Breaking News

Shaikh BigTv

ಕಚ್ಚಿದ ನಾಗಪ್ಪನೊಂದಿಗೆ ಆಸ್ಪತ್ರೆಗೆ ಬಂದ ಭೂಪ

ಹುಬ್ಬಳ್ಳಿ: ವ್ಯಕ್ತಿಯೊಬ್ಬ ತನಗೆ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಘಟನೆ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ನಡೆದಿದೆ. ತಂದೆ ಮಗ ಇಬ್ಬರು ಶೇಂಗಾ ಕೀಳಲು ಹೋಗಿದ್ದ ವೇಳೆ ಘಟನೆ ನಡೆದಿದೆ. ಫಕ್ಕೀರಪ್ಪ ಅಣ್ಣಿಗೇರಿ ಎಂಬ ಯುವಕನಿಗೆ ಹಾವು ಕಚ್ಚಿದ್ದು, ಕೂಡಲೇ ಹಾವಿನ ತಲೆ ಜಜ್ಜಿ ಕೊಂದಿದ್ದ ಫಕ್ಕೀರಪ್ಪ. ನಂತರ ತಂದೆ ಈರಪ್ಪನ ಜೊತೆ ಆಸ್ಪತ್ರೆಗೆ ಬಂದಿದ್ದಾನೆ. ವೈದ್ಯರಿಗೆ ಹಾವನ್ನ ತೋರಿಸಿ, ಇದೆ ಹಾವು ಕಚ್ಚಿದೆ ಎಂದ ಫಕ್ಕೀರಪ್ಪ, ನಂತರ ಯುವಕನನ್ನು ಆಸ್ಪತ್ರೆಗೆ ದಾಖಲಿಸಿಕೊಂಡಿರೋ …

Read More »

ವರ್ಲ್ಡ್ ಸ್ನೇಟ್ ಗೇಮ್ಸ್ ಗೆ ಹುಬ್ಬಳ್ಳಿಯ ಬಾಲಕಿ ಆಯ್ಕೆ

ಹುಬ್ಬಳ್ಳಿ: ಹುಬ್ಬಳ್ಳಿ ರೋಲರ್ ಸ್ಕೆಟಿಂಗ್ ಅಕಾಡೆಮಿ ಸ್ಕೆಟ‌ರ್ ತ್ರಿಶಾ ಜಡಾಲ ಅವರು ಇಟಲಿಯಲ್ಲಿ ನಡೆಯಲಿರುವ ವರ್ಲ್ಡ್ ಸ್ನೇಟ್ ಗೇಮ್ಸ್ 2024ರಲ್ಲಿ ಆಯ್ಕೆಯಾಗಿದ್ದಾರೆ. ಕಳೆದ 10 ವರ್ಷಗಳಿಂದ ತ್ರಿಶಾ ಜಿಲ್ಲಾ ಮಟ್ಟದ, ರಾಜ್ಯಮಟ್ಟದ ಹಾಗೂ ರಾಷ್ಟ್ರೀಯ ಮಟ್ಟದ ಸ್ಕೆಟಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದಿದ್ದು ಈಗ ಅಂತರಾರಾಷ್ಟ್ರೀಯ ಮಟ್ಟದ ವರ್ಲ್ಡ್ ಸ್ಟೇಟಿಂಗ್ 2024ರಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಈ ಸಾಧನೆಯನ್ನು ಕರ್ನಾಟಕ ರೋಲರ್ ಸ್ಕಟಿಂಗ್ ಪ್ರಧಾನ ಕಾರ್ಯದರ್ಶಿ ಇಂಧೂದರ ಸೀತಾರಾಂ, ಹುಬ್ಬಳ್ಳಿ ರೋಲರ್ ಸ್ಟೇಟಿಂಗ್ …

Read More »

ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

ಧಾರವಾಡ: ಕೊಲೆಯ ಆರೋಪಿಯೊಬ್ಬನಿಗೆ ಧಾರವಾಡದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ಸಾವಿರ ದಂಡದ ಜೊತೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 2019ರ ಡಿಸೆಂಬರ್‌ನಲ್ಲಿ ಫಕ್ರುಸಾಬ್‌ ನದಾಫ್ ಎಂಬಾತನನ್ನು ಸಂತೋಷ ವಡ್ಡರ್ ಎಂಬಾತ ಆಸ್ಪತ್ರೆಗೆ ನುಗ್ಗಿ ಕೊಲೆ ಮಾಡಿದ್ದ. ನವಲಗುಂದದ ಅಪ್ರಾಪ್ತ ಮೇಲೆ ಫಕ್ರುಸಾಬ್ ನದಾಫ್ ಲೈಂಗಿಕ ದೌರ್ಜನ್ಯ ನಡೆಸಿದ್ದ. ಆತನಿಗೆ ಧರ್ಮದೇಟು ನೀಡಿದ್ದ ಸ್ಥಳೀಯರು ನಂತರ ಆತನನ್ನು ಪೊಲೀಸರ ವಶಕ್ಕೆ ನೀಡಿದ್ದರು. ಘಟನೆ: ಧರ್ಮದೇಟಿನಿಂದ ಗಾಯಗೊಂಡಿದ್ದ ಫಕ್ರುಸಾಬ್‌ನನ್ನು …

Read More »

ಶಾಂತಿಯುತವಾಗಿ ನಡೆದ ಗಣೇಶ ಚತುರ್ಥಿ, ಈದ್ ಮಿಲಾದ್ : ಧನ್ಯವಾದ ತಿಳಿಸಿದ ಎನ್.ಶಶಿಕುಮಾರ್

ಹುಬ್ಬಳ್ಳಿ: ಶ್ರೀ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಶಾಂತಿಯುತವಾಗಿ, ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಪೊಲೀಸ್‌ ಇಲಾಖೆಯೊಂದಿಗೆ ಸಹಕರಿಸಿದ ಸರ್ವ ನಾಗರಿಕರಿಗೂ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಧನ್ಯವಾದ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಕಮಿಷನ‌ರ್, ಎಲ್ಲ ಧರ್ಮಗಳ ಮುಖಂಡರು, ಶ್ರೀ ಗಣೇಶ ಮಂಡಳಿ ಮತ್ತು ಈದ್ ಮಿಲಾದ್ ಸಂಘಟನೆಯ ಮುಖಂಡರು, ಚುನಾಯಿತ ಪ್ರತಿನಿಧಿಗಳು ಸೇರಿದಂತೆ ನಗರದ ಎಲ್ಲ ಸಾರ್ವಜನಿಕರಿಗೆ ಮತ್ತು ವಿವಿಧ ಇಲಾಖೆಗಳ ಹಾಗೂ ಅಚ್ಚುಕಟ್ಟಾಗಿ ಕರ್ತವ್ಯವನ್ನು ನಿರ್ವಹಿಸಿದ ಹೊರ ಜಿಲ್ಲೆಗಳಿಂದ …

Read More »

ಕೆರೆಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಧಾರವಾಡ: ಧಾರವಾಡದ ಕೆಲಗೇರಿ ಕೆರೆಗೆ ವ್ಯಕ್ತಿಯೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಸಾಧನಕೇರಿಯ ಮಂಗಳಗಟ್ಟಿ ಪ್ಲಾಟ್ ನಿವಾಸಿ ದಾದಾಪೀ‌ರ್ ಬಿಸ್ತಿ ಎಂಬುವವರೇ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡವರು. ಈದ್ ಮಿಲಾದ್ ಹಬ್ಬದಂದೇ ಮನೆಯಿಂದ ಹೊರಹೋಗಿದ್ದ ದಾದಾಪೀ‌ರ್ ಇಂದು ಕೆಲಗೇರಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಇವರು ಆತ್ಮಹತ್ಯೆ ಮಾಡಿಕೊಳ್ಳಲು ನಿಖರವಾದ ಕಾರಣ ಏನು ಎಂದು ಗೊತ್ತಾಗಿಲ್ಲ. ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ದೂರು …

Read More »

ಶಾಲೆಗೆ ಸಹಕಾರ ನೀಡಿದ ಗ್ರಾಮದ ಜನರಿಗೆ ಅಭಿನಂದನೆ ಕಾರ್ಯಕ್ರಮ

ಕುಂದಗೋಳ : ಸರ್ಕಾರಿ ಶಾಲೆಯ ಶೈಕ್ಷಣಿಕ ಅಭಿವೃದ್ಧಿ ಜೊತೆಜೊತೆಗೆ ಆರ್ಥಿಕವಾಗಿ ಶಾಲೆಗೆ ಸಹಕಾರ ನೀಡಿದ ಗ್ರಾಮದ ಜನರಿಗೆ ಅಭಿನಂದನೆ ಮತ್ತು ಎಸ್ಟಿಎಂಸಿ ಮಂಡಳಿ ಆಯ್ಕೆ ಕಾರ್ಯಕ್ರಮ ಗುಡೇನಕಟ್ಟಿಯಲ್ಲಿ ಜರುಗಿತು. ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಶಾಲೆ ಏಳಿಗೆಗೆ ಕೊಡುಗೆ ನೀಡಿದ ಮತ್ತು ಅಭಿವೃದ್ಧಿಗೆ ಸಹಕಾರ ನೀಡಿದ ಸ್ಥಳೀಯರಿಗೆ ಸನ್ಮಾನ ಮಾಡಲಾಯಿತು. ಬಳಿಕ ಎಸ್ಟಿಎಂಸಿ ಅಧ್ಯಕ್ಷರಾಗಿ ಗೋಪಾಲ್ ದೊಡ್ಡಮನಿ, ಉಪಾಧ್ಯಕ್ಷರಾಗಿ ಲಕ್ಷ್ಮೀ ಮಲ್ಲಿಗವಾಡ ಆಯ್ಕೆಯಾದರು. ನೂತನ ಎಸ್ಟಿಎಂಸಿ ಸದಸ್ಯರಿಗೆ ಹಾಗೂ …

Read More »

ಕರ್ನಾಟಕ ಭೋವಿ ಅಭಿವೃದ್ಧಿ ನಿಗಮವು ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ

ಧಾರವಾಡ: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಿಂದ 2024-25ನೇ ಸಾಲಿಗೆ ಅನುಷ್ಠಾನಗೊಳಿಸಿರುವ ಸ್ವಯಂ ಉದ್ಯೋಗ ಯೋಜನೆಯಡಿ ನೇರ ಸಾಲ, ಉದ್ಯಮಶೀಲತಾ ಯೋಜನೆ, ಸ್ವತಂತ್ರ ಚಾಲಕ ಯೋಜನೆ, ಕಿರುಸಾಲ ಪ್ರೇರಣಾ ಯೋಜನೆ, ಭೂ ಕುಸಿತ ಯೋಜನೆ, ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಕರ್ನಾಟಕ ಒನ್, ಗ್ರಾಮ್ ಒನ್, ಹುಬ್ಬಳ್ಳಿ, ಧಾರವಾಡ ಒನ್ ಕೇಂದ್ರಗಳಿಗೆ ಸೇವಾಸಿಂಧು ಪೋರ್ಟಲ್ http://sevasindhu.karantaka.gov.in ಮೂಲಕ ಅಕ್ಟೋಬರ್ 10, 2024 ರೊಳಗೆ ಅರ್ಜಿ ಸಲ್ಲಿಸಬಹುದು. ದೂರವಾಣಿ ಸಂಖ್ಯೆ: …

Read More »

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅಕ್ಟೋಬರ್ 15 ರವರೆಗೆ ವಿಸ್ತರಣೆ

ಧಾರವಾಡ : 2024-25ನೇ ಸಾಲಿಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ, ಅರೆ ಅಲೆಮಾರಿ, ಪ್ರವರ್ಗ-1 ರ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲುವ ಅವಧಿಯನ್ನು ಅಕ್ಟೋಬರ್ 15, 2024 ರವರೆಗೆ ವಿಸ್ತರಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು https://ssp.postmatric.karnataka.gov.in ವೈಬ್‍ಸೈಟ್ ಮೂಲಕ ಅಕ್ಟೋಬರ್ 15, 2024 ರೊಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 8050770005 ಗೆ ಅಥವಾ https://bcwd.karnataka.gov.in ವೈಬ್‍ಸೈಟ್‍ಗೆ ಭೇಟಿ ನೀಡಬಹುದು ಎಂದು ಹಿಂದುಳಿದ ವರ್ಗಗಳ …

Read More »

ಜನರಿಗೆ ಕಾಟ ಕೊಡುತ್ತಿದ್ದ ಗೂಳಿ ಸೆರೆ

ಧಾರವಾಡ: ನರೇಂದ್ರ ಗ್ರಾಮದಲ್ಲಿ ಜನ, ಜಾನುವಾರುಗಳಿಗೆ ವಿಪರೀತ ಕಾಟ ಕೊಡುತ್ತಿದ್ದ ಗೂಳಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. ಕಳೆದ 20 ದಿನಗಳಿಂದ ಗ್ರಾಮದ ಜಾನುವಾರುಗಳು ಮತ್ತು ಜನರನ್ನು ಕಾಡುತ್ತಿದ್ದ ಈ ಗೂಳಿಯ ಆಟಾಟೋಪಕ್ಕೆ ತಡೆಯೇ ಇಲ್ಲದಂತಾಗಿತ್ತು. ಗ್ರಾಮದ ಗುಡ್ಡದ ಬಸವಣ್ಣನ ಹರಕೆಯಾಗಿರುವ ಈ ಗೂಳಿ ಜನರಿಗೆ ಕಾಟ ನೀಡುತ್ತಿತ್ತು. ಈ ಗೂಳಿಯನ್ನು ಬಂಧಿಸಲು ಪಕ್ಕದ ಚೆನ್ನಮ್ಮನ ಕಿತ್ತೂರನಿಂದ ಪರಿಣಿತರು ಬಂದು ಗೂಳಿಯನ್ನು ಸೆರೆ ಹಿಡಿದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

Read More »

ಚಾಲಕನ ನಿಯಂತ್ರಣ ತಪ್ಪಿ ದ ಇನ್ನೊಂದು ರಸ್ತೆಗೆ ಜಾರಿದ ಬಸ್

ಧಾರವಾಡ :ನವಲಗುಂದ ತಾಲೂಕಿನ ಬ್ಯಾಹಟ್ಟಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಸಂಸ್ಥೆಯ ಇನ್ನೊಂದು ರಸ್ತೆ ಪಕ್ಕಕ್ಕೆ ಜಾರಿರುವ ಘಟನೆ ಸಂಭವಿಸಿದೆ. ಬ್ಯಾಹಟ್ಟಿ ಕುಸುಗಲ್ ಮಧ್ಯೆ ಸಂಚರಿಸುವ ಸಾರಿಗೆ ಸಂಸ್ಥೆಯ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಜಾರಿದೆ. ಈ ಬಸ್ಸಿನಲ್ಲಿ ಸುಮಾರು 30 ಜನ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

Read More »