Breaking News

BigTv News

ಕೆಎಎಸ್ ಮಾಡಬೇಕು ಎಂಬ ಕನಸು ಹೊತ್ತು ಧಾರವಾಡಕ್ಕೆ ಬಂದಿದ್ದ ಯುವಕ ಮಲಗಿದ್ದಲ್ಲೇ ಸಾವು!

ಗಂಗಾಧರ ಎಂಜಿನಿಯರಿಂಗ್ ಪದವೀಧರನಾಗಿದ್ದ. ಕೆಎಎಸ್ ಮಾಡಬೇಕು ಎಂಬ ಕನಸು ಹೊಂದಿ ಧಾರವಾಡಕ್ಕೆ ಬಂದು ಕೋಚಿಂಗ್ ಪಡೆಯುತ್ತಿದ್ದ. ಧಾರವಾಡದ ಶಕ್ತಿ ಕಾಲೊನಿಯಲ್ಲಿ ರೂಮ್ ಮಾಡಿಕೊಂಡು ಓದುತ್ತಿದ್ದ. ಕಳೆದ ಎರಡ್ಮೂರು ದಿನಗಳ ಹಿಂದೆಯೇ ಆತ ತನ್ನ ರೂಮಿನಲ್ಲಿ ಮಲಗಿದ ಜಾಗದಲ್ಲೇ ಮಲಗಿ ಸಾವನ್ನಪ್ಪಿದ್ದು, ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಕ್ಕಪಕ್ಕದ ಜನರಿಗೆ ರೂಮಿನಿಂದ ವಾಸನೆ ಬಂದಾಗಲೇ ಅದರ ಬಗ್ಗೆ ಗೊತ್ತಾಗಿದೆ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಗಂಗಾಧರನ ಮನೆಯವರಿಗೆ ತಿಳಿಸಿ, …

Read More »

ಸಾರಿಗೆ ಬಸ್ ಡಿಕ್ಕಿಯಾಗಿ 71 ವರ್ಷದ ವೃದ್ಧ ಸಾವು!

ಮೈಸೂರಿನ ಶ್ರೀರಾಂಪುರದಲ್ಲಿ ಪುರುಷೋತ್ತಮಯ್ಯ (71) ಎಂಬುವವರು ಎಂದಿನಂತೆ ಬೆಳಗ್ಗೆ ಹಾಲಿನ ಬೂತ್ ನಿಂದ ಹಾಲು ತೆಗೆದುಕೊಂಡು ಮನೆಗೆ ಹೋಗುವಾಗ ಕೆ ಎಸ್ ಆರ್ ಟಿ ಸಿ ಬಸ್ ವೊಂದು ಸ್ಕೂಟರ್ ಗೆ ಟಚ್ ಆಗಿದೆ.ಬೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಲ್ಲದೇ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Read More »

ಬೆಂಗಳೂರಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ: ಹೊಸ ಘಟಕ ಸ್ಥಾಪನೆಗೆ ಬಿಬಿಎಂಪಿ ಪ್ಲಾನ್

ರಾಜಧಾನಿ ಬೆಂಗಳೂರಿನಲ್ಲಿ ನಿತ್ಯ ಸಾವಿರಾರು ಟನ್‌ ತ್ಯಾಜ್ಯ ಉತ್ಪಾದನೆ ಆಗುತ್ತದೆ. ಇದರ ವಿಲೇವಾರಿಯದ್ದೆ ಸಮಸ್ಯೆ ಇದೆ. ಈ ಮಧ್ಯೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿವಿಧ ಪ್ರದೇಶಗಳಲ್ಲಿ ನಿತ್ಯ ಸೃಷ್ಟಿಯಾಗುವ ಹಸಿ ಹಾಗೂ ಒಣ ಕಸದಿಂದ ವಿದ್ಯುತ್ ಉತ್ಪಾದಿಸಲು ಉತ್ತೇಜನ ನೀಡುತ್ತಿದೆ. ಈ ಸಂಬಂಧ ಹೊಸ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಸೂಚಿಸಿದರು.ಕನ್ನಹಳ್ಳಿ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಪ್ರತಿನಿತ್ಯ 350 …

Read More »

ಚಲಿಸುತ್ತಿರುವ ರಿಕ್ಷಾದೊಳಗೆ ಸಿಲುಕಿಕೊಂಡ ಕುದುರೆ. ಹೊರಬರಲು ಪರದಾಟ!

ಬೀದಿಯಲ್ಲಿ ಎರಡು ಕುದುರೆಗಳು ಕದಾಡಿಕೊಂಡು ಒಂದು ಕುದುರೆ ಚಲಿಸುತ್ತಿರುವ ರಿಕ್ಷಾದೊಳಗೆ ಸಿಲುಕಿ ಅವಾಂತರ ಸೃಸ್ಟಿಸಿರುವ ಘಟನೆಯೊಂದು ಮಧ್ಯಪ್ರದೇಶದ ಜಬಲ್ಪುರದಲ್ಲಿ ಬುಧವಾರ (ಜು.23) ನಡೆದಿದೆ.ಜಬಲ್ಪುರದ ನಾಗರತ್ ಚೌಕ್‌ನಲ್ಲಿರುವ ಆದಾಯ ತೆರಿಗೆ ಕಚೇರಿ ಬಳಿ ಈ ಘಟನೆ ನಡೆದಿದ್ದು ಇದರಿಂದ ರಿಕ್ಷಾ ಚಾಲಕ ಹಾಗೂ ಓರ್ವ ಪ್ರಯಾಣಿಕ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ

Read More »

ಇಟಲಿಯಲ್ಲಿ ವಿಮಾನ ಪತನ: ಇಬ್ಬರು ಸಾವು!

ಬ್ರೆಸಿಯಾದಲ್ಲಿ ಬುಧವಾರ ಹೆದ್ದಾರಿಯ ಮಧ್ಯದಲ್ಲಿ ಅಪಘಾತಕ್ಕೀಡಾದ ಸಣ್ಣ ವಿಮಾನದಲ್ಲಿದ್ದ ಜನರು ಸಾವನ್ನಪ್ಪಿದ್ದಾರೆ. ಭೀಕರ ಅಪಘಾತದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ, ಇದರಲ್ಲಿ ಸಣ್ಣ ಏರ್ ಕ್ರಾಫ್ಟ್ ಜನನಿಬಿಡ ರಸ್ತೆಯಲ್ಲಿ ಲಂಬವಾಗಿ ಡೈವಿಂಗ್ ಮಾಡಿ ಬಾಂಬ್ನಂತೆ ಸ್ಫೋಟಿಸುವುದನ್ನು ಕಾಣಬಹುದು

Read More »

ಬೆಂಗಳೂರು :ಪುತ್ರಿ ಕೊಂದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ!!

ಮಹಾಲಕ್ಷ್ಮೀ ಎಂಬುವರು ತನ್ನ ಐದು ವರ್ಷದ ಪುತ್ರಿ ಸಿರಿಯನ್ನು ಕೊಂದು ತಾನೂ ಆ ಬಳಿಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಬೆಂಗಳೂರಿನ ಲಕ್ಕೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ.ಇತ್ತೀಚೆಗೆ ಜಯರಾಮ್ ಹಾಗೂ ಮಹಾಲಕ್ಷ್ಮಿ ನಡುವೆ ಜಗಳ ಹೆಚ್ಚಾಗಿತ್ತು. ಇಂದು ಕೂಡ ಜಗಳವಾದ ನಂತ್ರ ಗಂಡನ ಮೇಲಿನ ಸಿಟ್ಟಿನಿಂದ ಪುತ್ರಿ ಸಿರಿ ಕೊಂದು, ತಾನೂ ಆತ್ಮಹತ್ಯೆ ಯತ್ನದಂತ ಘಟನೆ ನಡೆದಿದೆ ಎನ್ನಲಾಗುತ್ತಿದೆ.

Read More »

ಜಾತಿಗಳ ನಡುವೆ ಕಂದಕ ತರಲು ಜಾತಿ ಸಮೀಕ್ಷೆ: ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ಧಾಳಿ

ಸುದ್ದಿಗಾರರೊರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರ ಸರ್ಕಾರ ಕಾಟಾಚಾರಕ್ಕೆ ಜಾತಿ ಒಳಮೀಸಲು ಸಮೀಕ್ಷೆ ಮಾಡಿದೆ. ಸಿದ್ದರಾಮಯ್ಯ ಜಾತಿಗಳ ನಡುವೆ ಕಂದಕ ತರಲು ಗಣತಿ ಮಾಡಿಸಿದ್ದಾರೆ. ಈಗ ಹೊಸ ಗಣತಿ ಮಾಡಿಸುತ್ತಾರೆಂದರೆ ಈ ಹಿಂದಿನ ಗಣತಿ ಬೋಗಸ್ ಎಂದರ್ಥ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಟೀಕಿಸಿದರು.

Read More »

ಬಾಲ್ಯ ವಿವಾಹ: ಇನ್ಮುಂದೆ ‘ನಿಶ್ಚಿತಾರ್ಥ ಮಾತುಕತೆ’ಯಲ್ಲಿ ಭಾಗಿಯಾದವರ ವಿರುದ್ಧವೂ ಕಾನೂನು ಕ್ರಮ

ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಕಾಯ್ದೆ-2025ಕ್ಕೆ ಅನುಮೋದನೆ ನೀಡಲಾಗಿದೆ. ಈ ಕಾಯ್ದೆ ಸದನದಲ್ಲಿ ಮಂಡನೆಯಾಗಿ ಒಪ್ಪಿಗೆ ದೊರೆತರೇ ನಿಶ್ಚಿತಾರ್ಥ ಮಾತುಕತೆಯಲ್ಲಿ ಭಾಗಿಯಾದವರ ವಿರುದ್ಧವೂ ಕಾನೂನು ಕ್ರಮ ಆಗಲಿದೆ.ಇದಷ್ಟೇ ಅಲ್ಲದೇ ಬಾಲ್ಯ ವಿವಾಹಕ್ಕೆ ಕುಟುಂಬಸ್ಥರ ಒಪ್ಪಿಗೆ ಇದ್ದರೂ ಇನ್ಮುಂದೆ ಕಾನೂನು ಕ್ರಮ ಆಗಲಿದೆ. ತೊಟ್ಟಿಲು ಮದುವೆಯಾದರೂ ಶಿಕ್ಷೆಯನ್ನು ಕೈಗೊಳ್ಳುವಂತ ಅವಕಾಶವನ್ನು ಬಾಲ್ಯ ವಿವಾಹ ನಿಷೇಧ ತಿದ್ದುಪಡಿ ಕಾಯ್ದೆಯಡಿ ಜಾರಿಗೆ …

Read More »

ಭಾರೀ ಮಳೆಗೆ ಕ್ಷಣಾರ್ಧದಲ್ಲಿ ಬೃಹತ್ ಬೆಟ್ಟ ಕುಸಿತ!

ರಾಜಸ್ಥಾನದ ಜುನ್ಜುನುವಿನಿಂದ ಆಘಾತಕಾರಿ ವೀಡಿಯೊವೊಂದು ಹೊರಬರುತ್ತಿದೆ, ಅಲ್ಲಿ ಭಾರೀ ಮಳೆಯ ನಡುವೆ ಬೆಟ್ಟವೊಂದು ನೆಲಕ್ಕೆ ಬಿದ್ದಿದ್ದು,.ಈ ವೀಡಿಯೊ ಹತ್ತಿರದ ಸ್ಥಳೀಯರು ಮತ್ತು ಗ್ರಾಮಸ್ಥರಲ್ಲಿ ಭಯ ಹುಟ್ಟಿಸುತ್ತಿದೆ. ಗುಡ್ಡಗಾಡು ಪ್ರದೇಶ ಕುಸಿದು ಕೆಲವು ಸೆಕೆಂಡುಗಳಲ್ಲಿ ಭಯಾನಕ ಸ್ಫೋಟದೊಂದಿಗೆ ಅಪ್ಪಳಿಸುವ ದೃಶ್ಯವನ್ನು ಕ್ಯಾಮೆರಾ ಸೆರೆಹಿಡಿಯುತ್ತದೆ. ವೈರಲ್ ವೀಡಿಯೊ ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ.

Read More »

ಕಳಸಾ-ಬಂಡೂರಿಗೆ ಅಡ್ಡಿ : ರಾಜ್ಯಾದ್ಯಂತ ಗೋವಾ ವಿರುದ್ಧ ಭುಗಿಲೆದ್ದ ಆಕ್ರೋಶ!

ಮಹದಾಯಿ ನದಿಗೆ ಅಡ್ಡಲಾಗಿ ಕಳಸಾ ಬಂಡೂರಿ ಅಣೆಕಟ್ಟು ನಿರ್ಮಾಣ ಮಾಡಲು ಅವಕಾಶ ನೀಡುವುದಿಲ್ಲ ಎಂಬ ಕೇಂದ್ರ ಸರ್ಕಾರದ ಧೋರಣೆಗೆ ರಾಜ್ಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.ಕೇಂದ್ರ ಸರ್ಕಾರ ಪ್ರತಿಬಾರಿಯೂ ಪ್ರತಿ ಚುನಾವಣೆಯಲ್ಲೂ ಕಳಸಾ ಬಂಡೂರಿ ಮತ್ತು ಮೇಕೆದಾಟು ಯೋಜನೆಗಳ ಬಗ್ಗೆ ಸಕಾರಾತಕವಾಗಿ ಮಾತನಾಡುತ್ತದೆ. ಮತದಾನ ಮುಗಿದ ಮೇಲೆ ವರಸೆ ಬದಲಾಯಿಸುತ್ತದೆ ಎಂದು ಆಕ್ಷೇಪಿಸಿದರು. ಶಾಸಕ ಕೋ.ನ.ರೆಡ್ಡಿ ಮಾತನಾಡಿ, ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕದ ಪರವಾಗಿ ತೀರ್ಪು ಬಂದಿದೆ. ಈಗಾಗಲೇ ಟೆಂಡರ್‌ ಕರೆದು ಯೋಜನೆಯ ಗುತ್ತಿಗೆ …

Read More »