಆಸ್ಪತ್ರೆಗೆ ದಾಖಲಾಗಿದೆ.

Read More »

ಶಿವಮೊಗ್ಗ :ತಾನೇ ಹೆರಿಗೆ ಮಾಡ್ಕೊಂಡು ಬ್ಲೇಡ್​​ ನಿಂದ ಕೊಯ್ದು ಮಗು ಹತ್ಯೆ!!

ಶಿವಮೊಗ್ಗ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್​ನ ಶೌಚಾಲಯಲದಲ್ಲಿ ಮಗುವಿನ ಶವ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ದೊಡ್ಡಪೇಟೆ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.ತಾಯಿಯೇ 1 ದಿನ ಗಂಡು ಮಗುವನ್ನು ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮದ ಶೈಲಾ ಕೊಲೆ ಮಾಡಿದ ಆರೋಪಿ. ದೊಡ್ಡಪೇಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕೋಲಾರದಲ್ಲಿ ಕೊಲೆ , ತಮಿಳುನಾಡಿನಲ್ಲಿ ಶವ – ಶಿಡ್ಲಘಟ್ಟ ಪೊಲೀಸರ ರೋಚಕ ತನಿಖೆ.!

ಆರು ವರ್ಷದ ಹಿಂದೆ ಶಿಡ್ಲಘಟ್ಟದಿಂದ ಕಿಡ್ನಾಪ್ ಮಾಡಿ, ಕೋಲಾರದಲ್ಲಿ ಕೊಲೆ ಮಾಡಿ, ತಮಿಳುನಾಡಿನಲ್ಲಿ ಶವವನ್ನು ಬಿಸಾಕಿ ಹೋಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಐದು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಶಿಡ್ಲಘಟ್ಟ ಬಸ್ ನಿಲ್ದಾಣದ ಬಳಿ ಆಟೋ ಚಾಲಕನಾಗಿದ್ದ ಗಿರೀಶ್‌ ಈ ಹಿಂದೆ ಆರೋಪಿಗಳಾದ ಜಾಕಿ, ಹರೀಶ್ ಜೊತೆ ಕ್ಷುಲ್ಲಕ ಕಾರಣಕ್ಕೆ ನಾಲ್ಕೈದು ಬಾರಿ ಜಗಳವಾಗಿತ್ತು. ಇದನ್ನೇ ಮನಸಿನಲ್ಲಿಟ್ಟುಕೊಂಡಿದ್ದ ಆರೋಪಿಗಳು ತಮ್ಮ ಸ್ನೇಹಿತರ ಜೊತೆಗೂಡಿ ಕೊಲೆ ಮಾಡಲು ಸಂಚು ರೂಪಿಸಿದ್ದರು.ಸುಮಾರು ಆರು ವರ್ಷಗಳ …

Read More »

ಹುಬ್ಬಳ್ಳಿ: ತಂದೆಗೆ ಚಾಕುವಿನಿಂದ ಇರಿದ ಪುತ್ರ!

ಹೋಟೆಲ್‌ ವಿಷಯಕ್ಕೆ ಸಂಬಂಧಿಸಿ ತಂದೆಗೆ ಮಗ ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ತಾಲ್ಲೂಕಿನ ಅದರಗುಂಚಿ ಗ್ರಾಮದ ಅಂಚಿಕಟ್ಟಿ ಪ್ಲಾಟ್‌ನಲ್ಲಿ ಶುಕ್ರವಾರ ನಡೆದಿದೆ.ಗ್ರಾಮದ ಯಲಪ್ಪ ಸುಂಕದ(52) ಗಾಯಗೊಂಡ ವ್ಯಕ್ತಿ. ಪುತ್ರ ಮಹಾಂತೇಶ ಸುಂಕದ ಚಾಕು ಇರಿದು ಹಲ್ಲೆ ನಡೆಸಿದ ಆರೋಪಿ.ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೋಟೆಲ್‌ನ ವಸ್ತುಗಳನ್ನು ಹಾಳು ಮಾಡಿರುವ ಕುರಿತು ಪುತ್ರ ಮಹಾಂತೇಶ, ತಂದೆಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಕೋಪದಿಂದ ಅಪ್ಪನ ಹೊಟ್ಟೆ, …

Read More »

ವ್ಯಕ್ತಿ ಮೇಲೆ ನಾಲ್ವರಿಂದ ಹಲ್ಲೆ; ಮೂವರು ಮಹಿಳೆಯರು ಸೇರಿದಂತೆ ನಾಲ್ವರ ವಿರುದ್ದ FIR

ಜಗಳ ಬಿಡಿಸಿದ ಕಾರಣ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಕೆ.ಆರ್.ಆಸ್ಪತ್ರೆ ಆವರಣದಲ್ಲಿ ವ್ಯಕ್ತಿ ಮೇಲೆ ದಾಳಿ ಮಾಡಿ ಗಾಯಗೊಳಿಸಿದ ಪ್ರಕರಣ ನಡೆದಿದೆ.ಸುರೇಶ್ ಆಟೋ ಚಾಲಕರಾಗಿದ್ದಾರೆ.ರವಿ ಎಂಬುವರ ಆಟೋ ಓಡಿಸುತ್ತಿದ್ದರು. ರವಿ ರವರ ವಿಜಯನಗರದ ಮನೆಯಲ್ಲಿ ಕೌಟುಂಬಿಕ ವಿಚಾರದಲ್ಲಿ ಗಲಾಟೆ ಆಗಿದೆ. ಪತ್ನಿ ನಾಗರತ್ನ ಎಂಬುವರ ಮೇಲೆ ಸಂಭಂಧಿಕರೇ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದ ನಾಗರತ್ನರನ್ನ ಆಸ್ಪತ್ರೆಗೆ ಕರೆದೊಯ್ಯಲು ಸುರೇಶ್ ಹೋಗಿದ್ದಾರೆ. ಈ ವೇಳೆ ಜಗಳ ಬಿಡಿಸಿ ಅರೆಪ್ರಜ್ಞಾವಸ್ತೆಯಲ್ಲಿದ್ದ ನಾಗರತ್ನ ರನ್ನ ಕೆ.ಆರ್.ಆಸ್ಪತ್ರೆಗೆ …

Read More »