Breaking News

Shaikh BigTv

ಕುಂದಗೋಳ ಎಪಿಎಂಸಿ ಕಚೇರಿ ಸಿಬ್ಬಂದಿ ಇಲ್ಲದೇ ಖಾಲಿ ಖಾಲಿ

ಕುಂದಗೋಳ : ಕುಂದಗೋಳ ಎಪಿಎಂಸಿ ಕಚೇರಿ ಸಿಬ್ಬಂದಿ ಇಲ್ಲದೇ ಖಾಲಿ ಖಾಲಿಯಾಗಿದೆ.ರೈತರ ಏಳೆ ವರ್ತಕರ ವಹಿವಾಟು ಗಮನಿಸಿ ತನ್ನ ವ್ಯಾಪ್ತಿಯ ವಾಣಿಜ್ಯ ಮಳಿಗೆ ಮತ್ತು ಗೋದಾಮುಗಳ ಮೇಲೆ ನಿಗಾ ಇಡಬೇಕಾದವರು ಯಾರು‌ ಇಲ್ಲದಂತಾಗಿದೆ. ಕುಂದಗೋಳ ಪಟ್ಟಣದಲ್ಲಿ 23 ಎಕರೆ ವಿಸ್ತೀರ್ಣ ಹಾಗೂ ಸಂಶಿ ಉಪ ಎಪಿಎಂಸಿ 2 ಎಕರೆ ವಿಸ್ತೀರ್ಣ ಹೊಂದಿರುವ ಮಾರುಕಟ್ಟೆಗೆ ಸರ್ಕಾರದ ಅಧಿಸೂಚನೆ ಪ್ರಕಾರ 13 ಜನ ಅಧಿಕಾರಿ, ಸಿಬ್ಬಂದಿ ಬೇಕು. ಆದ್ರೇ ! ಕರ್ತವ್ಯದಲ್ಲಿ ಇರೋದು …

Read More »

ಹುಬ್ಬಳ್ಳಿಯಲ್ಲಿ ವಿಭಿನ್ನ ಗಣೇಶ ವಿಸರ್ಜನೆ ಆಚರಣೆ

ಹುಬ್ಬಳ್ಳಿ : ಗಣೇಶ ವಿಸರ್ಜನೆ ವೇಳೆಯಲ್ಲಿ ಕವಾಲಿ ಹಾಡನ್ನು ಹಾಕುವ ಮೂಲಕ ಹಿಂದೂ ಯುವಕರು ಮುಸ್ಲಿಂ ಪ್ರವಾದಿ ಮುಹಮ್ಮದರ ಗೌರವ ನಮನ ಸಲ್ಲಿಸಿದ್ದರು. ಅದೇ ರೀತಿಯಲ್ಲಿ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಗಣೇಶ ಪೆಂಡಾಲ್ ಮುಂದೆ ಮುಸ್ಲಿಂ ಯುವಕರು ಗಣಪತಿ ಹಾಡನ್ನು ಹಾಕುವ ಮೂಲಕ ವಿಶ್ವೇಶ್ವರನಿಗೆ ಗೌರವ ಸಮರ್ಪಣೆ ಮಾಡಿರುವ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ನಾವೆಲ್ಲರೂ ಒಂದೇ ಎಂಬುವ ಸಂದೇಶವನ್ನು ಸಾರಿದ್ದಾರೆ. ಬಹುತೇಕ ಕಡೆಯಲ್ಲಿ ಕೋಮುವಾದ ಗಲಾಟೆ ನಡೆಯುತ್ತಿರುವ …

Read More »

ಬೆಳಗಲಿ ಕ್ರಾಸ್ ಬಳಿ ಅಪಘಾತ : ಆರು ಜನರಿಗೆ ಗಾಯ

ಹುಬ್ಬಳ್ಳಿ : ತಾಲೂಕಿನ ಬೆಳಗಲಿ ಕ್ರಾಸ್ ಬಳಿ ಟ್ರ್ಯಾಕ್ಟರ್‌ ಹಾಗೂ ಟ್ಯಾಂಕ‌ರ್ ನಡುವೆ ಅಪಘಾತ ಸಂಭವಿಸಿದೆ. ಟ್ರ್ಯಾಕ್ಟರ್ ನಲ್ಲಿ ಎಂದಿನಂತೆ ಕೆಲಸಕ್ಕೆ ತೆರಳುವ ಸಮಯದಲ್ಲಿ ಹಿಬಂದಿಯಿಂದ ಬಂದ ಟ್ಯಾಂಕರ್, ಟ್ರ್ಯಾಕ್ಟರ್ ಗೆ ಗುದ್ದಿದ ರಭಸಕ್ಕೆ ಟ್ರ್ಯಾಕ್ಟ‌ರ್ ನ ಟ್ರೇಲರ್ ಬೇರ್ಪಟ್ಟಿದೆ,ಅಪಘಾತದಲ್ಲಿ ಆರು ಜನ ಮಹಿಳೆಯರು ಸೇರಿದಂತೆ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಟ್ರ್ಯಾಕ್ಟರ್‌ ನಲ್ಲಿ ಇದ್ದ ಶಾಂತವ್ವ, ಕಲಾವತಿ, ಸವಿತಾ ಹಂಚಿನಾಳ, ಲಕ್ಷ್ಮಿ, ಮಹಾದೇವಿ, ಸವಿತಾ ಪಾಟೀಲ್ …

Read More »

ಟ್ರ್ಯಾಕ್ಟರ್ ಚಲಾವಣೆ ಮಾಡಿದ ಶಾಸಕ

ಕುಂದಗೋಳ: ಗಣೇಶೋತ್ಸವದ 11ನೇ ದಿನದ ಗಣಪತಿ ಮೂರ್ತಿಗಳ ಮೆರವಣಿಗೆಯಲ್ಲಿ ಶಾಸಕ ಎಮ್ ಆರ್ ಪಾಟೀಲ್‌ ಭಾಗವಹಿಸಿ, ಟ್ರ್ಯಾಕ್ಟರ್ ಚಲಾವಣೆ ಮಾಡಿ ಗಮನ ಸೆಳೆದರು. ಕುಂದಗೋಳ ಪಟ್ಟಣದಲ್ಲಿನ ವಿವಿಧ ಕಡೆಗಳಲ್ಲಿ ಸ್ಥಾಪನೆ ಮಾಡಿದ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಭಾಗವಹಿಸಿ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕುಂದಗೋಳ ಪಟ್ಟಣದ ವಿವಿಧ ಗಣೇಶೋತ್ಸವ ಮಂಡಳಿಗಳ ಮುಖಂಡರು ಇದ್ದರು.

Read More »

ಸೆ. 22 ರಂದು ಪ್ರೊ. ಕೆ. ಬಿ ಗುಡಿಸಿ ಅಭಿನಂದನಾ ಸಮಾರಂಭ

ಧಾರವಾಡ: ಸೆಪ್ಟೆಂಬರ್ 22 ರಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ. ಬಿ ಗುಡಿಸಿ ಅಭಿನಂದನಾ ಸಮಾರಂಭ ಹಾಗೂ ಘನಮನಸಂಪನ್ನರು ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ ಎಂದು ಹಿರಿಯ ಸಾಹಿತಿ ವೀರಣ್ಣ ರಾಜೂರ ತಿಳಿಸಿದರು. ನಗರದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಗದುಗಿನ ತೋಂಟದಾರ್ಯ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಂಸದ ಜಗದೀಶ ಶೆಟ್ಟರ …

Read More »

ವಿಶೇಷ ಅಂಚೆ ಚೀಟಿ ಬಿಡುಗಡೆ ಸಮಾರಂಭ

ಧಾರವಾಡ : ಡಿವಿಜನ್ ಪೋಸ್ಟಲ್ ಎಂಪ್ಲಾಯಿಸ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯು ಒಂದು ನೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸವಿನೆನಪಿಗಾಗಿ ವಿಶೇಷ ಅಂಚೆ ಚೀಟಿ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಪೋಸ್ಟ್ ಮಾಸ್ಟರ್ ಜನರಲ್ ಡಾ. ರಾಜೇಂದ್ರ ಕುಮಾರ್ ವಿಶೇಷ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪೋಸ್ಟ್ ಮಾಸ್ಟರ್ ಕುಂಟೋಜಿ, ಶರಣು ಹಂಡಿ ಸೇರಿದಂತೆ ಹಲವರು ಇದ್ದರು.

Read More »

ವಿಭಿನ್ನ ಧನ್ಯವಾದ ತಿಳಿಸಿದ ಖಾಕಿಪಡೆ

ಹುಬ್ಬಳ್ಳಿ: ನೀವುಗಳು ನಮ್ಮ ಇಲಾಖೆಯ ಮೇಲಿಟ್ಟಿರುವ ಪ್ರೀತಿ ವಿಶ್ವಾಸದಿಂದಲೂ, ಇಲಾಖೆಯ ಕಾರ್ಯವೈಖರಿಯನ್ನು ತಮ್ಮ ಮೀಡಿಯಾದ ಮುಖಾಂತರ ಸಾರ್ವಜನಿಕರಿಗೆ ತಲುಪಿಸಿದ್ದದರ ಮುಖೇನ ಜನರಲ್ಲಿ ಹೊಸ ಭಾವವನ್ನು ಬಿತ್ತಿದುದರ ಪರಿಣಾಮ ಹುಬ್ಬಳ್ಳಿ – ಧಾರವಾಢ ನಗರಗಳ ವ್ಯಾಪ್ತಿಯಲ್ಲಿ ಶ್ರೀ ಗಣೇಶೋತ್ಸವವೂ, ಈದ್ ಮಿಲಾದ್ ಹಬ್ಬದ ಉತ್ಸವವೂ ಯಾವುದೇ ಸಮಸ್ಯೆಗಳಿಲ್ಲದೆ ನಿರಾತಂಕವಾಗಿ ಸಂಪನ್ನಗೊಂಡಿದೆ. ಆದ್ದರಿಂದ ತಮಗೆಲ್ಲರಿಗೂ ನನ್ನ ವೈಯ್ಯಕ್ತಿಕವಾಗಿ ವಂದನೆಗಳನ್ನು ಸಲ್ಲಿಸಲಿಷ್ಟಪಡುತ್ತೇನೆ. ಕವಿ ಅಡಿಗರು ತಮ್ಮ ಕವನದಲ್ಲಿ ಕಟ್ಟುವೆವು ನಾವು ಹೊಸನಾಡೊಂದನು, ರಸದ ಬೀಡೊಂದನು. …

Read More »

ಜನರ ಅನುಕೂಲಕ್ಕಾಗಿ ಇಂದಿರಾ ಕ್ಯಾಂಟೀನ್ ನೀರ್ಮಾಣ, ಯಾವುದೇ ಉದ್ದೇಶವಿಲ್ಲ: ಪ್ರಸಾದ್ ಅಬ್ಬಯ್ಯ

ಹುಬ್ಬಳ್ಳಿ: ಮಂಟೂರು ರಸ್ತೆಯಲ್ಲಿ ಸ್ಮಶಾನದಲ್ಲಿ ನಿರ್ಮಿಸ್ತಿರುವ ಇಂದಿರಾ ಕ್ಯಾಂಟೀನ್ ವಿವಾದಕ್ಕೆ ಕಾರಣವಾಗಿದೆ. ಜನರ ಅನುಕೂಲಕ್ಕಾಗಿ ಈ ಕ್ಯಾಂಟೀನ್ ನಿರ್ಮಿಸಿದೆ. ಯಾವುದೇ ಉದ್ದೇಶವಿಲ್ಲವೆಂದು ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ರಾಜಕೀಯ ಪ್ರೇರಿತವಾದ ವಿರೋಧ. ಅಲ್ಲಿನ ಜನ ಇಂದಿರಾ ಕ್ಯಾಂಟಿನ್ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಇದರಿಂದ ರಾಜಕೀಯ ಲಾಭ ಪಡೆಯಲು ಕೆಲವರು ವಿರೋಧ ಮಾಡುತ್ತಿದ್ದಾರೆ. ಒಂದು ವೇಳೆ ಅಲ್ಲಿನ ಜನ ವಿರೋಧ ವ್ಯಕ್ತಪಡಿಸಿದ್ರೆ ಇಂದಿರಾ ಕ್ಯಾಂಟಿನ್ ಸ್ಥಳಾಂತರ …

Read More »

ಆಶ್ರಯ ಬಡಾವಣೆಗೆ ಶಾಸಕ ಭೇಟಿ

ನವಲಗುಂದ: ನಗರದ ಅಣ್ಣಿಗೇರಿ ರಸ್ತೆಯಲ್ಲಿರುವ ಆಶ್ರಯ ಬಡಾವಣೆಗೆ ಶಾಸಕ ಎನ್.ಎಚ್.ಕೋನರಡ್ಡಿ ಭೇಟಿ ನೀಡಿ ಫಲಾನುಭವಿಗಳೊಂದಿಗೆ ಚರ್ಚಿಸಿ ಮನೆ ನಿರ್ಮಾಣ ಕಾಮಗಾರಿಯನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಸ್‌.ಪಿ.ಪೂಜಾರ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಸದಸ್ಯರಾದ ಜೀವನ ಪವಾರ, ಅಪ್ಪಣ್ಣ ಹಳ್ಳದ, ಸುರೇಶ ಮೇಟಿ, ಉಸ್ಮಾನ ಬಬರ್ಚಿ, ಮದರಸಾಬ ಉಗುರಗೋಳ ಸೇರಿದಂತೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Read More »

ಪ್ರಮೋದ್‌ ಮುತಾಲಿಕ್‌ಗೆ ಬೆಂಕಿ ಹಚ್ಚೇದನ್ನ ಬಿಟ್ಟರೆ ಏನೂ ಗೊತ್ತಿಲ್ಲ: ಪ್ರಸಾದ ಅಬ್ಬಯ್ಯ

ಹುಬ್ಬಳ್ಳಿ: ಪ್ರಮೋದ್‌ ಮುತಾಲಿಕ್‌ಗೆ ಬೆಂಕಿ ಹಚ್ಚೇದನ್ನ ಬಿಟ್ಟರೆ ಏನೂ ಗೊತ್ತಿಲ್ಲ. ಅವನ ತಾಕತ್ತು ನಾನು ನೋಡಿದ್ದೇನೆ. ಅವನು ಹೇಳಿದ್ದಕ್ಕೆ ನಾನು ಉತ್ತರ ಕೊಡಬೇಕಿಲ್ಲ. ನನ್ನನ್ನು ಜನರು ಆರಿಸಿ ತಂದಿದ್ದಾರೆ ಅವನಲ್ಲ ಎಂದು ಶಾಸಕ ಪ್ರಸಾದ ಅಬ್ಬಯ್ಯ ಅವರು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್‌ ಮುತಾಲಿಕ್‌ಗೆ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮಂಟೂರ ರೋಡ್‌ನ ರುಧ್ರಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಿರುವ ವಿಚಾರವಾಗಿ ಮಾತನಾಡಿದ್ದ ಪ್ರಮೋದ್‌ ಮುತಾಲಿಕ್, ಪ್ರಸಾದ್ ಅಬ್ಬಯ್ಯ ಅವರಿಗೆ …

Read More »