Breaking News

BigTv News

ಮುಂಬೈ ದಾಳಿಯ ರುವಾರಿ ಉಗ್ರ ಅಬ್ದುಲ್ ಅಜೀಜ್ ಪಾಕ್‌ನಲ್ಲಿ ಸಾವು, mm

2001ರ ಭಾರತೀಯ ಸಂಸತ್ ಭವನದ ಮೇಲಿನ ದಾಳಿಯ ಸಂಚುಕೋರ ಹಾಗೂ 26/11ರ ಮುಂಬೈ ಉಗ್ರರ ದಾಳಿಯ ರುವಾರಿ ಲಷ್ಕರ್-ಎ-ತೈಬಾದ ಪ್ರಮುಖ ಉಗ್ರ ಅಬ್ದುಲ್ ಅಜೀಜ್ ಪಾಕಿಸ್ತಾನದ ಬಹಾವಲ್ಪುರದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.ಲಷ್ಕರ್-ಎ-ತೈಬಾದ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿಯೊಂದಿಗೆ ಅಜೀಜ್ ನಿಕಟ ಸಂಬಂಧ ಹೊಂದಿದ್ದ. ಅಬ್ದುಲ್ ಅಜೀಜ್ ಅಂತ್ಯಕ್ರಿಯೆಯಲ್ಲಿ ಸೈಫುಲ್ಲಾ ಕಸೂರಿ ಮತ್ತು ಅಬ್ದುರ್ ರೌಫ್ ಮುಂತಾದ ಹಿರಿಯ ಲಷ್ಕರ್ ನಾಯಕರು ಭಾಗಿಯಾಗಿದ್ದಾರೆ ಎನ್ನಲಾಗಿದೆ.

Read More »

ತಾಂತ್ರಿಕ ದೋಷ: ಟೇಕ್ ಆಫ್ ಆದ 2 ಗಂಟೆಗಳ ನಂತರ ಏರ್ ಇಂಡಿಯಾ ವಿಮಾನ ಕ್ಯಾಲಿಕಟ್ ಗೆ ವಾಪಸ್

ಕ್ಯಾಲಿಕಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬುಧವಾರ ದೋಹಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ, ಟೇಕ್ ಆಫ್ ಆದ ಎರಡು ಗಂಟೆಗಳ ನಂತರ ತಾಂತ್ರಿಕ ದೋಷದಿಂದಾಗಿ ವಾಪಸ್ ಬಂದಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

Read More »

ಅಸ್ತಿತ್ವದಲ್ಲೇ ಇಲ್ಲದ ದೇಶಗಳ ಹೆಸರಲ್ಲಿ ರಾಯಭಾರ ಕಚೇರಿ ನಡೆಸುತ್ತಿದ್ದವನ ಬಂಧನ!

ಲಖನೌನಲ್ಲಿ ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದವನನ್ನು ಉತ್ತರ ಪ್ರದೇಶ ಪೊಲೀಸ್‌ನ ವಿಶೇಷ ಕಾರ್ಯಪಡೆ (ಎಸ್‌ಟಿಎಫ್‌) ಅಧಿಕಾರಿಗಳು ಪತ್ತೆ ಮಾಡಿದ್ದಾರೆ.ಅಸ್ತಿತ್ವದಲ್ಲೇ ಇಲ್ಲದ ದೇಶಗಳ ರಾಜತಾಂತ್ರಿಕ ಅಧಿಕಾರಿ ಎಂದು ಹೇಳಿಕೊಂಡು ರಾಯಭಾರ ಕಚೇರಿ ನಡೆಸುತ್ತಿದ್ದ ಹರ್ಷವರ್ಧನ್ ಜೈನ್‌ ಎಂಬಾತನನ್ನು ಎಸ್‌ಟಿಎಫ್‌ ಬಂಧಿಸಿದೆ.44.7 ಲಕ್ಷ ನಗದು, ವಿದೇಶಿ ಕರೆನ್ಸಿ, ಹಲವು ಕಂಪನಿಗಳ ದಾಖಲೆಗಳು ಮತ್ತು 18 ನಕಲಿ ನಂಬರ್‌ ಪ್ಲೇಟ್‌ಗಳನ್ನು ಎಸ್‌ಟಿಎಫ್‌ ವಶಪಡಿಸಿಕೊಂಡಿದೆ.ಕವಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ …

Read More »

ರಾಜ್ಯದಲ್ಲಿ ಭೀಕರ ಘಟನೆ – ಹಸುಗಳ ಕೆಚ್ಚಲು ಕೊಯ್ದ ದನಗಳ್ಳರು!

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ಮಾಸುವ ಮುನ್ನವೇ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಗೋವು ಕಳ್ಳರು ಹಸುವನ್ನು ಸಾಗಿಸಲು ಸಾಧ್ಯವಾಗದ ಹಿನ್ನಲೆ ಅದರ ಕೆಚ್ಚಲು ಕೊಯ್ದಿರುವ ಘಟನೆ ನಡೆದಿದೆ.ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಗಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More »

ಮುಖ ಮರೆಸಿಕೊಂಡು ಬಂದು ಗೋವುಗಳನ್ನು ಕದಿಯುತ್ತಿದ್ದ ಖದೀಮರು ಅರೆಸ್ಟ್‌!

ಮಾಸ್ಕ್‌ ಧರಿಸಿಕೊಂಡು ಬಂದು ಮನೆಯಲ್ಲಿ ಸಾಕಿದ್ದ ಗೋವುಗಳನ್ನು ಮಾಂಸಕ್ಕಾಗಿ ಕದಿಯುತ್ತಿದ್ದ ಖದೀಮರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.ಇಮ್ರಾನ್‌ ಮತ್ತು ಇರ್ಷಾದ್‌ ಬಂಧಿತ ಆರೋಪಿಗಳು. ಇವರಿಬ್ಬರೂ ಹಳೆಯ ಗೋಕಳವು ಚಾಳಿಯುಳ್ಳ ಪಳಗಿದ ವೃತ್ತಿಪರ ಖದೀಮರಾಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಇಮ್ರಾನ್‌ ವಿರುದ್ದ ಬಂಟ್ವಾಳ ಠಾಣೆಯಲ್ಲಿ ಏಳು ಪ್ರಕರಣ, ಮಂಗಳೂರು, ಬಜ್ಪೆ, ಉಳ್ಳಾಲ, ಕೊಣಾಜೆ, ಶನಿವಾರಸಂತೆ ಹಾಗು ಕುಶಾಲನಗರ ಠಾಣೆಯಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿದೆ.

Read More »

ಹೃದಯಾಘಾತಕ್ಕೆ ಮೂವರು ಬಲಿ!

ರಾಜ್ಯದಲ್ಲಿ ಇಂದು ಹೃಯಾಘಾತಕ್ಕೆ ಮೂವರು ಬಲಿಯಾಗಿದ್ದಾರೆ. ಇಂದು ಬೆಳಗ್ಗೆ ಅಷ್ಟೇ ಬೇಗೂರು ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ನಿಜಾಮುದ್ದೀನ್ (44) ಅವರು ತಮ್ಮ ಆಡುಗೋಡಿ ಪೊಲೀಸ್ ಕ್ವಾಟರ್ಸ್ ನಲ್ಲಿ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಲು ರೆಡಿಯಾಗುತ್ತಿದ್ದಾಗ ದಿಢೀ‌ರ್ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದರು.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರ ಶಿಕ್ಷಕಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನೆಲಮಂಗಲ ಭಕ್ತನಪಾಳ್ಯ ನಿವಾಸಿ ಸುಲೋಚನಾ (49) ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಹೃದಯಾಘಾತಕ್ಕೆ ತುಳು ರಂಗಭೂಮಿ ಹಿರಿಯ …

Read More »

ಚಿತ್ರದುರ್ಗದಲ್ಲಿ ವಿದ್ಯುತ್‌ ತಂತಿ ತಗುಲಿ ಮೂವರ ದುರ್ಮರಣ!

ತೋಟದಲ್ಲಿ ಕಬ್ಬಿಣದ ಕಂಬ ಹಾಕುವ ವೇಳೆ ಈ ದುರಂತ ಸಂಭವಿಸಿದೆ. ಘಟನೆ ನಡೆದ ಕೂಡಲೇ ಗಂಭೀರ ಗಾಯಗೊಂಡಿದ್ದ ಮೂವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆಯಲ್ಲಿ ಅವರು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.ಈ ಅವಘಡ ಚಿಕ್ಕಜಾಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Read More »

ಸಂಗಾತಿ ಹಾಗೂ ಮಗಳ ಕತ್ತು ಹಿಸುಕಿ ಕೊಲೆ!

ಕೆಲವು ತಿಂಗಳುಗಳಿಂದ 36 ವರ್ಷದ ರಾಮಸಖಿ ಜೊತೆ ಲಿವ್-ಇನ್ ಸಂಬಂಧದಲ್ಲಿದ್ದ. ಅನುಜ್ ಜೊತೆಗೆ ಬರುವ ಮೊದಲು ರಾಮಸಖಿ ತನ್ನ ಪತಿಯಿಂದ ಬೇರ್ಪಟ್ಟಿದ್ದರು.ಈ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು, ಆದರೆ ಇಷ್ಟೊಂದು ಭಯಾನಕ ರೀತಿಯಲ್ಲಿ ಅವರ ಬದುಕೇ ಕೊನೆಗೊಳ್ಳುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಅನುಜ್ ಅವರ ನೆರೆಹೊರೆಯವರು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಪೊಲೀಸರು ಸ್ಥಳಕ್ಕೆ ಬಂದಾಗ, ಗೋಡೆಯ ಮೇಲೆ ನಾನು ಅವಳನ್ನು ಕೊಂದೆ, ಅವಳು ನನಗೆ ಸುಳ್ಳು ಹೇಳಿದ್ದಳು.ಅವಳಿಗೆ …

Read More »

ದೇಶಾದ್ಯಂತ ಒಂದೇ ವರ್ಷದಲ್ಲಿ 22,845 ಕೋಟಿ ರೂ. ಸೈಬರ್ ವಂಚನೆ: ಕೇಂದ್ರ ವರದಿ

ಸೈಬರ್ ದಾಳಿಯಿಂದ ನಾಗರಿಕರು 22,845 ಕೋಟಿ ರೂ. ವಂಚನೆಗೆ ಒಳಗಾಗಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.206ರಷ್ಟು ಹೆಚ್ಚಳವಾಗಿದೆ ಎಂದು ಗೃಹ ವ್ಯವಹಾರಗಳ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ತಿಳಿಸಿದ್ದಾರೆ.ಸೈಬರ್ ಅಪರಾಧ ತಡೆಗಟ್ಟಲು ಸರ್ಕಾರ ಹಲವು ಹಂತಗಳಲ್ಲಿ ಕೆಲಸ ಮಾಡುತ್ತಿದೆ ಎಂದು ಸಚಿವರು ಹೇಳಿದರು. ಇಲ್ಲಿಯವರೆಗೆ, ಪೊಲೀಸರು ಮತ್ತು ಇತರ ಏಜೆನ್ಸಿಗಳ ಸಹಾಯದಿಂದ 9.42 ಲಕ್ಷಕ್ಕೂ ಹೆಚ್ಚು ಸಿಮ್ ಕಾರ್ಡ್‌ಗಳನ್ನು ನಿರ್ಬಂಧಿಸಲಾಗಿದೆ. ಇದಲ್ಲದೆ, 2,63,348 ಮೊಬೈಲ್ IMEI ಸಂಖ್ಯೆಗಳನ್ನು …

Read More »

ರಾಜ್ಯಾದ್ಯಂತ ಸ್ಮಾರ್ಟ್‌ ಮೀಟರ್‌ ಕಡ್ಡಾಯಕ್ಕೆ 2% ಹೆಚ್ಚುವರಿ ತೆರಿಗೆ!

ಶಕ್ತಿ ಭವನದಲ್ಲಿ ಮಂಗಳವಾರ ಸಂಜೆ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕೇಂದ್ರದ ಆರ್‌ಡಿಎಸ್‌ಎಸ್‌ ಯೋಜನೆ ಅನುಷ್ಠಾನದ ಕುರಿತು ಸಭೆ ನಡೆಸಲಾಯಿತು. ರಾಜ್ಯಾದ್ಯಂತ ಕೇಂದ್ರದ ಆರ್‌ಡಿಎಸ್‌ಎಸ್‌ (ರಿವ್ಯಾಂಪ್ಡ್‌ ಡಿಸ್ಟ್ರಿಬ್ಯೂಷನ್‌ ಸೆಕ್ಟರ್‌ ಸ್ಕೀಂ) ಅಡಿ ಎಲ್ಲಾ ವಿದ್ಯುತ್‌ ಸಂಪರ್ಕಗಳಿಗೂ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಸಲಾಗಿದೆ

Read More »