BigTv News
October 20, 2023
ಕರ್ನಾಟಕ, ದಾವಣಗೆರೆ, ಸುದ್ದಿ
ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯಲ್ಲಿ ಅಕ್ಟೋಬರ್ 22 ರಿಂದ 29ರ ತನಕ ಅಂತರಾಷ್ಟ್ರೀಯ ಟೆನಿಸ್ ಪಂದ್ಯಾವಳಿಗಳು ನಡೆಯಲಿವೆ. ಅಕ್ಟೋಬರ್ 22 ಮತ್ತು 23 ರಂದು ಅರ್ಹತಾ ಸುತ್ತಿನ ಪಂದ್ಯಗಳಿವೆ. ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ. ವಿ. ಜಿಲ್ಲಾಡಳಿತ ಮತ್ತು ಜಿಲ್ಲಾ ಟೆನಿಸ್ ಅಸೋಸಿಯೇಷನ್ ಆಶ್ರಯದಲ್ಲಿ ಹೈಸ್ಕೂಲ್ ಮೈದಾನದಲ್ಲಿರುವ ಟೆನಿಸ್ ಕ್ಲಬ್ ಆಶ್ರಯದಲ್ಲಿ ದಾವಣಗೆರೆ ಟೆನಿಸ್ ಕೋರ್ಟ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಟೆನಿಸ್ ಪಂದ್ಯಾವಳಿ ಕುರಿತು ಮಾಹಿತಿ ನೀಡಿದರು. ಡಾ. ವೆಂಕಟೇಶ್ ಎಂ. …
Read More »
BigTv News
September 9, 2023
ಕರ್ನಾಟಕ, ದಾವಣಗೆರೆ, ಸುದ್ದಿ
ದಾವಣಗೆರೆ: ವ್ಯಕ್ತಿಯೋರ್ವ ಮದ್ಯದ ಅಮಲಿನಲ್ಲಿ ಮೈ-ಕೈ ಮತ್ತು ಕತ್ತು ಕೊಯ್ದುಕೊಂಡು ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ವಡ್ನಾಳ್ ರಾಜಣ್ಣ ಬಡಾವಣೆಯಲ್ಲಿ ಕಳೆದ ದಿನ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಸವರಾಜ್ (31) ಕತ್ತು ಕೊಯ್ದುಕೊಂಡು ಮೃತಪಟ್ಟ ವ್ಯಕ್ತಿ. ಕ್ಷೌರದ ಅಂಗಡಿಯಲ್ಲಿ ಬ್ಲೇಡ್ ತೆಗೆದುಕೊಂಡು ಮೈ-ಕೈ ಮತ್ತು ಕತ್ತು ಕೊಯ್ದುಕೊಂಡು ಬಸವರಾಜಪ್ಪ, ರಕ್ತ ಸುರಿಯುತ್ತಿದ್ದರು ಬೀದಿ ಬದಿ ತಿರುಗಾಡುತ್ತಿದ್ದುದನ್ನು ಸ್ಥಳೀಯರು ಕಂಡು ತಕ್ಷಣ ಚಿಕಿತ್ಸೆಗೆಂದು ಆಸ್ಪತ್ರೆಗೆ ಸೇರಿಸಿದ್ದರು. ತೀವ್ರ …
Read More »
BigTv News
August 26, 2023
ಕರ್ನಾಟಕ, ದಾವಣಗೆರೆ, ಸುದ್ದಿ
ದಾವಣಗೆರೆ: ಜಿಲ್ಲೆಯ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಉಮಾ ಪ್ರಶಾಂತ್ ಇಂದು ಅಧಿಕಾರ ವಹಿಸಿಕೊಂಡರು. ನೂತನ ಎಸ್ಪಿಗೆ ವರ್ಗಾವಣೆಗೊಂಡ ಡಾ. ಅರುಣ್ ಅಧಿಕಾರ ಹಸ್ತಾಂತರಿಸಿದರು. ಈ ಮೂಲಕ ಎಸ್ಪಿ ಉಮಾ ಪ್ರಶಾಂತ್ ಅವರು ಜಿಲ್ಲೆಯ ಮೂರನೇ ಮಹಿಳಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಹಿಂದೆ ಮಾಲಿನಿ ಕೃಷ್ಣಮೂರ್ತಿ ಹಾಗೂ ಸೋನಿಯಾ ನಾರಂಗ್ ದಾವಣಗೆರೆ ಎಸ್ಪಿಯಾಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚಿಗೆ ಉಮಾ ಪ್ರಶಾಂತ್ ಅವರನ್ನು ಚಿಕ್ಕಮಗಳೂರಿನಿಂದ ದಾವಣಗೆರೆಗೆ ವರ್ಗಾವಣೆ ಮಾಡಲಾಗಿತ್ತು. ನಿರ್ಗಮಿತ ಎಸ್ಪಿ ಡಾ.ಅರುಣ್ …
Read More »
BigTv News
August 5, 2023
ಕರ್ನಾಟಕ, ದಾವಣಗೆರೆ, ಸುದ್ದಿ
ದಾವಣಗೆರೆ: ಟೊಮೆಟೊ ಬೆಳೆ ಈ ಬಾರಿ ರೈತರ ಕೈ ಹಿಡಿದಿದ್ದು, ಅಧಿಕ ಲಾಭ ತಂದುಕೊಟ್ಟಿದೆ. ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದ ರೈತ ಕೇವಲ ಆರೇ ದಿನದಲ್ಲಿ ಒಂದು ಲಕ್ಷ ರೂಪಾಯಿ ಲಾಭವನ್ನು ಟೊಮೆಟೊವಿನಿಂದ ಗಳಿಸಿದ್ದಾರೆ. ರೇವಣಪ್ಪ ಲಾಭ ಗಳಿಸಿದ ರೈತ, ರೇವಣಪ್ಪ ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಟೊಮೆಟೊ ಬೆಳೆದಿದ್ದಾರೆ. ಪ್ರಸ್ತುತ ದಿನಗಳಲ್ಲಿ ಟೊಮೆಟೊ ದರ ದುಬಾರಿಯಾಗಿದ್ದರಿಂದ ರೇವಣಪ್ಪಗೆ ಒಳ್ಳೆ ಬೆಲೆಯೇ ಸಿಕ್ಕಿದೆ. ಟೊಮೆಟೊಗೆ ಚಿನ್ನದ ಬೆಲೆ ಬಂದಿದ್ದರಿಂದ …
Read More »
BigTv News
August 2, 2023
News, ಕರ್ನಾಟಕ, ಜಿಲ್ಲೆ, ದಾವಣಗೆರೆ
ದಾವಣಗೆರೆ: ಕಳವು ಮಾಡಿದ ದ್ವಿಚಕ್ರ ವಾಹನಗಳಿಗೆ ನಕಲಿ ದಾಖಲೆ ಸೃಷ್ಟಿಸಲು ಸ್ಥಳೀಯ ಬ್ರೋಕರ್ಗಳಿಗೆ ಸಹಕರಿಸುತ್ತಿದ್ದ ಆರೋಪದ ಮೇರೆಗೆ ಆರ್ಟಿಒ ಕಚೇರಿಯ ನಾಲ್ವರು ಸಿಬ್ಬಂದಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳವು ಮಾಡಿದ್ದ ಬೈಕ್ಗಳ ಮಾಲೀಕರಿಗೆ ಗೊತ್ತಿಲ್ಲದಂತೆ ನಕಲಿ ದಾಖಲೆ ಸೃಷ್ಟಿಸಿ ಬೈಕ್ಗಳನ್ನು ಬೇರೊಬ್ಬರ ಹೆಸರಿಗೆ ವರ್ಗಾಯಿಸುತ್ತಿದ್ದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ದ್ವಿತೀಯ ದರ್ಜೆಯ ಸಹಾಯಕರಾಗಿರುವ (ಎಸ್ಡಿಎ) ವಸಂತ ಕುಮಾರ್, ಶಶಿಕುಮಾರ್, ಜಗದೀಶ್, ಪ್ರದೀಪ್ ಬಂಧಿತ ಸಿಬ್ಬಂದಿಯಾಗಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ನಾಳಿ …
Read More »
BigTv News
July 24, 2023
News, ಕರ್ನಾಟಕ, ದಾವಣಗೆರೆ, ಸುದ್ದಿ
ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಭಾಗದಲ್ಲಿ ಅಪಾರ ಭಕ್ತ ಸಮೂಹವನ್ನು ಹೊಂದಿದ್ದ ಹೊನ್ನಾಳಿ ತಾಲ್ಲೂಕಿನ ಹೊಟ್ಯಾಪುರ ಹಿರೇಕಲ್ಮಠದ ಶ್ರೀ ಗಿರಿಸಿದ್ದೇಶ್ವರ್ ಶಿವಾಚಾರ್ಯ ಸ್ವಾಮೀಜಿ (62) ಇಂದು ಬೆಳಗ್ಗೆ ಲಿಂಗಕ್ಯರಾಗಿದ್ದಾರೆ.ಇಂದು ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಮೃತರ ಪಾರ್ಥಿವ ಶರೀರವನ್ನು ಹೊಟ್ಯಾಪುರಕ್ಕೆ ತರಲಾಗುತ್ತದೆ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಸ್ವಾಮೀಜಿ ಶಿವಮೊಗ್ಗ ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಹೊಟ್ಯಾಪುರ ಹಿರೇಕಲ್ಮಠ ಮಾಹಿತಿ ನೀಡಿದೆ. ಶ್ರೀಗಳ ನಿಧನದಿಂದ ಹೊಟ್ಯಾಪುರ ಮಠದಲ್ಲಿ ನೀರವ ಮೌನ ಆವರಿಸಿದ್ದು, ಮಠಕ್ಕೆ …
Read More »
BigTv News
December 31, 2022
Breaking News, ದಾವಣಗೆರೆ
ದಾವಣಗೆರೆ : ಬಿಜೆಪಿಯವರು ನಾಟಕ, ಗಿಮಿಕ್ ಮಾಡುವುದನ್ನು ಬಿಡಬೇಕು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದರೂ ಬಿಜೆಪಿ ಗೆಲ್ಲುವುದಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದು ಮಾಯ, ಮಂತ್ರ ಮಾಡ್ತಾರಾ. ಅವರೇನೂ ಮಾಯಮಂತ್ರದ ತಂಡ ಇಟ್ಟುಕೊಂಡಿದ್ದಾರಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು. ನಗರದ ಬಾಪೂಜಿ ಕಾಲೇಜಿನ ಎಂಬಿಎ ಗ್ರೌಂಡ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಮಂತ್ರಿಯಾಗಿರುವ ಕಾರಣಕ್ಕೆ ಆಹ್ವಾನ ನೀಡಿರುವುದಕ್ಕೆ ರಾಜ್ಯಕ್ಕೆ ಬಂದಿದ್ದಾರೆ. …
Read More »
BigTv News
December 11, 2022
Breaking News, ದಾವಣಗೆರೆ
ದಾವಣಗೆರೆ : ನೀರು ತುಂಬಿದ ಬಕೆಟ್ ಗೆ ಬಿದ್ದು 10 ತಿಂಗಳ ಮಗುವೊಂದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ. ಬಿಸ್ತುವಳ್ಳಿ ಗ್ರಾಮದ ಮಂಜುನಾಥ್ ಹಾಗೂ ತಾರಾ ದಂಪತಿಯ ಪುತ್ರಿ ಹತ್ತು ತಿಂಗಳ ಅನುಶ್ರಾವ್ಯ ಮೃತಪಟ್ಟಿದ್ದು, ಆಟವಾಡುತ್ತಿರುವ ವೇಳೆ ನೀರು ತುಂಬಿದ್ದ ಬಕೆಟ್ ಗೆ ಆಯತಪ್ಪಿ ಬಿದ್ದಿದ್ದಾಳೆ.ಇದನ್ನು ಗಮನಿಸಿದ ಪೋಷಕರು ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆದರೆ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದೆ. …
Read More »
BigTv News
November 28, 2022
Breaking News, ದಾವಣಗೆರೆ
ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಬಿಳಿಚೋಡು ಗ್ರಾಮದಲ್ಲಿ ಶಾಲೆಗೆ ಬೀಜ ಜಡಿದು ಶಿಕ್ಷಕರು ಮೋಜು-ಮಸ್ತಿಗಾಗಿ ಪ್ರವಾಸಕ್ಕೆ ತೆರಳಿದ್ದಾರೆ. ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದೆ ನವೆಂಬರ್ 12 ರಂದು ಶನಿವಾರ ಮಕ್ಕಳಿಗೆ ರಜೆ ಘೋಷಿಸಿ ಆಂಡೇಲಿ ಪ್ರವಾಸಕ್ಕೆ ಹೋಗಿದ್ದಾರೆ. ಈ ಗಟನೆ ತಡವಾಗಿ ಬೆಳಕಿಗೆ ಬಂದಿದೆ. ಶೈಕ್ಷಣಿಕ ಪ್ರವಾಸಕ್ಕೆ ಮಕ್ಕಳನ್ನು ಕರೆದುಕೊಂಡು ಹೋಗಬೇಕಿದ್ದ ಶಿಕ್ಷಕರು ಮೋಜು ಮಸ್ತಿಗಾಗಿ ತಾವೇ ಪ್ರವಾಸ ಕೈಗೊಂಡಿದ್ದಾರೆ. ಈ ಶಾಲೆಯಲ್ಲಿ …
Read More »
BigTv News
November 24, 2022
Breaking News, ದಾವಣಗೆರೆ
ಹರಿಹರ (ದಾವಣಗೆರೆ ಜಿಲ್ಲೆ): ಇಲ್ಲಿ ನಡೆದ ಬಿಜೆಪಿಯ ಜನ ಸಂಕಲ್ಪ ಯಾತ್ರೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರು ತಮ್ಮ ನಾಯಕರ ಫೋಟೊ ತೋರಿಸಿ ಶಕ್ತಿ ಪ್ರದರ್ಶಿಸಲು ಮುಂದಾಗಿದ್ದರಿಂದ ಸಿಟ್ಟಿಗೆದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹರಿಹರ ಕ್ಷೇತ್ರದ ಮೂವರು ಆಕಾಂಕ್ಷಿಗಳಿಂದ ‘ಒಗ್ಗಟ್ಟು ಪ್ರದರ್ಶಿಸುತ್ತೇವೆ’ ಎಂದು ಪ್ರಮಾಣ ಮಾಡಿಸಿದರು. ಬಿಜೆಪಿಯ ಮಾಜಿ ಶಾಸಕ ಬಿ.ಪಿ. ಹರೀಶ್ ಹಾಗೂ ಮುಖಂಡ ಚಂದ್ರಶೇಖರ ಪೂಜಾರ್ ಬೆಂಬಲಿಗರು ಶಕ್ತಿ ಪ್ರದರ್ಶಿಸಲು ಪೈಪೋಟಿಗೆ ಇಳಿದಿದ್ದರಿಂದ ಮುಖ್ಯಮಂತ್ರಿ ವೇದಿಕೆಗೆ ಬರುತ್ತಿದ್ದಂತೆ ಮುಜುಗರಕ್ಕೆ …
Read More »