Breaking News

Shaikh BigTv

ರೈಲ್ವೇ ನೌಕರಿ ಬೇಕು ಅಂದ್ರೆ ಮಂಚಕ್ಕೆ ಬಾ ಎಂದು ಕಾಮುಕ : ಇದೀಗ ಪೋಲಿಸ್ ರ ಬಲೆಯಲ್ಲಿ

ಹುಬ್ಬಳ್ಳಿ: ರೈಲ್ವೇ ನೌಕರಿ ಬೇಕು ಅಂದ್ರೆ ನನ್ನ ಜೊತೆ ಮಂಚವನ್ನು ಹಚ್ಚಿಕೊಳ್ಳಬೇಕು ಎಂದು ಮಹಿಳೆಯೊಬ್ಬರಿಗೆ ಸರ್ಕಾರಿ ನೌಕರಿಯ ಆಮಿಷ ಒಡ್ಡಿ, ಲೈಂಗಿಕವಾಗಿ ಬಳಸಿಕೊಳ್ಳಲು ಮುಂದಾಗಿದ್ದ ರೈಲ್ವೇ ಇಲಾಖೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ನದೀಮ್ ಎಂಬ ಕಾಮುಕನು ಇದೀಗ ಪೋಲಿಸ ಅತಿಥಿಯಾಗಿದ್ದಾರೆ. ರೈಲ್ವೇ ಇಲಾಖೆಯ GM ಕಚೇರಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ನದೀಮ್ ಎಂಬಾತ ನಕಲಿ ಫೇಸ್ಟುಕ್ ಅಕೌಂಟ್ ಮಾಡಿಕೊಂಡು ಮಹಿಳೆಯೊಬ್ಬರಿಗೆ ಮೆಸೆಂಜ‌ರ್ ಮೂಲಕ ನಾನು ದೆಹಲಿಯಲ್ಲಿರುವ ರೈಲ್ವೇ …

Read More »

ಹುಲಿಕೇರಿ ಇಂದ್ರಮ್ಮ ಕೆರೆಗೆ ಬಾಗಿನ ಅರ್ಪಿಸಿದ ಸಚಿವ ಭೋಸರಾಜು

ಧಾರವಾಡ : ಅಳ್ನಾವರ ತಾಲೂಕಿನ ಐತಿಹಾಸಿಕ ಹುಲಿಕೇರಿ ಇಂದ್ರಮ್ಮ ಕೆರೆಗೆ ಭೇಟಿ ನೀಡಿ, ಬಾಗಿನ ಅರ್ಪಿಸಿದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್.ಎಸ್.ಭೋಸರಾಜು ಅವರು ಕೆರೆ ದುರಸ್ತಿ ಕಾಮಗಾರಿಯನ್ನು ಯುದ್ದೋಪಾದಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು. ಇಂದು ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಹುಲಿಕೇರಿ ಗ್ರಾಮದ ಇಂದ್ರಮ್ಮ ಸಣ್ಣ ನೀರಾವರಿ ಕೆರೆ ಪುನರುಜ್ಜೀವನ ಕಾಮಗಾರಿಯನ್ನು ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಹಾಗೂ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರು. ಇಂದ್ರಮ್ಮ ಕೆರೆಯ ಕಾಮಗಾರಿಯನ್ನು …

Read More »

9 ಕೋಟಿ ವೆಚ್ಚದ ತಾರಾಲಯ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಿ: ಸಚಿವ ಎನ್.ಎಸ್. ಭೋಸರಾಜು ಸೂಚನೆ

ಧಾರವಾಡ : ಧಾರವಾಡದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ 9 ಕೋಟಿ ರೂ ವೆಚ್ಚದ ತಾರಾಲಯ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕೆಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಸೂಚನೆ ನೀಡಿದರು. ಇಂದು ಧಾರವಾಡದಲ್ಲಿರುವ ಧಾರವಾಡ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದ ಸಚಿವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮಕ್ಕಳ ಅನುಕೂಲಕ್ಕಾಗಿ ವಿಜ್ಞಾನ ಕೇಂದ್ರಗಳನ್ನು ಹಾಗೂ …

Read More »

ವರೂರಿನಲ್ಲಿ ಲೋಕ ಕಲ್ಯಾಣಕ್ಕೆ ಮಹಾ ಮಸ್ತಕಾಭೀಷೇಕ..

Featured Video Play Icon

ಹುಬ್ಬಳ್ಳಿ: ಇಲ್ಲಿಯ ವರೂರಿನ ಗ್ರಾಮದಲ್ಲಿ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ಜೈನ ತೀರ್ಥಂಕರರ ಸಮಾಗಮದಲ್ಲಿ 2025ರ ಜನವರಿ 15ರಿಂದ 26ರ ವರೆಗೆ ಮಹಾ ಮಸ್ತಕಾಭೀಷೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಮಹೋತ್ಸವ ಮುಹೂರ್ತ ಉದ್ಘೋಷ ಕಾರ್ಯಕ್ರಮದಲ್ಲಿ ಮಹಾ ಮಸ್ತಕಾಭೀಷೇಕದ ದಿನಾಂಕ ನಿಗದಿ ಮಾಡಲಾಗಿದ್ದು,‌ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಮಹಾ ಮಸ್ತಕಾಭೀಷೇಕದ ಅಧ್ಯಕ್ಷರನ್ನಾಗಿ ಕೂಡ ಘೋಷಣೆ ಮಾಡಲಾಯಿತು. ಅಲ್ಲದೇ ಇದೇ ವೇಳೆ ವೀರೇಂದ್ರ ಹೆಗ್ಗಡೆಯವರಿಗೆ ಜವಾಬ್ದಾರಿ ವಹಿಸುವ …

Read More »

ಸೆಪ್ಟೆಂಬರ್ 7 ರಿಂದ ಟೋಲ್ ಸಂಗ್ರಹ ಸ್ಥಗಿತ

ಹುಬ್ಬಳ್ಳಿ: ಹು-ಧಾ ಬೈಪಾಸ್ ರಸ್ತೆ ನಿರ್ವಹಣೆ ಮತ್ತು ರಸ್ತೆ ಬಳಕೆದಾರರ ಶುಲ್ಕ ಆಕರಣೆ (ಟೋಲ್‌) ಗುತ್ತಿಗೆ ಪಡೆದಿದ್ದ ನಂದಿ ಹೈವೇ ಡೆವಲಪರ್ಸ್ ಲಿಮಿಟೆಡ್ ತನ್ನ ಗುತ್ತಿಗೆ ಅವಧಿ ಮುಗಿದಿರುವುದರಿಂದ ಸೆಪ್ಟೆಂಬರ್ 7 ರಿಂದ ಟೋಲ ಸಂಗ್ರಹ ಸ್ಥಗಿತಗೊಳಿಸಲಿದೆ. ಬೈಪಾಸ್ ನಿರ್ವಹಣೆ ಮತ್ತು ಟೋಲ್ ಸಂಗ್ರಹ ಕಾರ್ಯ ಸ್ಥಗಿತಗೊಳಿಸಲಿದ್ದು, 1998ರಿಂದಲೂ ಈ ಬೈಪಾಸ್‌ ನಿರ್ವಹಣೆ ಮತ್ತು ಟೋಲ್ ಸಂಗ್ರಹಣೆ ಕಾರ್ಯ ನಿರ್ವಹಿಸಿದ್ದ ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸುವ ನಿರ್ಧಾರ ಪ್ರಕಟಿಸಿದೆ. ಈ ಕುರಿತು …

Read More »

ರಸ್ತೆಗಳ ಕಾಂಕ್ರೀಟ್ ಕಾಮಗಾರಿಗೆ ಭೂಮಿ ಪೂಜೆ

ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಧಾರವಾಡ ಶಹರದ ವಾರ್ಡ ನಂಬರ್ 23ರ ಯಾಲಕ್ಕಿ ಶೆಟ್ಟ‌ರ್ ಕಾಲೋನಿ ಹಾಗೂ ಅಂಬೇಡ್ಕರ ನಗರದಲ್ಲಿ ಒಳ ರಸ್ತೆಗಳ ಕಾಂಕ್ರೀಟ್ ಕಾಮಗಾರಿಗೆ ಭೂಮಿ ಪೂಜೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೆರವೇರಿಸಿದರು. ಈ ಸಂದರ್ಭದಲ್ಲಿ ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ಬಿಜೆಪಿ ಮುಖಂಡ ಸಂಜಯ ಕಪಟಕರ, ಕರಿಯಪ್ಪ ಸುಣ್ಣಗಾರ ಸೇರಿದಂತೆ ಹಲವರು

Read More »

ಗಣೇಶ ಚತುರ್ಥಿ , ಈದ್ ಮಿಲಾದ್ ಹಬ್ಬದ ಶಾಂತಿ ಸಭೆ: ಹಲವು ಗಣ್ಯರು ಭಾಗಿ

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷ್ನರೇಟ್ ವ್ಯಾಪ್ತಿಯಲ್ಲಿ ಪೊಲೀಸ್ ಆಯುಕ್ತ ಶಶಿಕುಮಾರ್ ನೇತೃತ್ವದಲ್ಲಿ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಶಾಂತಿ ಸಭೆ ನಡೆಯುತ್ತು. ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು . ಶಾಂತಿ, ಸೌಹಾರ್ದತೆಯಿಂದ ಹಬ್ಬ ಆಚರಣೆಗಾಗಿ ಸಭೆ ನಡೆಸಲಾಯಿತು. ಹಲವು ಗಣೇಶ ಪ್ರತಿಷ್ಠಾಪನಾ ಸಂಘಟನೆ ಭಾಗಿಯಾಗಿದ್ದರು.ಹಬ್ಬದ ವೇಳೆ ಬೇಕಾದ ಮೂಲಭೂತ ಸೌಕರ್ಯ ನೀಡಲು ಮನವಿ ಸಲ್ಲಿಸಲಾಯಿತು. ಚಎರಡೂ ಹಬ್ಬಗಳನ್ನು ಸೌಹಾರ್ದಯುತವಾಗಿ ಆಚರಿಸಬೇಕು …

Read More »

ಜೋಶಿ, ಎಂ. ಆರ್ ಪಾಟೀಲ್ ಗೆ ಸನ್ಮಾನಿಸಿ ಗೌರವ ಸಲ್ಲಿಕೆ

ಕುಂದಗೋಳ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಕುಂದಗೋಳ ತಾಲೂಕಿನ ಶಾಸಕ ಎಂ. ಆರ್ ಪಾಟೀಲ್ ಅವರನ್ನು ಬಿಜೆಪಿ ಕಾರ್ಯಕರ್ತರು ಸನ್ಮಾನ ಮಾಡಿ ಗೌರವಿಸಿದರು. ನಂತರ ಕುಂದಗೋಳ ತಾಲೂಕಿನ ಅಭಿವೃದ್ಧಿ ಶ್ರಮಿಸುವಂತೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಶಿರಹಟ್ಟಿ ತಾಲೂಕಿನ ಶಾಸಕ ಡಾ. ಚಂದ್ರು ಲಮಾಣಿ ಸೇರಿದಂತೆ ಇತರರು ಹಾಗೂ ಮುಖಂಡರು ಉಪಸ್ಥಿತರಿದ್ದರು.

Read More »

ಮಳೆಯಿಂದಾಗಿ ರೈತರ ಬೆಳೆಗಳು : ಪರಿಹಾರ ಕೊಡುವಂತೆ ಪ್ರತಿಭಟನೆ

ಕಲಘಟಗಿ:ಮಳೆಯಿಂದಾಗಿ ರೈತರ ಬೆಳೆಗಳು ಹಾನಿಯಾಗಿದ್ದು, ಪರಿಹಾರ ಒದಗಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ ಕಲಘಟಗಿ ಪಟ್ಟಣದಲ್ಲಿ ನಡೆಸಲಾಯಿತು. ರೈತರು ಬೆಳೆದ ಬೆಳೆಗಳು ಹಾನಿಯಾಗಿದ್ದು, ರೈತರು ಸಂಕಷ್ಟವನ್ನು ಎದುರಿಸುವಂತಾಗಿದೆ. ಕೂಡಲೇ ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Read More »

ಜಿಲ್ಲಾಮಟ್ಟದ ತರಬೇತಿದಾರರಿಗೆ ಎರಡು ದಿನಗಳ ತರಬೇತಿ

ಧಾರವಾಡ : ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗ್ರಾಮ ಆರೋಗ್ಯ ಯೋಜನೆಯಡಿ, ಜಿಲ್ಲಾಮಟ್ಟದ ತರಬೇತಿದಾರರಿಗೆ ಹಮ್ಮಿಕೊಂಡಿರುವ ಎರಡು ದಿನಗಳ ತರಬೇತಿಯನ್ನು ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿ ದೀಪಕ ಮಡಿವಾಳರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ಸುಜಾತಾ ಹಸವೀಮಠ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಚ್.ಎಚ್.ಕುಕನೂರ ಹಾಗೂ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅಧಿಕಾರಿಗಳು ಇದ್ದರು.

Read More »