ಮುಂಬೈ: ಬಾಲಿವುಡ್ ನಟಿ ತನುಶ್ರೀ ದತ್ತಾರ ನಂತರ ದೇಶದಲ್ಲಿ MeToo ಅಭಿಯಾನ ಜೋರಾಗಿತ್ತು. ನಾನಾ ಪಾಟೇಕರ್ ಮೇಲೆ ತನುಶ್ರೀ ಮಾಡಿದ್ದ ಲೈಂಗಿಕ ದೌರ್ಜನ್ಯ ಆರೋಪವು ಇಡೀ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತ್ತು. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಡೈಸಿ ಶಾಗೆ ಮುಂಬೈನ ಒಶಿವಿರಾ ಪೊಲೀಸರು ಸಮನ್ಸ್ ನೀಡಿದ್ದಾರೆ. 2008ರಲ್ಲಿ ‘ಹಾರ್ನ್ ಓಕೆ ಪ್ಲೀಸ್’ ಚಿತ್ರದ ಶೂಟಿಂಗ್ ವೇಳೆ ತನುಶ್ರೀ ದತ್ತಾ ತನ್ನ ಜೊತೆ ನಾನಾ ಪಾಟೇಕರ್ ಅಸಭ್ಯವಾಗಿ ವರ್ತಿಸಿದ್ರು ಎಂದು ಆರೋಪ ಮಾಡಿದ್ದು, ಈ ಚಿತ್ರೀಕರಣದ ವೇಳೆ ಕೊರಿಯೋಗ್ರಾಫರ್ ಗಣೇಶ್ ಆಚಾರ್ಯ ಜೊತೆ ಅಸಿಸ್ಟೆಂಟ್ ಕೊರಿಯೋಗ್ರಫರ್ ಆಗಿ ಡೈಸಿ ಶಾ ಕೆಲಸ ಮಾಡಿದ್ದರು. ಅಲ್ಲದೆ ಘಟನೆ ನಡೆದ ವೇಳೆ ಡೈಸಿ ಶಾ ಅದೇ ಸೆಟ್ನಲ್ಲಿ ಇದ್ದಿದ್ದರಿಂದ, ಅವರ ಹೇಳಿಕೆ ಪಡೆಯುವ ಸಲುವಾಗಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.
Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73
bigtvnews | Hubli Dharwad News | Kannada News | Karnataka News Hubli News | News In Hubli | Local news





