ಶವದ ಮೇಲಿನ ಚಿನ್ನಾಭರಣ ಕದ್ದಿರುವ ಆರೋಪದ ಮೇಲೆ ಆಂಬುಲೆನ್ಸ್ ಸಿಬ್ಬಂದಿಯ ಮೇಲೆ ಮೃತ ಮಹಿಳೆಯ ಪತಿ ದೂರು ದಾಖಲಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 4.90 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಬೆಂಗಳೂರು ನಿವಾಸಿ ಸಗಾಯ್ ರಾಜ್ ಅವರ ಪತ್ನಿ ಜ್ಞಾನ ಅವರು ಅನಾರೋಗ್ಯದಿಂದಾಗಿ ಹಠಾತ್ತಾನೆ ಕುಸಿದು ಬಿದ್ದ ಹಿನ್ನಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಜ್ಞಾನ ಅವರು ಜೀವ ಕಳೆದುಕೊಂಡಿದ್ದು, ನಂತರ ಸ್ವಾಭಾವಿಕ ಸಾವು ಎಂದು ವೈದ್ಯರು ಘೋಷಿಸಿ ಮರಣೋತ್ತರ ಪರೀಕ್ಷೆ ನಡೆಸಿ ವರದಿ ನೀಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

