Breaking News

BigTv News

4 ದಿಕ್ಕಿನಲ್ಲಿ 18 ಕಡೆ ಶವದ ಭಾಗ ಎಸೆದು ಧರ್ಮಸ್ಥಳ ಯಾತ್ರೆಗೆ ಹೋಗಿದ್ದ ಆರೋಪಿಗಳು ವಶಕ್ಕೆ!

ಮಹಿಳೆಯನ್ನು ಭೀಕರವಾಗಿ ಕೊ*ಲೆ ಮಾಡಿದ ನಂತರ ಶವವನ್ನು ತುಂಡು ತುಂಡಾಗಿ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತ ಮಹಿಳೆಯನ್ನು ಲಕ್ಷ್ಮೀ ದೇವಮ್ಮ ಎಂದು ಗುರುತಿಸಲಾಗಿದೆ. ಮೃತ ಮಹಿಳೆಯ ಅಳಿಯ ಡಾ.ರಾಮಚಂದ್ರ ಸೇರಿದಂತೆ ನಾಲ್ವರನ್ನು ಕೊರಟಗೆರೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.

Read More »

ಧಾರವಾಡ ಜೆಎಸ್ಎಸ್ ಕಾಲೇಜಿನ ಕಾಂಪೌಂಡಿಗೆ ಡಿಕ್ಕಿ ಹೊಡೆದ BSRTC ಬಸ್!

ವಿದ್ಯ ಗಿರಿಯ ಜೆಎಸ್ಎಸ್ ಕಾಲೇಜಿನ ಕಾಂಪೌಂಡಿಗೆ ಡಿಕ್ಕಿ ಹೊಡೆದ ಬಿ ಆರ್ ಟಿ ಸಿ ಬಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು ರಸ್ತೆ ತಡೆ ನಡೆಸುತ್ತಿದ್ದಾರೆ ಬಿ ಆರ್ ಟಿ ಸಿ ಬಸ್ಗಳು ಸಾಲಾಗಿ ತಡೆ ನಿಂತಿವೆ. ವ್ಯವಸ್ಥಾಪಕರು ನಿರ್ದೇಶಕರು ಬಿಎ ಟೆಸ್ಟ್ ಸಿಎ ನಿರ್ದೇಶಕರು ಕೂಡಲೇ ಬಂದು ಪರಿಸ್ಥಿತಿಯನ್ನು ವಿಚಾರಿಸಬೇಕೆಂದು ಪ್ರತಿವರ್ತಿಸುತ್ತಿದ್ದಾರೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾಲೇಜ್ ಕಾಂಪೌಂಡ್ ಹಾಳಾಗಿದೆ.

Read More »

ಗೃಹಲಕ್ಷ್ಮೀ’ ಫಲಾನುಭವಿಗಳಿಗೆ ಗುಡ್ ನ್ಯೂಸ್ : ಒಟ್ಟಿಗೆ 2 ಕಂತಿನ 4,000 ರೂ. ಖಾತೆಗೆ ಜಮೆ.!

ರಾಜ್ಯದ ಮಹಿಳೆಯರಿಗೆ ವರಮಮಹಾಲಕ್ಮೀ ಹಬ್ಬದ ಸಂದರ್ಭದಲ್ಲಿ ಸಿಹಿಸುದ್ದಿ ಸಿಕ್ಕಿದ್ದು, ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ ಬಿಡಗುಡೆಯಾಗಿದ್ದು, ಇದೀಗ ಜುಲೈ ಹಾಗೂ ಆಗಸ್ಟ್ ತಿಂಗಳ 4,000 ರೂ. ಒಟ್ಟಿಗೆ ಜಮೆ ಆಗಲಿದೆ.ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ 2025-26ನೇ ಸಾಲಿನ 3ನೇ ಕಂತಿನ ಹಣ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ.

Read More »

ಮುಸ್ಲಿಂ ಯುವತಿ ಮದುವೆಯಾದವರಿಗೆ 5 ಲಕ್ಷ ರೂ.: ಶಾಸಕ ಯತ್ನಾಳ್ ಘೋಷಣೆ

ಮುಸ್ಲಿಂ ಯುವತಿ ಪ್ರೀತಿಸಿ ಕೊಲೆಯಾದ ಗವಿಸಿದ್ದಪ್ಪ ಅವರ ಮನೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಈಶ್ವರಪ್ಪ ಭೇಟಿ ನೀಡಿದ್ದಾರೆ.ವಿಜಯಪುರ ಶಾಸಕ ಯತ್ನಾಳ್, ಮುಸ್ಲಿಂ ಯುವತಿ ಮದುವೆಯಾದವರಿಗೆ 5 ಲಕ್ಷ ರೂಪಾಯಿ ಕೊಡಲಾಗುವುದು. ಈ ರೀತಿಯ ಅಭಿಯಾನ ಆರಂಭಿಸುತ್ತೇವೆ. ಹಿಂದೂಗಳನ್ನು ಕೊಲೆ ಮಾಡುವ ಮನಸ್ಥಿತಿ ಮುಸ್ಲಿಮರಲ್ಲಿದೆ. ರೀಲ್ಸ್ ನಲ್ಲಿ ಮಚ್ಚು ತೋರಿಸಿದ್ದಾನೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಗವಿಸಿದ್ದಪ್ಪ ಪ್ರೀತಿಸಿದ್ದ ಹುಡುಗಿಯನ್ನು ಕೂಡ ಬಂಧಿಸಬೇಕು. ಈ ಸರ್ಕಾರದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ. …

Read More »

ಬೆಂಗಳೂರಿಗೆ ಆಗಮಿಸಿದ `ಪ್ರಧಾನಿ ಮೋದಿ’ ಗೆ ಭರ್ಜರಿ ಸ್ವಾಗತ : ಗಲ್ಲಿ ಗಲ್ಲಿಯಲ್ಲಿ `ಮೋದಿ, ಮೋದಿ ಘೋಷಣೆ

ಪ್ರಧಾನಿ ಮೋದಿ ಅವರು ರಸ್ತೆಯ ಮೂಲಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಹೊರಟಿದ್ದು, ಈ ವಳೆ ರಸ್ತೆಯಲ್ಲಿ ಇಕ್ಕೆಲಗಳಲ್ಲಿ ಜನರು ಮೋದಿ ಮೋದಿ ಘೋಷಣೆ ಕೂಗುತ್ತಿದ್ದಾರೆ.ಬೆಂಗಳೂರಿನ ನಮ್ಮ ಮೆಟ್ರೋ `ಹಳದಿ ಮೆಟ್ರೋ’ ಮಾರ್ಗ ಉದ್ಘಾಟನೆ ಹಾಗೂ 3 ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಇಂದು ಬೆಳಿಗ್ಗೆ 10:55 ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ. ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ಮೋದಿ ಹೆಲಿಕಾಪ್ಟರ್ ಮೂಲಕ …

Read More »

ರಷ್ಯಾ-ಚೀನಾ ಸೇರಿದಂತೆ ಬ್ರಿಕ್ಸ್ ದೇಶಗಳ ಮೇಲೆ ಸುಂಕ ಪರಿಣಾಮ!

ಟ್ರಂಪ್ ಅವರ ಸುಂಕ ನೀತಿಯಿಂದಾಗಿ ಬ್ರಿಕ್ಸ್ ದೇಶಗಳು ಸಹ ಚಂಚಲವಾಗಿವೆ ಮತ್ತು ಅದನ್ನು ಬಲವಾಗಿ ವಿರೋಧಿಸುತ್ತಿವೆ. ಅಂತಹ ಕ್ರಮಗಳು ಜಾಗತಿಕ ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಮತ್ತು ಪ್ರಪಂಚದಾದ್ಯಂತದ ದೇಶಗಳ ಪರಿಸ್ಥಿತಿ ಉದ್ವಿಗ್ನವಾಗಬಹುದು ಎಂದು ತಜ್ಞರು ನಂಬಿದ್ದಾರೆ. ಅಂತರರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿನ ಪರಿಸ್ಥಿತಿಯು ಹೂಡಿಕೆದಾರರು ಹಣವನ್ನು ಹೂಡಿಕೆ ಮಾಡುವ ಮೊದಲು ಯೋಚಿಸಬೇಕಾಗುತ್ತದೆ. ಈ ‘ಸುಂಕ ಯುದ್ಧ’ ದೀರ್ಘಕಾಲದವರೆಗೆ ಮುಂದುವರಿದರೆ, ಮಾರುಕಟ್ಟೆ ಕುಸಿತಗೊಳ್ಳುತ್ತದೆ.

Read More »

ಇ.ವಿ ಬಳಕೆ ಹೆಚ್ಚಲು ಚಾರ್ಜಿಂಗ್ ಕೇಂದ್ರ ಅಗತ್ಯ: ಪಾರ್ಥೊ ಬ್ಯಾನರ್ಜಿ!

ವಿದ್ಯುತ್‌ ಚಾಲಿತ ವಾಹನಗಳ ಬಳಕೆ ತ್ವರಿತಗತಿಯಲ್ಲಿ ಹೆಚ್ಚಳ ಕಾಣುವಲ್ಲಿ ಸಾರ್ವಜನಿಕ ಚಾರ್ಜಿಂಗ್‌ ಕೇಂದ್ರಗಳ ಸ್ಥಾಪನೆಯು ಪ್ರಮುಖ ಪಾತ್ರ ವಹಿಸಲಿದೆ, ಇವುಗಳ ಸಂಖ್ಯೆ ಹೆಚ್ಚಬೇಕಿದೆ ಎಂದು ಮಾರುತಿ ಸುಜುಕಿ ಇಂಡಿಯಾದ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ (ಮಾರುಕಟ್ಟೆ ಮತ್ತು ಮಾರಾಟ) ಪಾರ್ಥೊ ಬ್ಯಾನರ್ಜಿ ಹೇಳಿದ್ದಾರೆ.

Read More »

ಮತಗಳ್ಳತನ ಆರೋಪ: ದಾಖಲೆ ಒದಗಿಸಲು ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್

ಇಂದು ಸಂಸದ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಿರುವಂತ ಕರ್ನಾಟಕ ಚುನಾವಣಾ ಆಯೋಗವು ಅದರಲ್ಲಿ ದಿನಾಂಕ 07.08.2025 ರಂದು ನವದೆಹಲಿಯಲ್ಲಿ ನಡೆದ ನಿಮ್ಮ ಪತ್ರಿಕಾಗೋಷ್ಠಿಯಲ್ಲಿ ಮಾಡಲಾದ ಆರೋಪಗಳ ವಿಚಾರಣೆಗೆ ದಾಖಲೆಗಳನ್ನು ಒದಗಿಸುವಂತೆ ಸೂಚಿಸಲಾಗಿದೆ.ಈ ಕಚೇರಿ ನಡೆಸಿದ ಪ್ರಾಥಮಿಕ ವಿಚಾರಣೆಯು ಪ್ರಸ್ತುತಿಯಲ್ಲಿ ನೀವು ತೋರಿಸಿರುವ ಟಿಕ್ ಗುರುತು ಮಾಡಿದ ದಾಖಲೆ (ಪ್ರತಿಯನ್ನು ಲಗತ್ತಿಸಲಾಗಿದೆ) ಮತಗಟ್ಟೆ ಅಧಿಕಾರಿ ನೀಡಿದ ದಾಖಲೆಯಲ್ಲ ಎಂದು ಬಹಿರಂಗಪಡಿಸುತ್ತದೆ.ಆದ್ದರಿಂದ, ಶಕುನ್ ರಾಣಿ ಅಥವಾ ಬೇರೆ ಯಾರಾದರೂ ಎರಡು ಬಾರಿ …

Read More »

ಭೂ ವ್ಯವಹಾರ ಪ್ರಕರಣದಲ್ಲಿ ರಾಬರ್ಟ್ ವಾದ್ರಾ 58 ಕೋಟಿ ಅಪರಾಧದ ಆದಾಯವಾಗಿ ಪಡೆದಿದ್ದಾರೆ: ED

ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಗುರುಗ್ರಾಮದಲ್ಲಿ ನಡೆದ ಭ್ರಷ್ಟ ಭೂ ವ್ಯವಹಾರದಿಂದ 58 ಕೋಟಿ ರೂ.ಗಳನ್ನು ಅಪರಾಧದ ಆದಾಯವಾಗಿ (ಪಿಒಸಿ) ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ತನ್ನ ಆರೋಪಪಟ್ಟಿಯಲ್ಲಿ ತಿಳಿಸಿದೆ.ಇಡಿ ಪ್ರಕಾರ, ಬ್ಲೂ ಬ್ರೀಜ್ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ (ಬಿಬಿಟಿಪಿಎಲ್) ಮೂಲಕ 5 ಕೋಟಿ ರೂ.ಗಳನ್ನು ಮತ್ತು ಸ್ಕೈ ಲೈಟ್ ಹಾಸ್ಪಿಟಾಲಿಟಿ ಪ್ರೈವೇಟ್ ಲಿಮಿಟೆಡ್ (ಎಸ್‌ಎಲ್‌ಎಚ್‌ಪಿಎಲ್) ಮೂಲಕ 53 ಕೋಟಿ ರೂ.ಗಳನ್ನು …

Read More »

ಧರ್ಮಸ್ಥಳದಲ್ಲಿ ಗಲಾಟೆ ಪ್ರಕರಣ: 6 ಜನರ ಬಂಧನ

ಧರ್ಮಸ್ಥಳದ ಪಾಂಗಳ ಕ್ರಾಸ್‌ ಬಳಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಪದ್ಮನಾಭ್‌ ಪ್ರಸಾದ್‌, ಸುಹಾಸ್‌, ಗುರುಪ್ರಸಾದ್‌, ಶಶಿಕುಮಾರ್‌, ಕಲಂದರ್‌, ಚೇತನ್‌ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ.ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದರು. ಪೊಲೀಸರ ಅಧಿಕಾರಿ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಆರು ಜನರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Read More »