Breaking News

ಬೆಂಗಳೂರಲ್ಲಿ ಪತಿಯ ಹತ್ಯೆಗೆ 2 ಲಕ್ಷ ಸುಪಾರಿ ನೀಡಿದ ಪತ್ನಿ : ಮಹಿಳೆ ಸೇರಿ ನಾಲ್ವರು ಅರೆಸ್ಟ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸಿದ್ದೇನಹಳ್ಳಿ ಅಶೋಕ್ (40) ಕೊಲೆ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಿಯಕರನಿಗಾಗಿ ಗಂಡನನ್ನೇ ಕೊಲ್ಲಲು ಹೆಂಡತಿ ಸುಪಾರಿ ನೀಡಿರುವ ವಿಚಾರ ಈಗ ಬೆಳಕಿಗೆ ಬಂದಿದೆ. 2 ಲಕ್ಷ ರೂಪಾಯಿಗೆ ಗಂಡ ಅಶೋಕನನ್ನ ಕೊಲೆ ಮಾಡಲು ಪತ್ನಿ ಪುಷ್ಪ ಸುಪಾರಿ ನೀಡಿದ್ದಾಳೆ. ಕೊಲೆಗೈದು ಬಳಿಕ ಅಪಘಾತ ಎಂದು ಬಿಂಬಿಸಲು ಮುನೀಂದ್ರ ಎಂಬಾತನಿಗೆ ಡೀಲ್ ಕೊಟ್ಟಿದ್ದಳು. ಸದ್ಯ ನಾಲ್ವರು ಆರೋಪಿಗಳನ್ನು ಸೂಲಿಬೆಲೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪುಷ್ಪ, ಪ್ರಿಯಕರ ದೇವರಾಜ್ ಮುನೀಂದ್ರ ಹಾಗೂ ಸಿದ್ದಪ್ಪ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.ಎಣ್ಣೆ ಪಾರ್ಟಿಗೆ ಎಂದು ಕರೆದುಕೊಂಡು ಹೋಗಿ ಅಶೋಕ್ ನನ್ನು ಆರೋಪಿಗಳು ಕೊಲೆ ಮಾಡಿದ್ದಾರೆ. ಜನವರಿ 24 ರಂದು ರಾಡ್ ನಿಂದ ಹೊಡೆದು ಅಶೋಕ್ನನ್ನು ಕೊಲೆ ಮಾಡಿದ್ದರು. ಹೊಸಕೋಟೆ ತಾಲೂಕಿನ ಸಿದ್ದೇನಹಳ್ಳಿ ಸಮೀಪ ಈ ಒಂದು ಕೊಲೆ ನಡೆದಿತ್ತು. ಅಪಘಾತದಂತೆ ಆರೋಪಿಗಳು ಬಿಂಬಿಸಿದ್ದರು. ಆದರೆ ಅಶೋಕನ ಶವ ನೋಡಿ ಗ್ರಾಮಸ್ಥರು ಕೊಲೆ ಅಂತ ಆರೋಪಿಸಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಅಶೋಕನ ಪತ್ನಿ ಪುಷ್ಪ ಸಂಚು ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ನಾಲ್ವರು ಆರೋಪಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *