ಪತ್ನಿಯು ಬಾಲಿವುಡ್ ನಟಿ ನೋರಾ ಫತೇಹಿಯಂತೆ ಕಾಣಬೇಕೆಂದು ಪತಿಯೊಬ್ಬ ಆಕೆಗೆ ಚಿತ್ರಹಿಂಸೆ ನೀಡಿರುವ ಘಟನೆ ಗಾಜಿಯಾಬಾದ್ನಲ್ಲಿ ನಡೆದಿದೆ. ಮಹಿಳೆಯೊಬ್ಬರು ತನ್ನ ಪತಿಯ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಗಂಭೀರ ದೂರು ದಾಖಲಿಸಿದ್ದಾರೆ.ಬಾಲಿವುಡ್ ನಟಿ ನೋರಾ ಫತೇಹಿಯಂತೆ ಕಾಣುವಂತೆ ಮತ್ತು ಹಾಗೆ ಆಗುವಂತೆ ಪತಿ ತನ್ನನ್ನು ಒತ್ತಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.
Read More »ಹಾಸನ :ಟ್ರ್ಯಾಕ್ಟರ್ ಪಲ್ಟಿಯಾಗಿ ಯುವಕ ಮೃತ್ಯು!!
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕಬ್ಬಳ್ಳಿಗೆರೆ ಗ್ರಾಮದಲ್ಲಿ ರೀಲ್ಸ್ ಹುಚ್ಚಿನಿಂದ ವಿಜಿ ಕೊಪ್ಪಲು ಗ್ರಾಮದ 19 ವರ್ಷದ ಕಿರಣ್ ಸಾವನ್ನಪ್ಪಿದ್ದಾನೆ. ರೀಲ್ಸ್ ವಿಡಿಯೋ ಮಾಡಲು ಆತ ಅಪಾಯಕಾರಿಯಾಗಿ ಟ್ರ್ಯಾಕ್ಟರ್ ಚಾಲನೆ ಮಾಡಿದ್ದು, ಅದು ಪಲ್ಟಿ ಹೊಡೆದ ಪರಿಣಾಮ, ಅದರಡಿ ಸಿಲುಕಿ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ವರದಿಗಳ ಪ್ರಕಾರ ಕಿರಣ್ ರೀಲ್ಸ್ ತಯಾರಿಸುವ ಉತ್ಸಾಹದಲ್ಲಿ ಟ್ರ್ಯಾಕ್ಟರ್ನ್ನು ವೇಗವಾಗಿ ಚಾಲನೆ ಮಾಡಿದ್ದಾನೆ. ರಸ್ತೆ ತಿರುವಿನಲ್ಲಿ ಟ್ರ್ಯಾಕ್ಟರ್ನ ನಿಯಂತ್ರಣ ಕಳೆದುಕೊಂಡು ಅದು ಪಲ್ಟಿಯಾದ ಪರಿಣಾಮ ಕಿರಣ್ …
Read More »ಚಿತ್ರದುರ್ಗ: ವಿದ್ಯಾರ್ಥಿನಿ ಹತ್ಯೆ!! ಆರೋಪಿಗಳ ಫೋಟೋ ಹಿಡಿದು ಪ್ರತಿಭಟನೆ.
19 ವರ್ಷದ ವಿದ್ಯಾರ್ಥಿನಿ ವರ್ಷಿತಾ ಕೊಲೆ ಪ್ರಕರಣ ಭಾರಿ ಸಂಚಲನ ಉಂಟುಮಾಡಿದ್ದು, ವಿದ್ಯಾರ್ಥಿ ಸಮುದಾಯ ಕಳಕಳಿ ವ್ಯಕ್ತಪಡಿಸಿದೆ.ವಿದ್ಯಾರ್ಥಿನಿಯ ದಾರುಣ ಹತ್ಯೆಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ, ಚಿತ್ರದುರ್ಗದಲ್ಲಿ ಎಬಿವಿಪಿ ನೇತೃತ್ವದಲ್ಲಿ ಭಾರೀ ಪ್ರತಿಭಟನಾ ಮೆರವಣಿಗೆ ನಡೆಯಿತು. ವಿದ್ಯಾರ್ಥಿಗಳು ಕೈಯಲ್ಲಿ ಪ್ಲೇಕಾರ್ಡ್ ಹಿಡಿದು, ಘೋಷಣೆಗಳನ್ನು ಕೂಗುತ್ತಾ ನಗರ ಮುಖ್ಯರಸ್ತೆಗಳಲ್ಲಿ ಪಂಜಿನ ಮೆರವಣಿಗೆ ನಡೆಸಿದರು.ಆರೋಪಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ವಿದ್ಯಾರ್ಥಿನಿ ವರ್ಷಿತಾ ಅವರ ಕೊಲೆ ಪ್ರಕರಣ ರಾಜ್ಯದಾದ್ಯಂತ ಆಕ್ರೋಶ …
Read More »ಅರಕಲಗೂಡು: ತಂಬಾಕು ಉತ್ಪನ್ನಗಳ ಮಾರಾಟಗಾರರಿಗೆ ದಂಡ!
ಜಿಲ್ಲಾ ಮತ್ತು ತಾಲ್ಲೂಕು ತಂಬಾಕು ಕೋಶದ ವತಿಯಿಂದ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ನೇತೃತ್ವದಲ್ಲಿ ಪಟ್ಟಣದಲ್ಲಿ ಬುಧವಾರ ತಂಬಾಕು ಉತ್ಪನ್ನಗಳ ಮಾರಾಟ ನಡೆಸುತ್ತಿದ್ದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ₹ 2,890 ದಂಡ ವಿಧಿಸಲಾಯಿತು. ತಂಬಾಕು ನಿಯಂತ್ರಣ ಕಾಯ್ದೆಯ ಉಲ್ಲಂಘನೆಗೆ ಮುಂದೆ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಯಿತು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ, ಪರಮೇಶ್, ಜಿಲ್ಲಾ ತಂಬಾಕು ಕೋಶದ ಸಂಯೋಜಕಿ ಮಮತಾ, ಕುಮಾರ್, ಪೊಲೀಸ್ ಸಿಬ್ಬಂದಿ ಕುಮಾರ್ …
Read More »ರೈಲ್ವೆ ಬ್ರಿಡ್ಜ್ ನಿರ್ಮಾಣಕ್ಕೆಂದು ತೋಡಿದ್ದ ಗುಂಡಿಗೆ ಬಿದ್ದು ನಾಲ್ವರು ಮಕ್ಕಳು ಸಾವು!
ಬ್ರಿಡ್ಜ್ ನಿರ್ಮಾಣಕ್ಕೆಂದು ತೋಡಿದ್ದ ಗುಂಡಿಯಲ್ಲಿ ನಾಲ್ವರು ಮಕ್ಕಳು ಬಿದ್ದು ಪ್ರಾಣ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ದರ್ವಾ ಪಟ್ಟಣದಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಯೋಜನೆಗಾಗಿ ಅಗೆದಿದ್ದ ನೀರುತುಂಬಿದ ಗುಂಡಿಯಲ್ಲಿ ನಾಲ್ವರು ಅಪ್ರಾಪ್ತ ಬಾಲಕರು ಮುಳುಗಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ವರದಿಯಾಗಿದೆ.ನಾಲ್ವರು ಮಕ್ಕಳು ರೆಹಾನ್ ಅಸ್ಲಾಂ ಖಾನ್ (13), ಗೋಲು ಪಾಂಡುರಂಗ್ ನರ್ನವಾರೆ (10), ಸೌಮ್ಯ ಸತೀಶ್ ಖಾಡ್ಸನ್ (10) ಮತ್ತು ವೈಭವ್ ಆಶಿಶ್ ಬೋಧ್ಲೆ (14) ಸ್ಥಳದ ಬಳಿ ಆಟವಾಡಲು …
Read More »ಹೈದರಾಬಾದ್: ಮಿಯಾಪುರದಲ್ಲಿ ಕಲಬುರಗಿಯ ಒಂದೇ ಕುಟುಂಬದ ಐವರು ಸಾವು!
ಹೈದರಾಬಾದ್ನ ಮಿಯಾಪುರದಲ್ಲಿ ಕರ್ನಾಟಕದ ಕಲಬುರಗಿಯ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ಮಿಯಾಪುರದ ಮಕ್ತಾ ಮಹಬೂಬ್ಪೇಟೆಯಲ್ಲಿ ದುರಂತ ಸಂಭವಿಸಿದೆ. ಸ್ಥಳೀಯರಿಂದ ಮಾಹಿತಿ ದೊರೆತ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.ಮೃತರನ್ನು ನರಸಿಂಹ (60), ವೆಂಕಟಮ್ಮ (55), ಅನಿಲ್ (32), ಕವಿತಾ (24), ಮತ್ತು ಅಪ್ಪು (2) ಎಂದು ಗುರುತಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
Read More »ಅಮಿತಾಬ್ ಬಚ್ಚನ್ ಮನೆಗೆ ನುಗ್ಗಿದ ನೀರು -ಜಲಾವೃತಗೊಂಡ ಪ್ರತೀಕ್ಷಾ!
ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಭಾರೀ ಮಳೆಯ ಹಿನ್ನೆಲೆ ಸಂಪೂರ್ಣ ಮುಂಬೈ ಜಲಾವೃತವಾಗಿದ್ದು ಸರ್ಕಾರಿ ಕಚೇರಿಗಳ ಬಾಗಿಲಿಗೆ ಬೀಗ ಹಾಕಲಾಗಿದೆ. ಖಾಸಗಿ ಕಂಪನಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಕೂಡ ಹೇಳಲಾಗಿದೆ.ಇನ್ನು ಪ್ರಕೃತಿಯ ಮುಂದೆ ಯಾರು ನಿಲ್ಲಲಾರರು. ಪ್ರಕೃತಿಗೆ ಶ್ರೀಮಂತ ಮತ್ತು ಬಡವ ಎಂಬ ಭೇದ ಭಾವ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಸದ್ಯ ಭಾರತದ ಮಹಾನಾಯಕ ”ಅಮಿತಾಬ್ ಬಚ್ಚನ್” ಅವರ ಮನೆ ”ಪ್ರತೀಕ್ಷಾ” ಜಲಾವೃತಗೊಂಡಿದೆ. ”ಸಾಗರ್ ಠಾಕೂರ್” ಎಂಬ …
Read More »ಅಂಕೋಲಾ: ಪ್ರೀತಿಸಿ ಮದುವೆಯಾಗಿದ್ದ ಯುವತಿ 4 ತಿಂಗಳಲ್ಲಿ ಆತ್ಮಹತ್ಯೆ!
ನಾಲ್ಕು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಯುವತಿ ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಟ್ಟಿಕೇರಿ ಗ್ರಾಮದಲ್ಲಿ ನಡೆದಿದೆ.ಮೃತಪಟ್ಟ ಯುವತಿಯನ್ನು ರಮ್ಯಾ ಸಂಕೇತ್ ಆಚಾರಿ (24) ಎಂದು ಗುರುತಿಸಲಾಗಿದೆ.ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮದುವೆಯಾದ ಕೇವಲ 4 ತಿಂಗಳೊಳಗೆ ನಡೆದ ಈ ದುರಂತದ ಕುರಿತು ಕೂಲಂಕಷವಾಗಿ ತನಿಖೆ ನಡೆಸುತ್ತಿದ್ದಾರೆ.
Read More »ಗ್ರಾಮ ಪಂಚಾಯಿತಿ ಕಚೇರಿಯಲ್ಲೇ ಕ್ರಿಮಿನಾಶಕ ಸೇವಿಸಿ ಮಹಿಳೆ ಆತ್ಮಹತ್ಯೆಗೆ ಯತ್ನ.!
ಹಲವು ಬಾರಿ ಪಂಚಾಯಿತಿಗೆ ಅಲೆದರೂ ನ್ಯಾಯ ಸಿಗಲಿಲ್ಲ ಎಂದು ಬೇಸತ್ತ ಮಹಿಳೆ ಪಂಚಾಯಿತಿಯಲ್ಲೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಕೂಡಲೇ ಪೊಲೀಸರು ಬಾಟಲಿ ಕಿತ್ತುಕೊಂಡು ಮಹಿಳೆಯನ್ನು ರಕ್ಷಿಸಿದ್ದಾರೆ.ಒತ್ತುವರಿ ಆದ ಜಾಗ ತೆರವು ಮಾಡಿಕೊಡುವಂತೆ ಮನವಿ ಮಾಡಿದ್ದರೂ ಪಿಡಿಒ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಿಳೆ ಆರೋಪಿಸಿದ್ದಾರೆ.
Read More »ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಸೈನಿಕ!
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದ ಮಾಜಿ ಸೈನಿಕ ಬೃಂಗೇಶ್ ಸಾಲಬಾಧೆ ತಾಳಲಾರದೆ ಸತ್ತೇಗಾಲ ಬಳಿ ಕಾವೇರಿ ನದಿಗೆ ಹಾರಿದ್ದರು.ನದಿಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರಿಂದ ಮಾಜಿ ಸೈನಿಕ ಬೃಂಗೇಶ್ ಕೊಚ್ಚಿಕೊಂಡು ಹೋಗುತ್ತಿದ್ದರು. ಕೊನೆ ಕ್ಷಣದಲ್ಲಿ ಮನಸು ಬದಲಿಸಿ, ಬದುಕಬೇಕೆಂದು ಆಸೆ ಹುಟ್ಟಿದೆ. ಕೂಡಲೇ, ಮಾಜಿ ಸೈನಿಕ ಬೃಂಗೇಶ್ ಸನೀಹದಲ್ಲೇ ಇದ್ದ ಮರದ ಕೊಂಬೆಯನ್ನು ಹಿಡಿದುಕೊಂಡಿದ್ದಾರೆ. ಬಳಿಕ, ಮಾಜಿ ಸೈನಿಕ ಬೃಂಗೇಶ್ ರಕ್ಷಣೆ ಮಾಡುವಂತೆ ಕಿರುಚಾಡಿದ್ದಾರೆ. ಆಗ, ಅಂಬಿಗರು ಮಾಜಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





