Breaking News

BigTv News

ಚಾಕಲೇಟ್ ಖರೀದಿಸಲು ಹಣ ಕೇಳಿದ್ದಕ್ಕೆ ಪುತ್ರಿಯನ್ನು ಹತ್ಯೆಗೈದ ತಂದೆ!

ತನ್ನ ತಂದೆಯೊಂದಿಗಿದ್ದ ಅರುಷಿ, ತನಗೆ ಚಾಕಲೇಟ್ ಬೇಕೆಂದು ಆತನನ್ನು ಕೇಳಿದ್ದಾಳೆ. ಇದರಿಂದ ಕುಪಿತಗೊಂಡ ಆತ, ಆಕೆಯ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಈ ಸಂಬಂಧ ಪೊಲೀಸರಿಗೆ ದೂರು ನೀಡಿರುವ ಆರೋಪಿ ಬಾಲಾಜಿ ರಾಥೋಡ್ ನ ಪತ್ನಿ, ನನ್ನ ಪತಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ದೂರನ್ನು ಆಧರಿಸಿ, ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ …

Read More »

ಕಾರಿನಲ್ಲಿ ಕೊಲೆ: ಸೈಜುಗಲ್ಲು ಕಟ್ಟಿ ಶವ ಬಾವಿಗೆ ಹಾಕಿದ ಆರೋಪಿಗಳು!!

ಫ್ಲೈಟ್ ಟಿಕೆಟ್, ವೀಸಾ ಪ್ರಾಬ್ಲಂ ಅಂತ ಹೇಳಿ, ಚಿಂತಾಮಣಿಯ ಲಾಡ್ಜ್​ನಲ್ಲಿ ಕಾಲ ಕಳೆದಿದ್ದಾರೆ. ಮರು ದಿನ ಸೀದಾ ಏರ್​ಪೋರ್ಟ್​ಗೆ ಹೋಗೋಣ ಅಂತ ಹೊರಟವರು ಮಧ್ಯ ದಾರಿಯಲ್ಲಿ ಚಿಂತಾಮಣಿ ತಾಲೂಕಿನ ಕೆಂಪದೇನಹಳ್ಳಿ ಬಳಿ ಥಾರ್ ಕಾರಿನಲ್ಲಿ ಮುಂಬದಿ ಕೂತಿದ್ದವನ ಕುತ್ತಿಗೆಯನ್ನ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆ. ಬಳಿಕ ಮೊದಲೇ ನೋಡಿದ್ದ ಕೆಂಪದೇನಹಳ್ಳಿ ಬಳಿಯ ಬಾವಿಯಲ್ಲಿ ರಾಮಾಂಜಿ ಮೃತದೇಹಕ್ಕೆ ದೊಡ್ಡ ದೊಡ್ಡ ಸೈಜುಗಲ್ಲುಗಳನ್ನ ಕಟ್ಟಿ ಶವ ಮೇಲೆ ಬರಬಾರದು ಅಂತ ಬಾವಿಗೆ ಬಿಸಾಡಿದ್ದಾರೆ. …

Read More »

ಬೆಳಗಾವಿ: ಗೋ ರಕ್ಷಕರ ಮರಕ್ಕೆ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ!!

ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ ಮಾಡಲು ಮುಂದಾದ ಶ್ರೀರಾಮ ಸೇನೆ ಕಾರ್ಯಕರ್ತರನ್ನು ಯುವಕರ ಗುಂಪೊಂದು ಮರಕ್ಕೆ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಂಗಳಿಯಲ್ಲಿ ನಡೆದಿದೆ.ಯುವಕನೊಬ್ಬ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಈಗ ವೈರಲ್ ಆಗಿದೆ.

Read More »

ಚಿಕ್ಕಬಳ್ಳಾಪುರ: ಲಂಡನ್​​ನಲ್ಲಿ ಕೆಲಸ ಕೊಡಿಸುವುದಾಗಿ ಕರೆದುಕೊಂಡು ಹೋಗಿ ಹತ್ಯೆ!

ಇತ್ತೀಚೆಗೆ ಚಿಂತಾಮಣಿ ತಾಲೂಕಿನ ಕೆಂಪದೇನಹಳ್ಳಿ ತೋಟದ ಬಾವಿಯಲ್ಲಿ ಶವ ಒಂದು ಪತ್ತೆ ಆಗಿತ್ತು. ಈ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಸುಧಾಕರ್, ಮನೋಜ್ ಮತ್ತು ಮಂಜುನಾಥ್​ರನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಜಿ ರಾಮಪುರ ಗ್ರಾಮದ ರಾಮಾಂಜಿ (30) ಕೊಲೆಯಾದ ವ್ಯಕ್ತಿ.ಲಂಡನ್​ನಲ್ಲಿ ಕೆಲಸ ಕೊಡುತ್ತೇನೆ, ಲಕ್ಷ ಲಕ್ಷ ಸಂಬಳ ಸಿಗುತ್ತೆ ಅಂತ ಹೇಳಿ ನಂಬಿಸಿ ಬಳಿಕ ಆತನ ಬಳಿಯೇ ಲಕ್ಷಾಂತರ ರೂ ಪಡೆದು ವಂಚಿಸಿದ್ದಾರೆ. ಕೊನೆಗೆ ಕೊಟ್ಟ ಹಣ …

Read More »

ರಾತ್ರಿ ಮಲಗಿದ್ದ ತಾಯಿ-ಮಗನಿಗೆ ಕಚ್ಚಿದ ಹಾವು!

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹೇರುಂಡಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ರಾತ್ರಿ ಮಲಗಿದ್ದ ತಾಯಿ ಮತ್ತು ಮಗನಿಗೆ ಹಾವು ಕಚ್ಚಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.ಮೃತರು – ಸುಬ್ಬಮ್ಮ (35) ಮತ್ತು ಅವರ ಪುತ್ರ ಬಸವರಾಜ್ (10 ವರ್ಷ) ಎಂದು ಗುರುತಿಸಲಾಗಿದೆ.

Read More »

ಕ್ಯಾಂಟರ್-ಕಾರು ನಡುವೆ ಭೀಕರ ಅಪಘಾತ: ಒಂದೇ‌ ಕುಟುಂಬದ ನಾಲ್ವರು ಸಾವು!

ರಾಮನಗರ ಜಿಲ್ಲೆ ಮಾಗಡಿ‌ ಪಟ್ಟಣದ ನಟರಾಜ ಬಡಾವಣೆ ನಿವಾಸಿ ಭಾರತ್ ಕೋಪರೇಟಿವ್ ಬ್ಯಾಂಕ್ ನಿರ್ದೇಶಕ ಸೀಬೆಗೌಡ (45) ಪತ್ನಿ ಶೋಭಾ (36) ಮಕ್ಕಳಾದ ದುಂಬಿಶ್ರೀ, ಭಾನುಕಿರಣ್ ಗೌಡ ಮೃತ ದುರ್ದೈವಿಗಳು. ಕ್ಯಾಂಟರ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ನಾಲ್ವರು ಧಾರುಣವಾಗಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 75 ಬಿದನಗೆರೆ ಬೈಪಾಸ್ ಬಳಿ ಭಾನುವಾರ ಸಂಭವಿಸಿದೆ.

Read More »

ವರದಕ್ಷಿಣೆ ಕಿರುಕುಳಕ್ಕೆ ಯುವತಿ ಆತ್ಮಹತ್ಯೆ!!

ಮದುವೆಯಾದ ಕೇವಲ ಎರಡು ತಿಂಗಳ ನಂತರ ವರದಕ್ಷಿಣೆಗಾಗಿ ಅತ್ತೆ-ಮಾವ ನೀಡುತ್ತಿದ್ದ ಕಿರುಕುಳ ಸಹಿಸಲಾಗದೆ ಯುವತಿ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ದುರಂತ ಘಟನೆ ತಿರುಪ್ಪೂರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.ತಿರುಪ್ಪೂರಿನ ಜವಳಿ ವ್ಯಾಪಾರಿ ಅಣ್ಣಾದೊರೈ ಅವರ ಪುತ್ರಿ ರಿಧಾನ್ಯ (27) ಈ ವರ್ಷದ ಏಪ್ರಿಲ್‌ನಲ್ಲಿ ಕವಿನ್ ಕುಮಾರ್ (28) ಎಂಬ ಯುವಕನನ್ನು ವಿವಾಹವಾದರು.

Read More »

ಐದು ಹುಲಿಗಳ ಸಾವಿಗೆ ಕಾರಣರಾದ ಮೂವರ ಬಂಧನ!

ಐದು ಹುಲಿಗಳ ಸಾವಿನ ಪ್ರಕರಣದಲ್ಲಿ ಮೂವರನ್ನು ಅರಣ್ಯ ಇಲಾಖೆ ದಸ್ತಗಿರಿ ಮಾಡಿದ್ದಾರೆ. ವಿಷ ಪ್ರಾಶನ ಮಾಡಿದ್ದ ಹಸುವಿನ ಮಾಲೀಕನೂ ಪತ್ತೆಯಾಗಿದ್ದಾನೆ. ಕೊಪ್ಪ ಗ್ರಾಮದ ಕೂನಪ್ಪ, ಮಾದರಾಜ, ನಾಗರಾಜ ಬಂಧಿತರಾಗಿದ್ದಾರೆಂದು ಅರಣ್ಯ ಇಲಾಖೆ ಅಧಿಕೃತವಾಗಿ ಧೃಡಪಡಿಸಿದೆ.ಅರಣ್ಯದೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಹಸು ಸಮೀಪದ ಕೊಪ್ಪ ಗ್ರಾಮದ ಕೋನಪ್ಪ , ಹಸುವಿಗೆ ವಿಷ ಪ್ರಷಾಣ ಮಾಡಿಸಿದ ಮಾದರಾಜ ಬಿನ್ ಶಿವಣ್ಣಗೌಡ ಕೊಪ್ಪ ಗ್ರಾಮ, ಹಾಗೂ ನಾಗರಾಜ ಬಿನ್ ಪೂಜಾರಿಗೌಡ ಕಳ್ಗೋಬೆದೊಡ್ಡಿ (ಕೊಪ್ಪ ಗ್ರಾಮ …

Read More »

ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡಿದ್ದ ‘PSI’ ಚಿಕಿತ್ಸೆ ಫಲಿಸದೇ ಸಾವು!

ರಾತ್ರಿಯ ವೇಳೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ಕರೆ ತರುವಾಗ ಅಪಘಾತ ಸಂಭವಿಸಿದೆ. ಜೂನ್ 24 ರಾತ್ರಿ ಅತ್ತಿಬೆಲೆಯಿಂದ ಪಿಎಸ್‌ಐ ಮಹಿಬೂಬ್ ಹೊರಟಿದ್ದಾರೆ ಅತಿ ಬೆಲೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದಾಗ ಕಾರಿನ ಬ್ರೇಕ್ ಡೌನ್ ಆಗುತ್ತದೆ. ಈ ವೇಳೆ ಕಾರು ಪರೀಕ್ಷೆ ಮಾಡುತ್ತಿದ್ದ ವೇಳೆ ಹಿಂದಿನಿಂದ ಬಂದಂತಹ ಲಾರಿ ಕಾರಿಗೆ ಗುದ್ದಿದ್ದರಿಂದ ಮೆಹಬೂಬ್ ಗಾಯಗೊಂಡಿದ್ದರು. ಇದೀಗ ಚಿಕಿತ್ಸೆ ಫಲಿಸದೇ ಮೆಹಬೂಬ್ ಸಾವನಪ್ಪಿದ್ದಾರೆ.

Read More »

ದಾವಣಗೆರೆ :ಪೆಟ್ರೋಲ್ ಸುರಿದು ‘ATM’ ಮಷೀನ್ ಕಳ್ಳತನಕ್ಕೆ ಯತ್ನ!

ಕಬ್ಬಿಣದ ಸರಳು ಬಳಸಿಕೊಂಡು ಕದೀಮರು ಎಟಿಎಂ ಮಷೀನ್ ಒಡೆಯಲು ಯತ್ನಿಸಿದ್ದಾರೆ. ಇದು ಸಾಧ್ಯವಾಗದೆ ಇದ್ದಾಗ ಪೆಟ್ರೋಲ್ ಸುರದಿದ್ದಾರೆ. ಈ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ದಟ್ಟ ಆವರಿಸುತ್ತಿದ್ದಂತೆ ಸುತ್ತಿದಂತೆ ದರೋಡೆಕೋರರು ಸ್ಥಳದಿಂದ ಪರಾರಿಯಾಗಿದ್ದಾರೆ.ಘಟನೆಯ ಸಂಪೂರ್ಣ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ಈ ಕುರಿತು ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »