Breaking News
Oplus_131072

ಹುಬ್ಬಳ್ಳಿ : ಕೃಷಿ ಹೊಂಡದಲ್ಲಿ ಬಾಲಕರಿಬ್ಬರ ಸಾವು!!

ಹುಬ್ಬಳ್ಳಿ ತಾಲೂಕಿನ ಗಾಮನಗಟ್ಟಿಯ ಕೃಷಿ ಹೊಂಡದಲ್ಲಿ ಬುಧವಾರ ಬಾಲಕರಿಬ್ಬರು ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದಾರೆ. ಗಾಮನಗಟ್ಟಿ ಮೇದಾರ ಓನಿಯ ಜೀವನ್ ಕುಮಾರ್, ಪವನ್ ತಡಸಿನಕೊಪ್ಪ ಮೃತರು ಎಂದು ಪತ್ತೆ ಹಚ್ಚಲಾಗಿದೆ. ಕೃಷಿ ಹೊಂಡಕ್ಕೆ ಸ್ನೇಹಿತರೊಂದಿಗೆ ಈಜಲು ಹೋದಾಗ ಕಾಲು ಜಾರಿ ಬಿದ್ದಿದ್ದಾರೆ. ಜೊತೆಯಲ್ಲಿ ಇನ್ನೊಬ್ಬ ಬಾಲಕ ಆದ ಘಟನೆ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಬಾಲಕರ ಮೃತ ದೇಹವನ್ನು ಹೊರಗೆ ತೆಗೆದಿದ್ದಾರೆ. ಸ್ಥಳಕ್ಕೆ ಎಪಿಎಂಸಿ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಶವಗಳನ್ನು ನಗರದ ಕೆಎಂಸಿಗೆ ರವಾನಿಸಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *