Breaking News

ರಾಯಚೂರು

ಮಾ. 7 ರಂದು ರಾಯಚೂರ ಬಂದ್

ರಾಯಚೂರ : ಮಾರ್ಚ್ 7 ರಂದು ನಗರ ಬಂದ್ ಗೆ ಕರೆ ನೀಡಲಾಗಿದೆ. ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ನೇತೃತ್ವದಲ್ಲಿ ಬಂದ್ ಆಗಲಿದೆ. ನವೋದಯ ಶಿಕ್ಷಣ ಸಂಸ್ಥೆ ನಿಲುವಿನ ವಿರುದ್ದ ವಿವಿಧ ಸಂಘಟನೆಗಳಿಂದ ಹೋರಾಟ ನಡೆಯಲಿದೆ.ಸಂಸ್ಥೆಗೆ ಕಲಂ 371 ಜೆ ಅನ್ವಯಿಸದಂತೆ ಕೋರ್ಟ್ ಮೊರೆ ಹೋದ ಹಿನ್ನೆಲೆ ಬಂದ್ ಮಾಡಲಾಗ್ತಿದೆ.. ಮೆಡಿಕಲ್ ಸೀಟ್ ಹಂಚಿಕೆಯಲ್ಲಿ ವಿದ್ಯಾರ್ಥಿಗಳಿಗೆ ಅನ್ಯಾಯ ಆರೋಪವಿದ್ದು , ಈ ವರ್ಷ 106 ವಿದ್ಯಾರ್ಥಿಗಳಿಗೆ ವೈದ್ಯಕೀಯ ಸೀಟ್ ಕೈ …

Read More »

ನವೋದಯ ಸಂಸ್ಥೆ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ವಾಪಸ್‌ ಪಡೆದುಕೊಳ್ಳುವಂತೆ ಪ್ರತಿಭಟನೆ

ರಾಯಚೂರು: ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ 371-ಜೆ ಮೀಸಲಾತಿ ಕುರಿತು ನವೋದಯ ಶಿಕ್ಷಣ ಸಂಸ್ಥೆಯಿಂದ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿ ವಾಪಸ್‌ ಪಡೆದುಕೊಳ್ಳುವಂತೆ ಒತ್ತಾಯಿಸಿ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಬೃಹತ್‌ ಮೆರವಣಿಗೆ ನಡೆಸಿದರು. ನಗರದ ಆರ್‌ಟಿಓ ಕಚೇರಿ ಎದುರು ಮಡಿವಾಳ ಮಾಚಿದೇವ ವೃತ್ತದಿಂದ ನವೋದಯ ಶಿಕ್ಷಣ ಸಂಸ್ಥೆಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಲಾಯಿತು. 371-ಜೆ ಪ್ರಕಾರ ಸರ್ಕಾರದಿಂದ …

Read More »

ವಿಧಿ ಆಟ : ಕಲ್ಲು ಕುಸಿದು ಕಾರ್ಮಿಕ ಸಾವು

ರಾಯಚೂರು: ಕಲ್ಲು ಕುಸಿದು ಕಾರ್ಮಿಕ ಮೃತಪಟ್ಟಿದ್ದಾರೆ. ಹಟ್ಟಿ ಚಿನ್ನದ ಗಣಿ ಕಂಪನಿಗೆ ಸೇರಿದ ಊಟಿ ಚಿನ್ನದ ಗಣಿಯಲ್ಲಿ ಸುಮಾರು 800 ಅಡಿ ಆಳದಲ್ಲಿ ಕೆಲಸ ಮಾಡುವ ವೇಳೆ ದುರ್ಘಟನೆರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಊಟಿ ಚಿನ್ನದ ಗಣಿಯಲ್ಲಿ ನಡೆದಿದೆ. ಮೇಲ್ಭಾಗದಿಂದ ಕಲ್ಲು ಕುಸಿದು ಕಾರ್ಮಿಕ ಯಲ್ಲಪ್ಪ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಕಾರ್ಮಿಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆಗೆ ಅಧಿಕಾರಿಗಳ ನಿರ್ಲಕ್ಷ ಕಾರಣವೆಂದು ಆರೋಪಿಸಲಾಗಿದೆ. ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ …

Read More »

ಚರಂಡಿ ವಿಚಾರಕ್ಕೆ ಬಿತ್ತು ಯೋಧನ ತಾಯಿಯ ಹೆಣ

ರಾಯಚೂರು : ಚರಂಡಿ ವಿಚಾರಕ್ಕೆ ಯೋಧ ಹಾಗೂ ಗ್ರಾಮದ ಮುಖಂಡರ ನಡುವೆ ಗಲಾಟೆ ಸಂಭವಿಸಿ, ಯೋಧನ ತಾಯಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನಿಲೋಗಲ್ ಗ್ರಾಮದಲ್ಲಿ ನಡೆದಿದೆ. ಯೋಧ ಅಮರೇಶ ಹಾಗೂ ಗ್ರಾಮದ ಮುಖಂಡ ಶರಣಪ್ಪಗೌಡ ಅವರ ನಡುವೆ ಗಲಾಟೆಯಾಗಿದೆ. ಶರಣಪ್ಪಗೌಡ ಅವರ ಗುಂಪಿನಿಂದ ಅಮರೇಶ ಅವರ ತಾಯಿ ವೀರಮ್ಮ ಲಿಂಗಪ್ಪ(75) ಎನ್ನುವವರ ಮೇಲೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.ವಿಷಯ ತಿಳಿದು ಸ್ಥಳಕ್ಕೆ ಹಟ್ಟಿ ಪೊಲೀಸರು …

Read More »

ಶಿಕ್ಷಕರ ವರ್ಗಾವಣೆ ಕುರಿತು ದಿನಾಂಕ ಪ್ರಕಟ

ರಾಯಚೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ 2020-21ನೇ ಸಾಲಿನ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಕೋರಿಕೆ ಅಥವಾ ಪರಸ್ಪರ ವರ್ಗಾವಣೆಯನ್ನು ಗಣಕೀಕೃತ ಕೌನ್ಸೆಲಿಂಗ್ ಮೂಲಕ ಹಮ್ಮಿಕೊಳ್ಳಲು ವೇಳಾಪಟ್ಟಿಯನ್ನು ಹೊರಡಿಸಿರುತ್ತಾರೆ. ಇದೇ ಫೆ. 14 ಮತ್ತು 16 ರಂದು ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಎಸ್.ಎಸ್.ಎ ಸಭಾಂಗಣ, ಕೌನ್ಸಿಲಿಂಗ್ ಹಮ್ಮಿಕೊಳ್ಳಲಾಗಿದ್ದು, ಸಂಬಂಧಪಟ್ಟ ಶಿಕ್ಷಕರು ದಾಖಲೆಗಳೊಂದಿಗೆ ಹಾಜರಾಗಿ ಸ್ಥಳ ಆಯ್ಕೆ ಮಾಡಿಕೊಳ್ಳಲು ತಿಳಿಸಿದೆ.

Read More »

ರಾಯಚೂರು ಜಿಲ್ಲೆಗೆ ನಿರಾಸೆ ಮೂಡಿಸಿದ ಕೇಂದ್ರ ಬಜೆಟ್

ರಾಯಚೂರು: ಜಿಲ್ಲೆಗೆ ಹೊಸದಾಗಿ ಏಮ್ಸ್‌ ಸಂಸ್ಥೆ, ಜವಳಿ ಪಾರ್ಕ್ ಘೋಷಣೆ, ವಿಮಾನ ನಿಲ್ದಾಣ ನಿರ್ಮಾಣ, ಐಐಐಟಿ, ರೈಲು ಯೋಜನೆಗಳು ಅನುದಾನ ನೀಡುವುದು ಹೀಗೆ ಹತ್ತು ಹಲವು ನಿರೀಕ್ಷೆಗಳನ್ನು ಹುಟ್ಟಿಸಿದ್ದ ಕೇಂದ್ರ ಬಜೆಟ್‌ ಕೊನೆಗೂ ನಿರಾಸೆ ಮೂಡಿಸಿದೆ. ದೇಶದ ಪ್ರತಿಷ್ಠಿತ ಸಂಸ್ಥೆಯಾಗಿರುವ ಭಾರತೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(IIT)ಯಿಂದ ವಂಚಿತಗೊಂಡಿರುವ ಜಿಲ್ಲೆಗೆ ಹೆಸರಿಗೆ ಮಾತ್ರ ಐಐಐಟಿ ಸಂಸ್ಥೆಯನ್ನು ನೀಡಿರುವ ಕೇಂದ್ರವು ಕಳೆದ ನಾಲ್ಕು ವರ್ಷಗಳಿಂದ ಅನುದಾನ ನೀಡದೇ ನಿರ್ಲಕ್ಷ್ಯವಹಿದೆ. ಸ್ಥಳೀಯ ಯರಮರಸ್‌ನಲ್ಲಿರುವ ಸರ್ಕಾರಿ …

Read More »

ಮನನೊಂದು ಬೆಂಕಿ ಹಚ್ಚಿಕೊಂಡು ಮಹಿಳೆ ಆತ್ಮಹತ್ಯೆ

ರಾಯಚೂರು: ತಾಯಿಯೊಬ್ಬರು ಬೆಂಕಿ‌ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಬೆಂಕಿ ಅವರ ಮಗಳಿಗೂ ತಗುಲಿದ ಪರಿಣಾಮ ಇಬ್ಬರೂ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ನಡೆದಿದೆ. ಜೀವನದಲ್ಲಿ ಜಿಗುಪ್ಸೆಗೊಂಡಿದ್ದು, ಇಂತಹ ನಿರ್ಧಾರ ತೆಗೆದುಳ್ಳಲಾಗಿದೆ ಎನ್ನಲಾಗಿದೆ.  ಶಿರಿಷಾ (35), ಭುವನ (6) ಮೃತ ಅಮ್ಮ-ಮಗಳು. ಕಳೆದ 11 ವರ್ಷಗಳ ಹಿಂದೆ ಶಿವಪ್ರಸಾದ್ ಎನ್ನುವರ ಜೊತೆ ಶಿರಿಷಾ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇತ್ತೀಚಿಗೆ ಯಾವುದೋ ವಿಷಯವನ್ನ ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿ ಯಾರೂ …

Read More »

ಎಸ್ ಎಂ ಕೃಷ್ಣಗೆ ನಾಚಿಗೆಯಾಗಬೇಕು : ಹಿರೇಮಠ ಆರೋಪ

ರಾಯಚೂರು : ಕಾಂಗ್ರೆಸ್ ನಾಯಕರು ಹಾಗೂ ಬಿಜೆಪಿ ನಾಯಕರ ಮಧ್ಯೆ ನಂಟಿದೆ. ಅತೀ ಭ್ರಷ್ಟ ವ್ಯಕ್ತಿ ಅಂದ್ರೆ ಅದು ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರು. ಪಾಪದ ಹಣದಿಂದ ಕೆಫೆ ಕಾಫಿ ಡೇ ಮಾಡಿದರು. ಅದೇ ಕಾಫಿ ಡೇ ಮಾಲೀಕನನ್ನು ಬಲಿ ಪಡಿಯಿತು ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಎಸ್ ಎಂ ಕೃಷ್ಣ ಇಡೀ ಜೀವನವನ್ನು ಕಾಂಗ್ರೆಸ್​ನಲ್ಲಿ ಕಳೆದ್ರು. ಈಗ ಅಕ್ರಮ …

Read More »

ರಾಯಚೂರು ಜಿಲ್ಲೆಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ

ರಾಯಚೂರು: ಅಪೌಷ್ಟಿಕತೆಯಿಂದ ಬಳಲುತ್ತಿದ್ದ ಜಿಲ್ಲೆ ಈಗ ಪೌಷ್ಟಿಕ ವಿಚಾರದಲ್ಲಿ ಪ್ರಗತಿ ಸಾಧಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ನೀತಿ ಆಯೋಗದ ಸಭೆಯಲ್ಲಿ ಮಾತನಾಡಿದ ಅವರು ಶೇ70 ಪ್ರತಿಶತದಷ್ಟು ಇದ್ದ ಪೌಷ್ಟಿಕತೆ ಈಗ ಶೇ 97 ಪ್ರತಿಶತದಷ್ಟಾಗಿದೆ. ಇದಕ್ಕೆ ಜಿಲ್ಲಾಡಳಿತಕ್ಕೆ ಅಭಿನಂದನೆ ಸಲ್ಲಿಸಿ ಹಾಗೇ ಹಾಲಿ ಜಿಲ್ಲಾಧಿಕಾರಿ ಡಾ.ಅವಿನಾಶ್ ಮೆನನ್ ರಾಜೇಂದ್ರನ್‌ರನ್ನೂ ಪ್ರಧಾನಿ ಶ್ಲಾಘಿಸಿದರು.

Read More »

ವಾಯುವಿಹಾರಕ್ಕೆ ಹೋದ ದಂಪತಿ : ಸಾವಿನಲ್ಲಿ ಅಂತ್ಯ

ರಾಯಚೂರು: ಸಂಜೆ ಗಂಡ ಹೆಂಡತಿ  ಇಬ್ಬರೂ ಜೊತೆಯಾಗಿ ವಾಯುವಿಹಾರಕ್ಕೆ  ಇಬ್ಬರೂ ಒಟ್ಟಿಗೆ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಪತಿ ಸ್ಥಳದಲ್ಲೇ ಸಾವಿಗೀಡಾದರೆ  ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ ಈ ಘಟನೆ ನಗರದ ಕೃಷಿ ವಿಶ್ವವಿದ್ಯಾಲಯದ ಬಳಿ ಇಂಥದ್ದೊಂದು ದುರಂತ ಸಂಭವಿಸಿದೆ. ಕಂದಾಯ ಇಲಾಖೆ ಸರ್ವೇಯರ್ ಎಸ್.ಎಸ್. ಪಾಟೀಲ್ (64) ಮೃತಪಟ್ಟಿದ್ದು, ಪತ್ನಿ ಲೇಪಾಕ್ಷಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಧಾವಿಸಿದ್ದು …

Read More »