ರಾಯಚೂರು ಜಿಲ್ಲೆಯ ಶಕ್ತಿನಗರ ಬಳಿಯ ಕೃಷ್ಣಾ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು.ಪೊಲೀಸರು ಈ ಕೇಸ್ ಜಾಡು ಹಿಡಿದು ತನಿಖೆ ಕೈಗೆತ್ತಿಕೊಂಡ ಬಳಿಕ ಇದೀಗ ಸತ್ಯ ಬಯಲಿಗೆಳೆದಿದ್ದಾರೆ .ರಾಘವೇಂದ್ರ ಪ್ರೇಯಸಿ ಅಶ್ವಿನಿ ತನ್ನ ಪ್ರಿಯಕರ ಗುರುರಾಜ್ಗೆ ಜತೆ ಸೇರಿ ಕೊಲೆಗೆ ಪ್ಲಾನ್ ರೂಪಿಸಿದ್ದಳು. ಕಳೆದ ಮಾರ್ಚ್ 12 ರಂದು, ಅಶ್ವಿನಿ ರಾಘವೇಂದ್ರನನ್ನು ಕಲಬುರಗಿಯ ಸೂಪರ್ ಮಾರ್ಕೆಟ್ ಬಳಿ ಭೇಟಿಯಾಗಲು ಆಹ್ವಾನಿಸಿ ಅಪಹರಣ ಮಾಡಿದ್ದರು. ಅಲ್ಲದೆ ಆತನ ಮೇಲೆ ಹಲ್ಲೆ ನಡೆಸಿ ಅವನ ಗುಪ್ತಾಂಗಗಳಿಗೆ ಹೊಡೆದು ಕೊಂದಿದ್ದರು. ನಂತ್ರ ಕೃಷ್ಣಾ ನದಿಗೆ ಶವ ಬಿಸಾಡಿದ್ದರು ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

