Breaking News

2ಎ ಮೀಸಲಾತಿ ನೀಡುವ ಕುರಿತು ಸರ್ಕಾರದಿಂದ ಯಾವುದೇ ಭರವಸೆ ಸಿಕ್ಕಿಲ್ಲ: ಜಯ ಮೃತ್ಯುಂಜಯ ಸ್ವಾಮೀಜಿ

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡುವ ಸಂಬಂಧ ಸರ್ಕಾರದಿಂದ ಯಾವುದೇ ಭರವಸೆ ಸಿಕ್ಕಿಲ್ಲ. ‌ಈ ಹಿನ್ನೆಲೆ ಮತ್ತೆ ಹೋರಾಟ ರೂಪಿಸುವ ಸಂಬಂಧ ಜಯ ಮೃತ್ಯುಂಜಯ ಸ್ವಾಮೀಜಿ ಸುಳಿವು ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿಂದು ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದ ನಿಯೋಗ ಸಿಎಂ ಸಿದ್ದರಾಮಯ್ಯ ಜೊತೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿತು.
ಸಭೆ ಬಳಿಕ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ, ಸಿಎಂ ಅವರು ನಮ್ಮ ಬಳಿ ಒಂದೂವರೆ ಗಂಟೆ ಸಭೆ ಮಾಡಿದ್ರು. ನಾವು 2ಎ ಮೀಸಲಾತಿ ಕೊಡಿ ಇಲ್ಲದೇ ಹೋದ್ರೆ ಬಿಜೆಪಿ ತಂದಿದ್ದ 2ಡಿ ಮೀಸಲಾತಿಯಾದ್ರೂ ಕೊಡಿ ಅಂತ ಮನವಿ ಮಾಡಿದ್ವಿ. ಇದಲ್ಲದೇ ಲಿಂಗಾಯತರನ್ನ ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸುವ ಸಂಬಂಧ ಕೇಂದ್ರಕ್ಕೆ ಶಿಫಾರಸು ಆದ್ರು ಮಾಡಿ ಅಂತ ಮನವಿ ಮಾಡಿದ್ವಿ. ಆದರೆ ಸಿಎಂ ಅವರು ಚುನಾವಣೆ ನೀತಿ ಸಂಹಿತೆ ಇದೆ ಈಗ ಏನು ಹೇಳೊಲ್ಲ ಅಂತ ಹೇಳಿದ್ದಾರೆ. ಒಬಿಸಿ ಬಗ್ಗೆಯೂ ಭರವಸೆ ಕೊಟ್ಟಿಲ್ಲ. 2ಎ ಮೀಸಲಾತಿ ಬಗ್ಗೆಯೂ ಯಾವುದೇ ಸ್ಪಷ್ಟವಾದ ನಿರ್ಧಾರ ಹೇಳಿಲ್ಲ. ಈ ಸಭೆ ನಮಗೆ ಸಮಾಧಾನ ತಂದಿಲ್ಲ ಹೀಗಾಗಿ ಮುಂದಿನ ಹೋರಾಟ ರೂಪಿಸೋದಾಗಿ ತಿಳಿಸಿದರು.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರು ಒಂದೂವರೆ ಗಂಟೆ ಸಿಎಂ ಎಲ್ಲಾ ಸಮಸ್ಯೆ ಆಲಿಸಿದ್ದಾರೆ ಏನೇನು ಆಗಬೇಕು ಸಹಾಯ ಮಾಡೋದಾಗಿ ಹೇಳಿದ್ದಾರೆ. ನೀತಿ ಸಂಹಿತೆ ಇರೋದ್ರೀಂದ ಏನು ಮಾಡೋಕೆ ಬರೊಲ್ಲ ಅಂತ ಹೇಳಿದ್ದಾರೆ ಅಂತ ತಿಳಿಸಿದರು. ನೀತಿ ಸಂಹಿತೆ ಬರೋ ಮುನ್ನ ಸಭೆ ನಿಗದಿಯಾಗಿತ್ತು ಹೀಗಾಗಿ ಸಭೆ ಮಾಡಿದ್ದೇವೆ. ಸಮಾಜ ರೊಚ್ಚಿಗೆದ್ದು ಬೀದಿಗೆ ಇಳಿದಿದೆ ಸಮಾಜ ಅನ್ಯತಾ ಭಾವಿಸಬಾರದು ಅಂತ ಸಭೆ ಮಾಡಿದ್ದೇವೆ. ನನಗೆ ವಿಶ್ವಾಸ ಇದೆ ನಮ್ಮ ಸರ್ಕಾರದಲ್ಲಿ 2ಎ ಮೀಸಲಾತಿ ಬೇಡಿಕೆ ಈಡೇರಿಕೆ ಆಗೋ ಭರವಸೆ ಇದೆ ಎಂದರು.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *