ಮಂಗಳೂರು: ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿಲ್ಪಾಡಿ ಗ್ರಾಮದ ಕೊರ್ದಬ್ಬು ದೈವಸ್ಥಾನದಲ್ಲಿ ಬೀಗ ಮುರಿದು ಒಳನುಗ್ಗಿದ ಕಳ್ಳರು ದೈವದ ಬೆಳ್ಳಿಯ ಮುಖವಾಡ, ಬೆಳ್ಳಿಯ ಕವಚ ಹೊಂದಿರುವ ಖಡ್ಗ, ಬೆಳ್ಳಿಯ ಸೊಂಟಪಟ್ಟಿಗಳು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಒಟ್ಟು ಸುಮಾರು 11 ಕೆಜಿ ಬೆಳ್ಳಿ ಹಾಗೂ 5 ಪವನ್ ಚಿನ್ನಾಭರಣ ಕಳವಾಗಿದ್ದು, ಸೊತ್ತುಗಳ ಮೌಲ್ಯ ₹14.95 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ. ಸೆ.1ರ ಸಂಜೆ ಪೂಜೆ ಮುಗಿಸಿ ರಾತ್ರಿ 7 ಗಂಟೆ …
Read More »ಹಾಸನ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಬಡಿದಾಟ – ಜಗಳ ಬಿಡಿಸಲು ಹೋದ ಜೈಲು ಸಿಬ್ಬಂದಿ ಮೇಲೂ ಭೀಕರ ಹಲ್ಲೆ!
ಹಾಸನ: ನಗರದ ಸಂತೇಪೇಟೆಯ ಜಿಲ್ಲಾ ಕಾರಾಗೃಹದಲ್ಲಿ ಫೋನ್ ಕರೆ ಮಾಡುವ ವಿಚಾರಕ್ಕೆ ವಿಚಾರಣಾಧೀನ ಕೈದಿಗಳ ನಡುವೆ ಭೀಕರ ಮಾರಾಮಾರಿ ನಡೆದಿದೆ. ಜಗಳ ಬಿಡಿಸಲು ಮುಂದಾದ ಜೈಲು ಸಿಬ್ಬಂದಿಯ ಮೇಲೂ ಕೈದಿಗಳು ಹಲ್ಲೆ ನಡೆಸಿದ್ದು, ಮೂವರು ಸಿಬ್ಬಂದಿಗೆ ಗಾಯಗಳಾಗಿವೆ. ಫೋನ್ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ಮೋಹನಕುಮಾರ ಹಾಗೂ ರಂಗಸ್ವಾಮಿ ನಡುವೆ ಮೊದಲು ಕರೆ ಮಾಡುವ ವಿಚಾರಕ್ಕೆ ಜಗಳ ಶುರುವಾಗಿದೆ. ಬಳಿಕ ಒಂಭತ್ತು ಮಂದಿ ಕೈದಿಗಳು ಸೇರಿಕೊಂಡು ರಂಗಸ್ವಾಮಿ ಮೇಲೆ ಹಲ್ಲೆ …
Read More »9 ವರ್ಷದ ಬಾಲಕಿ ನೇಣಿಗೆ ಶರಣು, ಟೀಚರ್ ಹೊಡೆದಿದ್ದಕ್ಕೆ ದುಡುಕಿದ್ಲಾ ಪುಟ್ಟ ವಿದ್ಯಾರ್ಥಿನಿ?
ಮಂಡ್ಯ: ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಸಮೀಪದ ಗುಡಿಗೆರೆ ಗ್ರಾಮದಲ್ಲಿ 9 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತಳನ್ನು ವಿದ್ಯಾಶ್ರೀ ಎಂದು ಗುರುತಿಸಲಾಗಿದ್ದು, ಕೆ.ಎಂ.ದೊಡ್ಡಿಯ ಭಾರತಿ ಶಾಲೆಯಲ್ಲಿ 3ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಬಾಲಕಿಯ ತಾಯಿ ನೀಡಿರುವ ದೂರಿನ ಪ್ರಕಾರ, ಶಾಲೆಯಲ್ಲಿ ಶಿಕ್ಷಕಿ ಮಗಳನ್ನು ಹೊಡೆದು ನಿಂದಿಸಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. …
Read More »ಸಂಬೋಳ್ಯದ ಸುಮಂತ್ ಅನುಮಾನಾಸ್ಪದ ಸಾವು: ಸಹೋದರ,ಮಾವಂದಿರ ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣ
ಮಡಂತ್ಯಾರು: ಗೇರುಕಟ್ಟೆ ಸಮೀಪದ ಸಂಬೋಳ್ಯದ 15 ವರ್ಷದ ಬಾಲಕ ಸುಮಂತ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರ ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆ ನಡೆದಿದೆ. ಸಹೋದರ ಸುದರ್ಶನ್, ಮಾವಂದಿರಾದ ರಾಧಾಕೃಷ್ಣ ಹಾಗೂ ಲಕ್ಷ್ಮಿನಾರಾಯಣ ಅವರನ್ನು ಬೆಂಗಳೂರಿನ ಮಡಿವಾಳದ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಸುಮಂತ್ ಜ.14ರಂದು ದೇವಸ್ಥಾನಕ್ಕೆ ತೆರಳಿದ್ದ ವೇಳೆ ನಿಗೂಢವಾಗಿ ಮೃತಪಟ್ಟಿದ್ದು, ಬಳಿಕ ಮನೆಯ ಸಮೀಪದ ಕೆರೆಯಲ್ಲಿ ಶವ ಪತ್ತೆಯಾಗಿತ್ತು. ಪ್ರಕರಣದ ತನಿಖೆ ಮುಂದುವರಿದರೂ ನಿಗೂಢತೆ ಬಗೆಹರಿಯದ ಹಿನ್ನೆಲೆಯಲ್ಲಿ ಪೊಲೀಸರು …
Read More »ಬೆಂಗಳೂರಲ್ಲಿ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿ ನಗ್ನಗೊಳಿಸಿ ವಿಡಿಯೋ ಚಿತ್ರೀಕರಣ; ಮೂವರು ಆರೋಪಿಗಳು ಅರೆಸ್ಟ್.!
ಬೆಂಗಳೂರು: ಮಹಿಳೆಯೊಬ್ಬರನ್ನು ಅಪಹರಿಸಿ, ನಗ್ನಗೊಳಿಸಿ ವಿಡಿಯೋ ಚಿತ್ರೀಕರಿಸಿ, ಹಣ ನೀಡದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪದಡಿ ಚಂದ್ರಾಲೇಔಟ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಬಂಧಿತರನ್ನು ರೇಷ್ಮಾ ಭಾನು, ನಝತ್ ಹಾಗೂ ಸುಹೇಲ್ ಎಂದು ಗುರುತಿಸಲಾಗಿದೆ. ಸಂತ್ರಸ್ತೆ ರೇಷ್ಮಾ ಭಾನು ಅವರಿಂದ ಸುಮಾರು ₹1 ಲಕ್ಷ ಸಾಲ ಪಡೆದಿದ್ದರು ಎನ್ನಲಾಗಿದೆ. ಇದೇ ಪರಿಚಯ ಬಳಸಿಕೊಂಡು ಸಂತ್ರಸ್ತೆಯನ್ನು ಅಪಹರಿಸಿ, ಕುಂಬಳಗೋಡು ಸಮೀಪದ ಮನೆಯಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿ ವಿಡಿಯೋ ಚಿತ್ರೀಕರಿಸಿದ್ದಾರೆ …
Read More »ಅನ್ನಭಾಗ್ಯ ಅಕ್ಕಿ ಚೀಲ ವಿಚಾರಕ್ಕೆ ಕಿರಿಕ್, ‘ಕೈ’ ಮುಖಂಡ ಸೇರಿ ಮೂವರು ಅರೆಸ್ಟ್!
ಉಡುಪಿ: ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜೀವ ಬೆದರಿಕೆ ಹಾಗೂ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಅನ್ನಭಾಗ್ಯ ಯೋಜನೆಯ ಅಕ್ಕಿ ಚೀಲಗಳನ್ನು ಮನೆಯ ಅಂಗಳದಲ್ಲಿ ಇಟ್ಟಿದ್ದ ವಿಚಾರಕ್ಕೆ ಗಲಾಟೆ ನಡೆದಿದ್ದು, ಆರೋಪಿಗಳು ಸಂತ್ರಸ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಮಾಡುವುದಾಗಿ ಹಾಗೂ ಹಣ ಸುಲಿಗೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಬಂಧಿತರನ್ನು ನಾಗೇಂದ್ರ ಪುತ್ರನ್ (37), ಪಿ. ಸುಮಂತ್ ಕುಂದರ್ (40) …
Read More »ಜೇವರ್ಗಿ: ಬಸ್ ಹಾಗೂ ಲಾರಿ ನಡುವೆ ಅಪಘಾತಕ್ಕೆ ಬಸ್ ಪ್ರಯಾಣಿಕನ ಕೈ ಕಟ್
ಕಲಬುರಗಿ: ಜೇವರ್ಗಿ ಪಟ್ಟಣದ ರಿಲಯನ್ಸ್ ಪೆಟ್ರೋಲ್ ಪಂಪ್ ಬಳಿ ಕೆಎಸ್ಆರ್ಟಿಸಿ ಬಸ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿ, ಪ್ರಯಾಣಿಕನೊಬ್ಬನ ಕೈ ತುಂಡಾಗಿದೆ. ಗಾಯಾಳುವನ್ನು ಜೇವರ್ಗಿ ತಾಲೂಕಿನ ರೇವನೂರು ಗ್ರಾಮದ ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. ಅಪಘಾತದ ಬಳಿಕ ಸ್ಥಳೀಯರು ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಜೇವರ್ಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ಸ್ಥಳದಲ್ಲಿದ್ದ ಕಾಂಗ್ರೆಸ್ ಯುವ ನಾಯಕ ಇಮ್ರಾನ್ ಕುಕನೂರು ಅವರು …
Read More »ಹಾಸನದಲ್ಲಿ ಡ್ರಗ್ಸ್ ಪ್ರಕರಣ ಹೆಚ್ಚಳ
ಹಾಸನ: ಜಿಲ್ಲೆಯಲ್ಲಿ ಮಾದಕ ವಸ್ತುಗಳ ಜಾಲ ಆತಂಕಕಾರಿ ರೀತಿಯಲ್ಲಿ ವಿಸ್ತರಿಸುತ್ತಿದ್ದು, 2026ರಲ್ಲಿ 167 ಪ್ರಕರಣಗಳು ದಾಖಲಾಗಿವೆ. 280 ಮಂದಿಯನ್ನು ಬಂಧಿಸಿ 77 ಕೆಜಿ ಗಾಂಜಾ ಹಾಗೂ 134 ಗ್ರಾಂ ಸಿಂಥೆಟಿಕ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಮಂಗಳೂರು, ಮಡಿಕೇರಿ, ಮೈಸೂರು ಹಾಗೂ ಚಿಕ್ಕಮಗಳೂರು ಭಾಗಗಳಿಂದ ಹಾಸನಕ್ಕೆ ಗಾಂಜಾ ಅಕ್ರಮವಾಗಿ ಸರಬರಾಜಾಗುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. 25ರಿಂದ 40 ವರ್ಷದೊಳಗಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತು ಪ್ರಕರಣಗಳಲ್ಲಿ ಸಿಕ್ಕಿಬೀಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮಾದಕ …
Read More »KPSC ಅಕ್ರಮ ನೇಮಕಾತಿ ಪ್ರಕರಣ; ಬಸವರಾಜ್ ಕನ್ನಾಳೆ ಆಪ್ತ ಪವನ್ ರೆಡ್ಡಿ ಮನೆ ಮೇಲೆ CID ದಾಳಿ
ಬೀದರ್: ಕೆಪಿಎಸ್ಸಿ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಬಂಧಿತ ಬಸವರಾಜ್ ಕನ್ನಾಳೆ ಆಪ್ತ ಪವನ್ ರೆಡ್ಡಿ ಮನೆ ಮೇಲೆ ಕಲಬುರಗಿ ವಿಭಾಗೀಯ ಸಿಐಡಿ ತಂಡ ದಾಳಿ ನಡೆಸಿದೆ. ಚಿಟ್ಟಗುಪ್ಪ ತಾಲೂಕಿನ ಮನ್ನಾಏಖೇಳಿ ಗ್ರಾಮದಲ್ಲಿರುವ ಪವನ್ ರೆಡ್ಡಿ ಮನೆ ಮೇಲೆ ಸುಮಾರು ನಾಲ್ಕು ಗಂಟೆಗಳ ಕಾಲ ಪರಿಶೀಲನೆ ನಡೆಸಿದ ಅಧಿಕಾರಿಗಳು, ಹಲವು ದಾಖಲೆಗಳನ್ನು ವಶಕ್ಕೆ ಪಡೆದು ಮನೆಯವರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಬಸವರಾಜ್ ಕನ್ನಾಳೆ ಹಾಗೂ ಪವನ್ ರೆಡ್ಡಿ ನಡುವೆ ಕೋಟ್ಯಂತರ ರೂ. ಹಣಕಾಸು …
Read More »ರಾಜ್ಯದಲ್ಲೊಂದು ಅತಿಥಿ ಶಿಕ್ಷಕಿಯಿಂದ ಅಮಾನವೀಯ ಕೃತ್ಯ: ಸಾಗರದಲ್ಲಿ ರಕ್ತ ಬರುವಂತೆ ವಿದ್ಯಾರ್ಥಿಗಳಿಗೆ ಥಳಿತ
ಶಿವಮೊಗ್ಗ: ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಾರೆ ಎಂಬ ಕಾರಣಕ್ಕೆ ಸಾಗರ ತಾಲೂಕಿನ ಕಿರುವಾಸೆ ಕಿರಿಯ ಪ್ರಾಥಮಿಕ ಶಾಲೆಯ ಮೂವರು ಪುಟ್ಟ ಮಕ್ಕಳಿಗೆ ಅತಿಥಿ ಶಿಕ್ಷಕಿ ರಕ್ಷಿತಾ ಕೋಲಿನಿಂದ ಮನಬಂದಂತೆ ಥಳಿಸಿರುವ ಆರೋಪ ಕೇಳಿಬಂದಿದೆ. 2, 3 ಮತ್ತು 4ನೇ ತರಗತಿಯ ಮಕ್ಕಳ ಬೆನ್ನಿಗೆ ಹೊಡೆದ ಪರಿಣಾಮ ಬಾಸುಂಡೆ ಎದ್ದು, ರಕ್ತ ಬರುವಷ್ಟು ಗಾಯಗಳಾಗಿವೆ ಎನ್ನಲಾಗಿದೆ. ಮನೆಗೆ ಬಂದ ಮಕ್ಕಳ ಗಾಯಗಳನ್ನು ಕಂಡು ಪೋಷಕರು ಬೆಚ್ಚಿಬಿದ್ದಿದ್ದಾರೆ. ಘಟನೆಗೆ ಪೋಷಕರು ಹಾಗೂ ಗ್ರಾಮಸ್ಥರು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





