ಸಿಲಿಕಾನ್ ಸಿಟಿ ಜನರ ನೆಚ್ಚಿನ ತಾಣಗಳಲ್ಲಿ ಲಾಲ್ಬಾಗ್ ಕೂಡ ಒಂದು. ನಿತ್ಯ ಸಾಕಷ್ಟು ಜನರು ಭೇಟಿ ನೀಡುತ್ತಾರೆ. ಸದ್ಯ ಲಾಲ್ಬಾಗ್ ಬೊಟಾನಿಕಲ್ ಗಾರ್ಡನ್ನಲ್ಲಿ ನಿರ್ಮಿಸಲಾಗಿರುವ ವೀಲ್ಚೇರ್ ಸ್ನೇಹಿ ಶೌಚಾಲಯವನ್ನು ಶನಿವಾರ (ಜುಲೈ 26)ದಂದು ಉದ್ಘಾಟನೆಗೊಳ್ಳಲಿದೆ. ಆಸ್ಟ್ರೇಲಿಯಾ ಹೈಕಮಿಷರ್ ಮತ್ತು ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆ ಸಹಕಾರದಲ್ಲಿ ರ್ಯಾಂಪ್ ಮೈ ಸಿಟಿ ಎಂಬ ಸರ್ಕಾರೇತರ ಸಂಸ್ಥೆಯು ನಿರ್ಮಿಸಿದೆ. ಲಾಲ್ಬಾಗ್ ಬೊಟಾನಿಕಲ್ ಗಾರ್ಡನ್ಗೆ ಭೇಟಿ ನೀಡುವ ದಿವ್ಯಾಂಗರಿಗೆ ಈ ವೀಲ್ಚೇರ್ ಸ್ನೇಹಿ ಶೌಚಾಲಯವು …
Read More »ಮಂಗಳೂರು: ಕೆಂಪು ಕಲ್ಲು ಖರೀದಿಗೆ ಪ್ರತ್ಯೇಕ ಆಯಪ್ ವ್ಯವಸ್ಥೆ ಜಾರಿಗೆ : ಸ್ಪೀಕರ್ ಯು.ಟಿ. ಖಾದರ್.
ಕೆಂಪುಕಲ್ಲು ಗಣಿಗಾರಿಕೆಯ ಗೊಂದಲ ನಿವಾರಣೆಗಾಗಿ ಮರಳು ವಿತರಣೆ ಮಾದರಿಯಲ್ಲಿರುವ ಸ್ಯಾಂಡ್ ಬಜಾರ್ ಆಯಪ್ನಂತೆ ಕೆಂಪು ಕಲ್ಲು ಖರೀದಿಗೆ ಪ್ರತ್ಯೇಕ ಆಯಪ್ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಕೆಂಪು ಕಲ್ಲು ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವರೊಂದಿಗೆ ಬೆಂಗಳೂರಲ್ಲಿ 2ನೇ ಹಂತದ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಅಧಿಕಾರಿಗಳು ವಹಿಸಬೇಕಾದ ಕ್ರಮಗಳ ಕುರಿತು ಸೂಚಿಸಲಾಗಿದೆ. ಹಾಗಾಗಿ ಈ ಸಮಸ್ಯೆ ಶೀಘ್ರ ಬಗೆಹರಿಯಲಿದೆ …
Read More »ಗುಹೆಯಲ್ಲಿ ವಾಸವಾಗಿದ್ದ ರಷ್ಯಾ ಮಹಿಳೆ-ಮಕ್ಕಳ ಗಡಿಪಾರಿಗೆ ಹೈಕೋರ್ಟ್ ತಡೆ!
ಗೋಕರ್ಣದ ರಾಮತೀರ್ಥ ಬೆಟ್ಟದ ಗುಹೆಯೊಂದರಲ್ಲಿ ವಾಸವಿದ್ದ ರಷ್ಯಾ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಗಡೀಪಾರು ಮಾಡುವುದನ್ನು ಹೈಕೋರ್ಟ್ ತಡೆದಿದೆ.ಹೈಕೋರ್ಟ್ನ ಈ ನಿರ್ಧಾರವು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದ (UNCRC) ತತ್ವಗಳನ್ನು ಆಧರಿಸಿದೆ. ನೀನಾ ಅವರ ಪರ ವಕೀಲರಾದ ಬೀನಾ ಪಿಳ್ಳೈ ಅವರು, ಗಡೀಪಾರು ಪ್ರಕ್ರಿಯೆಯು ಮಕ್ಕಳ ಕಲ್ಯಾಣವನ್ನು ಸಂಪೂರ್ಣವಾಗಿ ಕಡೆಗಣಿಸುತ್ತದೆ. UNCRC ಯ 3ನೇ ವಿಧಿಯ ಪ್ರಕಾರ, ಮಕ್ಕಳ ಹಿತಾಸಕ್ತಿಗಳು ಎಲ್ಲಾ ನಿರ್ಧಾರಗಳಲ್ಲಿ ಪ್ರಮುಖ ಆದ್ಯತೆಯಾಗಿರಬೇಕು ಎಂದು ಬಲವಾಗಿ …
Read More »ಗಂಡನನ್ನು ಕೊಂದು ಡೋರ್ ಡೆಲಿವರಿ ಮಾಡಿದ ಪತ್ನಿ!
ಮಹಿಳೆಯೊಬ್ಬಳು ತನ್ನ ತಮ್ಮನೊಂದಿಗೆ ಸೇರಿ ಗಂಡನನ್ನು ಕೊಂದು ಮೃತದೇಹವನ್ನು ಡೋರ್ ಡೆಲಿವರಿ ಮಾಡಿದ ಘಟನೆ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.ನಂದ್ಯಾಲ್ನ ನೂನೆಪಲ್ಲೆಯ ನಿವಾಸಿ ರಾಮಣಯ್ಯ (50) ಮೃತ. ಕೊಲೆ ಆರೋಪದಡಿಯಲ್ಲಿ ರಮಣಮ್ಮ ಮತ್ತು ಆಕೆಯ ಸಹೋದರ ರಾಮಯ್ಯ ಇಬ್ಬರನ್ನು ಬಂಧಿಸಿಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Read More »ರಾಬಕೊವಿ’ಗೆ ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷ: ಭೀಮ ನಾಯ್ಕಗೆ ಮುಖಭಂಗ
ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ (ರಾಬಕೊವಿ) ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Read More »ಹಾಸ್ಯದ ಸುತ್ತ ಸೋಮೇಶ್ವರದ ‘ಸುಲೋಚನಾ’ ಪಯಣ
ಸ್ಥಳೀಯ ಭಾಷೆ ಮತ್ತು ಸ್ಥಳೀಯ ಕಲಾವಿದರನ್ನು ಬಳಸಿಕೊಂಡು ಹೆಚ್ಚಾಗಿ ಸಿನಿಮಾ ಮಾಡುವ ರಾಜ್ ಬಿ ಶೆಟ್ಟಿ ಈ ಬಾರಿ ‘ಸು ಫ್ರಂ ಸೋ’ ಎನ್ನುವ ಭಿನ್ನ ಕಂಟೆಂಟ್ ನೊಂದಿಗೆ ಮತ್ತೊಮ್ಮೆ ಥಿಯೇಟರ್ ಗೆ ಬಂದಿದ್ದಾರೆ.ತನ್ನ ಮೊದಲ ಸಿನಿಮಾದಲ್ಲಿ ಸ್ಥಳೀಯರಿಗೆ ಹೆಚ್ಚು ಅವಕಾಶ ಕೊಟ್ಟಿದ್ದ ರಾಜ್ ಬಿ ಶೆಟ್ಟಿ ನಿರ್ಮಾಪಕರಾಗಿ ಈ ಚಿತ್ರದಲ್ಲೂ ಸ್ಥಳೀಯರನ್ನೇ ಹೆಚ್ಚಾಗಿ ಬಳಸಿಕೊಂಡು ಆಯಾ ಪಾತ್ರಕ್ಕೆ ಸಮಾನವಾಗಿ ಸ್ಕ್ರೀನ್ ಸ್ಪೇಸ್ ಕೊಟ್ಟಿದ್ದಾರೆ.ತುಳು ನಾಟಕರಂಗದಲ್ಲಿ ಹೆಸರುಗಳಿಸಿರುವ ಜೆಪಿ ತುಮಿನಾಡು …
Read More »ಮರಂ ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ: ವರದಿ ಸಲ್ಲಿಸಲು ಸೂಚನೆ
ಕಡೇಚೂರು ಗ್ರಾಮದ ಸರ್ವೆ ನಂ.421, 423/4, 425 ಮತ್ತು 418/2/3ರ ಜಮೀನುಗಳಲ್ಲಿನ ಮರಂ ಅಕ್ರಮ ಗಣಿಗಾರಿಕೆ ಮತ್ತು ಸಾಗಣೆಗೆ ಸಂಬಂಧಿಸಿದ ತಾಲ್ಲೂಕು ಮಟ್ಟದ ಅಧಿಕಾರಿಗಳ ತಂಡವನ್ನು ರಚಿಸಿ ಕೂಡಲೇ ವರದಿ ಸಲ್ಲಿಸಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ಹಿರಿಯ ಭೂವಿಜ್ಞಾನಿ ಪೂರ್ಣಿಮಾ, ತಹಶೀಲ್ದಾರ್ ಸುರೇಶ ಅಂಕಲಗಿ ಸೇರಿದಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Read More »ಕೂಳೂರು ಸೇತುವೆಯಲ್ಲಿ ವಾಹನ ಸಂಚಾರ ಸುಗಮ.
ರಾಷ್ಟ್ರೀಯ ಹೆದ್ದಾರಿ 66 ರ ಕೆಐಒಸಿಎಲ್ ಜಂಕ್ಷನ್ ಮತ್ತು ಕೂಳೂರು ಕಮಾನು ಸೇತುವೆಯ ನಡುವಿನ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದ ಕಾರಣ ವಾಹನ ಸಂಚಾರಕ್ಕೆ ತೀವ್ರ ಅಡ್ಡಿ ಉಂಟಾಗಿತ್ತು. ಇದೀಗ ಮತ್ತೆ ಕುಳೂರು ಸೇತುವೆಯಲ್ಲಿ ವಾಹನ ಸಂಚಾರ ಸುಗಮವಾಗಿದೆ.ಸೇತುವೆಯ ಎರಡೂ ಬದಿಗಳಲ್ಲಿರುವ ಸಂಪರ್ಕ ರಸ್ತೆಗಳಲ್ಲಿ ಈಗ ಇಂಟರ್ಲಾಕಿಂಗ್ ಟೈಲ್ಸ್ ಅಳವಡಿಸಲಾಗಿದೆ. ಆದರೆ, ಸೇತುವೆಯಲ್ಲಿ ಇನ್ನೂ ಹಲವಾರು ಗುಂಡಿಗಳಿದ್ದು, ಅದನ್ನು ಇನ್ನು ಮಳೆಗಾಲ ಮುಗಿದ ನಂತರವೇ ಸೇತುವೆಯ ಮೇಲ್ಮೈಯನ್ನು ದುರಸ್ತಿ ಮಾಡಲಾಗುವುದು …
Read More »ಪಿಕಪ್ ಸಮೇತ ನದಿಗೆ ಬಿದ್ದು ಪುತ್ರ ನಾಪತ್ತೆ: ಮನನೊಂದ ತಾಯಿ ಆತ್ಮಹತ್ಯೆ!
ಮಗನ ಸಾವಿನಿಂದ ಮನನೊಂದ ತಾಯಿ, ಮೃತದೇಹ ಸಿಗುವ ಮುನ್ನವೇ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕೊಳಮಾಗೆ ಗ್ರಾಮದಲ್ಲಿ ನಡೆದಿದೆ.ಮೃತರನ್ನ ರವಿಕಲಾ (48) ಎಂದು ಗುರುತಿಸಲಾಗಿದೆ. ಗುರುವಾರ ಸಂಜೆ ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಭದ್ರಾ ನದಿಗೆ ಬಿದ್ದ ಪರಿಣಾಮ ರವಿಕಲಾ ಪುತ್ರ ಶಮಂತ್ (23) ಸಾವನ್ನಪ್ಪಿದ್ದ.ಭದ್ರಾ ನದಿ ಬಳಿ ಬಂದಿದ್ದ ಶಮಂತ್ ತಾಯಿ ಮಗನ ನೆನೆದು ಕಣ್ಣೀರಿಟ್ಟಿದ್ದರು. ಆದರೆ, ಮಗನ ಮೃತದೇಹ ಸಿಗುವ …
Read More »WWE ದಿಗ್ಗಜ ರಸ್ಲರ್ ಹಲ್ಕ್ ಹೋಗಾನ್ ನಿಧನ!
ವೃತ್ತಿಪರ ಕುಸ್ತಿ ಸೂಪರ್ಸ್ಟಾರ್ ಹಲ್ಕ್ ಹೋಗನ್(71) ಅವರು ಹೃದಯಾಘಾತದಿಂದ ಗುರುವಾರ ನಿಧನರಾಗಿದ್ದಾರೆ.ಹೋಗನ್ ಬಹಳ ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಗುರುವಾರ ಬೆಳಿಗ್ಗೆ 9.51 ರ ಸುಮಾರಿಗೆ, ಹಲ್ಕ್ ಹೋಗನ್ ಅವರಿಗೆ ಹೃದಯಾಘಾತ ಸಂಭವಿಸಿದೆ. ಕೂಡಲೇ ವೈದ್ಯಕೀಯ ತಂಡವನ್ನು ಮನೆಗೆ ಕರೆಸಿ, ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಸ್ಪತ್ರೆ ತಲುಪುವ ಮುನ್ನವೇ ಮೃತಪಟ್ಟಿರುವುದಾಗಿ ವರದಿಯಾಗಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





