Breaking News

ಗದಗ

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಬೆಣ್ಣೆಹಳ್ಳ: ರಸ್ತೆ ಸಂಪರ್ಕ ಸ್ಥಗಿತ

ಗದಗ: ಧಾರವಾಡ ಹಾಗೂ ಗದಗ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಬೆಣ್ಣೆ ಹಳ್ಳ ಉಕ್ಕಿ ಹರಿಯುತ್ತಿದ್ದು ಗದಗ ಜಿಲ್ಲೆಯ ಹಲವೆಡೆ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ನರಗುಂದ ತಾಲೂಕಿನ ಕುರ್ಲಗೇರಿ ಗ್ರಾಮದ ಬಳಿ ಸೇತುವೆ ಜಲಾವೃತವಾಗಿದ್ದು ಗದಗ-ಶಲವಡಿ- ನರಗುಂದ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ರೋಣ ತಾಲೂಕಿನ ಯಾವಗಲ್ ಗ್ರಾಮದ ಬಳಿ ಸೇತುವೆ ಜಲಾವೃತಗೊಂಡಿದ್ದು ರೋಣ ಹಾಗೂ ನರಗುಂದ ರಸ್ತೆ ಸಂಪರ್ಕ ಸ್ಥಗಿತಗೊಂಡು ವಾಹನ ಸವಾರರು ಪರದಾಡುತ್ತಿದ್ದಾರೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ …

Read More »

ಶಾಸಕ ಜಿ.ಎಸ್ ಪಾಟೀಲರಿಗೆ ವೀರಶೈವ ಸಿರಿ ಪ್ರಶಸ್ತಿ ಪ್ರದಾನ

ನರೇಗಲ್:‌ ಸರಳ ವ್ಯಕ್ತಿತ್ವದ ಹಿರಿಯ ರಾಜಕಾರಣಿ, ರೋಣ ಮತಕೇತ್ರದ ಶಾಸಕ ಜಿ.ಎಸ್.‌ಪಾಟೀಲ ಅವರಿಗೆ ಅಬ್ಬಿಗೇರಿಯಲ್ಲಿ ನಡೆದಿರುವ ದಸರಾ ಧರ್ಮ ಸಮ್ಮೇಳನದಲ್ಲಿ ಇಂದು ವೀರಶೈವ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. 1983ರಲ್ಲಿ ರಾಜಕೀಯ ಪ್ರವೇಶ ಮಾಡಿದ ಇವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಶಾಲಾ ಕಾಲೇಜು, ಧಾರ್ಮಿಕ ಸ್ಥಳ, ಮೂಲಸೌಕರ್ಯಗಳು ಸೇರಿದಂತೆ ಅನೇಕ ಸುಧಾರಣೆಗಳನ್ನು ಮಾಡಿದ್ದಾರೆ. ನದಿ, ಕಾಲುವೆಯ ಜಲಮೂಲಗಳಿಲ್ಲದ ರೋಣ ಮತಕ್ಷೇತ್ರದಲ್ಲಿ ಅನೇಕ ಕೆರೆಗಳನ್ನು ನಿರ್ಮಾಣ ಮಾಡಿದ್ದಾರೆ. ಮಾತೋಶ್ರೀ ಬಸಮ್ಮನವರ …

Read More »

ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಕೆ

ಮುಂಡರಗಿ: ರೈತರು ವೈವಿಧ್ಯಮಯ ಬೆಳೆಗಳನ್ನು ಬೆಳೆದು ಆದಾಯ ಹೆಚ್ಚಿಸಿಕೊಳ್ಳಬೇಕು ಎನ್ನುವ ಕಾರಣದಿಂದ ಸರ್ಕಾರ ತಾಲ್ಲೂಕಿನ ಎಲ್ಲ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಸುತ್ತಲಿದೆ. ರೈತರು ಅದರ ಸದುಪಯೋಗ ಪಡೆದುಕೊಂಡು ಹೆಚ್ಚು ಆದಾಯ ಪಡೆದುಕೊಳ್ಳಬೇಕು ಎಂದು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ತಿಳಿಸಿದರು. ಸ್ಥಳೀಯ ರೈತ ಸಂಪರ್ಕ ಕೇಂದ್ರದಲ್ಲಿ ತಾಲ್ಲೂಕಿನ ರೈತರಿಗೆ ರಿಯಾಯಿತಿ ದರದಲ್ಲಿ ಹಿಂಗಾರು ಹಂಗಾಮಿನ ಬಿತ್ತನೆ ಬೀಜಗಳ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ರೈತರ …

Read More »

ಹೆಚ್ಚಾಗುತ್ತಿರುವ ನಿರುದ್ಯೋಗ ಸಮಸ್ಯೆ: ವಲಸೆ ಹೊರಟ ಯುವಕರು

ಗದಗ: ಉದ್ಯೋಗ ಅರಸಿ ದೊಡ್ಡ ನಗರ, ಪಟ್ಟಣಗಳಿಗೆ ಯುವಕರು ದೊಡ್ಡ ಪ್ರಮಾಣದಲ್ಲಿ ವಲಸೆ ಹೋಗುತ್ತಿರುವ ಪರಿಣಾಮ ಗದಗ ಜಿಲ್ಲೆಯ ಕೆಲ ಗ್ರಾಮಗಳು ವೃದ್ಧಾಶ್ರಮಗಳಾಗಿ ಬದಲಾಗುತ್ತಿವೆ. ಈ ಭಾಗಗಳಲ್ಲಿ ಕೈಗಾರಿಕೆಗಳು ಇಲ್ಲದ ಕಾರಣ ಇಲ್ಲಿ ಉದ್ಯೋಗ ಸಿಗುವುದು ಕಷ್ಟವಾಗಿದೆ. ಅಲ್ಲದೆ, ಈ ವರ್ಷ ಅತಿವೃಷ್ಟಿ, ಮತ್ತು ಬೆಳೆ ನಷ್ಟದಿಂದಾಗಿ ಯುವಕರು ಜೀವನೋಪಾಯಕ್ಕಾಗಿ ನಗರಗಳತ್ತ ಮುಖ ಮಾಡುವಂತಾಗಿದೆ. ಅಲ್ಲದೆ, ಅತ್ಯಂತ ಕಡಿಮೆ ವೇತನ ಕೂಡ ವಲಸೆಗೆ ಮತ್ತೊಂದು ಕಾರಣವಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ …

Read More »

ಬತ್ತಿದ ಕೆರೆಗಳಿಗೆ ಜೀವಕಳೆ ತುಂಬಿದ ತುಂಗಭದ್ರೆ

ಗದಗ: ಎರಡು ವರ್ಷಗಳಿಂದ ಮಳೆ ಇಲ್ಲದೇ ಬತ್ತಿದ್ದ ಕೆರೆಗಳಿಗೆ ಮತ್ತೆ ಜೀವಕಳೆ ಬಂದಿದ್ದು, ಜಿಲ್ಲೆಯ ಐತಿಹಾಸಿಕ ಡಂಬಳದ ವಿಕ್ಟೋರಿಯಾ ಕೆರೆ, ನಗರದ ಭೀಷ್ಮ ಕೆರೆ ಸೇರಿ ಬಹುತೇಕ ಕೆರೆಗಳಿಗೆ ಸಿಂಗಟಾಲೂರು ಎಡದಂಡೆ ಕಾಲುವೆ ಮೂಲಕ ತುಂಗಭದ್ರಾ ನೀರು ಹರಿಸಲಾಗುತ್ತಿದ್ದು, ಕೆರೆಗಳಿಗೆ ಜೀವಕಳೆ ಬಂದಂತಾಗಿದೆ. ಕಳೆದ ಬೇಸಿಗೆಯಲ್ಲಿ ಕೆರೆಗಳಲ್ಲಿ ನೀರಿಲ್ಲದ ಕಾರಣ ಕೆರೆಗಳನ್ನೇ ಅವಲಂಬಿಸಿದ್ದ ಗ್ರಾಮಗಳು ತೊಂದರೆ ಅನುಭವಿಸಿದ್ದವು. ಅಲ್ಲದೇ, ಕೃಷಿಗೆ ನೆರವಾಗಿದ್ದ ಕೆರೆಗಳು ಬತ್ತಿದ್ದರಿಂದ ರೈತರು ಪರದಾಡಿದ್ದರು. ಪ್ರಸಕ್ತ ಮುಂಗಾರಿನಲ್ಲಿ …

Read More »

ಹಳ್ಳದ ಸೇತುವೆಗಿಲ್ಲ ದುರಸ್ತಿ ಭಾಗ್ಯ: ಸ್ಥಳೀಯರ ಆಕ್ರೋಶ

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಬೆಣ್ಣೆಹಳ್ಳಿ-ನಾಗರಹಳ್ಳಿ‌ ಮಾರ್ಗ‌ದ ಸೇತುವೆಯೊಂದರಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಅಧಿಯಾರಿಗಳು ಕೈ ಕಟ್ಟಿ ಕುಳಿತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಬೆಣ್ಣೆಹಳ್ಳಿ-ನಾಗರಹಳ್ಳಿ‌ ಮಾರ್ಗದಲ್ಲಿರುವ ಹಳ್ಳವೊಂದಕ್ಕೆ ನಿರ್ಮಿಸಲಾಗಿರುವ ಸೇತುವೆಯಲ್ಲಿ ಕಳೆದ ವಾರವಷ್ಟೇ ಬೈಕ್ ಸವಾರನೊಬ್ಬನನ್ನು ಬಲಿ ಪಡೆದಿತ್ತು, ಇದೀಗ ಸೇತುವೆ ದಾಟುತ್ತಿರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಹಳ್ಳಕ್ಕೆ ಬಿದ್ದಿದೆ. ಮಹೇಶ್ ಹೂಳಕಣ್ಣವರ ಟ್ರ್ಯಾಕ್ಟರ್ ಚಾಲಕ, ನಾಗರಹಳ್ಳಿ ಗ್ರಾಮದಿಂದ ಬೆಣ್ಣೆಹಳ್ಳಿಯತ್ತ ತೆರಳುತ್ತಿದ್ದ ವೇಳೆ ಚಾಲಕನ …

Read More »

ಪಂಚಮಸಾಲಿ ಮೀಸಲಾತಿಗಾಗಿ ಬೃಹತ್ ಕಾನೂನು ಹೋರಾಟಕ್ಕೆ ಸಿದ್ದತೆ: ಜಯಮೃತ್ಯುಂಜಯ ಸ್ವಾಮೀಜಿ

ಗದಗ: ವಕೀಲರ ಮೂಲಕ ಪಂಚಮಸಾಲಿ ಮೀಸಲಾತಿ ಎರಡನೇ ಹಂತದ ಹೋರಾಟಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪಂಚಮಸಾಲಿ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ಗದಗನಲ್ಲಿಂದು ವಕೀಲರ ಪೂರ್ವಭಾವಿ ಸಭೆ ನಡೆಸಿದ ಸ್ವಾಮೀಜಿ 2 ಎ ಮೀಸಲಾತಿ ಬಗ್ಗೆ ಸ್ಪಷ್ಟತೆ ಪಡೆಯಲು ವಕೀಲರ ಸಂಘಟನೆಗೆ ಕರೆ ನೀಡಿದರು. ಸೆಪ್ಟೆಂಬರ್ 22 ನೇ ತಾರೀಖು ಬೆಳಗಾವಿಯ ಗಾಂಧಿ ಭವನದಲ್ಲಿ ಪಂಚಮಸಾಲಿ‌ ವಕೀಲರ ಪರಿಷತ್ ಆಯೋಜನೆ ಮಾಡಲಾಗಿದೆ ಸದನದಲ್ಲಿ ಸಮಾಜದ ಶಾಸಕರು ಈ ಕುರಿತು …

Read More »

ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿ: ಓರ್ವ ಸಾವು, ಮೂವರು ಗಂಭೀರ

ಗದಗ:- ರಾಂಗ್ ರೂಟ್ ನಲ್ಲಿ ಬಂದು ಬೈಕ್ ಗೆ ಬೈಕ್ ಡಿಕ್ಕಿ ಹೊಡೆದು ಹಿಂಬದಿ ಸವಾರ ಸಾವನ್ನಪ್ಪಿದ ಘಟನೆ ಮುಂಡರಗಿ ತಾಲೂಕಿನ ಹಳ್ಳಿಕೇರಿ ಹಾಗೂ ಹಳ್ಳಿಗುಡಿ ಗ್ರಾಮಗಳ ನಡುವೆ ಜರುಗಿದೆ. ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಗುಡಿ ಗ್ರಾಮದ ನಿವಾಸಿ ವಸಂತ ಚೆನ್ನಳ್ಳಿ (38) ಮೃತ ದುರ್ದೈವಿ. ರಾಂಗ್ ರೂಟ್ ನಲ್ಲಿ ಒನ್ ವೇ ನಲ್ಲಿ ಬಂದು ಎದುರಿಗೆ ಬರುತ್ತಿದ್ದ ಬೈಕ್ ಗೆ ಬೈಕ್ ಡಿಕ್ಕಿ …

Read More »

ಸಿಎಂ ಬದಲಾವಣೆ ಬಗ್ಗೆ ಸ್ಪೋಟಕ ಹೇಳಿಕೆ ನೀಡಿದ ಬಸವರಾಜ ಬೊಮ್ಮಾಯಿ

ಗದಗ : ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ರಾತ್ರೋರಾತ್ರಿ ಮುಖ್ಯಮಂತ್ರಿ ಬದಲಾವಣೆ ಸನ್ನಿಹಿತವಾಗಿದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದಲ್ಲಿ ರಾತ್ರೋರಾತ್ರಿ ಎರಡು ಸಿಎಂಗಳು ಬದಲಾದ ಇತಿಹಾಸವಿದೆ. ಈಗ ಕೆಲವರು ಸಿಎಂ ಕುರ್ಚಿಗೆ ಆಸೆ ತೋರಿಸುತ್ತಿರುವುದನ್ನು ನೋಡಿದ್ರೆ ಮತ್ತೊಂದು ರಾತ್ರೋರಾತ್ರಿ ಸಿಎಂ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದಿದ್ದಾರೆ. ವೀರೇಂದ್ರ ಪಾಟೀಲ್ ಮುಖ್ಯಮಂತ್ರಿ ಆಗಿದ್ದರೂ ರಾತ್ರೋ ರಾತ್ರಿ ಎಲ್ಲ ಶಾಸಕರು ಬದಲಾದರು ಬಳಿಕ …

Read More »

ಗದಗ ಹಾವೇರಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ: ಬಸವರಾಜ ಬೊಮ್ಮಾಯಿ

ಗದಗ: ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಹಾವೇರಿ ಗದಗ ಲೋಕಸಭಾ ಕ್ಷೇತ್ರಗಳಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ಪ್ರಗತಿ‌ ಹಾಗೂ ಅಭಿವೃದ್ದಿ ಕುರಿತಾದ ಸಭೆಯನ್ನು ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಸಂಸದರಾದ ಬಸವರಾಜ ಬೊಮ್ಮಾಯಿರವರು ನಡೆಸಿದರು. ಈ ಸಂಧರ್ಭದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಭರತ, ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನ್ನಪೂರ್ಣ ಮುದುಕಮ್ಮನವರ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು

Read More »