ರಾಣೆಬೆನ್ನೂರಿನ ನಾಡಿಗೇರ್ ಓಣಿಯ ಮನೆಯ ಶೌಚಾಲಯದೊಳಗೆ ಇಂದು ಬೆಳಗ್ಗೆ ಚಿರತೆ ಕಂಡುಬಂತು. ಪಿ.ಟಿ.ಕಾಕಿ ಎಂಬವರ ಮನೆಯ ಶೌಚಾಲಯದಲ್ಲಿ ಚಿರತೆ ಅವಿತು ಕುಳಿತಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.ಸುತ್ತಲೂ ಬಲೆ ಹಾಕಲಾಗಿದೆ. ಬೋನು ಇರಿಸಲಾಗಿದೆ. ಶೀಘ್ರದಲ್ಲೇ ಚಿರತೆಯನ್ನು ಸೆರೆ ಹಿಡಿಯುತ್ತೇವೆ. ಅರಿವಳಿಕೆ ತಜ್ಞರು ಧಾರವಾಡದಿಂದ ಬರುತ್ತಿದ್ದಾರೆ. ಜನರೂ ಸಹಕರಿಸಬೇಕು ಎಂದು ಅವರು ಹೇಳಿದರು.
Read More »ಕಲಬುರಗಿಗೆ ಪರೀಕ್ಷೆ ಬರೆಯಲು ಹೋಗಿದ್ದ ಯುವತಿ ಮಿಸ್ಸಿಂಗ್; ಮಶಾಕ್ ಮೇಲೆಯೇ ಪೋಷಕರ ಅನುಮಾನ
ಕಲಬುರಗಿಯಲ್ಲಿ ಪರೀಕ್ಷೆ ಬರೆಯಲು ಹೋದ ಯುವತಿ ನಾಪತ್ತೆಯಾಗಿದ್ದು, ಪೋಷಕರು ಲವ್ ಜಿಹಾದ್ಗೆ ಬಲಿಯಾಗಿದ್ದಾಳೆ ಎಂದು ಶಂಕಿಸಿದ್ದಾರೆ. ಯುವತಿಯ ಮೊಬೈಲ್ ಹೈದರಾಬಾದ್ನಲ್ಲಿ ಸ್ವಿಚ್ ಆಫ್ ಆಗಿದೆ.ಮಗಳು ನಾಪತ್ತೆಯಾಗಲು ಲವ್ ಜಿಹಾದ್ ಕಾರಣ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.ಯುವತಿಗೆ ಮಾಶಾಕ್ ಕರೆ ಮತ್ತು ಮೆಸೇಜ್ ಮಾಡುತ್ತಿದ್ದನಂತೆ. ಇದೀಗ ಯುವತಿಯ ಪೋಷಕರು ಮಶಾಕ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮಗಳು ಮಶಾಕ್ ಜೊತೆ ಫೋನ್ನಲ್ಲಿ ಸಂಪರ್ಕದಲ್ಲಿದ್ದಳು ಎಂದು ಪೋಷಕರು ಹೇಳುತ್ತಾರೆ.
Read More »ಮಾತಾಡಿದ್ದನ್ನು “ಬರೆಯುವ” ಎಐ ಯಂತ್ರ – ಕೇರಳ ವಿದ್ಯಾರ್ಥಿಗಳ ಅನ್ವೇಷಣೆ!
ಇದೀಗ ಮನುಷ್ಯರು ಮಾತಾಡಿದ್ದನ್ನು “ಬರೆಯುವ” ಎಐ ಯಂತ್ರವನ್ನು ಕೇರಳ ವಿದ್ಯಾರ್ಥಿಗಳು ಅನ್ವೇಷಣೆ ಮಾಡಿದ್ದಾರೆ.ವ್ಯಕ್ತಿಗಳು ನೀಡುವ ವಾಯ್ಸ್ ಆಧರಿಸಿ ಎಐ ಯಂತ್ರ ಇದೀಗ ಬರೆಯುವ ಸಾಮರ್ಥ್ಯ ಅಭಿವೃದ್ಧಿ ಪಡಿಸಲಾಗಿದ್ದು, ಹೊಸ ಚಮತ್ಕಾರ ಇದೀಗ ಎಲ್ಲೆಡೆ ವ್ಯಾಪಕವಾಗಿ ಸದ್ದು ಮಾಡುತ್ತಿದೆ.ಸೋಷಿಯಲ್ ಮೀಡಿಯಾದಲ್ಲಿ ಅಜಯ್ ಎಂಬ ವ್ಯಕ್ತಿ ಎಐ ಮೆಷಿನ್ ಬರೆಯುತ್ತಿರೋ ವಿಡಿಯೋ ಶೇರ್ ಮಾಡಿದ್ದು, “Department of Electronics” ಎಂಬ ವಾಕ್ಯವನ್ನು ಅಜಯ್ ಉಚ್ಚಾರಣೆ ಮಾಡಿದ ಬಳಿಕ ಮೆಷಿನ್ ಅದನ್ನು ತಪ್ಪಿಲ್ಲದೇ A4 …
Read More »ಮದುವೆಯ ರಾತ್ರಿಯೇ ವಧು ಆತ್ಮಹತ್ಯೆಗೆ ಶರಣು!
ಹೈದರಾಬಾದ್ ನ ಸತ್ಯ ಸಾಯಿ ಜಿಲ್ಲೆಯ ಪೆನುಕೊಂಡದ ಸೋಮಂಡೆಪಲ್ಲಿ ಮಂಡಲದ ಕುಟುಂಬವೊಂದರಲ್ಲಿ 22 ವರ್ಷದ ವಧು ಹರ್ಷಿತಾ ತನ್ನ ಮದುವೆಯ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅದ್ಧೂರಿ ವಿವಾಹ ಸಮಾರಂಭ ನಡೆದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ.ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಾವಿನ ಸುತ್ತಲಿನ ಸಂದರ್ಭಗಳ ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ದುರಂತಕ್ಕೆ ಕಾರಣವೇನಾಗಿರಬಹುದು ಎಂಬುದನ್ನು ತಿಳಿಯಲು ಪೊಲೀಸರು ಎರಡೂ ಕುಟುಂಬಗಳನ್ನು ಪ್ರಶ್ನಿಸುತ್ತಿದ್ದಾರೆ.
Read More »ಮೊಹಾಲಿ ಆಕ್ಸಿಜನ್ ಪ್ಲಾಂಟ್ನಲ್ಲಿ ಸ್ಪೋಟ: ಇಬ್ಬರು ಸಾವು!
ಮೊಹಾಲಿಯ ಆಮ್ಲಜನಕ ಸ್ಥಾವರದಲ್ಲಿ ಭಾರೀಸ್ಪೋಟ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ನಗರದ 9ನೇ ಹಂತದಲ್ಲಿರುವ ಕಾರ್ಖಾನೆಯಲ್ಲಿ ಸ್ಪೋಟ ಸಂಭವಿಸಿದೆ . ಘಟನೆಯ ಮಾಹಿತಿ ತಿಳಿದ ಕೂಡಲೇ ವೈದ್ಯಕೀಯ ತಂಡಗಳು , ಪೊಲೀಸರು ಹಾಗೂ ಜಿಲ್ಲಾಡಳಿತ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ .
Read More »ಪ್ರೀತಿಸಿ ಮದುವೆಯಾಗಿದ್ದ ಮನೋವೈದ್ಯೆ ಆತ್ಮಹತ್ಯೆ!
ತನ್ನ ಬಳಿ ಚಿಕಿತ್ಸೆಗೆಂದು ಬಂದಿದ್ದ ಹುಚ್ಚನನ್ನೇ ಪ್ರೀತಿಸಿ ಮದುವೆಯಾಗಿದ್ದ ಮನೋವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಪತಿ ಮತ್ತು ಅತ್ತೆ-ಮಾವನ ಕಿರುಕುಳದಿಂದ ಬೇಸತ್ತ 33 ವರ್ಷದ ಮನೋವೈದ್ಯೆಯೊಬ್ಬರು ಸನತ್ನಗರ ಜೆಕ್ ಕಾಲೋನಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Read More »ಕೊಪ್ಪಳ | ಗವಿಸಿದ್ಧಪ್ಪ ನಾಯಕ ಕೊಲೆ ಪ್ರಕರಣ: ನಾಲ್ಕು ಆರೋಪಿಗಳ ಬಂಧನ
ಸೈಲಾನಪುರ ಬಡಾವಣೆಯ ಸಾಧಿಕ್ ಹುಸೇನ್ ಕೋಲ್ಕಾರ್ ಮುಸ್ಲಿಂ ಸಮುದಾಯದ ಯುವತಿಯನ್ನು ಪ್ರೀತಿಸುತ್ತಿದ್ದ. ಗವಿಸಿದ್ಧಪ್ಪ ಕೂಡ ಅದೇ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಕೃತ್ಯ ಎಸಗಿದ ಬಳಿಕ ಸಾಧಿಕ್ ನೇರವಾಗಿ ಇಲ್ಲಿನ ನಗರ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದ. ಈ ಪ್ರಕರಣದ ಇನ್ನುಳಿದ ಮೂವರು ಆರೋಪಿಗಳಾದ ಇಲ್ಲಿನ ಮಿಟ್ಟಿಕೇರಿ ಓಣಿಯ ಗೇಸುದರಾಜ ಪಟೇಲ್, ನಿರ್ಮಿತಿ ಕೇಂದ್ರದ ಬಳಿ ಮಹಮ್ಮದ್ ನಿಜಾಮುದ್ದೀನ್ ಮತ್ತು ಮೆಹಬೂಬ ನಗರ ನಿವಾಸಿ ಮೆಹಬೂಬ್ ಸಿಕ್ಕಲ್ಗಾರ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.
Read More »ಉಗ್ರರ ದಾಳಿಯ ಭೀತಿ: ಭಾರತದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಣೆ!
ನಾಗರಿಕ ವಿಮಾನಯಾನ ಸಚಿವಾಲಯದ ಭದ್ರತಾ ವಿಭಾಗವು ಆಗಸ್ಟ್ 4 ರಂದು ಸಲಹೆ ನೀಡಿದ್ದು, ಎಲ್ಲಾ ವಾಯುಯಾನ ಸೌಲಭ್ಯಗಳಲ್ಲಿ ಕಣ್ಗಾವಲು ತಕ್ಷಣ ಬಲಪಡಿಸಲು ಕರೆ ನೀಡಿದೆ. ಇದರಲ್ಲಿ ವಿಮಾನ ನಿಲ್ದಾಣಗಳು, ಏರ್ ಸ್ಟ್ರಿಪ್ ಗಳು, ಹೆಲಿಪ್ಯಾಡ್ ಗಳು, ಹಾರುವ ಶಾಲೆಗಳು ಮತ್ತು ತರಬೇತಿ ಸಂಸ್ಥೆಗಳು ಸೇರಿವೆ, ಅಲ್ಲಿ ಸುಧಾರಿತ ಭದ್ರತಾ ಕ್ರಮಗಳನ್ನು ವಿಳಂಬವಿಲ್ಲದೆ ಜಾರಿಗೆ ತರಬೇಕು.ಸೆಪ್ಟೆಂಬರ್ 22 ಮತ್ತು ಅಕ್ಟೋಬರ್ 2, 2025 ರ ನಡುವೆ ಭಯೋತ್ಪಾದಕರು ಅಥವಾ “ಸಮಾಜ ವಿರೋಧಿ …
Read More »ಬೆಳಗಾವಿ : ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮಹಿಳೆ ತಲೆಗೆ ರಾಡ್ ನಿಂದ ಹೊಡೆದು ಹತ್ಯೆ!
ಹೋಟೆಲ್ ನಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ಮಹಿಳೆಯನ್ನು ಹತ್ಯೆ ಮಾಡಿದ ಘಟನೆ ಬೆಳಗಾವಿಯ ಸದಾಶಿವನಗರದ ಲಕ್ಷ್ಮಿ ಕಾಂಪ್ಲೆಕ್ಸ್ ಬಳಿ ತಡರಾತ್ರಿ ನಡೆದಿದೆ.ಮಹಾದೇವಿ ಕರೆಣ್ಣನವರ(42) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಅವರನ್ನು ಕೊಲೆ ಮಾಡಲಾಗಿದೆ.ಸ್ಥಳಕ್ಕೆ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
Read More »ಉತ್ತರಕಾಶಿಯಲ್ಲಿ ಭೀಕರ ಮೇಘಸ್ಫೋಟ!
ಖೀರಗಂಗಾ ನದಿಯ ಜಲಾನಯನ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿದ್ದರಿಂದ ದಿಢೀರ್ ಪ್ರವಾಹ ಕಂಡುಬಂದಿದೆ ಎಂದು ಸ್ಥಳೀಯರು ಹೇಳಿದ್ದಾರೆ.ಹರ್ಸಿಲ್ನಿಂದ ಸೇನೆಯ ತುಕಡಿಯೊಂದು ಘಟನಾ ಸ್ಥಳಕ್ಕೆ ತೆರಳಿ, ಪರಿಹಾರ ಕಾರ್ಯ ಕೈಗೊಂಡಿದೆ.ಪ್ರವಾಸಿಗರು ಸೇರಿ 100ಕ್ಕೂ ಹೆಚ್ಚು ಜನರು ಕಟ್ಟಡಗಳ ಅವಶೇಷಗಳಡಿ ಸಿಲುಕಿರಬಹುದು ಎಂದು ಮೂಲಗಳು ಹೇಳಿದ್ದು, 20-25 ಹೋಟೆಲ್ಗಳು/ಹೋಂ ಸ್ಟೇಗಳು ಕೊಚ್ಚಿಕೊಂಡು ಹೋಗಿವೆ.ಪ್ರವಾಹದಿಂದಾಗಿ ನೀರು ಗ್ರಾಮಕ್ಕೆ ನುಗ್ಗುತ್ತಿರುವುದು ಹಾಗೂ ಮನೆಗಳಿಗೆ ಹಾನಿಯಾಗುತ್ತಿರುವುದನ್ನು ತೋರಿಸುವ ವಿಡಿಯೊಗಳು ವ್ಯಾಪಕವಾಗಿ ಹಂಚಿಕೆಯಾಗಿವೆ.ಧಾರಾಲಿ ಪ್ರದೇಶದಲ್ಲಿ ಭಾರಿ ಮಳೆ ಬೀಳುವ ಸಾಧ್ಯತೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





