Breaking News

Uncategorized

ರಾಜ್ಯಾದ್ಯಂತ ಮುಂದಿನ ನಾಲ್ಕು ದಿನ ಭಾರೀ ಮಳೆ

ಬೆಂಗಳೂರು : ಕರಾವಳಿ,ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಆಗಸ್ಟ್ 6 ರವರೆಗೆ ಭಾರೀ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಶನಿವಾರದವರೆಗೆ ರೆಡ್ ಅಲರ್ಟ್ ಇರಲಿದೆ. ಮಲೆನಾಡಿನ ಕೊಡಗು, ಚಿಕ್ಕಮಗಳೂರು ಜಿಲ್ಲೆಗೆ ಶುಕ್ರವಾರದವರೆಗೆ ರೆಡ್ ಅಲರ್ಟ್ ಇರಲಿದೆ.

Read More »

ಅಮೃತ ಮಹೋತ್ಸವ’ಕ್ಕೆ ಸಿಂಗಾರಗೊಂಡ ದೇವನಗರಿ

ದಾವಣಗೆರೆ: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಂಗವಾಗಿ ಬುಧವಾರ ಇಲ್ಲಿ ನಡೆಯಲಿರುವ ‘ಅಮೃತ ಮಹೋತ್ಸವ’ಕ್ಕೆ ‘ದೇವನಗರಿ’ ಸಿಂಗಾರಗೊಂಡಿದೆ. ವೇದಿಕೆ ಕಾರ್ಯಕ್ರಮ ನಡೆಯಲಿರುವ ನಗರದ ಹೊರವಲಯದ ಕುಂದವಾಡ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಶಾಮನೂರು ಪ್ಯಾಲೆಸ್‌ ಮೈದಾನ ಸಜ್ಜುಗೊಂಡಿದೆ. ಸಿದ್ದರಾಮಯ್ಯ, ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿಯವರ ಬೃಹತ್‌ ಕಟೌಟ್‌ಗಳು, ಬ್ಯಾನರ್‌ಗಳು ಕಾರ್ಯಕ್ರಮ ನಡೆಯಲಿರುವ ವೇದಿಕೆ ಎದುರು ಸ್ವಾಗತ ಕೋರುತ್ತಿವೆ. ವಿವಿಧೆಡೆ ಯಿಂದ ಬರುವ ಪಕ್ಷದ …

Read More »

ಸಿದ್ದು ಮೇಲೆ ಮುನಿಸು : ಜನ್ಮದಿನ ಆಚರಣೆಯಿಂದ ದೂರ ಉಳಿದ ಕಾಂಗ್ರೆಸ್ ನಾಯಕರು

ದಾವಣಗೆರೆ : ನಗರದಲ್ಲಿ ಇಂದು ನಡೆಯಲಿರುವ ಸಿದ್ದರಾಮಯ್ಯ ಜನ್ಮದಿನದ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಗೈರು ಹಾಜರಾಗಲಿದ್ದಾರೆ. ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಗೈರುಹಾಜರಾಗಲಿದ್ದಾರೆ. ಮುನಿಯಪ್ಪ ಅವರು ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿದ್ದಾರೆ. ಕೋಲಾರ ರಾಜಕೀಯಕ್ಕೆ ಸಂಬಂಧಿಸಿದಂತೆ ಮುನಿಯಪ್ಪ ಮುನಿಸಿಕೊಂಡಿದ್ದಾರೆನ್ನಲಾಗಿದೆ. ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಅವರ ವಿರುದ್ಧ ಮುನಿಯಪ್ಪ ಮುನಿಸಿಕೊಂಡಿದ್ದಾರೆ. ಕೊತ್ತೂರು ಮಂಜುನಾಥ್ ಸೇರಿದಂತೆ ಇತರರ ಪಕ್ಷ …

Read More »

841 ಜನ ಸರ್ಕಾರಿ ವಕೀಲರನ್ನು ವಜಾಗೊಳಿಸಿದ ಆದಿತ್ಯನಾಥ್ ಸರ್ಕಾರ

ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ 841 ಜನ ಸರ್ಕಾರಿ ವಕೀಲರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಜಾಗೊಳಿಸಿ ಆದೇಶಿಸಿದೆ. ಆದರೆ, ಸರ್ಕಾರದ ಆದೇಶದಲ್ಲಿ ಇಷ್ಟೊಂದು ಸಂಖ್ಯೆಯ ವಕೀಲರ ವಜಾಕ್ಕೆ ಕಾರಣ ಕೊಟ್ಟಿಲ್ಲ. ಕಾನೂನು ಮತ್ತು ಕಾನೂನು ಮತ್ತು ನ್ಯಾಯಾಂಗ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿಕುಂಜ್​ ಈ ಆದೇಶ ಹೊರಡಿಸಿದ್ದಾರೆ. ಅಲಹಾಬಾದ್​ ಹೈಕೋರ್ಟ್​ನಲ್ಲಿ ನೇಮಕವಾದ ಎಲ್ಲ ಸಾರ್ವಜನಿಕ ಅಭಿಯೋಜಕರನ್ನೂ ವಜಾ ಮಾಡಲಾಗಿದೆ. ಹೈಕೋರ್ಟ್​ನ ಮುಖ್ಯ ಪೀಠದ …

Read More »

ಪಿಎಸ್ ಐ ಅಕ್ರಮ : ದಿವ್ಯಾ ರಾಜೇಶ್‌ ಸಲ್ಲಿಸಿದ ಅರ್ಜಿ ವಜಾ

ಬೆಂಗಳೂರು: ಕರ್ನಾಟಕ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ವಿಜ್ಞಾನ ಶಿಕ್ಷಣ (ನಿಯಂತ್ರಣ) ಪ್ರಾಧಿಕಾರಕ್ಕೆ ಡಾ.ಎನ್‌.ರಾಮಕೃಷ್ಣ ರೆಡ್ಡಿ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಿಸಿದ್ದನ್ನು ಪ್ರಶ್ನಿಸಿ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಹಗರಣದ ಆರೋಪಿಯಲ್ಲಿ ಒಬ್ಬರಾದ ದಿವ್ಯಾ ರಾಜೇಶ್‌ ಹಾಗರಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ. ಹಂಗಾಮಿ ಮುಖ್ಯ ನ್ಯಾಯ ಮೂರ್ತಿ ಅಲೋಕ್ ಆರಾಧೆ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳ ವಾರ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ …

Read More »

ಚಿತ್ರದುರ್ಗ ದತ್ತ ಪ್ರಯಾಣ ಬೆಳೆಸಿದ ರಾಗಾ

ಹುಬ್ಬಳ್ಳಿ: ವಾಣಿಜ್ಯ ನಗರದಿಂದ ಚಿತ್ರದುರ್ಗ ದತ್ತ ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿಬಪ್ರಯಾಣ ಬೆಳೆಸಿದ್ದಾರೆ. ರಾತ್ರಿ ತಂಗಿದ್ದ ಹುಬ್ಬಳ್ಳಿಯ ಫಾರ್ಚುನರ್ ಹೊಟೆಲ್ ನಿಂದ ಚಿತ್ರದುರ್ಗಕ್ಕೆ ರಾಹುಲ್ ಗಾಂಧಿ ಅವರು ರಸ್ತೆ ಮೂಲಕ ತೆರಳಿದರು. ರಾಹುಲ್ ಗಾಂಧಿ ಅವರೊಂದಿಗೆ ವೇಣುಗೋಪಾಲ, ಡಿಕೆ ಶಿವಕುಮಾರ ಸಹ ಇದ್ದರು. ‌ಪೋಲಿಸ್ ಬೆಂಗಾವಲಿನಲ್ಲಿ ವಾಹನದಲ್ಲಿ ತೆರಳಿದರು.

Read More »

ರಾಗಾಗೆ ಚರಕ ಕೊಟ್ಟು ಸತ್ಕರಿಸಿದ ರಜತ್ ಉಳ್ಳಾಗಡ್ಡಿ ಮಠ

ಹುಬ್ಬಳ್ಳಿ: ನಗರಕ್ಕೆ ಆಗಮಿಸಿದ್ದ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿಗೆ ಚರಕ ಕೊಟ್ಟು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಠ ಸತ್ಕರಿಸಿದರು. ಡಿಕೆ ಶಿವಕುಮಾರ ನೇತೃತ್ವದಲ್ಲಿ ಚರಕ ಕೊಟ್ಟು ರಾಹುಲ್ ಗಾಂಧಿ ಅವರನ್ನು ಉಳ್ಳಾಗಡ್ಡಿಮಠ ಸನ್ಮಾನಿಸಲಾಯಿತು. ಚಿತ್ರದುರ್ಗಕ್ಕೆ ತೆರಳುವ ಮುನ್ನ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಠ ರಾಹುಲ್ ಗಾಂಧಿ ಅವರಿಗೆ ಉಡುಗೊರೆ ನೀಡಿದರು.

Read More »

ಮಧ್ಯರಾತ್ರಿ ಕೇಕ್ ಕತ್ತರಿಸಿ ಸಿದ್ದರಾಮಯ್ಯ ಜನ್ಮ ದಿನಾಚರಣೆ

: ಹುಬ್ಬಳ್ಳಿ : ನಗರದ ಖಾಸಗಿ ಹೊಟೆಲ್ ನಲ್ಲಿ ಮಂಗಳವಾರ ಮಧ್ಯರಾತ್ರಿ ಕೇಕ್ ಕತ್ತರಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮದಿನವನ್ನು ಆಚರಿಸಲಾಯಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಕೆ.ಜೆ. ಜಾರ್ಜ್, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ, ಚನ್ನರಾಜ ಹಟ್ಟಿಹೊಳಿ, ಮುಖಂಡರಾದ ಸಲೀಂ ಅಹ್ಮದ್, ಎನ್.ಎಚ್.ಕೋನರಡ್ಡಿ, ಗಿರೀಶ್ ಗದಿಗೆಪ್ಪ ಗೌಡರ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು. ಸಿದ್ದರಾಮಯ್ಯ ಅವರು ಕೇಕ್ …

Read More »

ಹುಬ್ಬಳ್ಳಿ ಖಾಸಗಿ ಹೋಟೆ‌‌ಲ್ ನಲ್ಲಿ ಕಾಂಗ್ರೆಸ್ ನಾಯಕರಿಂದ ಸಭೆ

ಹುಬ್ಬಳ್ಳಿ : ನಗರದ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ರಾತ್ರಿ ನಡೆದ ಕಾಂಗ್ರೆಸ್ ರಾಜಕೀಯ ವ್ಯವಹಾರಗಳ ಸಮಿತಿ ಸಭೆಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್ ಮತ್ತಿತರ ಮುಖಂಡರು, ಹಾಲಿ …

Read More »

ಹೋಟೆಲ್ ಗೆ ಎಂಟ್ರಿ : ಸಾಮಾನ್ಯ ರೂಮ್ ಬೇಕು ಎಂದ ರಾಗಾ

ಹುಬ್ಬಳ್ಳಿ : AICC ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ಆಗಮಿಸಿದ್ದು , ಇದೀಗ ಹೋಟೆಲ್ ಗೆ ಎಂಟ್ರಿ ಕೊಟ್ಟಿದ್ದಾರೆ. ಪ್ರೆಸಿಡೆನ್ಶಿಯಲ್ ಸೂಟ್ ರೂಂ ಬೇಡ ಎಂದು ತಿರಸ್ಕರಿಸಿದ್ದಾರೆ . ಸಾಮಾನ್ಯ ರೂಂ ಬೇಕು ಎಂದು ರಾಗಾ ಹೇಳಿದ್ದಾರೆ. ಗೋಕುಲ ರಸ್ತೆಯ ಫಾರ್ಚುನ್ ಹೋಟೆಲ್ ನಲ್ಲಿ ಸಾಮಾನ್ಯ ರೂಂ ವ್ಯವಸ್ಥೆ ಮಾಡಲಾಗಿದೆ.

Read More »