Breaking News

ಮನೆಗೆ ನುಗ್ಗಿ ಬೀಗ ಹಾಕ್ತೀವಿ ಎಂದ ಮೈಕ್ರೋ ಫೈನಾನ್ಸ್ – ಬೆದರಿದ ಯುವಕ‌ ಆತ್ಮಹತ್ಯೆಗೆ ಶರಣು!

ಹುಣಸೂರು: ಮೈಕ್ರೋಫೈನಾನ್ಸ್ ಸಿಬ್ಬಂದಿಯ ಕಿರುಕುಳ ಹಾಗೂ ಅವಮಾನಕ್ಕೆ ಹೆದರಿ 32 ವರ್ಷದ ರಂಜಿತ್ ಎಂಬ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ನಂಜಾಪುರ ಗ್ರಾಮದಲ್ಲಿ ನಡೆದಿದೆ. ಮನೆ ನಿರ್ಮಾಣಕ್ಕಾಗಿ ₹12 ಲಕ್ಷ ಸಾಲ ಪಡೆದಿದ್ದ ರಂಜಿತ್, ಬಡ್ಡಿ ಸೇರಿ ₹8 ಲಕ್ಷ ಮರುಪಾವತಿಸಿದ್ದರು. ಆದರೆ ಕೃಷಿಯಲ್ಲಿ ನಷ್ಟವಾಗಿದ್ದರಿಂದ ಕಂತು ಪಾವತಿಸಲು ತೊಂದರೆಯಾಗಿತ್ತು. ಕಂತು ವಿಳಂಬವಾದ ಹಿನ್ನೆಲೆಯಲ್ಲಿ ಸಿಬ್ಬಂದಿ ಎರಡು ಬಾರಿ ಮನೆಗೆ ಬೀಗ ಹಾಕಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಮತ್ತೆ ಮನೆಗೆ ಬೀಗ ಹಾಕಿದರೆ ಊರಿನಲ್ಲಿ ಅವಮಾನವಾಗುತ್ತದೆ ಎಂಬ ಭಯದಿಂದ ರಂಜಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಭಾಗ್ಯ ಆರೋಪಿಸಿದ್ದಾರೆ. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Share News

About BigTv News

Check Also

ದೇರಳಕಟ್ಟೆ: ಮೆಡಿಕಲ್‌ ಕಾಲೇಜಿನಲ್ಲಿ Ragging ಪ್ರಕರಣ ದಾಖಲು

ಮಂಗಳೂರು: ದೇರಳಕಟ್ಟೆಯ ಮೆಡಿಕಲ್ ಕಾಲೇಜೊಂದರಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರಾಗಿಂಗ್ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಉಳ್ಳಾಲ …

Leave a Reply

Your email address will not be published. Required fields are marked *