ಕಳೆದ ಹಲವು ದಿನಗಳಿಂದ ಬಾಷಾ ಸಾಬ್ ನಾಲ್ಕೈದು ಜನರ ಬಳಿ ಕೈಗಡ ಸಾಲ ಪಡೆದಿದ್ದನಂತೆ. ಅಲ್ದೇ ಲಲಿತಾ, ಕಿಟ್ಯಾ ರಿಂದ ದಿನ ದುಡಿಯುವ ಆಟೋ ಸಹ ಕಿತ್ತುಕೊಳ್ಳುವ ಮೂಲಕ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಮೃತ ವ್ಯಕ್ತಿ ವೀಡಿಯೋ ಮೂಲಕ ಆರೋಪ ಮಾಡಿದ್ದಾನೆ. ಹುಬ್ಬಳ್ಳಿಯ ಎಸ್ ಎಂ ಕೃಷ್ಣ ನಗರದ ಬಾಷಾ ಸಾಬ್ ಸಂಕೇಶ್ವರ್ (65) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. 1.80 ಲಕ್ಷಕ್ಕೆ ನಡೆದಿದ್ದ ಮಾತುಕತೆ ವಿಚಾರವನ್ನ ವಿಡಿಯೋದಲ್ಲಿ ತಿಳಿಸಿರೋ ಬಾಷಾ. ಸಾಲಗಾರರಿಂದ ಬೇಸತ್ತು ವೀಡಿಯೋ ಮಾಡಿ ಪೋಲಿಸ್ ಆಯುಕ್ತ ಎನ್ ಶಶಿಕುಮಾರ ಅವರಿಗೆ ಮನವಿ ಮಾಡಿ ನ್ಯಾಯ ಒದಗಿಸುವಂತೆ ಕೋರಿ ಆತ್ಮಹತ್ಯೆ ಶರಣಾದ ಭಾಷಾ. ನಿನ್ನೆ ರಾತ್ರಿ 8 ಗಂಟೆಯ ವೇಳೆಗೆ ಕುಟುಂಬಸ್ಥರ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ತೆರಳಿದಾಗ ಆತ್ಮಹತ್ಯೆ ಗೆ ಶರಣಾದ ಬಾಷಾ ಸಾಬ್.ಪೊಲೀಸ್ ಕಮಿಷ್ನರ್ ಎನ್ ಶಶಿಕುಮಾರ್ ಸ್ಥಳಕ್ಕೆ ಬರುವವರೆಗೆ ಶವ ಸಂಸ್ಕಾರ ಮಾಡಲ್ಲ ಎಂದು ಕುಟುಂಬಸ್ಥರು ಕಾಯ್ದು ಕುಳಿತಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

