Breaking News

Uncategorized

ಸಿಎಂ ಬೊಮ್ಮಾಯಿಯವರ ಮೇಲೆ ಭರವಸೆ ಇಟ್ಟು ಹೋರಾಟ ಮುಂದೂಡಲಾಗಿದೆ: ಮೃತ್ಯುಂಜಯ ಸ್ವಾಮೀಜಿ

ಹುಬ್ಬಳ್ಳಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ನೀಡುವ ಭರವಸೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದು,ಮೀಸಲಾತಿ ಸಿಗುವವರೆಗೆ ಹೋರಾಟ ನಡೆಸಲಾಗುವುದು. ಈಗಾಗಲೇ ಮುಖ್ಯಮಂತ್ರಿ ಅವರಿಂದ ಭರವಸೆ ಸಿಕ್ಕ ಹಿನ್ನೆಲೆಯಲ್ಲಿ ಆಗಷ್ಟ್ 27 ರವರೆಗೆ ಹೋರಾಟ ಮುಂದೂಡಲಾಗಿದೆ‌ ಎಂದು ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ನಗರದ ಗೋಕುಲ ರಸ್ತೆ ಖಾಸಗಿ ಹೊಟೇಲ್ ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜ ಮುಖ್ಯಮಂತ್ರಿ ಅವರ ಮೇಲೆ ಭರವಸೆ ಇಟ್ಟಿದೆ. ಆದರೆ, …

Read More »

ಜಿಲ್ಲೆಯ ಉತ್ತಮ ಆಡಳಿತಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ ನೂತನ ಎಸ್.ಪಿ ಲೋಕೇಶ್ ಜಗಲಾಸರ್

ಧಾರವಾಡ : ಜಿಲ್ಲೆಯ ಶಾಂತಿ, ಸುವ್ಯವಸ್ಥೆ ಕಾಪಾಡಲು ಮತ್ತು ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಸಾರ್ವಜನಿಕರ ಸಹಕಾರವು ಮುಖ್ಯವಾಗಿದೆ. ಜಿಲ್ಲೆಗೆ ಉತ್ತಮ ಆಡಳಿತ ನೀಡಲು ಶ್ರಮಿಸುವುದಾಗಿ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಅವರು ಹೇಳಿದರು. ಅವರು ಇಂದು ಮಧ್ಯಾಹ್ನ ಎಸ್.ಪಿ ಕಚೇರಿಯ ಸಭಾಂಗಣದಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಅಬಕಾರಿ ಪರವಾನಿಗೆ ಉಲ್ಲಂಘಿಸಿ ಹೈವೆ ರಸ್ತೆ ಮತ್ತು ಗ್ರಾಮೀಣ ಭಾಗದಲ್ಲಿರುವ ಡಾಬಾ, ಹೋಟೆಲ್‍ಗಳಲ್ಲಿ ಮದ್ಯ ಮಾರಾಟ ಮತ್ತು ಸರಬರಾಜು …

Read More »

ಸರಕಾರಿ ಕಛೇರಿಗೆ ನುಗ್ಗಿ ಅಧಿಕಾರಿಗಳಿಗೆ ಕಿರುಕುಳ ಆರೋಪ ಕೆ.ಆರ್ ಪಕ್ಷದ ಕಾರ್ಯಕರ್ತರ ವಿರುದ್ಧ ಆಕ್ರೋಶ

ಹುಬ್ಬಳ್ಳಿ:- ಮಿನಿ ವಿಧಾನ ಸೌದದಲ್ಲಿರುವ ಸರಕಾರಿ ಕಛೇರಿಗೆ ನುಗ್ಗಿದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯಕರ್ತರು, ಸರಕಾರಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ನಿಮ್ಮ ಬಗ್ಗೆ ಮಾಹಿತಿ ಇನ್ನಿತರ ದಾಖಲೆ ಮತ್ತು ನೀವೂ ಸರಿಯಾಗಿ ಕೆಲಸ ಮಾಡಿತ್ತಿಲ್ಲ ಎಂದು ಕಿರುಕುಳ ನೀಡಿರುವ ಬಲವಾದ ಆರೋಪ ಕೇಳಿ ಬಂದಿದೆ.ಹೌದು.ಮುಂಜಾನೆಯಿಂದಲೇ ಪಕ್ಷದ ಕಾರ್ಯಕರ್ತರು ನಿರಂತರವಾಗಿ ಗಂಟೆಗಳ ಕಾಲ ಸಿಬ್ಬಂದಿ ಹಾಗೂ ಅಧಿಕಾರಿಗಳ ಮಾಹಿತಿ ನೀಡಿ ಎಂದು ಕಿರುಕುಳ ನೀಡುತ್ತಿದ್ದಾರೆ ಎಂದು ನೌಕರರು ತಮ್ಮ ಅಳಲು …

Read More »

ಪಾಲಿಕೆ ಆವರಣದಲ್ಲಿ ಕ್ರಿಕೆಟ್ ಆಟವಾಡಿ ವಿನೂತನ ಪ್ರತಿಭಟನೆ

ಹುಬ್ಬಳ್ಳಿ : ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗಬೇಕಿದ್ದ ನೆಹರು ಮೈದಾನ ಈವರೆಗೆ ಅಭಿವೃದ್ಧಿ ಕಾಣದೇ ಯುವಕರು ಕ್ರೀಡಾಚಟುವಟಿಗಳಿಂದ ದೂರ ಉಳಿಯುವ ಪರಿಸ್ಥಿತಿ ಉಂಟಾಗಿದ್ದು, ಕೂಡಲೇ ನೆಹರು ಮೈದಾನದ ಕೆಲಸ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿ ಹುಬ್ಬಳ್ಳಿಯ ಯುವಕರು ಪಾಲಿಕೆ ಆವರಣದಲ್ಲಿ ಕ್ರಿಕೆಟ್ ಬ್ಯಾಟ್, ಬಾಲ್ ಹಿಡಿದು ವಿನೂತನ ಪ್ರತಿಭಟನೆ ಮಾಡಿದರು. ಹುಬ್ಬಳ್ಳಿಯಲ್ಲಿ ಕ್ರಿಕೆಟ್ ಪ್ರಾಕ್ಟೀಸ್ ಮಾಡುವುದಕ್ಕೆ ನೆಹರು ಮೈದಾನ ಕೇಂದ್ರ ಸ್ಥಳವಾಗಿದೆ‌. ಕಳೆದ ಎರಡು ವರ್ಷಗಳಿಂದ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಮೈದಾನವನ್ನು ಮೇಲ್ದರ್ಜೆಗೆ …

Read More »

ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ

ಹುಬ್ಬಳ್ಳಿ: ರಾಜಸ್ಥಾನದ ಉದಯಪುರದಲ್ಲಿ ಇಸ್ಲಾಂ ಜಿಹಾದಿಗಳಿಂದ ಕನ್ಹಯ್ಯಲಾಲ್ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಹಿರಂಗದಳ ಜಂಟಿಯಾಗಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿತು. ಈ ಸಂದರ್ಭದಲ್ಲಿ ದತ್ತ ಮೂರ್ತಿ ಕುಲಕರ್ಣಿ, ಲಿಂಗರಾಜ ಪಾಟೀಲ್ ಸೇರಿದಂತೆ ಮುಂತಾದವರು ಇದ್ದರು.

Read More »

ರಾಜಸ್ಥಾನದ ಹತ್ಯೆ ಪ್ರಕರಣ ಖಂಡಿಸಿ ಬಿಜೆಪಿ ಅಲ್ಪಸಂಖ್ಯಾತ ಘಟಕದಿಂದ ಪ್ರತಿಭಟನೆ

ಹುಬ್ಬಳ್ಳಿ : ರಾಜಸ್ಥಾನದ ಉದಯಪುರದ ಹಿಂದೂ ಕಾರ್ಯಕರ್ತ ಟೈಲರ್ ಕನ್ಹಯ್ಯ ಲಾಲ ಅವರ ಹತ್ಯೆ ಖಂಡಿಸಿ ನಗರದ ಸಂಗೊಳಿ ರಾಯಣ್ಣ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಘಟಕದಿಂದ ಗುರುವಾರ ಪ್ರತಿಭಟನೆ ನಡೆಸಿದರು. ಎಲ್ಲ ಧರ್ಮದವರು ಸೇರಿ ಬಾಳುವ ದೇಶದಲ್ಲಿ. ಉದಯಪುರದ ಹತ್ಯೆ ನಿಜಕ್ಕೂ ಖಂಡನೀಯ. ರಾಜಸ್ಥಾನ ಕಾಂಗ್ರೆಸ್ ಸರ್ಕಾರ ದುರಾಡಳಿತದಿಂದ ಇಂತಹ ಕೃತ್ಯ ನಡೆಯುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ಮುಸ್ತಾಕ ಕುಂಬಿ, ರಾಜು …

Read More »

ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ಬೆಳಗಾವಿ: ನಗರದಲ್ಲಿ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.ಮಜಗಾವಿ ನಿವಾಸಿ ಯಲ್ಲೇಶ್ ಶಿವಾಜಿ ಕೋಲ್ಕಾರ್(35) ಮೃತ ದುರ್ದೈವಿ. ಬೆಳಗಾವಿಯ ಉದ್ಯಮ ಭಾಗದಲ್ಲಿ ರಸ್ತೆ ಮಧ್ಯೆಯಲ್ಲಿ ತಡರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ತಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಉದ್ಯಮಭಾಗ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉದ್ಯಮಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟ‌ನೆ ನಡೆದಿದೆ.

Read More »

ಕೆಜಿಎಫ್‌ 2 ಚಿತ್ರದ ನಟನಿಗೆಅಪಘಾತ : ಅಪಾಯದಿಂದ ಪಾರು

ಬೆಂಗಳೂರು: ನಗರದ ಎಂ.ಜಿ. ರಸ್ತೆಯ ಅನಿಲ್‌ಕುಂಬ್ಳೆ ವೃತ್ತದ ಬಳಿ ಬುಧವಾರ ಬೆಳಿಗ್ಗೆ ಕಾರು ಹಾಗೂ ಕಂಟೇನರ್‌ ಮಧ್ಯೆ ಅಪಘಾತ ಸಂಭವಿಸಿದ್ದು, ಕೆಜಿಎಫ್‌ 2 ಚಿತ್ರದ ನಟ ಬಿ.ಎಸ್. ಅವಿನಾಶ್‌ ಅಪಾಯದಿಂದ ಪಾರಾಗಿದ್ದಾರೆ. ಅವಿನಾಶ್‌ ಅವರು ಈ ಚಿತ್ರದಲ್ಲಿ ಆಯಂಡ್ರೋಸ್ ಪಾತ್ರ ನಿರ್ವಹಿಸಿದ್ದರು. ಅವರು ಜಯನಗರದಿಂದ ತಮ್ಮ ಕಾರಿನಲ್ಲಿ ಎಚ್‌ಆರ್‌ಆರ್‌ ಲೇಔಟ್‌ಗೆ ತೆರಳುತ್ತಿದ್ದರು. ಎಂ.ಜಿ. ರಸ್ತೆಯಲ್ಲಿ ಎದುರಿನಿಂದ ಬರುತ್ತಿದ್ದ ಕಂಟೇನರ್‌ ಇವರ ಕಾರಿಗೆ ಡಿಕ್ಕಿ ಹೊಡೆದಿದೆ. ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಕಂಟೇನರ್‌ …

Read More »

ಜುಲೈ 1ರಿಂದ 17ರವರೆಗೆ ಜನತಾ ಮಿತ್ರ ಕಾರ್ಯಕ್ರಮ

ಬೆಂಗಳೂರು: ಜುಲೈ 1ರಿಂದ 17ರವರೆಗೆ ಬೆಂಗಳೂರಿನಲ್ಲಿ 17 ದಿನಗಳ ಕಾಲ ಜೆಡಿಎಸ್ ಪಕ್ಷ ಹಮ್ಮಿಕೊಂಡಿರುವ ಜನತಾ ಮಿತ್ರ ಕಾರ್ಯಕ್ರಮದ ಸಿದ್ಧತೆಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಪಕ್ಷದ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿದರು. ಜಲಧಾರೆಯಂತೆ ಜನತಾ ಮಿತ್ರ ಕಾರ್ಯಕ್ರಮವೂ ಯಶಸ್ವಿ ಆಗಬೇಕು. ರಾಜ್ಯದ ಕನ್ನಡಿಗರೆಲ್ಲಾ ನೆಲಮಂಗಲ ಸಮಾವೇಶದಲ್ಲಿ ಸೇರಿದಂತೆ ಬೆಂಗಳೂರು ಮಹಾನಗರದ ಜನತೆ ಜನತಾ ಮಿತ್ರ ಸಮಾವೇಶದಲ್ಲಿ ಸೇರಬೇಕು. ಅದಕ್ಕೆ ಅಗತ್ಯವಾದ ಎಲ್ಲ ಸಲಹೆ, ಸೂಚನೆಗಳನ್ನು ಮಾಜಿ …

Read More »

ಎಸ್ಕೇಪ್ ಆಗಲು ಹೋಗಿ ಸ್ಮಶಾನ ಸೇರಿದ

ಬೆಂಗಳೂರು: ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಯುವಕ ಸಾವನ್ನಪ್ಪಿರುವ ಘಟನೆ ಪೀಣ್ಯ ಎಸ್​ಆರ್​ಎಸ್ ಸರ್ಕಲ್ ಬಳಿ ನಡೆದಿದೆ. ರವಿ ಮೃತ ದುರ್ದೈವಿ. ಮೂರು ದಿನದ ಹಿಂದೆ ಎಸ್​ಆರ್​ಎಸ್ ಸರ್ಕಲ್ ಬಳಿ ಮೂವರು ಯುವಕರು ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇದುತ್ತಿದ್ದರು. ಈ ಬಗ್ಗೆ ಪೀಣ್ಯ ಪೊಲೀಸರಿಗೆ ಮಾಹಿತಿ ಬಂದಿದ್ದು, ಬೀಟ್ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಈ ವೇಳೆ ಪೊಲೀಸರನ್ನು ನೋಡಿ ಯುವಕರು ಕಾಲ್ಕಿತ್ತಿದ್ದಾರೆ. ಈ ವೇಳೆ ರವಿ ಎನ್ನುವಾತ ಕಟ್ಟಡ ಹತ್ತಿದ್ದು, ಕಾಲು …

Read More »