Breaking News

Uncategorized

ಬೆಳಗಾವಿ ಎಐಸಿಸಿ ಅಧಿವೇಶನ ಶತಮಾನೋತ್ಸವ ಆಚರಣೆಗೆ ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಆಗಮನ: ಡಿಸಿಎಂ ಡಿಕೆಶಿ

ಬೆಳಗಾವಿ: 1924ರ ಬೆಳಗಾವಿ ಎಐಸಿಸಿ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಆಗಮಿಸಿ ಬೆಳಗಾವಿಯಲ್ಲೆ ಇರಲಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು. ಬೆಳಗಾವಿಯಲ್ಲಿ ಕಾಂಗ್ರೇಸ್ ಅಧಿವೇಶನ ನಡೆದು ನೂರು ವರ್ಷ ಪೂರೈಸಿದ ಹಿನ್ನೆಲೆ ಸತಮಾನೋತ್ಸವ ಸಮಾರಂಭದ ಪೂರ್ವ ಭಾವಿ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿ‌ ನಡೆಸಿ ಮಾತನಾಡಿದ ಅವರು, ಬೆಳಗಾವಿಯ ಗಾಂಧಿ ಬಾವಿಯಲ್ಲಿ ನೀರು ತಂದು ಚಲ್ಲಿ ಗೃಹಜ್ಯೋತಿ ಘೋಷಣೆ ಮಾಡಿದ್ದೆವು. …

Read More »

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

ಕುಂದಗೋಳ : ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಪೊಲೀಸರು ಬಂಧಿತರಿಂದ ಮದ್ಯ ವಶಕ್ಕೆ ಪಡೆದಿದ್ದಾರೆ. ಕುಂದಗೋಳ ತಾಲೂಕಿನ ಮತ್ತಿಗಟ್ಟಿ ಗ್ರಾಮದಲ್ಲಿ ರಾಜಪ್ಪ ದುರಗಪ್ಪ ವಡ್ಡರ ಎಂಬಾತ ಮದ್ಯ ಮಾರಾಟ ಮಾಡುವ ವೇಳೆ ಪೊಲೀಸರು ಬಂಧಿಸಿ, ಬಂಧಿತನಿಂದ 20 ఒరిజినెలో బాయ్స్ డెలశ్సా విస్మి 90 ఎం.ఎలో టిట్హౌ ಪಾಕೆಟ್, ಪ್ಲಾಸ್ಟಿಕ್ ಗ್ಲಾಸ್ ವಶಕ್ಕೆ ಪಡೆದಿದ್ದಾರೆ. ಡಿ.1 ರಂದು ಈ ಘಟನೆ ನಡೆದಿದ್ದು ತಡವಾಗಿ ಪ್ರಕರಣ ದಾಖಲಾಗಿದೆ, ಗುಡಗೇರಿ …

Read More »

ಶ್ರೀ ಅಮೃತೇಶ್ವರ ಜಾತ್ರೆಯ ನಿಮಿತ್ತ ದೇವಸ್ಥಾನಕ್ಕೆ ದೀಪದ ಅಲಂಕಾರ

ಅಣ್ಣಿಗೇರಿ: ಪಂಪನ ನಾಡು ಅಣ್ಣಿಗೇರಿಯ ಆರಾಧ್ಯ ದೈವ ಶ್ರೀ ಅಮೃತೇಶ್ವರ ಜಾತ್ರೆಯ ನಿಮಿತ್ತ ದೇವಸ್ಥಾನಕ್ಕೆ ದೀಪದ ಅಲಂಕಾರ ಮತ್ತು ಹೂವಿನ ಅಲಂಕಾರ ಮಾಡಲಾಗಿದೆ. ಕಣ್ಣಿಗೆ ಮುದ ನೀಡುವ ಹೂವಿನ ಅಲಂಕಾರ ಒಂದೆಡೆಯಾದ್ರೆ ಇನ್ನೊಂದೆಡೆ ಮೂಗಿಗೆ ಬಡಿಯುವ ಹೂವಿನ ಘಮಘಮ ಪರಿಮಳ ಒಟ್ಟಾರೆ ಹೂವಿನದ್ದೇ ಜಾತ್ರೆಯಾಗಿತ್ತು. ಪ್ರತಿನಿತ್ಯ ದೇವರ ವಿಗ್ರಹಕ್ಕೆ ಹೂವಿನ ಅಲಂಕಾರ ಮಾಡುವುದು ಸಾಮಾನ್ಯ. ವಿಶೇಷ ದಿನದಂದೂ ಅಲ್ಲಿ ಹೂವಿನ ಅಲಂಕಾರ ನೋಡಬಹುದು. ಗುಡಿ ಗೋಪುರ, ಗೋಡೆ ಒಂದಿಂಚೂ ಬಿಡದೆ …

Read More »

ಕೃಷಿ ವಿಜ್ಞಾನಿಗಳಿಂದ ಹಿಂಗಾರು ಬೆಳೆಗಳ ವೀಕ್ಷಣೆ

ಅಣ್ಣಿಗೇರಿ: 2024-25ನೆಯ ಹಿಂಗಾರು ಹಂಗಾಮಿನ ಬೆಳೆಗಳ ಸಮೀಕ್ಷೆಗಾಗಿ ಕೃಷಿ ವಿಜ್ಞಾನಿಗಳ ತಂಡವು ಇಂದು ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆಗಳನ್ನು ವೀಕ್ಷಣೆ ಮಾಡಿ, ಕಡಲೆ ಮತ್ತು ಜೋಳ ಬೆಳೆಗಳಿಗೆ ಬರುವ ಕೀಟ, ರೋಗ ಬಾದೆಗೆ ಹತೋಟಿ ಕ್ರಮಗಳನ್ನು ತಿಳಿಸಿದರು. ಈ ವೇಳೆ ಡಾಕ್ಟ‌ರ್ ಎಸ್ ಎ ಗದ್ದನಕೇರಿ ಸಹ ವಿಸ್ತರಣನ ನಿರ್ದೇಶಕರು ಕೃಷಿ ವಿಶ್ವವಿದ್ಯಾಲಯ ಧಾರವಾಡ, ಡಾಕ್ಟ‌ರ್ ಪಿ ನಾಗರಾಜ್ ಸಶ್ಯರೋಗ ತಜ್ಞರು, ಕಲಾವತಿ ಕಂಬಳಿ ಕೀಟ ತಜ್ಞರು,ಡಾಕ್ಟರ್ …

Read More »

ಕುಂದಗೋಳದಲ್ಲಿ ಓಸಿ ಅಂಕಿ ಸಂಖ್ಯೆ ಬರೆಯುತ್ತಿದ್ದ ವ್ಯಕ್ತಿ ಬಂಧನ್

ಕುಂದಗೋಳ : ಓಸಿ ಅಂಕಿ ಸಂಖ್ಯೆ ಬರೆಯುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಗುಡಗೇರಿ ಗ್ರಾಮೀಣ ಪೊಲೀಸ್ ಅಧಿಕಾರಿಗಳು ಬಂಧಿತನಿಂದ 1885 ರೂಪಾಯಿ ವಶ ಪಡೆದಿದ್ದಾರೆ. ಗುಡಗೇರಿ ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣದ ಬಳಿ ಟಾಕಪ್ಪಾ @ಸುನೀಲ್ ಸೋಮಪ್ಪ ಹಡಪದ ಎಂಬ ವ್ಯಕ್ತಿ ಓಸಿ ಅಂಕಿ ಸಂಖ್ಯೆಗಳನ್ನು ಬರೆಯಿಸಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಡಿ.6 ರಂದು ಈ ಘಟನೆ ನಡೆದಿದ್ದು, ಬಂಧಿತನಿಂದ ಪೊಲೀಸರು ಓಸಿ ಅಂಕಿ ಸಂಖ್ಯೆ ಬರೆಯುತ್ತಿದ್ದ ಕಾಗದ ಮತ್ತು …

Read More »

ನಾಳೆ ಡಿಸೆಂಬರ್ 14ರಂದು ಲೋಕ ಅದಾಲತ್‌

ಕುಂದಗೋಳ : ಸ್ಥಳೀಯ ನ್ಯಾಯಾಲಯದಲ್ಲಿ ನಾಳೆ ಡಿಸೆಂಬರ್ 14 ರಂದು ಲೋಕ ಅದಾಲತ್ ಕಾರ್ಯಕ್ರಮ ಜರುಗಲಿದೆ. ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶ ಅಬ್ದುಲ್ ಖಾದ‌ರ್ ಮತ್ತು ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಗಾಯತ್ರಿಯವರು ಲೋಕ ಅದಾಲತ್ ಕಾರ್ಯಕ್ರಮ ಕೈಗೊಳ್ಳುವರು. ಬೆಳಿಗ್ಗೆ 10 ಗಂಟೆಯಿಂದ ಲೋಕ ಅದಾಲತ್‌ ಜರುಗಲಿದೆ, ಅನೇಕ ಪ್ರಕರಣಗಳು ನಾಳೆ ಸುಖಾಂತ್ಯ ಕಾಣಲಿವೆ ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ.

Read More »

ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದ ಒಟ್ಟು 180 ಜನರ ವಶಕ್ಕೆ

ಹುಬ್ಬಳ್ಳಿ : ಹುಬ್ಬಳ್ಳಿ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರೌಡಿಶೀಟರ್ ಗಳು, MOB ಗಳು, NDPS ಆರೋಪಿಗಳು, OC, ಜೂಜಾಟ ಆಡುವ ಆರೋಪಿಗಳು, ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡುತ್ತಿದ್ದ ಒಟ್ಟು 180 ಜನರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ, ಎಚ್ಚರಿಕೆ ನೀಡಿ ಕಾನೂನಿನಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೇ ಇವರ ಪೋಷಕರನ್ನೂ ಸಹ ಸ್ಥಳಕ್ಕೆ ಕರೆಯಿಸಿ ಸಹ ವರ್ತನೆ ಸುಧಾರಿಸಿಕೊಳ್ಳಲು ತಿಳಿಸಲಾಗಿರುತ್ತದೆ. ಹುಬ್ಬಳ್ಳಿ ಉತ್ತರ …

Read More »

ಡಿಸೆಂಬರ್ 27-28ರಂದು ರಾಷ್ಟ್ರೀಯ ಅಗ್ರಿಟೆಕ್ ಸ್ಟಾರ್ಟಪ್‌ ಎಕ್ಸಪೋ

ಧಾರವಾಡ: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ-ರಫ್ತಾರ, ಭಾರತ ಸರ್ಕಾರದ ಕೃಷಿ ಹಾಗೂ ರೈತರ ಕಲ್ಯಾಣ ಸಚಿವಾಲಯದ ಜ್ಞಾನ ಪಾಲುದಾರ ಕೃಷಿಕ ಅಗ್ರಿ ಬಿಸಿನೆಸ್ ಇಂಕ್ಯೂಬೇಟರ್‌ನ ಅಡಿಯಲ್ಲಿ, ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ, ಇದೇ ಡಿಸೆಂಬರ್ 27-28ರಂದು ರಾಷ್ಟ್ರೀಯ ಅಗ್ರಿಟೆಕ್ ಸ್ಟಾರ್ಟಪ್‌ ಎಕ್ಸಪೋ (NASE-2024) ಆಯೋಜಿಸಲಾಗಿದೆ. ಒಂದೇ ವೇದಿಕೆಯಲ್ಲಿ 200 ಸ್ಟಾರ್ಟಪ್‌ಗಳು ಪಾಲ್ಗೊಳ್ಳಲಿವೆ. ಸ್ಟಾರ್ಟಪ್‌ಗಳಿಂದ ಕೃಷಿ ನಾವೀನ್ಯತೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ವ್ಯವಹಾರ ಹಮ್ಮಿಕೊಳ್ಳಲು ಸ್ಟಾರ್ಟಪ್‌ಗಳೊಂದಿಗೆ ಸಂಪರ್ಕ ಸಾಧಿಸುವ …

Read More »

ಬೀದರ್: ನಿಗಮಗಳಿಗೆ ಅನುದಾನ ಬಿಡುಗಡೆ ಸ್ಥಗಿತ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ

ಬೀದರ್‌: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿವಿಧ ನಿಗಮಗಳಿಗೆ ಅನುದಾನ ಬಿಡುಗಡೆಗೊಳಿಸುವುದನ್ನು ಸ್ಥಗಿತಗೊಳಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾ ಬಿಜೆಪಿ ಒಬಿಸಿ ಮೋರ್ಚಾದಿಂದ ನಗರದಲ್ಲಿ ಇಂದು ಪ್ರತಿಭಟನಾ ರ್‍ಯಾಲಿ ನಡೆಸಲಾಯಿತು. ನಗರದ ಗಣೇಶ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬಿಜೆಪಿ ಕಾರ್ಯಕರ್ತರು ರ್‍ಯಾಲಿ ನಡೆಸಿದರು. ರ್‍ಯಾಲಿಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದರು. ರಾಜ್ಯಪಾಲರ ಹೆಸರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು. 2023ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ …

Read More »

ಚಳಿಗಾಲ ಅಧಿವೇಶದಲ್ಲಿ ಸರ್ಕಾರದಿಂದ ಮಹತ್ವದ ತಿದ್ದುಪಡಿ ವಿಧೇಯಕಗಳ ಮಂಡನೆ

ಬೆಳಗಾವಿ : ಚಳಿಗಾಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರದಿಂದ 2020-2024ನೇ ಸಾಲಿಗೆ ಹಲವು ಪ್ರಮುಖ ತಿದ್ದುಪಡಿ ವಿಧೇಯಕಗಳನ್ನು ಮಂಡಿಸಲಾಯಿತು. 2024ನೇ ಸಾಲಿನ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ 2ನೇ ತಿದ್ದುಪಡಿ ವಿಧೇಯಕ ಮಂಡನೆಗೆ ಸದನವು ಅನುಮತಿಸಿತು. ಪ್ರಶ್ನೋತ್ತರ ಅವಧಿಗೂ ಮುನ್ನ ವಿಧೇಯಕ ಮಂಡನೆ ಪ್ರಸ್ತಾವನೆ ಪರವಾಗಿರುವ ಸದಸ್ಯರು ಹೌದು ಎಂದು, ಪ್ರಸ್ತಾವ ವಿರುದ್ಧವಾಗಿರುವ ಸದಸ್ಯರು ಇಲ್ಲ ಎಂದು ಧ್ವನಿ ಮೂಲಕ ಸೂಚಿಸುವಂತೆ ಸ್ಪೀಕರ್ ಯು.ಟಿ.ಖಾದರ್ ಅವರು ಸದನ ಸದಸ್ಯರಿಗೆ ಸೂಚನೆ …

Read More »