ಮಾಜಿ ಸಂಸತ್ ಸದಸ್ಯೆ ತೇಜಸ್ವಿನಿ ಗೌಡ ಅವರ ಸಹೋದರನಿಗೆ ಸೇರಿದ ನಿವೇಶನವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಿದ ಪ್ರಕರಣದಲ್ಲಿ, ಆರ್.ಎಂ.ವಿ. ಎರಡನೇ ಹಂತದ ನಾಗಶೆಟ್ಟಿಹಳ್ಳಿಯ ನಿವಾಸಿ ಎಂ. ನಾರಾಯಣಸ್ವಾಮಿ ಎಂಬ ಪ್ರಮುಖ ಆರೋಪಿಯನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.ಪ್ರಕರಣದ ತನಿಖೆಯನ್ನು ಮುಂದುವರಿಸಿರುವ ಸಿಸಿಬಿ ಪೊಲೀಸರು, ಈ ಅಕ್ರಮದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಾದ ಮುನಿರಾಜು ಎಂ., ಎಂ. ಮುನಿಸ್ವಾಮಿ, ಮಮತಾ ಎಂ., ಸಂತೋಷ್ ಎಸ್. ಹಾಗೂ ಶ್ರೀಕಾಂತ್ ಅವರನ್ನು ಬಂಧಿಸುವುದಕ್ಕಾಗಿ ಕ್ರಮ ಕೈಗೊಂಡಿದ್ದಾರೆ. ನಕಲಿ ದಾಖಲೆ ಸೃಷ್ಟಿ ಹಾಗೂ ಆಸ್ತಿ ಕಬಳಿಕೆ ಸಂಬಂಧಿತ ಗಂಭೀರ ಆರೋಪಗಳ ಮೇಲೆ ತನಿಖೆ ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





