Breaking News

Uncategorized

ಯುವತಿಯೋರ್ವಳು ಯಾರಿಗೂ ಹೇಳದೆ ಕೇಳದೆ ಮನೆಯಿಂದ ಕಾಣೆ

ಲಕುಂದಗೋಳ: ಯುವತಿಯೋರ್ವಳು ಯಾರಿಗೂ ಹೇಳದೆ ಕೇಳದೆ ಮನೆಯಿಂದ ಕಾಣೆಯಾದ ಘಟನೆ ಕುಂದಗೋಳ ತಾಲೂಕಿನ ದೇವನೂರು ಗ್ರಾಮದಲ್ಲಿ ಡಿಸೆಂಬ‌ರ್ 13ರಂದು ನಡೆದಿದೆ. ದೇವನೂರು ಗ್ರಾಮದ ಐಶ್ವರ್ಯ ಮಂಜುನಾಥ ಕಮಡೊಳ್ಳಿ ಎಂಬ (18) ವರ್ಷದ ಯುವತಿ ಮನೆಯಿಂದ ಕಾಣೆಯಾಗಿದ್ದು, ಪೋಷಕರು ಯುವತಿಯನ್ನು ಪತ್ತೆ ಮಾಡಿ ಕೊಡುವಂತೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಪತ್ತೆ ಕಾರ್ಯ ನಡೆದಿದೆ.

Read More »

ಎರಡು ಕುಟುಂಬಗಳ ಮಧ್ಯೆ ನಡೆದ ಜಗಳ

ಕುಂದಗೋಳ: ಕುಂದಗೋಳ ಪಟ್ಟಣದ ಅಂಬೇಡ್ಕ‌ರ್ ನಗರದಲ್ಲಿ ಎರಡು ಕುಟುಂಬಗಳ ಮಧ್ಯೆ ನಡೆದ ಜಗಳ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಳೆದ ಡಿಸೆಂಬರ್ 7ರಂದು ಕುಂದಗೋಳ ಪಟ್ಟಣದ ಬಸವರಾಜ ದೊಡ್ಡಮನಿ ಮತ್ತು ಮೀನಾಕ್ಷಿ, ನಿಂಗಪ್ಪ ಎಂಬುವರ ಮಧ್ಯೆ ಜಗಳ ನಡೆದಿತ್ತು. ಈ ವೇಳೆ ನನ್ನ ಮೇಲೆ 14 ಜನ ಆರೋಪಿಗಳು ಹಲ್ಲೆ ಮಾಡಿದ್ದಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಬಸವರಾಜ ದೊಡ್ಡಮನಿ ಆರೋಪಿಸಿದ್ದಾರೆ. ಜೊತೆಗೆ 14 ಜನ …

Read More »

ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ 73,811 ಪ್ರಕರಣಗಳು ಇತ್ಯರ್ಥ

ಧಾರವಾಡ : ಡಿಸೆಂಬರ 14 ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ರಾಜೀ ಆಗಬಹುದಾದಂತಹ 17,596 ಪ್ರಕರಣಗಳನ್ನು ತೆಗೆದುಕೊಂಡು ಅವುಗಳ ಪೈಕಿ 12,551 ಪ್ರಕರಣಗಳನ್ನು ಹಾಗೂ 63,013 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ತೆಗೆದುಕೊಂಡು ಅವುಗಳ ಪೈಕಿ 61,260 ಪ್ರಕರಣಗಳನ್ನು ಸೇರಿ ಒಟ್ಟು 73,811 ಪ್ರಕರಣಗಳನ್ನು ರಾಜೀ ಸಂಧಾನ ಮಾಡಿಸಲಾಗಿದೆ. ವ್ಯಾಜ್ಯ ಪೂರ್ವ ಪ್ರಕರಣಗಳಲ್ಲಿ ಇತ್ಯರ್ಥ ಪಡಿಸಿಕೊಂಡ ಒಟ್ಟು ಮೊತ್ತ 8,09,37,468 ರೂಪಾಯಿಗಳು. ನ್ಯಾಯಾಲಯದಲ್ಲಿ …

Read More »

ಸಾರ್ವಜನಿಕ ಗ್ರಂಥಾಲಯ ಇಲಾಖೆ ಗ್ರಂಥಾಲಯ ವಿಜ್ಞಾನ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ

ಧಾರವಾಡ : ಸಾರ್ವಜನಿಕ ಗ್ರಂಥಾಲಯ ಇಲಾಖೆಯು ರಾಜ್ಯದ ನಾಲ್ಕು ಕಂದಾಯ ಇಲಾಖೆಗಳಾದ ಮಂಗಳೂರು (ಮೈಸೂರು ವಿಭಾಗ), ಬೆಂಗಳೂರು, ಧಾರವಾಡ (ಬೆಳಗಾವಿ ವಿಭಾಗ) ಮತ್ತು ಕಲ್ಬುರ್ಗಿ ವಿಭಾಗಗಳಲ್ಲಿ ಆರು ತಿಂಗಳ ಗ್ರಂಥಾಲಯ ವಿಜ್ಞಾನ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆಯಾ ಕಂದಾಯ ಇಲಾಖೆಗಳಿಂದ ಅರ್ಜಿ ಸಲ್ಲಿಸಬೇಕು ಮತ್ತು ಅಗತ್ಯ ದಾಖಲೆಗಳೊಂದಿಗೆ ಜನವರಿ 10, 2025 ರೊಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಧಾರವಾಡ ನಗರ ಕೇಂದ್ರ ಗ್ರಂಥಾಲಯದ ಆಯಾ ನಗರ …

Read More »

ಮಹದಾಯಿ ಯೋಜನೆ ಜಾರಿ ವಿಚಾರದಲ್ಲಿ ನಮ್ಮ ಸರ್ಕಾರ ಬದ್ಧವಿದೆ: ಡಿಕೆಶಿ

ಹುಬ್ಬಳ್ಳಿ: ಮಹದಾಯಿ ಯೋಜನೆ ಜಾರಿ ವಿಚಾರದಲ್ಲಿ ನಮ್ಮ ಸರ್ಕಾರ ಬದ್ಧವಿದೆ. ಟೆಂಡರ್ ಕರೆಯುವ ವಿಚಾರವಾಗಿ ನಾವು ಈಗಾಗಲೇ ಎಲ್ಲವನ್ನೂ ಸಿದ್ಧ ಮಾಡಿಕೊಂಡಿದ್ದೇವೆ. ಜಗದೀಶ ಶೆಟ್ಟ‌ರ್ ಹಾಗೂ ಪ್ರಹ್ಲಾದ್ ಜೋಶಿ ಇದರ ಬಗ್ಗೆ ಗಮನಹರಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾ‌ರ್ ಹೇಳಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಅರಣ್ಯ ಇಲಾಖೆ ಅನುಮತಿ ಸಿಗುವ ಭರವಸೆ ಇದೆ. ಅನುಮತಿ ಸಿಕ್ಕರೆ ಕಾಮಗಾರಿ ಆರಂಭ ಮಾಡಲಿದ್ದೇವೆ ಎಂದರು. ಇನ್ನು ಕೋವಿಡ್ ಹಗರಣದ …

Read More »

ಕಾಂಗ್ರೆಸ್‌ ನಾಯಕರು ಕೋವಿಡ್ ವಿಚಾರವಾಗಿ ಬೆದರಿಸೋ ತಂತ್ರ ಮಾಡುತ್ತಿದೆ: ಜೋಶಿ

ಹುಬ್ಬಳ್ಳಿ: ಕಾಂಗ್ರೆಸ್‌ ನಾಯಕರು ಕೋವಿಡ್ ವಿಚಾರವಾಗಿ ಬೆದರಿಸೋ ತಂತ್ರ ಮಾಡುತ್ತಿದೆ. ಹೆದರಿಲ್ಲ ಅಂದ ತಕ್ಷಣ FIR ಮಾಡಿದ್ರು. ಯಾರ ಯಾರ ಹೆಸರ ಹೇಳುತ್ತಿದ್ದಾರೆ ಅವರು ಮಾನಹಾನಿ ನೋಟಿಸ್ ಕೊಡಿ. ಸುಮ್ಮನೆ ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ, ಸುಧಾಕರ್, ಬೊಮ್ಮಾಯಿ ಹೆಸರು ಹೇಳತ್ತಿದ್ದಾರೆ. ನಾವು ಶೀಘ್ರವೇ ವ ತಿದ್ದುಪಡಿ ಮಾಡಿ ಜನರಿಗೆ ನ್ಯಾಯ ಕೊಡಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಬೇಜಬ್ದಾರಿಯಾಗಿ ಮಾತಡುತ್ತಿದ್ದಾರೆ. …

Read More »

ಧಾರವಾಡದಲ್ಲಿ “ರನ್ ಫಾರ್ ನೇಚರ್’ ಕಾರ್ಯಕ್ರಮ

ಧಾರವಾಡ : ಪ್ರತಿ ವರ್ಷದಂತೆ ಈ ವರ್ಷವೂ “ರನ್ ಫಾರ್ ನೇಚರ್’ ಕಾರ್ಯಕ್ರಮ ಧಾರವಾಡದ ಕೆ.ಸಿ.ಡಿ ಮೈದಾನದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು. ಮುಂಜಾನೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನ‌ರ್ ಶಶಿಕುಮಾ‌ರ್ ಔಪಚಾರಿಕವಾಗಿ ಚಾಲನೆ ನೀಡಿದರು. ಮತ್ತು ದುರ್ಗಾ ಡೆವಲಪರ್ ಆ್ಯಂಡ್ ಪ್ರಮೋಟರ್ಸ್ ಮಾಲೀಕರಾದ ವಿರೇಶ ಉಂಡಿಯವರು ” ರನ್ ಫಾರ್ ನೇಚರ್” ಓಟಕ್ಕೆ ಫ್ಲಾಗ್ ಆಫ್ ಮಾಡುವ ಮುಖಾಂತರ ಚಾಲನೆ ನೀಡಿದರು. ಇನ್ನೂ ದುರ್ಗಾ ದುರ್ಗಾ ಡೆವಲಪರ್ ಆ್ಯಂಡ್ ಪ್ರಮೋಟರ್ಸ್ …

Read More »

ಶ್ರೀ ಅಮೃತೇಶ್ವರ ಸಂಭ್ರಮದ ರಥೋತ್ಸವ

ಅಣ್ಣಿಗೇರಿ: ಪಟ್ಟಣದ ಆರಾಧ್ಯ ದೈವ ದಕ್ಷಿಣ ಕಾಶಿ ಎಂದೇ ಕರೆಯಲ್ಪಡುವ ಶ್ರೀ ಅಮೃತೇಶ್ವರ ರಥೋತ್ಸವ ಇಂದು ಸಾಯಂಕಾಲ ಬಹಳ ವಿಜ್ರಮಣೆಯಿಂದ ಸಾವಿರಾರು ಭಕ್ತರ ಹರ ಹರ ಮಹಾದೇವ ಎಂಬ ಜೈ ಘೋಷಗಳ ಮಧ್ಯೆ ರಥೋತ್ಸವ ನಡೆಯಿತು. ಇನ್ನು ನಾಡಿನ ನಾನಾ ಭಾಗದಿಂದ ಬಂದ ಭಕ್ತರು ಮುಂಜಾನೆಯಿಂದಲೇ ದೇವರಿಗೆ ವಿಶೇಷವಾದ ಪೂಜೆಗಳನ್ನು ನೆರವೇರಿಸಿ ಪ್ರಸಾದ ಸ್ವೀಕರಿಸಿ ರಥೋತ್ಸವದಲ್ಲಿ ಭಾಗಿಯಾದರು.

Read More »

ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಶಾಸಕ ಕೋನರಡ್ಡಿ

ಅಣ್ಣಿಗೇರಿ: ನಗರದ ಸುಪ್ರಸಿದ್ಧ ಐತಿಹಾಸಿಕ ಶ್ರೀ ಅಮೃತೇಶ್ವರ ಜಾತ್ರಾ ರಥೋತ್ಸವದಲ್ಲಿ ಶಾಸಕ ಕೋನರಡ್ಡಿ ಅವರು ಭಾಗವಹಿಸಿ ದೇವರ ದರ್ಶನ ಪಡೆದು,ನಾಡಿನ ಜನರ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.

Read More »

ಗದಗ ಜಿಲ್ಲೆಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆಗೆ ಸಿಎಂ ಸಿದ್ದರಾಮಯ್ಯ ಭರವಸೆ

ಗದಗ : ಜಿಲ್ಲೆಯ ರೋಣ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಸಿಎಂ ಸಿದ್ದರಾಮಯ್ಯ ಅವರು 200 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಮೂಲಕ ಕ್ಷೇತ್ರಕ್ಕೆ ನೂತನ ಕೃಷಿ ಕಾಲೇಜು ಸ್ಥಾಪನೆ ವಿಚಾರವಾಗಿ ಭರವಸೆ ನೀಡಿದರು. ಈ ವೇಳೆ ಮಾತನಾಡಿದ ಸಿಎಂ, ಕ್ಷೇತ್ರದ ಶಾಸಕ ಜೆ.ಎಸ್.ಪಾಟೀಲ್ ಅವರು ನನ್ನ ಬಳಿ ಬರುವುದು ರೋಣಾ ಮತ ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಮಾತ್ರ. ಮುಂದಿನ ಬಜೆಟ್​​​ನಲ್ಲಿ ಕ್ಷೇತ್ರಕ್ಕೆ ಕೃಷಿ ಕಾಲೇಜು …

Read More »