Breaking News

Uncategorized

58,000 ಕಾರ್ಡ್ ಗಳಲ್ಲಿ 20 ಸಾವಿರ ನಕಲಿ ಕಾರ್ಡ್ ಗಳನ್ನು ಗುರುತಿಸಿ ರದ್ದು ಮಾಡಲಾಗಿದೆ : ಸಂತೋಷ ಲಾಡ್

ಹುಬ್ಬಳ್ಳಿ : ನಕಲಿ ಕಾರ್ಮಿಕ ಕಾರ್ಡ್ ಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಈ ನಿಟ್ಟಿನಲ್ಲಿ 20 ಸಾವಿರ ನಕಲಿ ಕಾರ್ಡ್ ರದ್ದು ಮಾಡಿದ್ದೇವೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, 58,000 ಕಾರ್ಡ್ ಗಳಲ್ಲಿ 20 ಸಾವಿರ ನಕಲಿ ಕಾರ್ಡ್ ಗಳನ್ನು ಗುರುತಿಸಿ ರದ್ದು ಮಾಡಲಾಗಿದೆ. ಅಂಬೇಡ್ಕ‌ರ್ ಸೇವಾ ಕೇಂದ್ರದ ಮೂಲಕ 43 ಝೂನ್ ಮಾಡಿದ್ದೇವೆ. ಈ …

Read More »

ಮುಸಲ್ಮಾನರು ನಮ್ಮ ಬ್ರದರ್ಸ್ ಅಂತ ಡಿ.ಕೆ ಶಿವಕುಮಾ‌ರ್ ಹೇಳಿದ್ದು, ಕುಕ್ಕರ್‌ನಲ್ಲಿ ಬಾಂಬ್ ಇಟ್ಟವರನ್ನಲ್ಲ : ಲಾಡ್

ಹುಬ್ಬಳ್ಳಿ: ಬಿಜೆಪಿಯವರು ನಮ್ಮ ಸ್ನೇಹಿತರು. ನಾವು ಅವರನ್ನ, ಅವರು ನಮ್ಮನ್ನ ಗೌರವಿಸಬೇಕು. ಮಾನವತಾವಾದಿ ಆ ಪುಣ್ಯಾತ್ಮ ಬಸವಣ್ಣನವರಿಗೆ ಬೈದು ನಿಮಗೆ ಏನು ಅನುಕೂಲ ಆಗುತ್ತೆ?. ಅನುಕೂಲ ಆಗೋದಾದ್ರೆ ದೇವರು ನಿಮಗೆ ಒಳ್ಳೇದು ಮಾಡ್ಲಿ ಎಂದು ಸಚಿವ ಸಂತೋಷ್ ಲಾಡ್ ವ್ಯಂಗ್ಯವಾಡಿದರು. ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಮುಸಲ್ಮಾನರು ನಮ್ಮ ಬ್ರದರ್ಸ್ ಅಂತ ಡಿ.ಕೆ ಶಿವಕುಮಾ‌ರ್ ಹೇಳಿದ್ದು, ಕುಕ್ಕರ್‌ನಲ್ಲಿ ಬಾಂಬ್ ಇಟ್ಟವರನ್ನಲ್ಲ ಎಂದರು. ಬಿಜೆಪಿ ಸರ್ಕಾರದಲ್ಲಿ ಮುಸ್ಲಿಂ ಸಚಿವರು ಇರಲಿಲ್ವಾ..? …

Read More »

ಒಡಿಶಾ: ನೂತನ ರೈಲು ಮಾರ್ಗಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶಂಕುಸ್ಥಾಪನೆ

ಮಯೂರ್ ಭಂಜ್: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಬಂಗ್ರಿಪೋಸಿಯಲ್ಲಿ, ಬಂಗ್ರಿಪೋಸಿಯಿಂದ ಗೌಮಹಿಸಾನಿ, ಬದಂಪಹಾಡ್‌ನಿಂದ ಕೆಂಡುಜರ್‌ಗಢ್ ಮತ್ತು ಬುಡಮೋರಾದಿಂದ ಚಕುಲಿಯಾಗೆ ಸಂಪರ್ಕ ಕಲ್ಪಿಸುವ ಮೂರು ಹೊಸ ರೈಲು ಮಾರ್ಗಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಆಗ್ನೇಯ ರೈಲ್ವೆಯ ಅಡಿಯಲ್ಲಿ ಬರುವ ಹೊಸ ರೈಲು ಮಾರ್ಗಗಳು ಒಡಿಶಾದ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸುವ ಜೊತೆಗೆ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಈ ಯೋಜನೆಯ ನಿರ್ಮಾಣ ವೆಚ್ಚ ಸುಮಾರು 6 ಸಾವಿರದ 294 ಕೋಟಿ …

Read More »

ಡೀಮ್ಡ್ ಫಾರೆಸ್ಟ್ ಬಗ್ಗೆ ಜಂಟಿಯಾಗಿ ಸರ್ವೆ ನಡೆಸಿ 6 ತಿಂಗಳಲ್ಲಿ ವರದಿ ಸಲ್ಲಿಸಲು ಸೂಚನೆ: ಸಚಿವ ಈಶ್ವರ ಖಂಡ್ರೆ

ಬೆಂಗಳೂರು: ರಾಜ್ಯದಲ್ಲಿರುವ ವಿಶೇಷ ಅರಣ್ಯದ (ಡೀಮ್ಡ್ ಫಾರೆಸ್ಟ್‌) ಬಗ್ಗೆ ಜಂಟಿಯಾಗಿ ಸರ್ವೆ ನಡೆಸಿ 6 ತಿಂಗಳಲ್ಲಿ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸುವಂತೆ ಅರಣ್ಯ ಹಾಗೂ ಕಂದಾಯ ಇಲಾಖೆಗೆ ಸೂಚಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ. ಅರಣ್ಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಜ್ಯದಲ್ಲಿರುವ ವಿಶೇಷ ಅರಣ್ಯದ (ಡೀಮ್ಡ್ ಫಾರೆಸ್ಟ್‌) ಬಗ್ಗೆ ಜಂಟಿ ಸಮೀಕ್ಷೆ ಮಾಡಿ ವರದಿ ಕಳಿಸಿದರೆ ಅದರಲ್ಲಿ ಉಂಟಾಗಿರುವ …

Read More »

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಿಂದ ಡಿ.13 ಕ್ಕೆ ಹಲವು ಬೇಡಿಕೆ ಮುಂದಿಟ್ಟು ಬೆಳಗಾವಿ ಚಲೋಗೆ ಕರೆ

ಬೆಂಗಳೂರು: ಡಿಸೆಂಬರ್ 9 ರಿಂದ 20ರವರೆಗೆ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯಲಿದೆ. ಈ ಅಧಿವೇಶನಕ್ಕೆ ವಿವಿಧ ವಲಯಗಳ ಸಂಘಟನೆಗಳಿಂದ ಪ್ರತಿಭಟನೆ ಬಿಸಿ ತಟ್ಟಲಿದೆ. ಇದೀಗ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತರ ಮತ್ತು ಸಹಾಯಕಿಯರ ಫೆಡರೇಶನ್ ಸಂಘದಿಂದ ಡಿಸೆಂಬರ್ 13ಕ್ಕೆ ಹಲವು ಬೇಡಿಕೆ ಮುಂದಿಟ್ಟು ಬೆಳಗಾವಿ ಚಲೋ ಕಾರ್ಯಕ್ರಮ ಕ್ಕೆ ಕರೆ ಕೊಟ್ಟಿದ್ದಾರೆ. ಈ ಬೆಳಗಾವಿ ಚಲೋ ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಸುಮಾರು 2500 ಅಂಗನವಾಡಿ ಕಾರ್ಯಕರ್ತರು …

Read More »

ಜಿ.ಪಂ, ತಾ.ಪಂ. ಚುನಾವಣೆಗೆ ಕಾರ್ಯಕರ್ತರ ಸಹಾಯ, ಸಹಕಾರ ಅಗತ್ಯ: ಸಚಿವ ಸತೀಶ್ ಜಾರಕಿಹೊಳಿ

ಚಿತ್ರದುರ್ಗ : ಮುಂಬರುವ ಜಿ.ಪಂ. ತಾ.ಪಂ. ಹಾಗೂ 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸ ಅಧಿಕಾರವನ್ನು ಹಿಡಿಯಬೇಕಿದೆ ಇದಕ್ಕೆ ಕಾರ್ಯಕರ್ತರ ಸಹಾಯ, ಸಹಕಾರ ಅಗತ್ಯವಾಗಿದೆ ಎಂದು ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ತಿಳಿಸಿದರು. ಚಿತ್ರದುರ್ಗ ನಗರಕ್ಕೆ ಭೇಟಿ ನೀಡಿದ ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಆಗಮಿಸಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಇತ್ತಿಚೆಗೆ ನಡೆದ ಉಪ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವನ್ನು ಸಾಧಿಸಿದೆ ಶಿಗ್ಗಾವಿ …

Read More »

ನಾಳೆಯಿಂದ ಬೆಳಗಾವಿಯಲ್ಲಿ ಅಧಿವೇಶನ: ಸರ್ಕಾರದ ಮೇಲೆ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜು

ಬೆಂಗಳೂರು: ಉಪ ಚುನಾವಣೆ ಭರ್ಜರಿ ಗೆಲುವು ಹಾಗೂ ಜನ ಕಲ್ಯಾಣೋತ್ಸವ ಯಶಸ್ಸಿನ ಹುಮ್ಮಸ್ಸಿನಲ್ಲಿ ರುವ ರಾಜ್ಯ ಸರ್ಕಾರಕ್ಕೆ ಸೋಮವಾರದಿಂದ 10 ದಿನಗಳ ಕಾಲ ನಡೆಯಲಿರುವ ಬೆಳಗಾವಿ ಚಳಿಗಾಲದ ಅಧಿವೇಶನದ ರೂಪದಲ್ಲಿ ಅಗ್ನಿ ಪರೀಕೆ ಎದುರಾಗಿದೆ. ವಕ್ಫ್‌, ಮುಡಾ, ಬಾಣಂತಿಯರ ಸಾವಿ ನಂತಹ ವಿವಾದಗಳನ್ನು ಮುಂದಿಟ್ಟುಕೊಂಡು ಸರ್ಕಾರದ ಮೇಲೆ ಮುಗಿ ಬೀಳಲು ಪ್ರತಿಪಕ್ಷ ಗಳು ಸಜ್ಜಾಗಿದ್ದರೆ, ಕೊರೋನಾ ಹಗರಣ ಕುರಿತ ಕುನ್ಹಾ ವರದಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಮೇಲಿನ ಬಿಡಿಎ ಹಗರಣ …

Read More »

ಮಾನವೀಯ ನೆರವು: ಭಾರತದಿಂದ ಮ್ಯಾನ್ಮಾರ್ ಗೆ 2,200 ಮೆಟ್ರಿಕ್ ಟನ್ ಅಕ್ಕಿ ರವಾನೆ

ನವದೆಹಲಿ: ಪೂರ್ವದತ್ತ ಚಿತ್ತ (ಆ‍್ಯಕ್ಟ್‌ ಈಸ್ಟ್‌), ನೆರೆಹೊರೆಯವರೇ ಮೊದಲು (ನೈಬರ್‌ಹೂಡ್‌ ಫರ್ಸ್ಟ್‌) ನೀತಿಯಡಿ ಮಾನವೀಯ ನೆರವಿನ ಭಾಗವಾಗಿ ಭಾರತವು ಮ್ಯಾನ್ಮಾರ್‌ಗೆ 2,200 ಮೆಟ್ರಿಕ್‌ ಟನ್‌ಗಳಷ್ಟು ಅಕ್ಕಿಯನ್ನು ರವಾನಿಸಿದೆ. ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮ್ಯಾನ್ಮಾರ್ ಜನರಿಗೆ ಮಾನವೀಯ ನೆರವು ನೀಡುವ ತನ್ನ ಬದ್ಧತೆಯನ್ನು ಭಾರತವು ಪುನರುಚ್ಚರಿಸುತ್ತದೆ. ಹೀಗಾಗಿ 2,200 ಮೆಟ್ರಿಕ್‌ ಟನ್‌ ಅಕ್ಕಿಯ ಸರಕು ಶನಿವಾರ ಮ್ಯಾನ್ಮಾರ್‌ಗೆ …

Read More »

ಒಂದು ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ಬ್ಯಾಂಕ್ ಗಳು ಸಾಲ ಒದಗಿಸಲು ಒಪ್ಪಿಗೆ

ಬೆಂಗಳೂರು : ಮುಖ್ಯಮಂತ್ರಿಯವರ ಒಂದು ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ಒದಗಿಸುವ ಸಂಬಂಧ ವಸತಿ ಸಚಿವ ಜಮೀರ್ ಅಹಮದ್ ಖಾನ್ ಬ್ಯಾಂಕ್ ಮುಖ್ಯಸ್ಥರ ಜತೆ ನಡೆಸಿದ ಸಭೆ ಫಲಪ್ರದ ವಾಗಿದೆ. ಮೊದಲ ಹಂತದಲ್ಲಿ ಮೂರು ಸಾವಿರ ಜನರಿಗೆ ತಲಾ ಐದು ಲಕ್ಷ ರೂ. ಸಾಲ ನೀಡಲು ಬ್ಯಾಂಕ್ ಮುಖ್ಯಸ್ಥರು ಸಮ್ಮತಿ ಸೂಚಿಸಿದ್ದಾರೆ. ಮೊದಲ ಹಂತದಲ್ಲಿ ಸಾಲಕ್ಕಾಗಿ ಮೂರು ಸಾವಿರ ಅರ್ಜಿ ಸಲ್ಲಿಕೆಯಾಗಿದ್ದು 316 ಜನರಿಗೆ ಸಾಲ ಮಂಜೂರು …

Read More »

ಬೆಳಗಾವಿ ಅಧಿವೇಶನದಲ್ಲಿ ವಾರದಲ್ಲಿ 2 ದಿನ ಕಿತ್ತೂರು, ಕಲ್ಯಾಣ ಕರ್ನಾಟಕದ ಅಭಿವೃದ್ದಿ ಕುರಿತು ಚರ್ಚೆ: ಬಸವರಾಜ ಹೊರಟ್ಟಿ

ಬೆಳಗಾವಿ: ಎರಡು ವಾರಗಳ ಕಾಲ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಚಳಿಗಾಲ ಅಧಿವೇಶನದಲ್ಲಿ ಮಂಗಳವಾರ ಮತ್ತು ಬುಧವಾರ ಪ್ರಶ್ನೋತ್ತರ ವೇಳೆ‌ ನಂತರ, ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಕುರಿತು ಚರ್ಚಿಸಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದರು. ಸುವರ್ಣ ವಿಧಾನಸೌಧದಲ್ಲಿ ಅಧಿವೇಶನದ ವ್ಯವಸ್ಥೆ ಪರಿಶೀಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 40ಕ್ಕೂ ಹೆಚ್ಚು ಸದಸ್ಯರೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಲಾಗಿದ್ದು, ಚಳಿಗಾಲದ ಅಧಿವೇಶನದಲ್ಲಿ ರಚನಾತ್ಮಕ …

Read More »