ರಾಷ್ಟ್ರೀಯ ಹೆದ್ದಾರಿ-648ರ ಕೂಗೋನಹಳ್ಳಿ ಕಾಲೊನಿ ಸಮೀಪ ಬುಧವಾರ ಖಾಸಗಿ ಬಸ್ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾರೆ.ಮೃತ ಮುನಿರಾಜು ಬುಧವಾರ ಬೆಳಗ್ಗೆ ಬೈಕ್ನಲ್ಲಿ ದೊಡ್ಡಬೆಳವಂಗಲಕ್ಕೆ ಬಂದು ಚುಂಚೇಗೌಡನಹೊಸಹಳ್ಳಿಗೆ ತೆರಳುವ ವೇಳೆ ಕೂಗೋನಹಳ್ಳಿ ಕಾಲೋನಿ ಸಮೀಪ ಖಾಸಗಿ ಬಸ್ ಡಿಕ್ಕಿ ಹೊಡೆದಿದ.ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮುನಿರಾಜು ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಹಾವೇರಿ: ಲಾರಿಗೆ ಕಾರು ಡಿಕ್ಕಿಯಾಗಿ, 6 ಜನ ಸ್ಥಳದಲ್ಲೇ ದುರ್ಮರಣ!
ರಾಜ್ಯದಲ್ಲಿ ಮತ್ತೊಂದು ಭೀಕರವಾದ ಅಪಘಾತ ಸಂಭವಿಸಿದ್ದು, ಲಾರಿಗೆ ಹಿಂದಿನಿಂದ ವೇಗವಾಗಿ ಬಂದಂತಹ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ 6 ಜನರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೂಟೆಬೆನ್ನೂರು ಗ್ರಾಮದಲ್ಲಿ ನಡೆದಿದೆ.ಮೃತರನ್ನು ಹರಿಯಾಣ ಮೂಲದ ಆಡಿ ಎ6 ಕಾರಿನಲ್ಲಿದ್ದ ಆರು ಜನರು ಸಾವನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಮೋಟೆಬೆನ್ನೂರು ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು …
Read More »ಬೆಂಗಳೂರು : ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ, ಪೊಲೀಸರಿಂದ ಚೆಕಿಂಗ್!
ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ವಾತಾವರಣವಿರುವ ಹಿನ್ನಲೆಯಲ್ಲಿ ರಾಜ್ಯದ ಗಡಿ ಭಾಗಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ಗಡಿಭಾಗಗಳಲ್ಲಿ ಪೊಲೀಸರು ಪ್ರತೀ ವಾಹನಗಳನ್ನು ಚೆಕಿಂಗ್ ಮಾಡುತ್ತಿದ್ದಾರೆ. ನಿನ್ನೆ ತಡರಾತ್ರಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ಅಡಗುದಾಣಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ.ಹೀಗಾಗಿ ನಿನ್ನೆಯಿಂದ ಕೇರಳ-ಕರ್ನಾಟಕ, ಕರ್ನಾಟಕ-ಮಹಾರಾಷ್ಟ್ರ, ಕರ್ನಾಟಕ-ತಮಿಳುನಾಡು ಗಡಿಭಾಗಗಳಲ್ಲಿ ಪೊಲೀಸರು ತೀವ್ರ ತಪಾಸಣೆ ನಡೆಸುತ್ತಿದ್ದರು. ಪ್ರತೀ ವಾಹನಗಳನ್ನೂ ತಪಾಸಣೆ ಮಾಡಿ ಕಳುಹಿಸಲಾಗುತ್ತಿದೆ. ಕೇಂದ್ರದ ಸೂಚನೆಯಂತೆ ನಾವು …
Read More »ಬೆಂಗಳೂರು : ಯುವಕನನ್ನು ಕೊಂದ ಬಳಿಕ ಶವಕ್ಕೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿ!
ಆನೇಕಲ್ ತಾಲೂಕಿನ ಶೀಲಿಂದ್ರದೊಡ್ಡಿ ಎಂಬಲ್ಲಿ ಘಟನೆ ನಡೆದಿದೆ. ಶಿಲೀಂದ್ರದೊಡ್ಡಿ ಬಳಿ ಸುಮಾರು 25 ವರ್ಷದ ಯುವಕನ ಶವ ಪತ್ತೆಯಾಗಿದ್ದು, ಯುವಕನನ್ನು ಕೊಲೆಗೈದು ಬಳಿಕ ಬೆಂಕಿ ಹಚ್ಚಿ ಹಂತಕರು ಪರಾರಿ ಆಗಿದ್ದಾರೆ. ಮೃತದೇಹ ಪತ್ತೆಯಾದ ಸಮೀಪ ಟಿವಿಎಸ್ ಬೈಕ್ ಸಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಯಾವ ಕಾರಣಕ್ಕೆ ಕೊಲೆ ಆಗಿದೆ ಎಂಬುದರ ಕುರಿತು ಮಾಹಿತಿ ಇಲ್ಲ. ಮೃತರ ಗುರುತು ಕೂಡ ಪತ್ತೆಯಾಗಿಲ್ಲ. ವಿವಿಧ ಆಯಾಮಗಳಲ್ಲಿ …
Read More »ಭಾರತದ ಮೇಲೆ ಮಿಸ್ಸೈಲ್ ದಾಳಿಗೆ ಯತ್ನಿಸಿದ ಪಾಕಿಸ್ತಾನದ ಕ್ಷಿಪಣಿ ಹೊಡೆದುರುಳಿಸಿದ ಏರ್ ಡಿಫೈನ್ಸ್!!
ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ಕ್ಷಿಪಣಿ ದಾಳಿ ನಡೆಸಿದರು ಸಹ ಪಾಕಿಸ್ತಾನ ತನ್ನ ಬುದ್ಧಿ ಬಿಟ್ಟಿಲ್ಲ ಇದೀಗ ಭಾರತದ ಮೇಲೆ ಪಾಕಿಸ್ತಾನ ಮಿಸೆಲ್ ದಾಳಿ ನಡೆಸಿದ್ದು, ಭಾರತ ಕೂಡ ಇದಕ್ಕೆ ತಕ್ಕ ಪ್ರತಿತರ ನೀಡಿದ್ದು, ಪಾಕಿಸ್ತಾನದ ಮಿಶಲ್ ಅನ್ನು ಭಾರತದ ಏರ್ ಡಿಫೆನ್ಸ್ ಹೊಡೆದುರುಳಿಸಿದೆ.ಭಾರತದ ಮೇಲೆ ಪಾಕಿಸ್ತಾನದಿಂದ ಮಿಸ್ಸೈಲ್ ದಾಳಿಗೆ ಯತ್ನ ಮಾಡಿದೆ. ನಿನ್ನೆ ಹಾಗೂ ಇವತ್ತು ಭಾರತ ನಡೆಸಿದ ದಾಳಿಗೆ ಪಾಠ ಕಲಿತರೂ ಸಹ ಪಾಕಿಸ್ತಾನ ತನ್ನ …
Read More »ಬೆಂಗಳೂರು: ಮೊಬೈಲ್ ಜಗಳ ಕೊಲೆಯಲ್ಲಿ ಅಂತ್ಯ!!
ಕಳ್ಳತನ ಮಾಡಿದ್ದ ಮೊಬೈಲ್ ಹಿಂದಿರುಗಿಸುವ ವಿಚಾರಕ್ಕೆ ನಡೆದ ಜಗಳ ಮೆಕ್ಯಾನಿಕ್ ಎಂಜಿನಿಯರ್ವೊಬ್ಬರ ಕೊಲೆಯಲ್ಲಿ ಅಂತ್ಯವಾಗಿದೆ.ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ ರಾಜಾಜಿನಗರ ಕೈಗಾರಿಕಾ ಪ್ರದೇಶದಲ್ಲಿ ನಡೆದ ಜಗಳದಲ್ಲಿ ಅಬ್ದುಲ್ ಮಲೀಕ್ ಮೃತಪಟ್ಟಿದ್ದಾನೆ. ಅವರ ಸಹಾಯಕ ಜೈನುಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಬ್ದುಲ್ ಮಲೀಕ್ ಮತ್ತು ಜೈನುಲ್ ಅವರು ಐದು ವರ್ಷಗಳಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು’ ಎಂದು ಹೇಳಿದರು.ಅಬ್ದುಲ್ ಮಲೀಕ್ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಜೈನುಲ್ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ …
Read More »ಬೆಂಗಳೂರು :ಪಕ್ಕದ ಮನೆಯವರ ಜಗಳಕ್ಕೆ 8 ವರ್ಷದ ಬಾಲಕನ ಕೊಲೆ!
ಆರೋಪಿ ಮತ್ತೂರು ಎಂಬಾತನಿಂದ ಕೃತ್ಯ ನಡೆದಿದೆ. ಬಾಲಕ ರಮಾನಂದ ಕುಟುಂಬ ಮತ್ತು ಮತ್ತೂರು ಕುಟುಂಬ್ ಮಧ್ಯೆ ಗಲಾಟೆ ಆಗ್ತಿತ್ತು. ಇದರಿಂದ ಬಾಲಕನ ಕಿಡ್ನಾಪ್ ಮಾಡಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿ ಮೃತದೇಹ ಚೀಲದಲ್ಲಿ ಕಟ್ಟಿ ಆರೋಪಿ ಬಿಸಾಡಿದ್ದ. ನಿನ್ನೆ ರಾತ್ರಿ ರಾಯಸಂದ್ರ ಕೆರೆ ಬಳಿ ಮೃತದೇಹ ಪತ್ತೆಯಾಗಿದೆ. ಆರೋಪಿಯನ್ನು ಮತ್ತೂರು ಬಂಧಿಸಿ ವಿಚಾರಣೆ ಮಾಡಿದ್ದಾರೆ.ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಬಾಗಪಾತ್ :ಪತ್ನಿಯ ಕತ್ತು ಸೀಳಿ ಅತ್ತೆಗೆ ಕರೆ ಮಾಡಿದ ಅಳಿಯ!!
ಆಟೋ ಚಾಲಕ ಪ್ರಶಾಂತ್ ಪತ್ನಿ ನೇಹಾಳ ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬಾಗ್ಪತ್ನಲ್ಲಿ ನಡೆದಿದೆ. ನೇಹಾ ತನ್ನ ತಾಯಿಯ ಮನೆಯಲ್ಲಿ ಒಂಟಿಯಾಗಿರುವಾಗ ಘಟನೆ ನಡೆದಿದೆ.ಅಕ್ಕಪಕ್ಕದ ಮನೆಯವರು ಹೇಳುವ ಪ್ರಕಾರ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಪ್ರಶಾಂತ್ ತನ್ನ ಪತ್ನಿಗೆ ವಿವಾಹೇತರ ಸಂಬಂಧವಿದೆ ಎಂದು ಅನುಮಾನಿಸುತ್ತಿದ್ದ. ನಿರಂತರ ಜಗಳದಿಂದ ಬೇಸತ್ತ ನೇಹಾ ಇತ್ತೀಚೆಗೆ ತನ್ನ ತಾಯಿ ರಂಜಿತಾ ಅವರೊಂದಿಗೆ ಅದೇ ಪ್ರದೇಶದಲ್ಲಿ ಮತ್ತೊಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.ನಾವು ಮದುವೆಯಾದ …
Read More »ಮಾಕ್ ಡ್ರಿಲ್ ಸೈರನ್ ಬರುತ್ತಿದ್ದಂತೇ ಏನು ಮಾಡಬೇಕು, ಏನೆಲ್ಲಾ ಚಟುವಟಿಕೆ ಮಾಡಲಾಗುತ್ತದೆ?…
ಪಾಕಿಸ್ತಾನದ ಜೊತೆ ಯುದ್ಧಕ್ಕೆ ಭಾರತ ಒಂದೊಂದೇ ತಯಾರಿ ಮಾಡಿಕೊಳ್ಳುತ್ತಿದೆ. ಇಂದು ದೇಶದಾದ್ಯಂತ ಮಾಕ್ ಡ್ರಿಲ್ ಗೆ ಕೇಂದ್ರ ಗೃಹ ಇಲಾಖೆ ಕರೆ ಕೊಟ್ಟಿದೆ. ಮಾಕ್ ಡ್ರಿಲ್ ವೇಳೆ ಏನೆಲ್ಲಾ ಚಟುವಟಿಕೆ ಮಾಡಬೇಕು ಇಲ್ಲಿದೆ ವಿವರ. ಒಂದು ವೇಳೆ ಯುದ್ಧವಾದರೆ, ತುರ್ತು ಪರಿಸ್ಥಿತಿಯಲ್ಲಿ ಯಾವ ರೀತಿ ವರ್ತಿಸಬೇಕು, ಏನು ಮಾಡಬೇಕು ಎಂಬ ಬಗ್ಗೆ ಇಲ್ಲಿ ಸಂಪೂರ್ಣ ಅಣಕು ಕಾರ್ಯಾಚರಣೆ ಮಾಡಲಾಗುತ್ತದೆ. ಯುದ್ಧದ ವೇಳೆ ವಾಯು ದಾಳಿಯಾದರೆ ಯಾವ ರೀತಿ ಸೈರನ್ ಮೊಳಗುತ್ತದೆ, …
Read More »ಕ್ರೊಯೇಷಿಯಾ, ನಾರ್ವೆ, ನೆದರ್ಲ್ಯಾಂಡ್ಸ್ ಪ್ರವಾಸ ರದ್ದುಗೊಳಿಸಿದ ಪ್ರಧಾನಿ ಮೋದಿ!
ಆಘಾತಕಾರಿ ರಾಜತಾಂತ್ರಿಕ ತಿರುವಿನಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಕ್ರೊಯೇಷಿಯಾ, ನಾರ್ವೆ ಮತ್ತು ನೆದರ್ಲ್ಯಾಂಡ್ಸ್ ಪ್ರವಾಸಗಳನ್ನು ರದ್ದುಗೊಳಿಸಿದ್ದಾರೆ.ಈ ಕ್ರಮವು ತ್ವರಿತವಾಗಿದ್ದರೂ, ಈ ಕ್ರಮವು ಸ್ವದೇಶದಲ್ಲಿ ಹೆಚ್ಚುತ್ತಿರುವ ಆತಂಕಗಳು ಮತ್ತು ವಿಶ್ವ ವ್ಯವಹಾರಗಳಲ್ಲಿ ಬದಲಾಗುತ್ತಿರುವ ಉಬ್ಬರವಿಳಿತಗಳಿಂದ ಪ್ರಭಾವಿತವಾಗಿದೆ.ನಿಖರವಾದ ಕಾರಣಗಳನ್ನು ವಿವರಿಸುವ ಯಾವುದೇ ಅಧಿಕೃತ ಪ್ರಕಟಣೆ ಇಲ್ಲವಾದರೂ, ಹೆಚ್ಚಿದ ಪ್ರಾದೇಶಿಕ ಭದ್ರತಾ ಬೆದರಿಕೆಗಳು ಮತ್ತು ಇತ್ತೀಚಿನ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಪ್ರತಿಕ್ರಿಯೆಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರದ ಮೂಲಗಳು ಸೂಚಿಸುತ್ತವೆ.ಪ್ರಧಾನಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





