ರಾಮನಹಳ್ಳಿ ನಿವಾಸಿ ರಂಜಿತಾ ಎಂಬ ಮಹಿಳೆ ಕೆರೆಗೆ ಹಾರಿದ್ದಾರೆ. ಸಾಯಬೇಕು ಎಂದು ಕೆರೆಗೆ ಜಿಗಿದ ರಂಜತಾ ಭಯಗೊಂಡು ಆಂಜನೇಯ ತನನ್ನು ಕಾಪಾಡು ಎಂದು ಪ್ರಾರ್ಥಿಸುತ್ತಿದ್ದರು. ಕೆರೆಯಲ್ಲಿ ಯಾರೋ ರಕ್ಷಣೆಗಾಗಿ ಪರದಾಡುತ್ತಿರುವುದನ್ನು ಕಂಡ ಕೆರೆ ಪಕ್ಕದ ಹೋಂ ಸ್ಟೇ ಮಾಲೀಕ ಮಹೇಶ್ ಎಂಬುವವರು, ಸ್ಥಳೀಯ ಹುಡುಗರನ್ನು ಕರೆಸಿದ್ದಾರೆ. ಕೆರೆ ಬಳಿ ಬಂದ ಸ್ಥಳೀಯರು ಮಹಿಳೆಯನ್ನು ರಕ್ಷಿಸಿದ್ದಾರೆ. ಸದ್ಯ ಮಹಿಳೆ ರಂಜಿತಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Read More »ವರ್ಗಾವಣೆ ಭಯದಿಂದ ಮುಖ್ಯ ಶಿಕ್ಷಕ ಆತ್ಮಹತ್ಯೆ!!
ವರ್ಗಾವಣೆ ಭಯದಲ್ಲಿ ಹಳ್ಳಿಹೊಳೆಯ ಸುಳುಗೋಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕುಬೇರ(49) ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಮಲಶೀಲೆ ಪಾರೆ ಎಂಬಲ್ಲಿ ಜು.7ರಂದು ಬೆಳಗ್ಗೆ ನಡೆದಿದೆ.ಇವರು ತನ್ನ ಪತ್ನಿ ಸುಮಿತಾ ಬಳಿ ಸರಕಾರಿ ಶಾಲೆಯ ನಿಯಮದ ಪ್ರಕಾರ ಒಂದು ಶಾಲೆಯಲ್ಲಿ 60 ವಿದ್ಯಾರ್ಥಿಗಳಿಗಿಂತ ಕಡಿಮೆ ವಿದ್ಯಾರ್ಥಿಗಳಿದ್ದಲ್ಲಿ ಆ ಶಾಲೆಯ ಮುಖ್ಯ ಶಿಕ್ಷಕರನ್ನು ವರ್ಗಾವಣೆಗೊಳಿಸುವು ದಾಗಿ ಹೇಳಿದ್ದರು.
Read More »ಕುಂದಗೋಳ: ವೀರ ಯೋಧನಿಗೆ ಶಿತಿಕಂಠೇಶ್ವರ ಮಹಾಸ್ವಾಮಿಗಳಿಂದ ಸನ್ಮಾನ.
ಸತತ 13 ವರ್ಷಗಳಿಂದ ರೈತರಿಗೆ ರಸಗೊಬ್ಬರ ವಿತರಣೆ, ಮತ್ತು ಈ ಬಾರಿ ಭಾರತೀಯ ಗಡಿ ಸೇವೆಗೈದ ವೀರ ಯೋಧನಿಗೆ ಸನ್ಮಾನ ಕೈಗೊಂಡು ತಮ್ಮ ಅರ್ಥಪೂರ್ಣವಾದ 45ನೇ ಹುಟ್ಟುಹಬ್ಬವನ್ನು ಪಟ್ಟಣದ ಹಿರೇಮಠದ ಶ್ರೀ ಶಿತಿಕಂಠೇಶ್ವರ ಮಹಾಸ್ವಾಮಿಗಳು ಆಚರಿಸಿಕೊಂಡರು.ದೇಶದೊಳಗೆ ನಾವು ನಿರಾಳವಾಗಿ ಜೀವನ ನಡೆಸಲು ಸೈನಿಕರ ಪಾತ್ರ ದೊಡ್ಡದಿದೆ ಅವರನ್ನು ಗೌರವಿಸಬೇಕು ಎಂದು ತಮ್ಮ ಭಕ್ತ ಸಮೂಹಕ್ಕೆ ಸಂದೇಶ ಸಾರಿದರು, ಈ ಸಂದರ್ಭದಲ್ಲಿ ಶಾಸಕರು, ವಿವಿಧ ರಾಜಕೀಯ & ಸಂಘಟನೆಯ ಮುಖಂಡರುಗಳು, ಮಾಧ್ಯಮ …
Read More »ಕೋಲಾರ: ಗಂಡನಿಗೆ ಕೈಕೊಟ್ಟು ಬಂದಿದ್ದ ಗೃಹಿಣಿಯನ್ನು ಗರ್ಭೀಣಿ ಮಾಡಿ ಬಿಟ್ಟು ಹೋದ ಪತಿಯ ಸ್ನೇಹಿತ; ಬೀದಿಗೆ ಬಿದ್ದ ಮಹಿಳೆ!
ಮದುವೆಯಾಗಿ ಸುಂದರ ಜೀವನ ನಡೆಸಬೇಕಿದ್ದ ಗೃಹಿಣಿಯೊಬ್ಬಳು ಗಂಡನ ಸ್ನೇಹಿತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ನಂತರ ಆತನಿಗಾಗಿ ಗಂಡ ಹರೀಶ್ ನನ್ನು ತೊರೆದು ಬಂದಿದ್ದಳು. ಇದೀಗ ಐದು ತಿಂಗಳ ಗರ್ಭೀಣಿ ಅಂತ ಗೊತ್ತಾಗುತ್ತಲೇ ಪ್ರಿಯಕರ ಅಮರನಾಥ್ ಆಕೆಯನ್ನು ಬಿಟ್ಟು ಓಡಿ ಹೋಗಿದ್ದಾನೆ.ಈಗ ಯಾವುದೇ ಆಸರೆ ಇಲ್ಲದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾಳೆ. ನನಗೆ ನ್ಯಾಯ ಬೇಕು ಎಂದು ಸಂಯುಕ್ತ ಯುವಕನ ಮನೆಮುಂದೆ ಅಂಬೇಡ್ಕರ್ ಫೋಟೋ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾಳೆ. ಶ್ರೀನಿವಾಸಪುರ …
Read More »ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ! ಆರೋಪಿಗಳ ಬಂಧನ!!!
ರಾಯಚೂರು ಜಿಲ್ಲೆಯ ಶಕ್ತಿನಗರ ಬಳಿಯ ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು.ಪೊಲೀಸರು ಈ ಕೇಸ್ ಜಾಡು ಹಿಡಿದು ತನಿಖೆ ಕೈಗೆತ್ತಿಕೊಂಡ ಬಳಿಕ ಇದೀಗ ಸತ್ಯ ಬಯಲಿಗೆಳೆದಿದ್ದಾರೆ .ರಾಘವೇಂದ್ರ ಪ್ರೇಯಸಿ ಅಶ್ವಿನಿ ತನ್ನ ಪ್ರಿಯಕರ ಗುರುರಾಜ್ಗೆ ಜತೆ ಸೇರಿ ಕೊಲೆಗೆ ಪ್ಲಾನ್ ರೂಪಿಸಿದ್ದಳು. ಕಳೆದ ಮಾರ್ಚ್ 12 ರಂದು, ಅಶ್ವಿನಿ ರಾಘವೇಂದ್ರನನ್ನು ಕಲಬುರಗಿಯ ಸೂಪರ್ ಮಾರ್ಕೆಟ್ ಬಳಿ ಭೇಟಿಯಾಗಲು ಆಹ್ವಾನಿಸಿ ಅಪಹರಣ ಮಾಡಿದ್ದರು. ಅಲ್ಲದೆ ಆತನ ಮೇಲೆ ಹಲ್ಲೆ ನಡೆಸಿ …
Read More »NIA’ನಿಂದ ಮೂವರು ಶಂಕಿತ ಉಗ್ರರ ಬಂಧನ ಕೇಸ್!!!
ರಾಜ್ಯದಲ್ಲಿ ಎನ್ ಐಎ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಜೈಲಿನಲ್ಲಿರುವ ಶಂಕಿತ ಉಗ್ರರೊಂದಿಗೆ ನಿರಂತರ ಸಂಪರ್ಕ ಮತ್ತು ನೆರವು ನೀಡಿದ ಆರೋಪದಡಿ ಮೂವರನ್ನು ಬಂಧಿಸಿದೆ.ಜೈಲಿನಿಂದಲೇ ಯುವಕರ ತಂಡ ತಯಾರು ಮಾಡುತ್ತಿದ್ದ. ದಕ್ಷಿಣ ಭಾರತದಲ್ಲಿ ನಡೆದ ಹಲವು ಸ್ಪೋಟಗಳ ಮಾಸ್ಟರ್ ಮೈಂಡ್, 2008ರ ಸರಣಿ ಬಾಂಬ್, ಮಂಗಳೂರಿನಲ್ಲಿ ಕುಕ್ಕರ್ ಬಾಂಬ್, ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ, ರಾಮೇಶ್ವರಂ ಕೆಫೆ ಬ್ಲ್ಯಾಸ್ಟ್ ಸೇರಿ ಹಲವು ಕೇಸ್ ಗಳಲ್ಲಿ ಭಯೋತ್ಪಾದಕ ಕೈವಾಡ ಇದ್ದು, ಸ್ಲೀಪರ್ ಸೆಲ್ ಗೆ …
Read More »ಶಿವಮೊಗ್ಗ: ದೆವ್ವ ಬಿಡಿಸುವುದಾಗಿ ಥಳಿಸಿ ಮಹಿಳೆಯ ಹತ್ಯ, ಮೂವರ ಬಂಧನ!
ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆ ಗ್ರಾಮದಲ್ಲಿ ರವಿವಾರ ರಾತ್ರಿ ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯೊಬ್ಬರನ್ನು ಅಮಾನುಷವಾಗಿ ಥಳಿಸಲಾಗಿದೆ. ಇದರಿಂದ ತೀವ್ರ ಅಸ್ವಸ್ಥಗೊಂಡ ಮಹಿಳೆ ಸೋಮವಾರ ನಸುಕಿನಲ್ಲಿ ಮೃತಪಟ್ಟಿದ್ದಾರೆ.ಗೀತಮ್ಮನ ಮೈಯಲ್ಲಿ ಆತ್ಮವೊಂದು ಹೊಕ್ಕಿದೆ. ಪೂಜೆ ಮಾಡಿ ಅದನ್ನು ಹೊರ ಹಾಕುತ್ತೇನೆ ಎಂದು ಆಶಾ ತಿಳಿಸಿದ್ದರು. ಹೀಗಾಗಿ ಅವರ ಮನೆಗೆ ಕರೆದೊಯ್ದಿದ್ದೆವು. ಮೊದಲಿಗೆ ದೇವರ ಪೂಜೆ ಮಾಡಿದ್ದರು. ನಂತರ ದೆವ್ವ ಓಡಿಸುವೆ ಎಂದು ತಲೆ ಮೇಲೆ ಕಲ್ಲು ಹೊರಿಸಿ ಗ್ರಾಮದ ಹೊರಗಿನ ಮರವೊಂದರ ಬಳಿಗೆ …
Read More »ವಿಮಾನ ಟೇಕ್ ಆಫ್ ಆಗುವ ಸಮಯದಲ್ಲಿ ಇಂಜಿನ್ನಲ್ಲಿ ಸಿಲುಕಿ ವ್ಯಕ್ತಿ ಸಾವು!
ಸ್ಪೇನ್ನ ಆಸ್ಟೂರಿಯಸ್ಗೆ ತೆರಳುತ್ತಿದ್ದ A319 ವೊಲೊಟಿಯಾ ವಿಮಾನ ಟೇಕಾಫ್ ಆಗುವ ಸಮಯದಲ್ಲಿ ರನ್ವೇಗೆ ಓಡಿಬಂದ 35 ವರ್ಷದ ವ್ಯಕ್ತಿ ಇಂಜಿನ್ಗೆ ಸಿಲುಕಿ ಮೃತಪಟ್ಟಿದ್ದಾನೆ. ಅಪಘಾತದ ಬಳಿಕ ಸುಮಾರು ಎರಡು ಗಂಟೆಗಳ ಕಾಲ ವಿಮಾನ ಸಂಚಾರದಲ್ಲಿ ಅಡಚಣೆ ಉಂಟಾಯಿತು ಎಂದು ಮಿಲನ್ ಬರ್ಗಾಮೊ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.ವಿಮಾನದಲ್ಲಿ ಆರು ಸಿಬ್ಬಂದಿ, ಇಬ್ಬರು ಪೈಲಟ್ಗಳು ಮತ್ತು ನಾಲ್ವರು ಕ್ಯಾಬಿನ್ ಸಿಬ್ಬಂದಿ ಸೇರಿದಂತೆ ಒಟ್ಟು 154 ಪ್ರಯಾಣಿಕರಿದ್ದರು. ಈ ವಿಮಾನ ನಿಲ್ದಾಣ ಜಗತ್ತಿನ …
Read More »ಹುಬ್ಬಳ್ಳಿ-ಧಾರವಾಡ ಅವಳಿನಗರ ಪೊಲೀಸರಿಂದ ಫಿಟ್ನೆಸ್ ಗಾಗಿ ವಿನೂತನ ಹೆಜ್ಜೆ…
ಇತ್ತೀಚಿಗೆ ಪೊಲೀಸ್ ಇಲಾಖೆಯ ಓರ್ವ ಎ ಎಸ್ ಐ ಕೂಡ ಹೃದಯಾಘಾತದಿಂದ ಸಾವಾಗಿತ್ತು. ಹೃದಯಾಘಾತಕ್ಕೆ ಕಾರಣವಾದ ದೇಹದ ತೂಕ ಇಳಿಸುವ ಕೆಲಸ ನಡೆಯುತ್ತಿದೆ.ಇತ್ತೀಚಿಗೆ ಹೃದಯಾಘಾತ ಪ್ರಕರಣಗಳು ಸಹ ಹೆಚ್ಚಾದ ಹಿನ್ನೆಲೆ,ದೇಹದ ತೂಕ ಇಳಿಸುವಲ್ಲಿ ಯಶಸ್ವಿಯಾದ ಅವಳಿನಗರ ಖಾಕಿ ಪಡೆ. ಕಳೆದ ಒಂದು ತಿಂಗಳಿಂದ ದೈಹಿಕ ಫಿಟ್ನೆಸ್ ನಲ್ಲಿ ತೊಡಗಿಕೊಂಡ ಖಾಕಿ.ಈ ಕಾರ್ಯಗಾರದಲ್ಲಿ ಭಾಗಿಯಾದ ಕಮಿಷ್ನರೇಟ್ ನ 65 ಅಧಿಕಾರಿ, ಸಿಬ್ಬಂದಿಗಳು.70 ಕೆಜಿ ಗಿಂತ ಹೆಚ್ಚಿ ತೂಕ ಉಳ್ಳವರನ್ನ ಈ ಕಾರ್ಯಗಾರಕ್ಕೆ …
Read More »ಮೊಹರಂ ಆಚರಣೆ ವೇಳೆ ಘೋರ ದುರಂತ, ಬೆಂಕಿಗೆ ಬಿದ್ದು ಯುವಕ ಸಾವು!
ಮೊಹರಂ ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ದೊಡ್ಡ ಅಗ್ನಿಕುಂಡ ಸಿದ್ಧಪಡಿಸಿದ್ದು, ಅದನ್ನು ಹಾಯ್ದು ಹೋಗುವಾಗ ಕಟ್ಟಿಗೆಯಲ್ಲಿ ಕಾಲು ಸಿಲುಕಿಕೊಂಡು ದುರ್ಘಟನೆ ಸಂಭವಿಸಿದೆ. ಗಾಯಾಳುವನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ತೀವ್ರತರದ ಸುಟ್ಟ ಗಾಯಾಗಳಾಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗೆ ದೊಡ್ಡ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಲಿಂಗಸುಗೂರು ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.ಅಲಾಯಿ ಕುಣಿಗಳ ಹಾದು ಹೋಗುವಾಗ ಈ ದುರ್ಘಟನೆ ನಡೆದಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





