Breaking News

Shaikh BigTv

ಲಾ ಆ್ಯಂಡ್ ಆರ್ಡರ್ ಡಿಸಿಪಿಯಾಗಿ ಕುಶಾಲ್ ಚೌಕ್ಸೆ ಅಧಿಕಾರ ಸ್ವೀಕಾರ..!

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟಿನ ಲಾ & ಆರ್ಡರ್ ಡಿಸಿಪಿಯಾಗಿ ಕುಶಾಲ್ ಅಧಿಕಾರ ಸ್ವೀಕಾರ ಮಾಡಿದ್ದಾರೆ.ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ನ ನೂತನ ಉಪ ಪೊಲೀಸ್ ಆಯುಕ್ತರಾಗಿ ( ಕಾನೂನು & ಸುವ್ಯವಸ್ಥೆ ) ಕುಶಾಲ್ವ ಚೌಕ್ಸೆ ಅಧಿಕಾರ ಸ್ವೀಕಾರ ಸ್ವೀಕರಿಸಿದ್ದು, ಹುಬ್ಬಳ್ಳಿ-ಧಾರವಾಡ ಮಹಾನಗರ ‌ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಅವರು ನೂತನ ಡಿಸಿಪಿಗೆ ಅಭಿನಂದನೆ ಸಲ್ಲಿಸಿದರು.ಕುಶಾಲ್ ಚೌಕ್ಸ್ 2018ನೇ ಬ್ಯಾಚ್‍ನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದು, ಬೆಂಗಳೂರಿನ ವಿಧಿವಿಜ್ಞಾನ …

Read More »

ನೇಹಾ ಪ್ರಕರಣ ಸಿಬಿಐಗೆ ಕೊಡಲ್ಲ. ಬಿಜೆಪಿ ಕಾಲದಲ್ಲಿ 466 ಕೊಲೆಯಾಗಿದೆ ಎಂದ ಗೃಹ ಸಚಿವರು..!

Featured Video Play Icon

ಹುಬ್ಬಳ್ಳಿ: ನೇಹಾ ಕೊಲೆ ಪ್ರಕರಣವನ್ನು ಯಾವುದೇ ಪರಿಸ್ಥಿತಿಯಲ್ಲಿಯೂ ಕೂಡ ಸಿಬಿಐಗೆ ಕೊಡುವುದಿಲ್ಲ. ನಮ್ಮ ರಾಜ್ಯದಲ್ಲಿಯೇ ಸಮರ್ಥವಾಗಿ ತನಿಖೆ ಮಾಡಲಾಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ನೇಹಾ ಕೊಲೆಯ ಬಗ್ಗೆ ನನಗೆ ಬಂದಿದ್ದ ಮಾಹಿತಿ ಪ್ರೀತಿ ವಿಷಯಕ್ಕೆ ಎಂಬುವಂತ ಮಾಹಿತಿಯಿಂದ ಮಾತನಾಡಿದ್ದೇ. ಆದರೆ ಅದನ್ನೇ ನಾವು ಮುಂದುವರೆಸಿಕೊಂಡು ಹೋಗಿಲ್ಲ ಎಂದರು.ಪೊಲೀಸರನ್ನು ಅಂಜಲಿ ಕುಟುಂಬ ಕೊಲೆ ಪೂರ್ವದಲ್ಲಿ ಭೇಟಿಯ ಬಗ್ಗೆ ಮಾತನಾಡಿದ್ದೇನೆ. ಪೊಲೀಸರ ನಿರ್ಲಕ್ಷ್ಯ ಎಂಬುವುದು …

Read More »

ಅಂಜಲಿ ಮನೆಗೆ ಹೋಮ್ ಮಿನಿಸ್ಟರ್ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ..!

Featured Video Play Icon

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಒಂದೇ ತಿಂಗಳಲ್ಲಿ ಇಬ್ಬರು ಯುವತಿಯರ ಕೊಲೆಯಾಗಿರುವ ಹಿನ್ನೆಲೆಯಲ್ಲಿ ವಾಣಿಜ್ಯನಗರಿ ಹುಬ್ಬಳ್ಳಿಗೆ ಗೃಹ ಸಚಿವ ಜಿ.ಪರಮೇಶ್ವರ ಭೇಟಿ ನೀಡಿದ್ದಾರೆ… ಈಗಾಗಲೇ ಮೇಜರ್ ಸರ್ಜರಿ ಮಾಡಿರುವ ರಾಜ್ಯ ಸರ್ಕಾರ ಈಗ ಕೊಲೆಯಾದ ಅಂಜಲಿ ಅಂಬಿಗೇರ ಮನೆಗೆ ಗೃಹ ಸಚಿವ ಜಿ.ಪರಮೇಶ್ವರ ಭೇಟಿ ನೀಡಿ ಕುಟುಂಬಸ್ಥರ ಜೊತೆಗೆ ಸಮಾಲೋಚನೆ ನಡೆಸಿದರು.ಇನ್ನೂ ಗೃಹ ಸಚಿವರು ಆಗಮಿಸುತ್ತಿದ್ದಂತೆಯೇ ಅಂಜಲಿಯ ಅಜ್ಜಿ ಕಣ್ಣೀರು ಹಾಕಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. …

Read More »

ಹುಬ್ಬಳ್ಳಿಯಲ್ಲಿ ಹೊಗೆಯಾಡುತ್ತಿದೆ ಗಾಂಜಾ: ಓರ್ವನ ಬಂಧಿಸಿದ ಕಸಬಾಪೇಟ ಪೊಲೀಸರು…

ಹುಬ್ಬಳ್ಳಿ: ನಿಷೇಧಿತ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಬಂಧನ ಮಾಡುವಲ್ಲಿ ಕಸಬಾಪೇಟ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕಸಬಾಪೇಟ್ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ನೇತೃತ್ವದ ತಂಡ ಹಳೇಹುಬ್ಬಳ್ಳಿಯ ಸದರಸೋಫಾ ಕೌದಿಮಠದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಕಲೆ ಹಾಕಿ ಕ್ಷಿಪ್ರ ಕಾರ್ಯಾಚರಣೆ ಮೂಲಕ ದಾಳಿ ನಡೆಸಿ ಓರ್ವ ಗಾಂಜಾ ಪೆಡ್ಲರ್‌ ಜಾವೇದ್ ಹವಾಲ್ದಾರ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿತನಿಂದ 42,500/- …

Read More »

ಹುಬ್ಬಳ್ಳಿ-ಧಾರವಾಡದಲ್ಲಿ ಅಪರಾಧ ಕೃತ್ಯ ತಡೆಗೆ ಕ್ರಮ ಕೈಗೊಳ್ಳಲಾಗುವದು-ಎಡಿಜಿಪಿ ಹಿತೇಂದ್ರ

Featured Video Play Icon

ಹುಬ್ಬಳ್ಳಿ ನೇಹಾ ನಿವಾಸಕ್ಕೆ ಎಡಿಜಿಪಿ ಭೇಟಿ ನೀಡಿ ನೇಹಾ ಹಿರೇಮಠ ಅವರ ತಂದೆ ಹಾಗೂ ತಾಯಿ ಜೊತೆ ಮಾತುಕತೆ ನಡೆಸಿದರು.ಬಿಡ್ನಾಳ ಕ್ರಾಸ್ ನ ನೇಹಾ ಹಿರೇಮಠ ನಿವಾಸಕ್ಕೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಹಾಗೂ ಹು-ಧಾ ಪೊಲೀಸ್ ಕಮಿಷನ್ ರೇಣುಕಾ ಸುಕುಮಾರ್ ಭೇಟಿ ನೀಡಿದರು.ಇದಕ್ಕೂ ಮುನ್ನ ಪೊಲೀಸ್ ಅಧಿಕಾರಿಗಳೊಂದಿಗಿನ ಹು-ಧಾ ಪೊಲೀಸ್ ಕಮೀಷ್ನರ್ ಕಚೇರಿಯಲ್ಲಿ ಸಭೆ ನಡೆಸಿ ಬಳಿಕ ಮಾತನಾಡಿದ ಅವರು, ಹು-ಧಾ ಕಮೀಷ್ನರೇಟ್ ವ್ಯಾಪ್ತಿಯಲ್ಲಿ ಹಲವಾರು ಘಟನೆಗಳು ನಡೆದಿವೆ.ಯಾವ …

Read More »

ಅಂಜಲಿ ಕೊಲೆಗೆ ಪೊಲೀಸ ನಿರ್ಲಕ್ಷ್ಯ ಆರೋಪ: ಕಾನೂನು ಸುವ್ಯವಸ್ಥೆ ಡಿಸಿಪಿ ಪಿ ರಾಜೀವ ಅಮಾನತ್ತು..!

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆಗೆ ಸಂಬಂಧಿಸಿದಂತೆ ಮತ್ತೊಬ್ಬ ಹಿರಿಯ ಅಧಿಕಾರಿಯ ತಲೆದಂಡವಾಗಿದೆ. ಅಂಜಲಿ ಕೊಲೆಗೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆಂದು ಪೊಲೀಸ್ ಇನ್ಸಪೆಕ್ಟರ್, ಮಹಿಳಾ ಹೆಡ್‌ಕಾನ್ಸಟೇಬಲ್ ಅಮಾನತ್ತು ಮಾಡಲಾಗಿತ್ತು. ಇಂದು ಡಿಸಿಪಿ ಅವರನ್ನ ಅಮಾನತ್ತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹುಬ್ಬಳ್ಳಿ-ಧಾರವಾಡ ಕಾನೂನು ಸುವ್ಯವಸ್ಥೆ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ ಅಮಾನತು ಮಾಡಿ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಪೊಲೀಸರ ಮೇಲೆ ಆರೋಪ …

Read More »

ಬಸವಣ್ಣ, ಅಂಬಿಗರ ಚೌಡಯ್ಯನವರ ನಾಡಿನಲ್ಲಿ ನಡೆದ ಅಮಾನವೀಯ ಕೃತ್ಯಕ್ಕೆ ಪೊಲೀಸ್ ನಿರ್ಲಕ್ಷ್ಯ ಕಾರಣ..!

Featured Video Play Icon

ಹುಬ್ಬಳ್ಳಿ: ಬಸವಣ್ಣನವರ, ಅಂಬಿಗರ ಚೌಡಯ್ಯನ ಈ‌ ನಾಡಿನಲ್ಲಿ ಇಂತಹ ಕೃತ್ಯ ನಡೆದಿದೆ. ನೇಹಾ ಹತ್ಯೆ ಬಳಿಕ‌ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿತ್ತು. ಈ‌ ಕೃತ್ಯ ನಡೆಯುವ ಮುಂಚೆಯೇ ಆತನಿಂದ ಬೆದರಿಕೆ‌ ಬಂದಿತ್ತು. ಆದ್ರೆ ಈ ವಿಚಾರದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಇದಕ್ಕೆ ನೇರವಾಗಿ ಪೊಲೀಸ್ ಇಲಾಖೆಯೇ ಕಾರಣ ಎಂದು ಅಂಬಿಗರ ಚೌಡಯ್ಯನ ಗುರುಪೀಠದ ಶಾಂತ ಭೀಷ್ಮ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.ಅಂಜಲಿ ನಿವಾಸದ ಮುಂದೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನೇಹಾ …

Read More »

ಹುಬ್ಬಳ್ಳಿಯ ಎರಡು ಕೊಲೆಗೆ ಸರ್ಕಾರವೇ ಕಾರಣ, ಪೊಲೀಸ್ ಸ್ಟೇಷನ್ ಮುಚ್ಚಿಬಿಡಿ: ರವಿಕುಮಾರ್..

Featured Video Play Icon

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆಯಾಗಿರೋದು ಕಾಡಿನಲ್ಲಿ ಅಲ್ಲ. ಜನನಿಬಿಡ ಪ್ರದೇಶದಲ್ಲಿ ಆಗಿದೆ. ಅಂತಹ ಕೊಲೆ ಬಗ್ಗೆ ಸರ್ಕಾರ ಬೇಜಾವ್ದಾರಿಯಾಗಿ ವರ್ತನೆ ಮಾಡಿದೆ. ಇದು ಅಸಮರ್ಥ ಸರ್ಕಾರ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದರು. ಅಂಜಲಿ ಮನೆಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನೇಹಾ ಹಿರೇಮಠ ‌ಕೊಲೆಯಾಗಿ ಒಂದು ವರ್ಷ ಆಗಿಲ್ಲ. ಮತ್ತೆ ಅಂತಹದೇ ಹತ್ಯೆಯಾಗಿದೆ ಅಂದ್ರೆ ಸರ್ಕಾರ ಸತ್ತಿದೆಯೋ ಬದುಕಿದೆಯೋ.ಎರಡು ಹತ್ಯೆಗೆ ಸರ್ಕಾರ ನೇರ ಹೊಣೆ. ಪೊಲೀಸರು ಹೊಣೆ …

Read More »

ಈ ನೆಲದ ಕಾನೂನಿನ ಬಗ್ಗೆ ಭಯವೇ ಇಲ್ಲದಂತಾಗಿದೆ:ಮೂಜಗು ಸ್ವಾಮೀಜಿ ಬೇಸರ…

Featured Video Play Icon

ಹುಬ್ಬಳ್ಳಿ: ಈ ನೆಲದ ಕಾನೂನಿನ ಬಗ್ಗೆ ಯಾವ ಭಯನೇ ಉಳಿಯದಂತಾಗಿದೆ. ಈ ನೆಲದ ಕಾನೂನು ಉಳಿಸಿಕೊಳ್ಳಬೇಕಾದ್ರೆ ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಮೂರುಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಸ್ವಾಮೀಜಿ ಹೇಳಿದರು. ಮೃತ ಅಂಜಲಿ ಮನೆಗೆ ಭೇಟಿ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಅವರು, ನೇಹಾ ಹತ್ಯೆ ನಂತರ ಮತ್ತೊಂದು ಅಮಾನುಷ ಘಟನೆ ನಡೆದಿದೆ.ಒಬ್ಬ ಯುವಕ ಮನೆಗೆ ನುಗ್ಗಿ ನಿರ್ದಾಕ್ಷೀಣ್ಯವಾಗಿ ನಿರ್ಭಯವಾಗಿ ಕೊಲೆ ಮಾಡಿದ್ದಾನೆ.ಈ ನೆಲದ ಕಾನೂನಿನ ಬಗ್ಗೆ ಯಾವ ಭಯನೇ …

Read More »

ಅಂಜಲಿ ಮನೆಗೆ ದಿಂಗಾಲೇಶ್ವರ ಸ್ವಾಮೀಜಿ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ..

Featured Video Play Icon

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಧಾರುಣವಾಗಿ ಕೊಲೆಯಾದ ಅಂಜಲಿ ಅಂಬಿಗೇರ ಅವರ ಮನೆಗೆ ಶಿರಹಟ್ಟಿ ಮಠದ ಫಕೀರ್ ದಿಂಗಾಲೇಶ್ವರ ಸ್ವಾಮೀಜಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿರುವ ಅಂಜಲಿ ಅಂಬಿಗೇರ ಅವರ ಮನೆಗೆ ಆಗಮಿಸಿದ ಸ್ವಾಮೀಜಿಗಳು ಕುಟುಂಬಸ್ಥರ ಜೊತೆಗೆ ಮಾತನಾಡಿ ಕುಟುಂಬಸ್ಥರಿಗೆ ಹಾಗೂ ಅಂಜಲಿ ಸಹೋದರಿಯರಿಗೆ ಧೈರ್ಯ ತುಂಬಿದರು. ಇದೇ ವೇಳೆ ಗಂಗಾಮತ ಸಮಾಜದ ಮುಖಂಡರು ಕೂಡ ಉಪಸ್ಥಿತರಿದ್ದು, ಕೊಲೆಯ ಬಗ್ಗೆ ಮಾಹಿತಿ ಪಡೆದುಕೊಂಡರು.ಇನ್ನೂ ನೇಹಾಳ ಕೊಲೆಯ …

Read More »