ಕಳವಾರ ಗ್ರಾಮದಲ್ಲಿ ನಡೆದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಗೌರಿಬಿದನೂರು ತಾಲ್ಲೂಕಿನ ಮುದುಗೆರೆಯ ಗೋವಿಂದ (30) ಮತ್ತು ಅಶ್ವಿನಿ (19) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳಿಂದ 49 ಗ್ರಾಂನ ಬಂಗಾರದ ಮಾಂಗಲ್ಯದ ಸರ, 760 ಮಿಲಿ ತೂಕದ 2 ಬಂಗಾರದ ಗುಂಡುಗಳು, 8 ಗ್ರಾಂ ತೂಕದ ಬಂಗಾರದ ತಾಳಿ ಹಾಗೂ ನೋಂದಣಿ ಸಂಖ್ಯೆ ಇಲ್ಲದ ದ್ವಿಚಕ್ರವಾಹನ ವಶಕ್ಕೆ ಪಡೆಯಲಾಗಿದೆ.
Read More »ಹುಬ್ಬಳ್ಳಿ ಬ್ರೇಕಿಂಗ್: ಬಡ್ಡಿ ಕಿರುಕುಳಕ್ಕೆ ಬೇಸತ್ತು ಹುಬ್ಬಳ್ಳಿಯಲ್ಲಿ ಮತ್ತೊಬ್ಬ ವ್ಯಕ್ತಿ ಆತ್ಮಹತ್ಯೆ.!!
ಕಳೆದ ಹಲವು ದಿನಗಳಿಂದ ಬಾಷಾ ಸಾಬ್ ನಾಲ್ಕೈದು ಜನರ ಬಳಿ ಕೈಗಡ ಸಾಲ ಪಡೆದಿದ್ದನಂತೆ. ಅಲ್ದೇ ಲಲಿತಾ, ಕಿಟ್ಯಾ ರಿಂದ ದಿನ ದುಡಿಯುವ ಆಟೋ ಸಹ ಕಿತ್ತುಕೊಳ್ಳುವ ಮೂಲಕ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಮೃತ ವ್ಯಕ್ತಿ ವೀಡಿಯೋ ಮೂಲಕ ಆರೋಪ ಮಾಡಿದ್ದಾನೆ. ಹುಬ್ಬಳ್ಳಿಯ ಎಸ್ ಎಂ ಕೃಷ್ಣ ನಗರದ ಬಾಷಾ ಸಾಬ್ ಸಂಕೇಶ್ವರ್ (65) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. 1.80 ಲಕ್ಷಕ್ಕೆ ನಡೆದಿದ್ದ ಮಾತುಕತೆ ವಿಚಾರವನ್ನ ವಿಡಿಯೋದಲ್ಲಿ ತಿಳಿಸಿರೋ …
Read More »ಚಾಮರಾಜನಗರ : ಕಾಡಾನೆ ದಾಳಿಗೆ ಟ್ರ್ಯಾಕ್ಟರ್ ಜಖಂ; ಬೆಳೆ ನಾಶ!!
ನಟರಾಜನ್ ಅವರಿಗೆ ಸೇರಿದ ಕೃಷಿ ಜಮೀನಿಗೆ ಕಾಡಾನೆಯೊಂದು ನುಗ್ಗಿ ಕೃಷಿ ಬೆಳೆಗಳನ್ನು ಹಾನಿಗೊಳಿಸಿದೆ.ಇದನ್ನು ಕಂಡ ರೈತರು ಟ್ರ್ಯಾಕ್ಟರ್ ಮೂಲಕ ಆನೆಯನ್ನು ಓಡಿಸಲು ಪ್ರಯತ್ನಿಸಿದಾಗ, ಕಾಡು ಆನೆ ಆಕ್ರಮಣಕಾರಿಯಾಗಿ ಟ್ರ್ಯಾಕ್ಟರ್ ಗೆ ಹಾನಿ ಮಾಡಿದೆ ಎಂದು ತಿಳಿದು ಬಂದಿದೆ.ಈ ಘಟನೆ ರೈತರನ್ನು ಭಯಭೀತಗೊಳಿಸಿದ್ದು, ಅರಣ್ಯ ಇಲಾಖೆ ಸೂಕ್ತ ಪರಿಹಾರ ಒದಗಿಸಿ, ಆನೆಗಳು ಕೃಷಿ ಭೂಮಿಗೆ ಪ್ರವೇಶಿಸದಂತೆ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.
Read More »ಪುತ್ತೂರು : ಹಿಂದೂ ಮುಖಂಡರ ಮನೆಯಲ್ಲಿ ಪೊಲೀಸ್ ಪರಿಶೀಲನೆ!!
ದಕ್ಷಿಣ ಕನ್ನಡ ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರ ಸೂಚನೆಯಂತೆ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಂಘಟನೆಗಳ ಪ್ರಮುಖರ ಮನೆಗಳಿಗೆ ರಾತ್ರಿ ವೇಳೆ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಾರಂಭಿಸಿದ್ದರು.ಮಧ್ಯರಾತ್ರಿ ವೇಳೆ ಹಿಂದೂ ಸಂಘಟನೆಗಳ ಮುಖಂಡರ ಮನೆಗೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳ ಪ್ರಮುಖರು ಕಡಬ ಪೊಲೀಸ್ ಠಾಣೆ ಎದುರು ಹಾಜರಾಗಿದ್ದಾರೆ. ಪೊಲೀಸರ ಈ ನಡೆ ವಿರೋಧಿಸಿ ಠಾಣೆ ಎದುರು …
Read More »ಕರಾವಳಿ: 1800 ಕೋಟಿ ರೂ. ಮೌಲ್ಯದ 300 ಕೆಜಿ ಮಾದಕ ವಸ್ತುಗಳು ವಶ!!
ಐಸಿಜಿ ಹಡಗನ್ನು ಗುರುತಿಸಿದ ಕಳ್ಳಸಾಗಣೆದಾರರು ಅದನ್ನು ಅಂತರರಾಷ್ಟ್ರೀಯ ಸಾಗರ ಗಡಿ ರೇಖೆಯ ಮೂಲಕ ಎಸೆದು ಪರಾರಿಯಾಗಿದ್ದರು. ಏಪ್ರಿಲ್ 10 ರಂದು, ಭಾರತೀಯ ಕರಾವಳಿ ಕಾವಲು ಪಡೆ ಬಂಗಾಳ ಕೊಲ್ಲಿಯಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಭಾರತೀಯ ಮೀನುಗಾರಿಕಾ ದೋಣಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.ಗುಜರಾತ್ ಕರಾವಳಿಯ ಬಳಿ ಸುಮಾರು 1800 ಕೋಟಿ ರೂ. ಮೌಲ್ಯದ ಸುಮಾರು 300 ಕೆಜಿ ಮಾದಕ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ.ಕೋಸ್ಟ್ ಗಾರ್ಡ್ ಹಡಗನ್ನು ನೋಡಿ, ದೋಣಿಯಲ್ಲಿದ್ದ ಕಳ್ಳಸಾಗಣೆದಾರರು ಮಾದಕ ವಸ್ತುಗಳನ್ನು ಸಮುದ್ರಕ್ಕೆ …
Read More »ಜೈಲಿನಲ್ಲಿರುವ ಮಾಜಿ ಸಂಸದರ ಬ್ಯಾರಕ್ ಮೇಲೆ ದಾಳಿ!!
ಬಲರಾಂಪುರದ ಮಾಜಿ ಸಂಸದ ರಿಜ್ವಾನ್ ಜಹೀರ್ ಜುಲೈ 2022 ರಿಂದ ಲಲಿತಪುರ ಜಿಲ್ಲಾ ಕಾರಾಗೃಹದಲ್ಲಿ ಬಂಧನದಲ್ಲಿದ್ದಾರೆ. ತುಳಶಿಪುರ ನಗರ ಪಂಚಾಯತ್ನ ಮಾಜಿ ಅಧ್ಯಕ್ಷ ಫಿರೋಜ್ ಅಹ್ಮದ್ ಪಪ್ಪು ಅವರ ಹತ್ಯೆಯಲ್ಲಿ ಪಿತೂರಿ ನಡೆಸಿದ ಆರೋಪ ಅವರ ಮೇಲಿದೆ. ಉತ್ತರ ಪ್ರದೇಶ ಪೊಲೀಸರು ಅವರ ವಿರುದ್ಧ ಗ್ಯಾಂಗ್ಸ್ಟರ್ ಕಾಯ್ದೆಯನ್ನೂ ಹೇರಿದ್ದಾರೆ. ಅವರ ಮನೆ ದಾಳಿಯಲ್ಲಿ ಜಹೀರ್ ಜೈಲಿನಲ್ಲಿ ಜೈಲಿನ ನಿಯಮಗಳನ್ನು ಉಲ್ಲಂಘಿಸುವ ವಿವಿಐಪಿ ಸೌಲಭ್ಯಗಳನ್ನು ಅನುಭವಿಸುತ್ತಿರುವುದು ಬೆಳಕಿಗೆ ಬಂದಿದೆ. ಅಧಿಕಾರಿಗಳು ದಿಂಬಿನ …
Read More »ಇನ್ನೂ 5 ದಿನ ಸುರಿಯಲಿದೆ ಸೈಕ್ಲೋನ್ ಮಳೆ!
ಭಾನುವಾರ ರಾತ್ರಿಯಡೀ ಸುರಿದ ಭಾರೀ ಮಳೆಗೆ ಬೆಂಗಳೂರಿಗರು ತತ್ತರಿಸಿ ಹೋಗಿದ್ದಾರೇ. ಇಷ್ಟಕ್ಕೇ ಮುಗಿದಿಲ್ಲ, ಇನ್ನೂ 5 ದಿನ ಇದೇ ರೀತಿಯ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕರ್ನಾಟಕ ರಾಜ್ಯದಾದ್ಯಂತ ಮುಂಗಾರುಪೂರ್ವ ಮಳೆಯ ಅಬ್ಬರ ಜೋರಾಗಿದೆ.ಬೆಳಗಾವಿ, ಧಾರವಾಡ, ಗದಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಈ ಜಿಲ್ಲೆಗಳಿಗೆ ನಾಳೆ ನಾಡಿದ್ದು ಆರೆಂಜ್ ಅಲರ್ಟ್ ನೀಡಲಾಗಿದೆ. ಉಳಿದಂತೆ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. …
Read More »ಸಿಕ್ಕಿಂ: ಭೂಕುಸಿತ, ಯೋಧರ ದುರ್ಮರಣ, 9ಮಂದಿ ಕಣ್ಮರೆ!!
ಲಾಚೆನ್ ಜಿಲ್ಲೆಯ ಚಾಟೆನ್ನಲ್ಲಿರು ಸೇನಾ ಶಿಬಿರದ ಬಳಿ ಭಾನುವಾರ ಸಂಜೆ 7 ಗಂಟೆಗೆ ಭೂಕುಸಿತ ಸಂಭವಿಸಿದ್ದು, ಇದುವರೆಗೆ ಮೂವರು ಸೈನಿಕರ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ, ಆದರೆ 9 ಸೈನಿಕರು ಇನ್ನೂ ಕಾಣೆಯಾಗಿದ್ದಾರೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ಹೇಳಿಕೆಯಲ್ಲಿ ತಿಳಿಸಿದ್ದಾರೆ.ಭಾರತೀಯ ಸೇನೆಯು ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಪ್ರತಿಕೂಲ ವಾತಾವರಣದ ನಡುವೆಯೇ ಕಾರ್ಯಾಚರಣೆ ಮುಂದುವರಿದಿದೆ. ನಾಲ್ವರನ್ನು ರಕ್ಷಿಸಲಾಗಿದ್ದು, ಅವರಿಗೆ ಗಾಯಗಳಾಗಿವೆ. ಆದರೆ ಮೂವರು ಯೋಧರು ಕೊನೆಯುಸಿರೆಳೆದಿದ್ದಾರೆ. ಮೃತರನ್ನು ಹವಾಲ್ದಾರ್ ಲಖ್ವಿಂದರ್ ಸಿಂಗ್, ಲ್ಯಾನ್ಸ್ …
Read More »ಕೂಲರ್ ಗಾಗಿ ಬೀಗರ ಕಿತ್ತಾಟ!
ಇಲ್ಲೊಂದು ಮದುವೆ ಮನೆ ಕ್ಷುಲ್ಲಕ ಕಾರಣವೊಂದಕ್ಕೆ ರಣರಂಗವಾಗಿ ಬದಲಾಗಿದೆ.ಕೇವಲ ಕೂಲರ್ ವಿಚಾರಕ್ಕೆ ವರ ಮತ್ತು ವಧುವಿನ ಕಡೆಯವರ ನಡುವೆ ಜಗಳ ಜೋರಾಗಿದ್ದು ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ.ಮಂಟಪದಲ್ಲಿ ಕೂಲರ್ ವಿಚಾರಕ್ಕೆ ವಧು & ವರನ ಕಡೆಯವರ ಮಧ್ಯೆ ಜಗಳ ಪ್ರಾರಂಭವಾಗಿ ನಂತರ ಅತಿರೇಕಕ್ಕೆ ತಿರುಗಿದೆ.ಅತಿಥಿಗಳು ಪರಸ್ಪರ ಪ್ಲಾಸ್ಟಿಕ್ ಕುರ್ಚಿ, ಪಾತ್ರೆಗಳಿಂದ ಬಡಿದಾಡಿಕೊಂಡಿದ್ದಾರೆ. ಈ ಘಟನೆಯ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ
Read More »ಚಾಮರಾಜನಗರ : ಹಾವು ಕಚ್ಚಿ ಬಾಲಕಿ ಸಾವು!!
ಸಾರ್ವಜನಿಕ ನಳ್ಳಿಯ ಬಳಿ ನೀರು ತರಲು ಹೋಗಿದ್ದ ವೇಳೆ ಹಾವು ಕಚ್ಚಿದೆ. ಇದರಿಂದ ಅಸ್ವಸ್ಥಗೊಂಡ ಬಾಲಕಿಯನ್ನು ಕುಟುಂಬಸ್ಥರು ಸಮೀಪದ ಆಸ್ಪತ್ರೆಗೆ ಕರೆ ತರುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ. ತಡರಾತ್ರಿ ಮೃತದೇಹವನ್ನು ಹನೂರಿನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಯಿತು. ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





