Breaking News

BigTv News

ಹುಬ್ಬಳ್ಳಿ : ಕೃಷಿ ಹೊಂಡದಲ್ಲಿ ಬಾಲಕರಿಬ್ಬರ ಸಾವು!!

ಹುಬ್ಬಳ್ಳಿ ತಾಲೂಕಿನ ಗಾಮನಗಟ್ಟಿಯ ಕೃಷಿ ಹೊಂಡದಲ್ಲಿ ಬುಧವಾರ ಬಾಲಕರಿಬ್ಬರು ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದಾರೆ. ಗಾಮನಗಟ್ಟಿ ಮೇದಾರ ಓನಿಯ ಜೀವನ್ ಕುಮಾರ್, ಪವನ್ ತಡಸಿನಕೊಪ್ಪ ಮೃತರು ಎಂದು ಪತ್ತೆ ಹಚ್ಚಲಾಗಿದೆ. ಕೃಷಿ ಹೊಂಡಕ್ಕೆ ಸ್ನೇಹಿತರೊಂದಿಗೆ ಈಜಲು ಹೋದಾಗ ಕಾಲು ಜಾರಿ ಬಿದ್ದಿದ್ದಾರೆ. ಜೊತೆಯಲ್ಲಿ ಇನ್ನೊಬ್ಬ ಬಾಲಕ ಆದ ಘಟನೆ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಬಾಲಕರ ಮೃತ ದೇಹವನ್ನು ಹೊರಗೆ ತೆಗೆದಿದ್ದಾರೆ. ಸ್ಥಳಕ್ಕೆ ಎಪಿಎಂಸಿ …

Read More »

ಧಾರವಾಡ: ಕ್ಷುಲ್ಲಕ ಕಾರಣಕ್ಕೆ ಯುವಕರ ಗುಂಪಿನಿಂದ ಹಲ್ಲೆ!!

ಧಾರವಾಡ ಗಾಂಧಿ ಚೌಕ್ ಬಳಿ ಸಿಗರೇಟಿನಲ್ಲಿ ಗಾಂಜಾ ಬೆರೆಸಿ ಸೇದುತ್ತಿದ್ದ ಯುವಕರ ಗುಂಪನ್ನು ಅಲ್ಲಿಯ ಮನೆ ಹೊಂದಿರುವ ಆರ್ ಎಸ್ಕಾರ್ಯ ವಾಹಕ ಶಿರೀಶ್ ಬಳ್ಳಾರಿ ಎಂಬವರು ಪ್ರಶಸ್ತಿದ್ದಾರೆ. ಕುಟುಂಬಸ್ಥರು ವಾಸಿಸುವ ಸ್ಥಳದಲ್ಲಿ ಈ ರೀತಿ ಮಾಡುವುದು ತಪ್ಪು ಎಂದು ಬುದ್ಧಿ ಹೇಳಿದ್ದಾರೆ. ಇದನ್ನು ನೆಪವಾಗಿಟ್ಟುಕೊಂಡು ಆ ಯುವಕರ ಗುಂಪು ಶಿರಿಶ್ ಅಲ್ಲದೆ ಅವರ ಮನೆಗೆ ಹೋಗಿ ಗಲಾಟೆ ಮಾಡಿ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ. ಸುದ್ದಿ ತಿಳಿದು ಹಿಂದೂ ಕಾರ್ಯಕರ್ತರು …

Read More »

ಧಾರವಾಡ:ಮತಾಂತರಕ್ಕೆ ಒತ್ತಾಯ, ಮಹಿಳೆಯರ ಬಂಧನ!!

ಧಾರವಾಡದಲ್ಲಿ ಮನೆ ಮನೆಗೆ ತೆರಳಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸುತ್ತಿದ್ದ ಮೂವರು ಮಹಿಳೆಯರನ್ನು ಹಿಡಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಪೊಲೀಸರ ವಶಕ್ಕೆ ನೀಡಿದ್ದಾರೆ. ಧಾರವಾಡದ ಲಕ್ಷ್ಮಿಸಿಂಗನಕೆರೆಯಲ್ಲಿರುವ ರಾಜು ಪೂಜಾರ್ ಎಂಬುವವರ ಮನೆಗೆ ಬೈಬಲ್ ಹಿಡಿದುಕೊಂಡು ಹೋದ ಮಹಿಳೆಯರು ನೀವು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿ. ನಿಮ್ಮ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ನಿಮ್ಮ ಅನಾರೋಗ್ಯ ಸಮಸ್ಯೆ ಯೇಸು ನಿವಾರಿಸುತ್ತಾನೆ ಎಂದು ಒತ್ತಡ ಹೇರಿದ್ದಾರೆ. ಒತ್ತಡ ತಾಳಲಾರದೆ …

Read More »

ಕೋಲಾರ :ಪ್ಲಾಸ್ಟಿಕ್ ಗೋಡೌನ್ ಆಕಸ್ಮಿಕ ಬೆಂಕಿ ಅವಘಡ, 30ಲಕ್ಷಕ್ಕೂ ಅಧಿಕ ಹಾನಿ!!

ಅಸ್ಲಾಂ ಪಾಷ ಎಂಬುವರಿಗೆ ಸೇರಿದ ಪ್ಲಾಸ್ಟಿಕ್ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 30 ಲಕ್ಷ ರೂಪಾಯಿ ಮೌಲ್ಯದ ಅಧಿಕ ಪ್ಲಾಸ್ಟಿಕ್ ವಸ್ತುಗಳು ಹಾಗೂ ಮೆಷಿನ್‌ಗಳು ಬೆಂಕಿಗಾಹುತಿಯಾಗಿವೆ.ಕೋಲಾರ ಹಾಗೂ ಬಂಗಾರಪೇಟೆ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು,ಸತತ ಏಳುಗಂಟೆಗಳ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ತಹಬದಿಗೆ ತಂದಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಕೋಲಾರ ನಗರದ ಹೊರವಲಯದ ಈಲಂ ಬಳಿ ಘಟನೆ ನಡೆದಿದೆ.

Read More »

ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರ, ಮೋದಿ ಸರ್ಕಾರದಿಂದ ಪಾಕಿಸ್ತಾನಕ್ಕೆ 10 `ಮಾಸ್ಟರ್ ಸ್ಟ್ರೋಕ್ಸ್’.!

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತ ಮಂಗಳವಾರ ತಡರಾತ್ರಿ ಪಾಕಿಸ್ತಾನದ ವಿರುದ್ಧ ಬಲವಾದ ರಾಜತಾಂತ್ರಿಕ ಮತ್ತು ರಚನಾತ್ಮಕ ಕ್ರಮಗಳನ್ನು ಘೋಷಿಸಿತು.ಭಾರತವು 1960 ರ ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿತು. ಜಲಶಕ್ತಿ ಸಚಿವಾಲಯವು ಭಾಕ್ರಾ-ಬಿಯಾಸ್ ನಿರ್ವಹಣಾ ಮಂಡಳಿ ಮತ್ತು ಕೃಷಿ ವಿಜ್ಞಾನ ಕೇಂದ್ರ ಯೋಜನೆಗೆ ಹೆಚ್ಚುವರಿ ನೀರನ್ನು ನಿಲ್ಲಿಸಿ ಪಶ್ಚಿಮದ ಪಾಸ್‌ಗಳ ಕಡೆಗೆ ತಿರುಗಿಸಲು ನಿರ್ದೇಶನಗಳನ್ನು ನೀಡಿದೆ. ಎಲ್ಲಾ ಪಾಕಿಸ್ತಾನಿ ಪ್ರಜೆಗಳ ಸಾರ್ಕ್ ವೀಸಾಗಳನ್ನು ರದ್ದುಗೊಳಿಸಲಾಗಿದೆ.ಸಹಾಯಕ ಸಿಬ್ಬಂದಿಯನ್ನು …

Read More »

ಗೌಹಾಟಿ :3 ಕೋಟಿ ಮೌಲ್ಯದ ಡ್ರಗ್ಸ್ ಹೊಂದಿದ್ದ ಪೆಡ್ಲರ್ ಬಂಧನ!!

ಅಸ್ಸಾ ನ ಕಚಾರ್ ಜಿಲ್ಲೆಯಲ್ಲಿ 3 ಕೋಟಿ ರೂಪಾಯಿ ಮೌಲ್ಯದ ಮಾದಕ ದ್ರವ್ಯಗಳೊಂದಿಗೆ ಶಂಕಿತ ಪೆಡ್ಲರ್ ನನ್ನು ಬಂಧಿಸಲಾಗಿದೆ. ಡ್ರಗ್ಸ್ ಪೆಡ್ಲ‌ರ್ ಬಂಧನವನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯ ಸಿಲ್ದುಬಿ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ಹೇಳಿದರು.ಪ್ರಮುಖ ಮಾದಕವಸ್ತು ದಾಳಿ 3 ಕೋಟಿ ರೂ.ಗಳ ಮೌಲ್ಯದ 10,000 ಯಾಬಾ ಮಾತ್ರೆಗಳನ್ನು ವಶಪಡಿಸಿಕೊಂಡಿದೆ. ಒಬ್ಬ ಪೆಡ್ಲರ್ ನನ್ನು ಬಂಧಿಸಲಾಗಿದೆ ಎಂದು ಶರ್ಮಾ ಎಕ್ಸ್ ನಲ್ಲಿ …

Read More »

ಕಲಬುರಗಿ :ಕಾರು ಅಪಘಾತ, ಮಗು ಸೇರಿ ಮೂವರು ದುರ್ಮರಣ!!

ಮಹಾರಾಷ್ಟ್ರ-ಕರ್ನಾಟಕ ಗಡಿ ಭಾಗದಲ್ಲಿರುವ ಹೈದ್ರಾ ದರ್ಗಾದಲ್ಲಿ ಆಯಿಷಾ ಸಂಬಂಧಿಕರ ಮಗುವಿನ ಕೇಶ ಮುಂಡನ ಕಾರ್ಯಕ್ರಮಕ್ಕೆ ಕಾರಿನಲ್ಲಿ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಬೀದಿನಾಯಿಯನ್ನು ಉಳಿಸಲು ಹೋಗಿ ಕಾರು ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ರಸ್ತೆಯಲ್ಲಿ ಉರುಳಿ ಬಿದ್ದಿದೆ. ಅಫಜಲಪುರ ತಾಲೂಕಿನ ಗೊಬ್ಬೂರ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ಘಟನೆ ನಡೆದಿದ್ದು, ಮೃತರನ್ನು ಕಲಬುರಗಿಯ ಮಿಲ್ಲತ್‌ ನಗರದ ನಿವಾಸಿಗಳಾದ ಆಯಿಷಾ ಅಜ್ಮೇರಾ ಹಾಗೂ ಜೈನಬ್‌ ಎಂದು ಗುರುತಿಸಲಾಗಿದೆ.ಸ್ಥಳಕ್ಕೆ ದೇವಲ ಗಾಣಗಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ …

Read More »

ಬೆಂಗಳೂರು :ವೈದ್ಯಕೀಯ ಸೀಟುಗಳ ಹೆಚ್ಚಳಕ್ಕೆ ಎನ್‌ಎಂಸಿಗೆ ಸಚಿವರ ಆಗ್ರಹ…

ಪ್ರತಿ ವರ್ಷ ಐದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗುತ್ತಾರೆ. ಆದರೆ ಇದಕ್ಕೆ ಪ್ರತಿಯಾಗಿ ಒಂದು ಲಕ್ಷ ವೈದ್ಯಕೀಯ ಸೀಟುಗಳು ಮಾತ್ರ ಲಭ್ಯವಿದೆ. ಇದರಿಂದ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರ ಹೆಚ್ಚಾಗುತ್ತಿದೆ ಎಂದು ಹೇಳಿದರು.ಅಸಮಾನತೆಯನ್ನು ತಕ್ಷಣ ನಿವಾರಿಸಬೇಕು. ಭಾರತೀಯ ವೈದ್ಯರಿಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆ. ಜಾಗತಿಕವಾಗಿ ಭಾರತೀಯ ವೈದ್ಯಕೀಯ ವೃತ್ತಿಪರರಿಗೆ ಹೆಚ್ಚಿನ ಬೇಡಿಕೆ ಇದೆ. ಬೇಡಿಕೆ ಮತ್ತು ಲಭ್ಯತೆಯ ಅಂತರ ಕಡಿಮೆ ಮಾಡಲು ಎನ್‌ಎಂಸಿ ಮಧ್ಯಪ್ರವೇಶಿಸಬೇಕು ಎಂದರು.ಮುಖ್ಯಮಂತ್ರಿಗಳು …

Read More »

ಗಂಗೊಳ್ಳಿ: ಅನಾಮದೇಯ ಮೃತದೇಹ ಪತ್ತೆ!!

ಹೊಸಾಡು ಗ್ರಾಮದ ಹೋಲಿ ಕ್ರಾಸ್‌ ಬಳಿಯ ತ್ರಾಸಿ ಚರ್ಚ್‌ ಕ್ರೈಸ್ತ ಕಿಂಗ್‌ಗೆ ಸಂಬಂಧಿಸಿದ ಜಾಗದ ಒಳಗೆ ಅಪರಿಚಿತ ಗಂಡಸಿನ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. 50ರಿಂದ 55 ವರ್ಷದ ಮೃತನು ಯಾವುದೋ ಕಾಯಿಲೆಯಿಂದ ಅಥವಾ ಇನ್ನಾವುದೋ ಕಾರಣದಿಂದ ಮೃತ ಪಟ್ಟಿರಬಹುದೆಂದು ಭಾವಿಸಲಾಗಿದೆ. ಪ್ರಕರಣ ದಾಖಲಾಗಿದೆ.

Read More »

ಕುಂದಾಪುರ :ಮನೆಯೊಳಗೆ ನುಗ್ಗಿ ಹಲ್ಲೆ, ಕೊಲೆಗೆ ಯತ್ನ,ಕೊಲ್ಲುತ್ತೇವೆ ಎಂದು ಬೆದರಿಕೆ!!!

ಬಸ್ರೂರು ಗ್ರಾಮದ ಕೊಳ್ಕೆರೆ ಸುರೇಂದ್ರ ಅವರು ಮನೆಯಲ್ಲಿದ್ದಾಗ, ವನಜಾ, ರಾಜ, ರಕ್ಷತ ಅವರು ಮನೆಯೊಳಗೆ ನುಗ್ಗಿ ಹಲ್ಲೆ ಮಾಡಿದ್ದಾರೆ. ಹಿಗ್ಗಾ ಮುಗ್ಗಾ ಥಳಿಸಿ ಕೊಲ್ಲಬೇಕು ಎಂದು ಪಂಚಾಯತ್‌ ಸದಸ್ಯ ನಾಗರಾಜ್‌ ಹೇಳಿದ ಕಾರಣ, ನಿನ್ನನ್ನು ಬಿಡುವುದಿಲ್ಲ ಕೊಲ್ಲುತ್ತೇವೆ ಎಂದವರು ಬೆದರಿಕೆ ಹಾಕಿದ್ದಾರೆ.ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »