Breaking News

ಹಳ್ಳದ ಸೇತುವೆಗಿಲ್ಲ ದುರಸ್ತಿ ಭಾಗ್ಯ: ಸ್ಥಳೀಯರ ಆಕ್ರೋಶ

ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಬೆಣ್ಣೆಹಳ್ಳಿ-ನಾಗರಹಳ್ಳಿ‌ ಮಾರ್ಗ‌ದ ಸೇತುವೆಯೊಂದರಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಅಧಿಯಾರಿಗಳು ಕೈ ಕಟ್ಟಿ ಕುಳಿತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಬೆಣ್ಣೆಹಳ್ಳಿ-ನಾಗರಹಳ್ಳಿ‌ ಮಾರ್ಗದಲ್ಲಿರುವ ಹಳ್ಳವೊಂದಕ್ಕೆ ನಿರ್ಮಿಸಲಾಗಿರುವ ಸೇತುವೆಯಲ್ಲಿ ಕಳೆದ ವಾರವಷ್ಟೇ ಬೈಕ್ ಸವಾರನೊಬ್ಬನನ್ನು ಬಲಿ ಪಡೆದಿತ್ತು, ಇದೀಗ ಸೇತುವೆ ದಾಟುತ್ತಿರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಹಳ್ಳಕ್ಕೆ ಬಿದ್ದಿದೆ.
ಮಹೇಶ್ ಹೂಳಕಣ್ಣವರ ಟ್ರ್ಯಾಕ್ಟರ್ ಚಾಲಕ, ನಾಗರಹಳ್ಳಿ ಗ್ರಾಮದಿಂದ ಬೆಣ್ಣೆಹಳ್ಳಿಯತ್ತ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಟ್ರ್ಯಾಕ್ಟರ್ ಸಮೇತ ಹಳ್ಳಕ್ಕೆ ಉರುಳಿದೆ. ಅದೃಷ್ಟವಶಾತ್ ಚಾಲಕ ಮಹೇಶ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆದಿದ್ದು, ತಾತ್ಕಾಲಿಕ ದುರಸ್ಥಿ ಭರವಸೆ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದರು.
ಇದೀಗ ಮತ್ತೆ ಅಪಘಾತ ಸಂಭವಿಸಿದ್ದು, ಇಷ್ಟೆಲ್ಲ ಅವಘಡಕ್ಕೆ ಅಧಿಕಾರಿಗಳೇ ಕಾರಣ, ಸರಿಯಾದ ನಿರ್ವಹಣೆಯಿಲ್ಲದಕ್ಕೆ ಈ ರೀತಿ ಘಟನೆ ನಡೆಯುತ್ತಿದೆ ಆದಷ್ಟು ಬೇಗ ದುರಸ್ತಿ ಕಾರ್ಯ ನಡೆಸಬೇಕು ಎಂದು ಅಧಿಕಾರಿಗಳ ವಿರುದ್ಧ ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ.

Share News

About BigTv News

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *