BigTv News
June 19, 2022
Uncategorized
ಬೆಂಗಳೂರು: ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿಲಿದ್ದಾರೆ ಎಂದು ಮೋದಿ ಪ್ರಯಾಣಿಸುವ ಮಾರ್ಗದ ಕಾಲೇಜುಗಳಿಗೆ ರಜೆ ನೀಡಿದ್ದು ಯಾಕೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಪ್ರಧಾನಿ ಮೋದಿ ಪ್ರಯಾಣಿಸುವ ರಸ್ತೆಗಳಲ್ಲಿ ಕಾಲೇಜಿಗೆ ರಜೆ ನೀಡಲಾಗಿದೆ. ಕಾಲೇಜುಗಳಿಗೆ ಯಾಕೆ ರಜೆ ಕೊಟ್ಟಿದ್ದಾರೆ? ವಿದ್ಯಾರ್ಥಿಗಳು ಗಲಾಟೆ ಮಾಡ್ತಾರಾ? ಅವರನ್ನು ಅನುಮಾನದಿಂದ ನೋಡುತ್ತಿರುವುದಾದರೂ ಯಾಕೆ? ವಿದ್ಯಾರ್ಥಿಗಳು ಭಯೋತ್ಪಾದಕರಾ? ಎಂದು ಕಿಡಿ ಕಾರಿದ್ದಾರೆ. ಪ್ರಧಾನಿಯವರಿಗೆ …
Read More »
BigTv News
June 19, 2022
Uncategorized
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬರದಿರುವುದಕ್ಕೆ ಮತ್ತು ಫೇಲಾಗಿದ್ದಕ್ಕೆ 8 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಎಚ್‍ಡಿಕೆ, ‘ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬರಲಿಲ್ಲ ಅಥವಾ ಫೇಲಾದೆವು ಎನ್ನುವ ಕಾರಣಕ್ಕೆ ರಾಜ್ಯದಲ್ಲಿ 8 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಸುದ್ದಿ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ’ ಎಂದು ಹೇಳಿದ್ದಾರೆ.
Read More »
BigTv News
June 19, 2022
Uncategorized
ಬಾಗಲಕೋಟೆ: ಜೂನ್ 21 ರಂದು ಪಟ್ಟದಕಲ್ಲಿನಲ್ಲಿ ನಡೆಯುವ ಯೋಗ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಕೇಳದೇ ಹೆಸರು ಹಾಕಿದ್ದಕ್ಕೆ ಗರಂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಗಲಕೋಟೆ ಡಿಸಿ ಸುನೀಲಕುಮಾರ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಕರೆ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ನಿನಗೆ ಶಿಷ್ಟಾಚಾರ ಅಂದ್ರೆ ಏನು ಎಂಬುದು ಗೊತ್ತಿಲ್ವಾ? ನೀನು ಮೊದಲು ಶಿಷ್ಟಾಚಾರವನ್ನು ಪಾಲಿಸಬೇಕು. ಅವನ್ಯಾರೋ ಸಚಿವ ಬರ್ತಾನೆ ಅಂತಾ ನೀನು ಆಮಂತ್ರಣ ಪತ್ರಿಕೆ ಮಾಡಿ …
Read More »
BigTv News
June 19, 2022
Uncategorized
ನವದೆಹಲಿ : ದೆಹಲಿಯ ಪ್ರಗತಿ ಮೈದಾನದ ಸುರಂಗದ ಪರಿಶೀಲನೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಬರಿ ಕೈಗಳಿಂದ ಕಸವನ್ನು ಎತ್ತುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಈ ವಿಡಿಯೋವನ್ನು ಹಂಚಿಕೊಂಡು ಸ್ವಚ್ಛ ಭಾರತಕ್ಕೆ ಮತ್ತೆ ಮತ್ತೆ ಪ್ರಧಾನಿ ಪ್ರೇರಣೆ ನೀಡುತ್ತಿದ್ದಾರೆ ಎಂದು ಬರೆದಿದ್ದಾರೆ. ಭಾನುವಾರ ನೂತನವಾಗಿ ಉದ್ಘಾಟನೆಗೊಂಡ ಸುರಂಗ ಮಾರ್ಗವನ್ನು ಪರಿಶೀಲಿಸುತ್ತಿದ್ದ ಮೋದಿ ಅವರು ಎಸೆದಿದ್ದ ಖಾಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಮತ್ತು ಇತರ ಕೆಲವು …
Read More »
BigTv News
June 19, 2022
Uncategorized
ಹುಬ್ಬಳ್ಳಿ : ನಾಳೆ ನಾಡಿದ್ದು ಎರಡೂ ದಿನಗಳ ಕಾಲ ಪ್ರಧಾನಿ ರಾಜ್ಯ ಪ್ರವಾಸ ಹಮ್ಮಿಕೊಂಡಿದ್ದಾರೆ ಎಂದು ಸಿಎಂ ಬೊಮ್ಮಾಯಿ ಹೇಳಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು,ನಾಳೆ ಬೆಂಗಳೂರಿನಲ್ಲಿ ಕಾರ್ಯಕ್ರಮವಿದೆ. ನಾಡಿದ್ದು ಮೈಸೂರಿನಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಮೈಸೂರಿನಲ್ಲಿ ಮೋದಿ ನೋಡಿದ್ರೆ ಕೊರೊನಾ ಓಡಿ ಹೊಗುತ್ತಾ ಎನ್ನೋ ಕೈ ನಾಯಕರ ಆರೋಪ ವಿಚಾರ ಎಂದರು.
Read More »
BigTv News
June 19, 2022
Uncategorized
ಶಹಾಪುರ: ರೈತರಿಗೆ ನಕಲಿ ಹತ್ತಿ ಬೀಜದ ಪಾಕೆಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ನಕಲಿ ಹತ್ತಿ ಬೀಜದ ಸಮೇತ ಬಂಧಿಸಿದ ಘಟನೆ ಭೀಮರಾಯನ ಗುಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಮುಡಬೂಳ ಗ್ರಾಮ ಸಮೀಪದ ಆಂಧ್ರ ಕ್ಯಾಂಪ್‌ನಲ್ಲಿ ವ್ಯಕ್ತಿಯೊಬ್ಬ ನಕಲಿ ಹತ್ತಿ ಬೀಜಗಳ ಪಾಕೆಟ್ ಮಾರಾಟದಲ್ಲಿ ತೊಡಗಿಸಿಕೊಂಡಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸ್ ತಂಡ ದಾಳಿ ನಡೆಸಿದ್ದು, ನಕಲಿ ಹತ್ತಿ ಬೀಜದ …
Read More »
BigTv News
June 19, 2022
Uncategorized
ಬೆಂಗಳೂರು: ಜೂನ್.21ರಂದು ಮೈಸೂರಿನಲ್ಲಿ ನಡೆಯಲಿರುವಂತ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಈ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗುವಂತ ಎಲ್ಲರಿಗೂ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿದೆ. ಹೀಗಾಗಿ, ಸಿಎಂ ಬಸವರಾಜ ಬೊಮ್ಮಾಯಿ ಕೂಡ ಇಂದು ಕೋವಿಡ್ ಪರೀಕ್ಷೆಗೆ ಒಳಗಾದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆರ್ ಟಿ ನಗರದ ನಿವಾಸಕ್ಕೆ ಆಗಮಿಸಿದಂತ ಆರೋಗ್ಯ ಸಿಬ್ಬಂದಿಗಳು, ಅವರ ಸ್ವಾಪ್ ಅನ್ನು ಪರೀಕ್ಷೆಗಾಗಿ ಕೊಂಡೊಯ್ದರು. ಈ ಮೂಲಕ ಕೋವಿಡ್ ಪರೀಕ್ಷೆಗೆ …
Read More »
BigTv News
June 19, 2022
Uncategorized
ಹುಬ್ಬಳ್ಳಿ; ಅಗ್ನಿಪಥ್ ಯೋಜನೆಯಿಂದ ರಾಷ್ಟ್ರಕ್ಕಾಗಿ ಸಮರ್ಪಿತರಾಗುವ ಸುವರ್ಣ ಅವಕಾಶ ದೊರೆಯಲಿದ್ದು ಕೇಲವರು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುತಿದ್ದಾರೆ. ಅಗ್ನಿಪಥ್ ಯೋಜನೆಯ ಮೂಲಕ ನಮ್ಮ ದೇಶದ ಅತೀ ಹೆಚ್ಚು ಯುವಕರಿಗೆ ಅಗ್ನಿವೀರರಾಗಿ ತಾಯಿಭಾರತಿಯ ಸೇವೆ ಮಾಡುವ ಹಾಗು ರಾಷ್ಟ್ರಕ್ಕಾಗಿ ಸಮರ್ಪಿತರಾಗುವ ಸುವರ್ಣ ಅವಕಾಶ ದೊರೆಯಲಿದೆ ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದಲ್ಲಿಂದು ತಮ್ಮನ್ನ ಭೇಟಿಯಾದ ಸುದ್ದಿಗಾರರ ಜೊತೆಗೆ ಮಾತನಾಡಿದರು ಅಗ್ನಿಪಥ ಯೋಜನೆ ವಿರೋಧಿಸಿ …
Read More »
BigTv News
June 19, 2022
Uncategorized
ಆಲೂರು: ಕ್ಯಾಂಟರ್ – ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ತಂದೆ, ಮಗ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಆಲೂರು-ಈಶ್ವರಹಳ್ಳಿ ಕೂಡಿಗೆ ಸಮೀಪ ನಡೆದಿದೆ. ತಮಿಳುನಾಡು ಮೂಲದ ಅಂಜನಪ್ಪ (40), ಕಾರ್ತಿಕ್ (17) ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ. 2 ಕಾರಿನಲ್ಲಿ ಒಟ್ಟು 10 ಜನ ಧರ್ಮಸ್ಥಳಕ್ಕೆಂದು ತೆರಳುತ್ತಿದ್ದರು. ಈ ವೇಳೆ ಮಾರುತಿ 800 ಕಾರಿಗೆ ಕ್ಯಾಂಟರ್ ಢಿಕ್ಕಿಯಾಗಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಇನ್ನುಳಿದಂತೆ ಘಟನೆಯಲ್ಲಿ ಮೂವರಿಗೆ ಗಂಭೀರ …
Read More »
BigTv News
June 19, 2022
Uncategorized
ಧಾರವಾಡ: ಮಹಿಳೆಯರು ಸಮಾಜದಲ್ಲಿ ಗುರುತಿಸಿಕೊಳ್ಳಲು ಆಸಕ್ತಿಯಿಂದ ಸಂಘಟನಾತ್ಮಕವಾಗಿ ಕಾರ್ಯ ಮಾಡಬೇಕು ಎಂದು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಜೆ.ಎಂ ಚಂದುನವರ ತಿಳಿಸಿದರು. ಧಾರವಾಡ ಕಮಲಾಪುರದ ಪ್ರಮೀಳಾ ಕೌಶಲ್ಯ ಅಭಿವೃದ್ಧಿ ಸಂಸ್ಥೆ ವತಿಯಿಂದ ಉಚಿತ ಬ್ಯಾಗ್ ತಯಾರಿಕಾ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳೆಯರು ಸಂಘಟಿತರಾಗಬೇಕು ಅಂದಾಗ ಸಮಾಜಕ್ಕೆ ಮಹಿಳೆಯರ ಶಕ್ತಿ ಏನು ಎಂಬುದು ತಿಳಿಯುತ್ತದೆ. ಪ್ರಮೀಳಾ ಕೌಶಲ್ಯ ಅಭಿವೃದ್ಧಿ ಸಂಸ್ಥೆ ಮಹಿಳೆಯರನ್ನು ಸಂಘಟಿಸಲು ಉತ್ತಮ ಕಾರ್ಯ …
Read More »