Breaking News

ರೈತರ ಬೇಡಿಕೆಗಳಿಗಾಗಿ ಬೃಹತ್ ಪ್ರತಿಭಟನೆ…

ಧಾರವಾಡ: ಧಾರವಾಡ ಮುರಘಾಮಠದಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ರವರ ನೇತೃತ್ವದಲ್ಲಿ ಗುರುವಾರ ದಿ 09 ರಂದು ಸಮಮ 10-30 ಗಂಟೆಗೆ ರೈತರ ಬೇಡಿಕೆಗಳಿಗಾಗಿ ಬೃಹತ್ ಪ್ರತಿಭಟನೆ ಹಾಗೂ ಡಿಸಿ ಕಛೇರಿ ಮುತ್ತಿಗೆ ಕಾರ್ಯಕ್ರಮ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ಹಮ್ಮಿಕೊಂಡಿದೆ ಎಂದು ಪ್ರದಾನ ಕಾರ್ಯದರ್ಶಿ ಚಂದ್ರಶೇಖರ ಮ. ಕಲ್ಕೂರ ಹೇಳಿದರು, ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕಬ್ಬಿಗೆ ಪ್ರತಿ ಟನ್ನಗೆ 4000 ರೂಪಾಯಿ ಬೆಲೆ ನಿಗದಿಯಾಗಬೇಕು ಹಾಗೂ ಕಬ್ಬಿಗೂ ವಿಮೆ ಜಾರಿ ಮಾಡಬೇಕು. ರೈತರ ಪಂಪಸೆಟ್ಟಿಗೆ ಹಗಲು 8 ತಾಸು 3 ಪೆಸ್ ವಿದ್ಯುತ್ ನೀಡಬೇಕು ಹಾಗೂ ಪಂಪಸೆಟ್ಟಿಗೆ ಆಧಾರ ಲಿಂಕ್ ಮಾಡುವದು ಕೈ ಬಿಡಬೇಕು. ಕಾಳಿ ನದಿಯಿಂದ ಧಾರವಾಡ ಜಿಲ್ಲೆಗೆ ನೀರು ಪೂರೈಸಬೇಕು.

ಬರಗಾಲದಿಂದ ಮುಂಗಾರಿ ಮತ್ತು ಹಿಂಗಾರಿಯಿಂದ ತತ್ತರಿಸಿದ ರೈತರಿಗೆ ಪ್ರತಿ ಎಕರೆಗೆ 40,000ರೂ. ಪರಿಹಾರ ಹಾಗೂ ಬೆಳೆವಿಮೆ ಕೂಡಲೆ ನೀಡಬೇಕು. ಎಲ್ಲಾ ಬೆಳೆಗಳಿಗೆ M.S.P. ಜಾರಿ ಮಾಡಬೇಕು. ತೊಟಗಾರಿಕೆ ಬೆಳೆಗಳಿಗೆ ಮಾವು ಮತ್ತು ಹೂವಿಗೆ ಕೂಡಲೆ ಪರಿಹಾರ ನೀಡಬೇಕು. ಪ್ರತಿ ಗ್ರಾಮದಲ್ಲಿ ಜಾನುವಾರುಗಳಿಗೆ ಉತ್ತಮ ನೀರು, ಮೇವು ಕೊಡಬೇಕು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ಯೋಜನೆ 6000 ಸಾವಿರ ಜೊತೆಗೆ ರಾಜ್ಯ ಸರಕಾರ ನೀಡುತ್ತಿದ್ದ 4000 ರೂ. ಜೊತೆಗೆ ರೈತರ ಮಕ್ಕಳಿಗೆ ವಿದ್ಯಾನಿಧಿ ನೀಡಬೇಕು. ಯಾವುದೇ ಕಾರಣಕ್ಕೂ ಯೋಜನೆ ನಿಲ್ಲಿಸಬಾರದು. ರೈತ ಕೂಲಿ ಕಾರ್ಮಿಕರ ಹಾಗೂ ಕೂಲಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಹಿಂದಿನ ಯೋಜನೆಗಳನ್ನು ಜಾರಿಗೊಳಿಸಬೇಕು. ಸರ್ಕಾರದಿಂದ ನೀಡುವ ಎಲ್ಲಾ ರೀತಿಯ ಆಶ್ರಯ ಯೋಜನೆ ಮನೆಗನ್ನು ಹಾಗೂ ಈ ಹಿಂದೆ ಬಿದ್ದ ಮನೆಗಳಿಗೆ ಪರಿಹಾರ ನೀಡಬೇಕು. ಅತಿಕ್ರಮ ಬಗರ ಹುಕುಂ ಭೂಮಿಗೆ ಪಟ್ಟಾ ಕೊಡಿಸಬೇಕು. ಮಾರಕವಾದ ರೈತರ ಕೃಷಿ 3 ಕಾಯ್ದೆಯನ್ನು ವಾಪಸ ಪಡೆಯಬೇಕು.ರೈತರ ಬೆಳೆಸಾಲ ಹಾಗೂ ಇನ್ನಿತರ ಸಾಲಗಳನ್ನು ಮನ್ನಾ ಮಾಡುವ ಜೊತೆಗೆ ಮರು ಸಾಲ ನೀಡಬೇಕು.

Share News

About BigTv News

Check Also

ಹುಬ್ಬಳ್ಳಿಯಲ್ಲಿ ಮದುವೆ ಆಗದ ನೋವಿಗೆ 35 ವರ್ಷದ ಯುವಕ ಆತ್ಮಹತ್ಯೆ..

ಹುಬ್ಬಳ್ಳಿ: ಮದುವೆಗೆ ಹೆಣ್ಣು ಸಿಗಲಿಲ್ಲವೆಂಬ ಕಾರಣಕ್ಕೆ ಮನನೊಂದು 35 ವರ್ಷದ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ …

Leave a Reply

Your email address will not be published. Required fields are marked *