Breaking News

Shaikh BigTv

ಸಂಗೊಳ್ಳಿ ರಾಯಣ್ಣ ಮೂರ್ತಿ ವಿರೂಪ ಕುರಿತು ಮನವಿ ಸಲ್ಲಿಕೆ

ಕುಂದಗೋಳ: ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಹಾಗೂ ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ಮೂರ್ತಿ ವಿರೂಪಗೊಳಿಸಿದ್ದನ್ನು ಖಂಡಿಸಿ ಜಯ ಕರ್ನಾಟಕ ಸಂಘಟನೆ ಮನವಿ ಸಲ್ಲಿಸಿದೆ. ಕುಂದಗೋಳ ತಾಲೂಕಿನ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಪ್ರವೀಣ್‌ ಮುದೆಣ್ಣನವರ ನೇತೃತ್ವದಲ್ಲಿ ಜಯ ಕರ್ನಾಟಕ ಸಂಘಟನೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ರೈತ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ಮೂರ್ತಿ ವಿರೂಪಗೊಳಿಸಿದ ವಕ್ತಿಗೆ ತಕ್ಕ ಶಿಕ್ಷೆ ನೀಡಬೇಕು …

Read More »

ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕ ವಿನಯ್ ಕುಲಕರ್ಣಿ ಕೆಡಿಪಿ ಸಭೆ

ಧಾರವಾಡ: ತಾಲೂಕಾ ಹಂತದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕ ವಿನಯ್ ಕುಲಕರ್ಣಿ ಅವರು ಚೆನ್ನಮ್ಮನ ಕಿತ್ತೂರಿನ ಪ್ರವಾಸಿ ಮಂದಿರದಲ್ಲಿ ಕೆಡಿಪಿ ಸಭೆ ನಡೆಸಿದರು. ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ಪಿಡಬ್ಲ್ಯುಡಿ, ಕಂದಾಯ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ವಿನಯ್ ಕುಲಕರ್ಣಿ, ಧಾರವಾಡ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಅನೇಕ ರಸ್ತೆಗಳು ಹಾಳಾಗಿದ್ದು ಅವುಗಳ ಸುಧಾರಣೆ, ಸರಿಯಾದ ರೀತಿಯಲ್ಲಿ ಕುಡಿಯುವ ನೀರಿನ ಸೌಕರ್ಯ ಒದಗಿಸುವುದು ಸೇರಿದಂತೆ ಇತ್ಯಾದಿ ಸೂಚನೆಗಳನ್ನು …

Read More »

ಸತ್ಯಹರಿಶ್ಚಂದ್ರ ಸ್ಮಶಾನ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿ ಸ್ಥಗಿತಗೊಳಿಸುವಂತೆ ಮನವಿ ಸಲ್ಲಿಕೆ

ಹುಬ್ಬಳ್ಳಿ: ಮಂಟೂರು ರಸ್ತೆಯಲ್ಲಿನ ಸತ್ಯಹರಿಶ್ಚಂದ್ರ ಸ್ಮಶಾನ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಹಾಗೂ ಇನ್ನಿತರ ಕಾಮಗಾರಿಗಳನ್ನು ತಕ್ಷಣ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಸತ್ಯ ಹರಿಶ್ಚಂದ್ರ ರುದ್ರಭೂಮಿ ಅಭಿವೃದ್ಧಿ ಹಾಗೂ ರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಿ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಹುಬ್ಬಳ್ಳಿ ನಗರದ ಮಂಟೂರ ರಸ್ತೆಯ ಸರ್ವೆ ನಂಬರ್ 212ರ ಸತ್ಯ ಹರಿಶ್ಚಂದ್ರ ಸ್ಮಶಾನ ಭೂಮಿಯಲ್ಲಿ ಕಳೆದ ನೂರಾರು ವರ್ಷಗಳಿಂದ 30ಕ್ಕೂ ಹೆಚ್ಚು ಬಡಾವಣೆಗಳ ಜನರು ಮೃತರ ಅಂತ್ಯಸಂಸ್ಕಾರ ನೆರವೇರಿಸಲು …

Read More »

ಪ್ರಸಾದ ಅಬ್ಬಯ್ಯ ಮುತಾಲಿಕ್ ಗೆ ಕ್ಷಮೆಯಾಚಿಸ ಬೇಕು : ಗಂಗಾಧರ ಕುಲಕರ್ಣಿ

ಹುಬ್ಬಳ್ಳಿ : ಶಾಸಕ ಪ್ರಸಾದ ಅಬ್ಬಯ್ಯಗೆ ಒಂದಿಷ್ಟು ಸೌಜನ್ಯತೆ ಇಲ್ಲದೇ ಹಿರಿಯ ನಾಗರಿಕರು, ಹೋರಾಟಗಾರರಾದ ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ವಿರುದ್ಧ ನಾಲಿಗೆ ಹರಿ ಬಿಟ್ಟಿರುವುದು ಸರಿಯಲ್ಲ. ಕೂಡಲೇ ಕ್ಷಮೆಯಾಚನೆ ಮಾಡಬೇಕು ಇಲ್ಲವಾದರೇ ಬಹುದೊಡ್ಡ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಶ್ರೀರಾಮಸೇನಾ ಮುಖಂಡ ಗಂಗಾಧರ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಾವು ಇಂದಿರಾ ಕ್ಯಾಂಟಿನ್ ವಿರೋಧಿಗಳಲ್ಲ. ಸ್ಮಶಾನದ ಒತ್ತುವರಿ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಆದರೆ ಶಾಸಕ …

Read More »

ಮಹದಾಯಿ ಕುರಿತು ಸಿಎಂ ಪ್ರಧಾನಿಗೆ ಪತ್ರ ಬರೆದ ಬಗ್ಗೆ ಪ್ರತಿಕ್ರಿಯಿಸಿದ ವಿನಯ್ ಕುಲಕರ್ಣಿ

ಧಾರವಾಡ: ಅಲ್ಲಿ ನಮ್ಮ ಕೆಲಸ ಅಂಡ‌ರ್ ಗೌಂಡ್ ನಡೆಯುತ್ತದೆ. ಆದರೆ, ಕೇಂದ್ರ ಸರ್ಕಾರ ವನ್ಯಜೀವಿ ಸಂರಕ್ಷಣೆ ವಿಚಾರ ಇಟ್ಟುಕೊಂಡು ಕ್ಲಿಯರೆನ್ಸ್ ಕೊಡುತ್ತಿಲ್ಲ. ಕ್ಲಿಯರೆನ್ಸ್ ಸಿಕ್ಕರೆ ಕೂಡಲೇ ಕಾಮಗಾರಿ ಆರಂಭಗೊಳ್ಳುತ್ತದೆ ಎಂದು ಶಾಸಕ ವಿನಯ್ ಕುಲಕರ್ಣಿ ಹೇಳಿದರು. ಮಹದಾಯಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಗೆ ಪತ್ರ ಬರೆದಿದ್ದು, ಈ ಕುರಿತು ಚೆನ್ನಮ್ಮನ ಕಿತ್ತೂರಿನಲ್ಲಿ ಮಾತನಾಡಿದ ಅವರು, ಟೈಗರ್ ಕಾರಿಡಾರ್ ಎಂದು ಮಾಡಲಾಗಿದೆ ಎಂದರು. ಮುನಿರತ್ನ ಬಂಧನ ವಿಚಾರವಾಗಿ …

Read More »

ವಕೀಲರ ಸಂಘದ ವತಿಯಿಂದ ಪ್ರತಿಷ್ಠಾಪನೆ ಮಾಡಿದ ಗಣಪತಿಗೆ ಶಾಸಕ ಭೇಟಿ

ಹುಬ್ಬಳ್ಳಿ: ವಕೀಲರ ಸಂಘದ ವತಿಯಿಂದ ಪ್ರತಿಷ್ಠಾಪನೆ ಮಾಡಿದ ಗಣಪತಿಗೆ ಶಾಸಕ ಮಹೇಶ್ ಟೆಂಗಿನಕಾಯಿ ಅವರು ವಿಶೇಷ ಪೂಜೆ ಸಲ್ಲಿಸಿ, ನಾಡಿನ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಎಂ. ಎಸ್. ಬಾಣದ, ನ್ಯಾಯವಾದಿಗಳಾದ ಅಶೋಕ ಅಕ್ಕಿ, ಶ್ರೀ ಲೋಕೇಶ ಎಂ, ಮಹೇಶ ಹಿರೇಮಠ, ಅಶೋಕ ಅಣವೇಕರ, ವಿ. ಎಸ್‌. ಹಳೇಮನಿ ಎಂ. ಎಸ್. ಗುಡಗೇರಿ, ಪ್ರಭು ಕಳೆಯ್ಯನವರ, ಬಾಪು ಸಬಳದ, ಗುರು ಮಾಳಪುರ …

Read More »

ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಶಾಸಕ ಎಂ ಆರ್ ಪಾಟಿಲ್ ಚಾಲನೆ

ಧಾರವಾಡ : ಗ್ರಾಮಾಂತರ ಜಿಲ್ಲೆ ಬಿಜೆಪಿ ರೈತ ಮೋರ್ಚಾ ವತಿಯಿಂದ ಇಂದು ಕುಂದಗೋಳ ವಿಧಾನಸಭಾ ಕ್ಷೇತ್ರದ ವರೂರ ಗ್ರಾಮದಲ್ಲಿ ಹಮ್ಮಿಕೊಂಡ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಶಾಸಕ ಎಂ ಆರ್ ಪಾಟಿಲ್ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ಬಸವರಾಜ ಕುಂದಗೋಳಮಠ, ಈರಣ್ಣ ಜಡಿ, ಮಂಡಲ ಅಧ್ಯಕ್ಷರು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರು ಮತ್ತು ಬಿಜೆಪಿ ಮಂಡಲದ …

Read More »

ಪಾದಯಾತ್ರೆ ಮೂಲಕ ಮಹದಾಯಿ ಹೋರಾಟಕ್ಕೆ ಮುನ್ನಡೆ

ಹುಬ್ಬಳ್ಳಿ : ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾ‌ರ್ ಶೆಟ್ಟಿ ಬಣದಿಂದ ರಾಜ್ಯ ಸಮಿತಿ ಹಾಗೂ ಉತ್ತರ ಕರ್ನಾಟಕ ಹಾಗೂ ಬೆಳಗಾವಿ ವಿಭಾಗದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಕಳಸಾ ಬಂಡೂರಿ ಮಹದಾಯಿ ನಾಲೆಜೋಡಣೆ ಹಾಗೂ ಕಪ್ಪತ್ತಗುಡ್ಡ ಪ್ರಾಧಿಕಾರ ರಚಿಸುವಂತೆ ಪಾದಯಾತ್ರೆ ಮೂಲಕ ಹೋರಾಟಕ್ಕೆ ಮುಂದಾಗಿದ್ದಾರೆ. ನರಗುಂದದಿಂದ ಗದಗವರಗೆ ಎರಡು ದಿನಗಳ ಕಾಲ ಪಾದಯಾತ್ರೆ ಹಮ್ಮಿಕೊಂಡಿದ್ದು, ಹುಬ್ಬಳ್ಳಿಯ ಹೃದಯ ಭಾಗ ಚೆನ್ನಮ್ಮ ವೃತ್ತದಿಂದ ಚಾಲನೆ ನೀಡಲಾಗಿದೆ. ಹೋರಾಟಕ್ಕೆ ಧಾರವಾಡ, ಗದಗ, ಹಾವೇರಿ ಹಾಗೂ …

Read More »

ಅಂಗನವಾಡಿ ಕಾರ್ಯಕರ್ತೆಯರ ವೇತನ ರಹಿತ ರಜೆ

ಕುಂದಗೋಳ : ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ವಿಧಾನಸೌಧ ಚಲೋ ಚಳುವಳಿಯನ್ನು ಬೆಂಗಳೂರಿನ ಫ್ರೀಡಂ ಪಾರ್ಕ್’ನಲ್ಲಿ ಹಮ್ಮಿಕೊಂಡಿದ್ದು, ಕುಂದಗೋಳ ತಾಲೂಕಿನ 212 ಕಾರ್ಯಕರ್ತರು ವೇತನ ರಹಿತ ರಜೆ ಪಡೆದು ಚಳುವಳಿಯಲ್ಲಿ ಭಾಗವಹಿಸಿದ್ದಾರೆ. ಸೇವಾ ನಿವೃತ್ತಿ ಆರ್ಥಿಕ ರಕ್ಷಣೆ, ಗೌರವಧನ, ವೇತನ ಹೆಚ್ಚಳ, ಮತ್ತು ಎಲ್.ಕೆ.ಜಿ ಮತ್ತು ಯು.ಕೆ.ಜಿ ಅಂಗನವಾಡಿಯಲ್ಲೇ ಆರಂಭ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಚಳುವಳಿಗೆ ಧುಮುಕಿದ್ದಾರೆ. ಈ ಹಿನ್ನೆಲೆಯಲ್ಲಿ …

Read More »

ಮನೆ ಬೀಗ ಮುರಿದು ಆಭರಣ ಕಳತನ

ಹುಬ್ಬಳ್ಳಿ : ಮನೆ ಬೀಗ ಮುರಿದು ಮನೆಯಲ್ಲಿದ್ದ 5.33 ಲಕ್ಷ ಮೌಲ್ಯದ ಆಭರಣ ಕಳತನವಾದ ಘಟನೆ, ಹುಬ್ಬಳ್ಳಿಯ ವಿಜಯನಗರದ ತೃಪ್ತಿ ಬಜಾರನಲ್ಲಿ ನಡೆದಿದೆ. ದೇವರಮನಿ ಕುಟುಂಬದವರ ಮನೆ ಬೀಗವನ್ನು ಕಳ್ಳರು ಮುರಿದಿದ್ದಾರೆ. ಬಳಿಕ ಮನೆ ಪ್ರವೇಶಿಸಿ ಕೊಠಡಿಯಲ್ಲಿದ್ದ ಬಿರೋ ಬಾಗಿಲು ಮುರಿದು ಈ 2.50 ಲಕ್ಷ ಮೌಲ್ಯದ 50 ಗ್ರಾಂ ಬಂಗಾರದ 4 ಬಳೆ, ಈ 50 ಸಾವಿರ ಮೌಲ್ಯದ 10 ಗ್ರಾಂ 2 ಬಂಗಾರ ಸರ 25 ಸಾವಿರ …

Read More »