Breaking News

BigTv News

ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚನೆ!

ಭಾರತೀಯ ಹವಾಮಾನ ಇಲಾಖೆ, ತಿರುವನಂತಪುರಂ ಅವರು ನೀಡಿದ ಹವಾಮಾನ ಮುನ್ಸೂಚನೆಯಂತೆ ಜುಲೈ 23 ರಿಂದ 26 ರವರೆಗೆ ಅರಬ್ಬಿ ಸಮುದ್ರದಲ್ಲಿ ಮಳೆ ಮತ್ತು ಭಾರೀ ಗಾಳಿ ಬೀಸುವುದರಿಂದ ಪ್ರಕ್ಷುಬ್ದವಾಗಿರುತ್ತದೆ.ಆದ್ದರಿಂದ ಅನಾಹುತವನ್ನು ತಡೆಯುವ ಸಲುವಾಗಿ ನಾಡದೋಣಿ ಮೀನುಗಾರರು ಸೇರಿದಂತೆ ಯಾರೂ ಮೀನುಗಾರಿಕೆ ನಡೆಸಲು ಸಮುದ್ರಕ್ಕೆ ತೆರಳದಂತೆ ಈ ಮೂಲಕ ಎಲ್ಲಾ ಮೀನುಗಾರರಿಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಮೀನುಗಾರಿಕಾ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More »

ಐರ್ಲೆಂಡ್‌ನಲ್ಲಿ ಜನಾಂಗೀಯ ದಾಳಿ ; ಭಾರತೀಯ ಉದ್ಯೋಗಿಯನ್ನು ಬೆತ್ತಲಾಗಿಸಿ ಹಲ್ಲೆ !

ಡಬ್ಲಿನ್‌ನಲ್ಲಿ ಭಾರತೀಯ ವ್ಯಕ್ತಿಯೊಬ್ಬರ ಮೇಲೆ ನಡೆದ ಆಘಾತಕಾರಿ ಹಲ್ಲೆಯ ಕುರಿತು ಹೊಸ ವಿವರಗಳು ಹೊರಬಿದ್ದಿವೆ. ಭಾರತೀಯ ವ್ಯಕ್ತಿಯನ್ನು ರಕ್ಷಿಸಿದ ಸ್ಥಳೀಯ ಮಹಿಳೆ ಜೆನ್ನಿಫರ್ ಮರ್ರೆ ಪ್ರಕಾರ, ಆತನಿಗೆ ಯುವಕರ ಗುಂಪೊಂದು ಹಲ್ಲೆ ನಡೆಸಿ, ಬಟ್ಟೆಗಳನ್ನು ಕಿತ್ತುಕೊಂಡು ಬೆತ್ತಲಾಗಿಸಿ, ಬಿಟ್ಟು ಹೋಗಿದೆ.ಈ ಘಟನೆಯ ಆವೃತ್ತಿಯನ್ನು ಐರಿಶ್ ಮಹಿಳೆ ಖಂಡಿಸಿದ್ದಾರೆ. ಭಾರತೀಯ ವ್ಯಕ್ತಿ “ತುಂಬಾ ಒಳ್ಳೆಯವರು”, ಸಭ್ಯರು ಮತ್ತು ಸೌಮ್ಯ ಸ್ವಭಾವದವರು ಎಂದು ಅವರು ಪದೇ ಪದೇ ಒತ್ತಿ ಹೇಳಿದ್ದಾರೆ. ಐರಿಶ್ ಹದಿಹರೆಯದವರು …

Read More »

2011ರ ಸೌಮ್ಯಾ ರೇಪ್ & ಮರ್ಡರ್ ಕೇಸ್ : ಜೀವಾವಧಿ ಶಿಕ್ಷೆಗೊಳಗಾಗಿದ್ದ `ಗೋವಿಂದಚಾಮಿ’ ಜೈಲಿನಿಂದ ಎಸ್ಕೇಪ್.!

2011 ರ ಸೌಮ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಆರೋಪಿ ಗೋವಿಂದಚಾಮಿ ಕೇರಳದ ಕಣ್ಣೂರು ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ಶುಕ್ರವಾರ ದೃಢಪಡಿಸಿದ್ದಾರೆ.ಜೈಲು ಅಧಿಕಾರಿಗಳು ತಕ್ಷಣ ಜೈಲು ಆವರಣದಲ್ಲಿ ಮತ್ತು ಸುತ್ತಮುತ್ತ ಶೋಧ ಕಾರ್ಯಾಚರಣೆ ನಡೆಸಿದರು, ಆದರೆ ಕೈದಿ ಎಲ್ಲಿಯೂ ಪತ್ತೆಯಾಗಲಿಲ್ಲ. ಬೆಳಿಗ್ಗೆ 7 ಗಂಟೆಗೆ ಪರಾರಿಯಾಗಿರುವ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಕಣ್ಣೂರು ಪಟ್ಟಣ ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಹುಡುಕಾಟ ನಡೆಯುತ್ತಿದೆ.

Read More »

ಬೆಂಗಳೂರಿನ ‘ರಾಮೇಶ್ವರಂ ಕೆಫೆ’ ತಿಂಡಿಯಲ್ಲಿ ಜಿರಳೆ ಪತ್ತೆ ವಿವಾದಕ್ಕೆ ಬಿಗ್ ಟ್ವಿಸ್ಟ್ : ಗ್ರಾಹಕನ ವಿರುದ್ಧವೇ `FIR’ ದಾಖಲು.!

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನೀಡಿದ ತಿಂಡಿಯಲ್ಲಿ ಜಿರಳೆ ಪತ್ತೆ ವಿವಾದಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಗ್ರಾಹಕನ ವಿರುದ್ಧವೇ ದೂರು ದಾಖಲಾಗಿದೆ. ಆ ವ್ಯಕ್ತಿಯೇ ಪೊಂಗಲ್ ತಿಂಡಿಯಲ್ಲಿ ಹುಳು ಇಟ್ಟಿದ್ದಾರೆ ಎಂದು ಕೆಫೆ ಮಾಲೀಕರು ವಾದಿಸಿದ್ದಾರೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ.ವಿಡಿಯೋ ವೈರಲ್ ಆಗುತ್ತಿದ್ದಂತೆ ರಾಮೇಶ್ವರಂ ಕೆಫೆ ಸ್ಪಷ್ಟನೆ ನೀಡಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಗ್ರಾಹಕರು ಆಹಾರ ಮಾಲಿನ್ಯದ ಬಗ್ಗೆ ಸುಳ್ಳು ಆರೋಪ ಹೊರಿಸುತ್ತಿದ್ದು, ಈ ಮೂಲಕ …

Read More »

50 ಮಂದಿ ಪ್ರಯಾಣಿಕರಿದ್ದ ರಷ್ಯಾ ವಿಮಾನ ಪತನ! ಹಲವರು ಸಾವು!

ರಷ್ಯಾದ ಪೂರ್ವ ಅಮುರ್ ಪ್ರದೇಶದಲ್ಲಿದ್ದಾಗ ವಿಮಾನ ಸಂಪರ್ಕ ಕಡಿತಗೊಂಡಿದ್ದು. ಈ ಆನ್ -24 ವಿಮಾನದಲ್ಲಿ ಸುಮಾರು 50 ಪ್ರಯಾಣಿಕರಿದ್ದರು. ತಾಂತ್ರಿಕ ಕಾರಣದಿಂದ ದೊಡ್ಡ ದುರಂತ ನಡೆದುಹೋಗಿದ್ಯಾ ಅನ್ನೋ ಅನುಮಾನ ಇದೀಗ ಶುರುವಾಗಿದ್ದು ವಿನಾಮದಲ್ಲಿದ್ದವರೆಲ್ಲರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Read More »

ನಕಲಿ ಬಿಲ್​​​ ಪಾಸ್​ ಮಾಡಲು ಹಿರಿಯ ಅಧಿಕಾರಿಗಳಿಂದ ಒತ್ತಡ: ಸಾವಿಗೆ ಶರಣಾದ ಸರ್ಕಾರಿ ಇಂಜಿನಿಯರ್​!

ಸರ್ಕಾರಿ ಇಂಜಿನಿಯರ್​ ಒಬ್ಬರ ಮೃತದೇಹ ಅವರ ಬಾಡಿಗೆ ಮನೆಯಲ್ಲಿ ಪತ್ತೆಯಾಗಿದ್ದು, ಡೆತ್​ನೋಟ್​ ಸಿಕ್ಕಿರುವ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.ಮೃತರನ್ನು ಜ್ಯೋತಿಷಾ ದಾಸ್​ (30) ಎಂದು ಗುರುತಿಸಲಾಗಿದೆ. ಇವರು ಅಸ್ಸಾಂನಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ (ಪಿಡಬ್ಲ್ಯೂಡಿ) ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರು.ನಕಲಿ ಬಿಲ್‌ಗಳನ್ನು ಪಾಸ್​ ಮಾಡಲು ಹಿರಿಯ ಅಧಿಕಾರಿಗಳು ತೀವ್ರ ಒತ್ತಡ ಹೇರಿದ್ದರಿಂದ ಸಾವಿಗೆ ಶರಣಾಗಿರುವುದಾಗಿ ಜ್ಯೋತಿಷಾ ಬರೆದಿದ್ದಾರೆ ಎನ್ನಲಾದ ಕೈಬರಹದ ಡೆತ್​ನೋಟ್​ ಪೊಲೀಸರಿಗೆ ಆಕೆಯ ಮನೆಯಲ್ಲಿ ಪತ್ತೆಯಾಗಿದೆ. ಅದರಲ್ಲಿ …

Read More »

ಕೆಎಎಸ್ ಮಾಡಬೇಕು ಎಂಬ ಕನಸು ಹೊತ್ತು ಧಾರವಾಡಕ್ಕೆ ಬಂದಿದ್ದ ಯುವಕ ಮಲಗಿದ್ದಲ್ಲೇ ಸಾವು!

ಗಂಗಾಧರ ಎಂಜಿನಿಯರಿಂಗ್ ಪದವೀಧರನಾಗಿದ್ದ. ಕೆಎಎಸ್ ಮಾಡಬೇಕು ಎಂಬ ಕನಸು ಹೊಂದಿ ಧಾರವಾಡಕ್ಕೆ ಬಂದು ಕೋಚಿಂಗ್ ಪಡೆಯುತ್ತಿದ್ದ. ಧಾರವಾಡದ ಶಕ್ತಿ ಕಾಲೊನಿಯಲ್ಲಿ ರೂಮ್ ಮಾಡಿಕೊಂಡು ಓದುತ್ತಿದ್ದ. ಕಳೆದ ಎರಡ್ಮೂರು ದಿನಗಳ ಹಿಂದೆಯೇ ಆತ ತನ್ನ ರೂಮಿನಲ್ಲಿ ಮಲಗಿದ ಜಾಗದಲ್ಲೇ ಮಲಗಿ ಸಾವನ್ನಪ್ಪಿದ್ದು, ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಕ್ಕಪಕ್ಕದ ಜನರಿಗೆ ರೂಮಿನಿಂದ ವಾಸನೆ ಬಂದಾಗಲೇ ಅದರ ಬಗ್ಗೆ ಗೊತ್ತಾಗಿದೆ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಗಂಗಾಧರನ ಮನೆಯವರಿಗೆ ತಿಳಿಸಿ, …

Read More »

ಸಾರಿಗೆ ಬಸ್ ಡಿಕ್ಕಿಯಾಗಿ 71 ವರ್ಷದ ವೃದ್ಧ ಸಾವು!

ಮೈಸೂರಿನ ಶ್ರೀರಾಂಪುರದಲ್ಲಿ ಪುರುಷೋತ್ತಮಯ್ಯ (71) ಎಂಬುವವರು ಎಂದಿನಂತೆ ಬೆಳಗ್ಗೆ ಹಾಲಿನ ಬೂತ್ ನಿಂದ ಹಾಲು ತೆಗೆದುಕೊಂಡು ಮನೆಗೆ ಹೋಗುವಾಗ ಕೆ ಎಸ್ ಆರ್ ಟಿ ಸಿ ಬಸ್ ವೊಂದು ಸ್ಕೂಟರ್ ಗೆ ಟಚ್ ಆಗಿದೆ.ಬೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Read More »

ಬೆಂಗಳೂರಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ: ಹೊಸ ಘಟಕ ಸ್ಥಾಪನೆಗೆ ಬಿಬಿಎಂಪಿ ಪ್ಲಾನ್

ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಸಾವಿರಾರು ಟನ್‌ ತ್ಯಾಜ್ಯ ಉತ್ಪಾದನೆ ಆಗುತ್ತದೆ. ಇದರ ವಿಲೇವಾರಿಯದ್ದೆ ಸಮಸ್ಯೆ ಇದೆ. ಈ ಮಧ್ಯೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿವಿಧ ಪ್ರದೇಶಗಳಲ್ಲಿ ನಿತ್ಯ ಸೃಷ್ಟಿಯಾಗುವ ಹಸಿ ಹಾಗೂ ಒಣ ಕಸದಿಂದ ವಿದ್ಯುತ್ ಉತ್ಪಾದಿಸಲು ಉತ್ತೇಜನ ನೀಡುತ್ತಿದೆ. ಈ ಸಂಬಂಧ ಹೊಸ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸೂಚಿಸಿದರು.ಕನ್ನಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಪ್ರತಿನಿತ್ಯ 350 …

Read More »

ಚಲಿಸುತ್ತಿರುವ ರಿಕ್ಷಾದೊಳಗೆ ಸಿಲುಕಿಕೊಂಡ ಕುದುರೆ. ಹೊರಬರಲು ಪರದಾಟ!

ಬೀದಿಯಲ್ಲಿ ಎರಡು ಕುದುರೆಗಳು ಕದಾಡಿಕೊಂಡು ಒಂದು ಕುದುರೆ ಚಲಿಸುತ್ತಿರುವ ರಿಕ್ಷಾದೊಳಗೆ ಸಿಲುಕಿ ಅವಾಂತರ ಸೃಸ್ಟಿಸಿರುವ ಘಟನೆಯೊಂದು ಮಧ್ಯಪ್ರದೇಶದ ಜಬಲ್ಪುರದಲ್ಲಿ ಬುಧವಾರ (ಜು.23) ನಡೆದಿದೆ.ಜಬಲ್ಪುರದ ನಾಗರತ್ ಚೌಕ್‌ನಲ್ಲಿರುವ ಆದಾಯ ತೆರಿಗೆ ಕಚೇರಿ ಬಳಿ ಈ ಘಟನೆ ನಡೆದಿದ್ದು ಇದರಿಂದ ರಿಕ್ಷಾ ಚಾಲಕ ಹಾಗೂ ಓರ್ವ ಪ್ರಯಾಣಿಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ

Read More »