ಮುಂಬೈ: ಕೋಸ್ಟಲ್ ರೋಡ್ ಸುರಂಗದಲ್ಲಿ ಅಪಾಯಕಾರಿ ಸ್ಟಂಟ್ ಮಾಡಿದ 14 ವಾಹನಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ವಾಹನಗಳ ಸಾಲು ಈದ್ ಮಿಲಾದ್ ಮೆರವಣಿಗೆಗೆ ಸಂಬಂಧಿಸಿದ್ದು ಎನ್ನಲಾಗಿದೆ. CCTV ಹಾಗೂ ANPR ಕ್ಯಾಮೆರಾಗಳ ದೃಶ್ಯ ಆಧರಿಸಿ ವಾಹನಗಳ ನಂಬರ್ ಪ್ಲೇಟ್ ಗುರುತಿಸಿ ಮಾಲೀಕರಿಗೆ ನೋಟಿಸ್ ಹಾಗೂ ಇ-ಚಲನ್ ಕಳುಹಿಸಲಾಗಿದೆ. ವಿಚಾರಣೆ ಬಳಿಕ ಇನ್ನಷ್ಟು ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಅಪಾಯಕಾರಿ ಚಾಲನೆಗೆ ಮೋಟಾರು ವಾಹನ ಕಾಯ್ದೆಯಡಿ ಕಠಿಣ ಕ್ರಮ …
Read More »ಇಸ್ರೋದಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ: ಆರೋಪಿ ಬಂಧನ!
ಗದಗ, ಆ.29: ISROದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಯುವಕ-ಯುವತಿಯರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚಿಸುತ್ತಿದ್ದ ವಿಜಯಪುರ ಮೂಲದ ಡಿಪ್ಲೋಮಾ ವಿದ್ಯಾರ್ಥಿ ಈರಣ್ಣ ಬಡಿಗೇರ್ನನ್ನು ಗದಗ ಶಹರ ಪೊಲೀಸರು ಬಂಧಿಸಿದ್ದಾರೆ. ಈತನಿಂದ ಮೋಸಹೋದವರೇ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.bಆರೋಪಿ ಇನ್ಸ್ಟಾಗ್ರಾಂನಲ್ಲಿ ನಕಲಿ ಖಾತೆ ಸೃಷ್ಟಿಸಿ, ತಾನು ISRO ಉದ್ಯೋಗಿ ಎಂದು ಪರಿಚಯಿಸಿಕೊಂಡು ಜಾಬ್ ಆಫರ್ ನೀಡುವುದಾಗಿ ನಂಬಿಸಿ ಫೋನ್ಪೇ ಮೂಲಕ ಹಣ ಪಡೆದುಕೊಳ್ಳುತ್ತಿದ್ದ. 30ಕ್ಕೂ ಹೆಚ್ಚು ಮಂದಿ ಈತನಿಂದ ಮೋಸಹೋಗಿದ್ದಾರೆ ಎನ್ನಲಾಗಿದೆ. …
Read More »ಉತ್ತರ ಕನ್ನಡ | ಪಡಿತರ ಅಕ್ಕಿ ಅಕ್ರಮ ಸಾಗಾಟ: 473 ಚೀಲ ಅಕ್ಕಿ ವಶ
ಶಿರಸಿ: ಸಿದ್ದಾಪುರದಿಂದ ಕೊಲ್ಲಾಪುರಕ್ಕೆ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ತಹಶೀಲ್ದಾರ್ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ನಿಲೇಕಣಿ ಬಳಿ ಲಾರಿ ತಡೆದು ಪರಿಶೀಲಿಸಿದಾಗ 50 ಕೆ.ಜಿ. ತೂಕದ 473 ಚೀಲ ಪಡಿತರ ಅಕ್ಕಿ ಪತ್ತೆಯಾಗಿದೆ. ಅಕ್ಕಿ ಸಾಗಾಟಕ್ಕೆ ಬಳಸಿದ್ದ 10 ಚಕ್ರದ ಲಾರಿ ಹಾಗೂ ಚಾಲಕನನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಶಿರಸಿ ತಹಶೀಲ್ದಾರ್ ಪಟ್ಟರಾಜ ಗೌಡ ಹಾಗೂ ನಗರ ಠಾಣೆ ಪಿಎಸ್ಐ ನರಸಿಂಹಲು ನೇತೃತ್ವದಲ್ಲಿ …
Read More »ಮನೆಗೆ ನುಗ್ಗಿ ಬೀಗ ಹಾಕ್ತೀವಿ ಎಂದ ಮೈಕ್ರೋ ಫೈನಾನ್ಸ್ – ಬೆದರಿದ ಯುವಕ ಆತ್ಮಹತ್ಯೆಗೆ ಶರಣು!
ಹುಣಸೂರು: ಮೈಕ್ರೋಫೈನಾನ್ಸ್ ಸಿಬ್ಬಂದಿಯ ಕಿರುಕುಳ ಹಾಗೂ ಅವಮಾನಕ್ಕೆ ಹೆದರಿ 32 ವರ್ಷದ ರಂಜಿತ್ ಎಂಬ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ನಂಜಾಪುರ ಗ್ರಾಮದಲ್ಲಿ ನಡೆದಿದೆ. ಮನೆ ನಿರ್ಮಾಣಕ್ಕಾಗಿ ₹12 ಲಕ್ಷ ಸಾಲ ಪಡೆದಿದ್ದ ರಂಜಿತ್, ಬಡ್ಡಿ ಸೇರಿ ₹8 ಲಕ್ಷ ಮರುಪಾವತಿಸಿದ್ದರು. ಆದರೆ ಕೃಷಿಯಲ್ಲಿ ನಷ್ಟವಾಗಿದ್ದರಿಂದ ಕಂತು ಪಾವತಿಸಲು ತೊಂದರೆಯಾಗಿತ್ತು. ಕಂತು ವಿಳಂಬವಾದ ಹಿನ್ನೆಲೆಯಲ್ಲಿ ಸಿಬ್ಬಂದಿ ಎರಡು ಬಾರಿ ಮನೆಗೆ ಬೀಗ ಹಾಕಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಮತ್ತೆ ಮನೆಗೆ …
Read More »ಮಾಗಡಿಯಲ್ಲಿ ಮೂವರು ಕಳ್ಳರ ಬಂಧನ: ₹20 ಲಕ್ಷ ಮೌಲ್ಯದ ವಸ್ತು ಜಪ್ತಿ
ಮಾಗಡಿ: ಸರಣಿ ಕಳವು ಪ್ರಕರಣ ಭೇದಿಸಿರುವ ಮಾಗಡಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ₹20.50 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಒಟ್ಟು 12 ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ. ಆಗಸ್ಟ್ 7ರಂದು ಗೇರಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿದ್ದ ಕಳ್ಳರು, ಮಲಗಿದ್ದ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ಅದೇ ದಿನ ದೇವಸ್ಥಾನ ಹಾಗೂ ಬೈಚಾಪುರ ಗ್ರಾಮದ ಮನೆಯಲ್ಲೂ ಕಳವು ನಡೆದಿತ್ತು. ಆರೋಪಿಗಳ …
Read More »ಹುಳಿಯಾರು: ಕಾರುಗಳ ಮುಖಾಮುಖಿ, ಮಗು ಸೇರಿ ನಾಲ್ವರ ದುರಂತ ಸಾವು
ಚಿಕ್ಕನಾಯಕನಹಳ್ಳಿ: ಎರಡು ಕಾರುಗಳ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ 3 ವರ್ಷದ ಮಗು ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶುಕ್ರವಾರ ರಾತ್ರಿ ತೂಬರೇಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಎರಡೂ ಕಾರುಗಳು ನಜ್ಜುಗುಜ್ಜಾಗಿವೆ. ಮೃತರನ್ನು ವಿವೇಕ್ (31), ಅನಿಲ್ (32), ದಾವುದ್ ಪಾಷಾ (45) ಹಾಗೂ 3 ವರ್ಷದ ಅನಮ್ ಎಂದು ಗುರುತಿಸಲಾಗಿದೆ. ಗಾಯಾಳುಗಳಾದ ಅನಿಲ್, ಯಾಸ್ಮಿನ್ ತಾಜ್, ಸೀಮಾ …
Read More »ಯುವಕನಿಂದ ಮಾನಸಿಕ ಕಿರುಕುಳ, ಜೀವಬೆದರಿಕೆ; ಕಾನೂನು ಕ್ರಮಕ್ಕೆ ಸಂತ್ರಸ್ತ ಯುವತಿ ಆಗ್ರಹ
ಬೆಂಗಳೂರು: ಯುವತಿಯರಿಗೆ ಕಿರುಕುಳ, ಮಾನಸಿಕ ಹಿಂಸೆ ಹಾಗೂ ಜೀವ ಬೆದರಿಕೆ ನೀಡಿದ ಆರೋಪದಡಿ ಮೊಹಮ್ಮದ್ ನೌಷಾದ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಠಿಣ ಕ್ರಮಕ್ಕೆ ಸಂತ್ರಸ್ತ ಯುವತಿ ಆಗ್ರಹಿಸಿದ್ದಾಳೆ. ದೂರು ನೀಡಿದ ಬಳಿಕ ನೌಷಾದ್ ಕಡೆಯವರು ಆಸ್ಪತ್ರೆಯಲ್ಲಿ ಅವಾಚ್ಯವಾಗಿ ನಿಂದಿಸಿದ್ದು, ಮ್ಯಾನೇಜರ್ ಕೆಲಸದಿಂದ ತೆಗೆದಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಕೆಲದಿನಗಳಿಂದ ತಲೆಮರೆಸಿಕೊಂಡಿದ್ದ ನೌಷಾದ್ ಗುರುವಾರ ನ್ಯಾಯಾಲಯಕ್ಕೆ ಶರಣಾಗಿದ್ದು, ನ್ಯಾಯಾಲಯ ಜಾಮೀನು ನೀಡಿದೆ. ಘಟನೆಯನ್ನು ನ್ಯಾಯಯುತವಾಗಿ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಕಮಿಷನರ್ …
Read More »ಕೆಂಪೇಗೌಡ ಏರ್ಪೋರ್ಟ್ನಲ್ಲಿ 5.28 ಕೋಟಿ ರೂ. ಡ್ರಗ್ಸ್ ಜಪ್ತಿ
ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರಕರಣಗಳಲ್ಲಿ ₹5.28 ಕೋಟಿ ಮೌಲ್ಯದ 15.06 ಕೆ.ಜಿ ಹೈಡ್ರೋಫೋನಿಕ್ ಗಾಂಜಾ ಜಪ್ತಿ ಮಾಡಲಾಗಿದೆ. ಬ್ಯಾಂಕಾಕ್ನಿಂದ ಬಂದ ಇಬ್ಬರು ಪ್ರಯಾಣಿಕರ ಬ್ಯಾಗ್ಗಳಲ್ಲಿ ಗಾಂಜಾ ಪತ್ತೆಯಾಗಿದೆ. ಇದೇ ವೇಳೆ ವಿದ್ಯಾರ್ಥಿಗಳಿಗೆ ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಅಶ್ವಿನ್ ಟಾಮ್ ಜೋಶ್ (24) ಎಂಬಾತನನ್ನು ಬಾಲಗೂರು ಪೊಲೀಸರು ಬಂಧಿಸಿದ್ದಾರೆ. ಆತನಿಂದ ₹9 ಲಕ್ಷ ಮೌಲ್ಯದ 276 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಆರೋಪಿಯು ಕಡಿಮೆ …
Read More »ಬಾಲಕಿ ಮೇಲೆ ಅತ್ಯಾಚಾರ ಆರೋಪಿ ಶ್ರೀಕಾಂತ್ ಬಂಧನ
ಧರ್ಮಸ್ಥಳ: 16 ವರ್ಷದ ಬಾಲಕಿ ಮೇಲೆ ಒಂದು ವರ್ಷ ಅತ್ಯಾಚಾರ ಎಸಗಿ, ಯಾರಿಗೂ ಹೇಳದಂತೆ ಬೆದರಿಸಿದ್ದ ಆರೋಪದಡಿ ಶ್ರೀಕಾಂತ್ (21) ಎಂಬಾತನನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಆ.22ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಆ.23ರಂದು ಪೊಕ್ಸೋ ಪ್ರಕರಣ ದಾಖಲಾಗಿದ್ದು, ಆರೋಪಿ ಬೆಂಗಳೂರಿನಿಂದ ಆಂಧ್ರಪ್ರದೇಶದ ಹಿಂದೂಪುರಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಆ.25ರಂದು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಆರೋಪಿಯನ್ನು ಮಂಗಳೂರಿನ ಪೊಕ್ಸೋ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Read More »ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ₹8.89 ಕೋಟಿ ಸೈಟ್ ಅಕ್ರಮ, ಹಲವರ ಬಂಧನ!
ಕೊಪ್ಪಳ ನಗರಭಿವೃದ್ಧಿ ಪ್ರಾಧಿಕಾರ(KUDA)ದಲ್ಲಿ ನಡೆದ ₹8.89 ಕೋಟಿ ಸೈಟ್ ಅಕ್ರಮ ಮತ್ತು ಹಣ ವಂಚನೆ ಪ್ರಕರಣದಲ್ಲಿ ಹೊರಗುತ್ತಿಗೆ ನೌಕರ ರವೀಂದ್ರಕುಮಾರ್, ಪತ್ನಿ ರಮಾ ಹಾಗೂ ಸಹೋದರ ಅನಿಲ್ ಕುಮಾರ್ ಬಂಧನವಾಗಿದ್ದಾರೆ. ಸೈಟ್ ನೀಡುವುದಾಗಿ ಹೇಳಿ 40ಕ್ಕೂ ಹೆಚ್ಚು ಖಾತೆಗಳಿಗೆ ಹಣ ವರ್ಗಾಯಿಸಿಕೊಂಡ ಆರೋಪ ಇವರ ಮೇಲಿದೆ. ಅನಿಲ್ ಖಾತೆಗೆ ₹1.5 ಕೋಟಿಗೂ ಅಧಿಕ ಹಾಗೂ ರಮಾ ಖಾತೆಯಿಂದ ₹30 ಲಕ್ಷಕ್ಕೂ ಅಧಿಕ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ. ಪ್ರಕರಣದ ಆರೋಪಿ ಮಾಜಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





