Breaking News

Uncategorized

ಪ್ರೇಮ ವೈಫಲ್ಯ : ಯುವಕ ಆತ್ಮಹತ್ಯೆಗೆ ಶರಣು

ಹುಬ್ಬಳ್ಳಿ: ಯುವಕನೊರ್ವ ಪ್ರೇಮ ವೈಫಲ್ಯದ ಕಾರಣಕ್ಕೆ ಆತ್ಮಹತ್ಯೆಗೆ ಶರಣಾದ ಘಟನೆ ಹುಬ್ಬಳ್ಳಿ ತಾಲೂಕಿನ ನೂಲ್ವಿ ಗ್ರಾಮದಲ್ಲಿ ನಡೆದಿದೆ. ಕೊಟ್ರೇಶ್ ಮಠಪತಿ (20) ಮೃತ ದುರ್ದೈವಿ. ಈತ ಕೂಲಿ ಕೆಲಸ ಮಾಡಿಕೊಂಡಿದ್ದ, ಆದರೆ ರವಿವಾರ ಮನನೊಂದು ನೂಲ್ವಿ ಗ್ರಾಮದ ಹೊರ ವಲಯದಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಹುಬ್ಬಳ್ಳಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಘಟನೆಗೆ ಪ್ರೇಮ ವೈಫಲ್ಯ ಕಾರಣ ಎಂದು ಶಂಕಿಸಲಾಗಿದೆ.

Read More »

ಪವರ್ ಸ್ಟಾರ್ ಅಭಿಮಾನಿಯಿಂದ ಶ್ರೀಗಂಧದಲ್ಲಿ ಪುತ್ಥಳಿ ಕೆತ್ತನೆ

ಪವರ್ ಸ್ಟಾರ್ ಅಭಿಮಾನಿಯಿಂದ ಶ್ರೀಗಂಧದಲ್ಲಿ ಪುತ್ಥಳಿ ಕೆತ್ತನೆಹುಣಸೂರು: ಚಲನಚಿತ್ರ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಅಭಿಮಾನಿ ಶ್ರೀಗಂಧದಲ್ಲಿ ಪುತ್ಥಳಿ ಕೆತ್ತಿಸಿದ್ದು, ಪುನೀತ್ ಪತ್ನಿ ಅಶ್ವಿನಿಯವರಿಗೆ ಕೊಡುಗೆ ನೀಡಲು ಮುಂದಾಗಿದ್ದಾರೆ. ಹುಣಸೂರು ನಗರದ ಯುವ ಕಾಂಗ್ರೆಸ್ ಅಧ್ಯಕ್ಷ ಅಪ್ಪು ಅಭಿಮಾನಿ ಸ್ವರೂಪ್ ಶಿವಯ್ಯ ಶ್ರೀಗಂಧದಲ್ಲಿ ಪುನೀತ್ ರಾಜ್ ಕುಮಾರ್ ಪುತ್ಥಳಿ ಕೆತ್ತಿಸಿದ್ದು, ಇಂದು ಉಡುಗೊರೆ ನೀಡಲಿದ್ದಾರೆ.

Read More »

ಬೈಕ್ ಗೆ ನೀರಿನ ಟ್ಯಾಂಕರ್ ಢಿಕ್ಕಿ : ಇಬ್ಬರು ಸ್ಥಳದಲ್ಲೇ ಸಾವು

ರಾಯಚೂರು: ಬೈಕ್ ಗೆ ನೀರಿನ ಟ್ಯಾಂಕರ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ ನಗರದ ಹೊರವಲಯದ ಮರ್ಚೇಡ್ ಕ್ರಾಸ್ ಬಳಿ ಘಟನೆ ನಡೆದಿದೆ. ಮೃತರನ್ನು ರಾಯಚೂರು ತಾಲೂಕಿನ ತಿಮ್ಮಾಪುರ ಗ್ರಾಮದ ತಿಪ್ಪಣ್ಣ(18) ಹಾಗೂ ಲಿಂಗಪ್ಪ(18) ಎಂದು ಗುರುತಿಸಲಾಗಿದೆ. ಉದಯ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ‌. ಟ್ಯಾಂಕರ್ ಢಿಕ್ಕಿ ಹೊಡೆದ ರಭಸಕ್ಕೆ ಇಬ್ಬರ ದೇಹಗಳು ಛಿದ್ರಗೊಂಡಿದ್ದು ಸ್ಥಳದಲ್ಲಿ ಕುಟುಂಬಸ್ಥರ …

Read More »

ಮೈಸೂರು ಮಹಾರಾಜ ಅಂಜನಾದ್ರಿಯ ಬೆಟ್ಟಕ್ಕೆ ಭೇಟಿ

ಕೊಪ್ಪಳ: ಮೈಸೂರು ಮಹಾರಾಜ ಯದುವೀರ್ ಒಡೆಯರ್ ಮತ್ತು ರಾಜಕುಮಾರಿ ಶ್ರೀಮತಿ ತ್ರಿಶಿಕಾ ಕುಮಾರಿ ಇಂದು ಗಂಗಾವತಿ ತಾಲೂಕಿನ ಅಂಜನಾದ್ರಿಯ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದಾರೆ. ಆಂಜನೇಯ ಹುಟ್ಟಿದ ಸ್ಥಳ ಎಂದೇ ಕರೆಯೋ ಈ ಅಂಜನಾದ್ರಿ ಬೆಟ್ಟಕ್ಕೆ ಬಂದ ಮಹಾರಾಜರು, ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದರು. ಹಂಪಿ ಪ್ರವಾಸದ ಹಿನ್ನೆಲೆಯಲ್ಲಿಯೇ ಯದುವೀರ್ ಕುಟುಂಬ ಈ ಕಡೆಗೆ ಬಂದಿದೆ. ಹಾಗೇನೆ ಕೊಪ್ಪಳಕೂ ಬಂದು ಅಂಜನಾದ್ರಿ ಬೆಟ್ಟದ 575 ಮೆಟ್ಟಿಲನ್ನೂ ಹತ್ತಿ ಆಂಜನೇಯನ ದರುಶನ ಪಡೆದಿದ್ದಾರೆ.

Read More »

ಜಾರಕಿಹೊಳಿ 819 ಕೋಟಿ ಹಣ ಲೂಟಿ ಮಾಡಿದ್ದಾರೆ, ಅಮಿತ್ ಶಾ, ಪಡ್ನವೀಸ್ ಮತ್ತು ಬೊಮ್ಮಾಯಿ ಭಾಗಿ

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ 819 ಕೋಟಿ ಹಣ ಲೂಟಿ ಮಾಡಿದ್ದಾರೆ. ಇದು ಸಾರ್ವಜನಿಕ ಹಣ, ಇದ್ರಲ್ಲಿ ಅಮಿತ್ ಶಾ, ಪಡ್ನವೀಸ್ ಮತ್ತು ಬೊಮ್ಮಾಯಿ ಭಾಗಿಯಾಗಿದ್ದಾರೆ. ಆದ್ರೆ ರಮೇಶ್ ಜಾರಕಿಹೊಳಿಗೆ ಇನ್ನೂ ನೋಟಿಸ್ ನೀಡಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆರೋಪಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ. ಲಕ್ಷ್ಮಣ, ಸೌಭಾಗ್ಯ ಲಕ್ಷ್ಮಿ ಶುಗರ್ ನಲ್ಲಿ ಮಗ, ಮಗಳು, ಸೊಸೆ ಮತ್ತು ರಮೇಶ್ ಸೇರಿ …

Read More »

ಸ್ನೇಹಿತರಿಬ್ಬರು ಕೃಷಿಹೊಂಡದಲ್ಲಿ ಮುಳುಗಿ ಸಾವು

ಚನ್ನಪಟ್ಟಣ: ಭಾನುವಾರದ ರಜೆ ಕಳೆಯಲು ಬೆಂಗಳೂರಿನಿಂದ ತಾಲ್ಲೂಕಿನ ತೌಟನಹಳ್ಳಿಗೆ ಬಂದಿದ್ದ ಸ್ನೇಹಿತರಿಬ್ಬರು ಕೃಷಿಹೊಂಡದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ಎಚ್.ಎಸ್.ಆರ್. ಲೇಔಟ್ ನಿವಾಸಿ ಶೃತಿಪ್ ಕುಮಾರ್ (30) ಮತ್ತು ಹರೀಶ್ (22) ಮೃತಪಟ್ಟವರು.ಶೃತಿಪ್ ಕುಮಾರ್ ತಮ್ಮ ನಾಲ್ವರು ಸ್ನೇಹಿತರೊಂದಿಗೆ ತೌಟನಹಳ್ಳಿಯ ಚಿಕ್ಕಪ್ಪನ ಮನೆಗೆ ಬಂದಿದ್ದರು. ಮಧ್ಯಾಹ್ನ ಊಟದ ನಂತರ ಸ್ನೇಹಿತರೊಂದಿಗೆ ಗ್ರಾಮದ ಹೊರವಲಯದಲ್ಲಿ ಚಿಕ್ಕಪ್ಪನ ತೋಟದಲ್ಲಿದ್ದ ಕೃಷಿ ಹೊಂಡಕ್ಕೆ ಈಜಲು ತೆರಳಿದಾಗ ಈ ದುರಂತ ನಡೆದಿದೆ. ಕೃಷಿಹೊಂಡದ ಆಳ ಅಗಲ ಅರಿಯದ …

Read More »

ಚಾರ್ಜ್‌ ಶೀಟ್‌ ನಲ್ಲಿ ರಾಜಕಾರಣ ಮಾಡುತ್ತಿದ್ದಾರೆ : ಡಿಕೆಶಿ

ತುಮಕೂರು: ತುಂಬಾ ತಡವಾಗಿ ಜಾರಿ ನಿರ್ದೇಶನಾಲಯದಿಂದ (ಇ.ಡಿ) ಚಾರ್ಜ್‌ ಶೀಟ್‌ ಸಲ್ಲಿಕೆಯಾಗಿದೆ. ಇದು ಮೂರ್ನಾಲ್ಕು ವರ್ಷದ ಹಿಂದೆಯೇ ಆಗಬೇಕಾಗಿತ್ತು. ಇದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಇನ್ನೂ ಚಾರ್ಜ್‌ಶೀಟ್‌ ನೋಡಿಲ್ಲ. ಕಾರಾಗೃಹದಲ್ಲಿ ಇರಬೇಕಾದರೆ, ಜೈಲಿನಿಂದ ಹೊರ ಬಂದ ಆರು ತಿಂಗಳ ಒಳಗಡೆ ಹಾಕಬೇಕಿತ್ತು ಎಂದರು. ಪರಿಷ್ಕೃತ ಪಠ್ಯಪುಸ್ತಕದ ಮೂಲಕ ಸಂವಿಧಾನ ಶಿಲ್ಪಿ ಅಂಬೇಡ್ಕರ್‌, ಬಸವಣ್ಣ, ಶಂಕರಾಚಾರ್ಯ, ಕುವೆಂಪು, ನಾರಾಯಣಗುರು …

Read More »

ಚಾರ್​ಧಾಮ್ ಯಾತ್ರೆಯಲ್ಲಿ ಇದುವರೆಗೆ 200ಕ್ಕೂ ಹೆಚ್ಚು ಜನರು ಸಾವು

ಡೆಹರಾಡೂನ್ :  ಉತ್ತರಾಖಂಡದ ಚಾರ್​ಧಾಮ್ ಯಾತ್ರೆಯಲ್ಲಿ ಇದುವರೆಗೆ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಉತ್ತರಖಂಡ್ ಸರ್ಕಾರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಇದಲ್ಲಿ ಹೆಚ್ಚಿನವರು ವೃದ್ದರೇ ಆಗಿದ್ದು, ವೈದ್ಯಕೀಯ ಚಿಕಿತ್ಸಾ ಆಹಾರದ ಕೊರತೆ ಇದ್ದವರೇ ಆಗಿದ್ದಾರೆ ಎಂದು ತಿಳಿಸಿದೆ. ಭಾರೀ ಮಳೆ ಮತ್ತು ಅಲ್ಲಿಲ್ಲಿನ ಭೂಕುಸಿತಗಳು ಸುಗಮ ಯಾತ್ರೆ ನಡೆಸುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, ಕೇದಾರನಾಥ ಯಾತ್ರೆ ಮಾರ್ಗದಲ್ಲಿ 95, …

Read More »

ರಾಜ್ಯದ ಮೊದಲ ಸರ್ಕಾರಿ ಗೋಶಾಲೆ ಲೋಕಾರ್ಪಣೆ

ಚಿಕ್ಕಮಗಳೂರು: ರಾಜ್ಯದ ಮೊದಲ ಸರ್ಕಾರಿ ಶಾಲೆ ಕಡೂರು ತಾಲೂಕಿನಲ್ಲಿ ಇಂದು ಲೋಕಾರ್ಪಣೆಗೊಳ್ಳಲಿದೆ. ಪಶುಸಂಗೋಪನೆ ಸಚಿವ ಪ್ರಭು ಚವಾಣ್ ಇಂದು ಬೆಳಗ್ಗೆ 11 ಗಂಟೆಗೆ ಕಡೂರು ತಾಲೂಕಿನ ಎಮ್ಮೆದೊಡ್ಡಿಯಲ್ಲಿ ಸರ್ಕಾರಿ ಗೋಶಾಲೆ ಲೋಕಾರ್ಪಣೆ ಮಾಡಲಿದ್ದಾರೆ. ಸಾಕಲು ಕಷ್ಟವಾದ ಮತ್ತು ಬೀಡಾಡಿ ಗೋವುಗಳನ್ನು ಸಾಕಲಾಗುತ್ತದೆ. ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಗೋವುಗಳಿಗೆ ಆಶ್ರಯ ನೀಡಲಾಗುತ್ತದೆ. 11,000 ರೂ.ಗೆ ಒಂದು ವರ್ಷ ಅವಧಿಗೆ ಒಂದು ಗೋವು ದತ್ತು ಪಡೆಯಲು ಪುಣ್ಯಕೋಟಿ ದತ್ತು ಯೋಜನೆ ಜಾರಿಗೊಳಿಸಲಾಗಿದೆ.

Read More »

ಸ್ಮಶಾನಕ್ಕೆ ತೆರಳಲು ದಾರಿ ಕೊರತೆ : ಮೃತದೇಹ ಇಟ್ಟು ಪ್ರತಿಭಟನೆ

ಬೆಳಗಾವಿ: ಸ್ಮಶಾನಕ್ಕೆ ತೆರಳಲು ದಾರಿ ಇಲ್ಲದಿದ್ದಕ್ಕೆ ಸವದತ್ತಿ ತಾಲೂಕಿನ ಏಣಗಿ ಗ್ರಾಮಸ್ಥರು ಡಿಸಿ ಕಚೇರಿ ಆವರಣದಲ್ಲಿ ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ಗ್ರಾಮದ ಅಬ್ದುಲ್ ಖಾದರ್ ಮಿಶ್ರಿಕೋಟಿ(65) ಮೃತದೇಹ ಇಟ್ಟು ಪ್ರತಿಭಟನೆ ನಡೆಸಿದರು. ಮೃತರ ಸಂಬಂಧಿ ಇಬ್ರಾಹಿಂ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದು, ಸ್ಮಶಾನಕ್ಕೆ ಹಾದಿ ಕೊಡದ ಹಿನ್ನೆಲೆ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಗ್ರಾಮದಲ್ಲಿ ಹಿಂದೂ, ಮುಸ್ಲಿಂ …

Read More »