ಗದಗ: ವಕೀಲರ ಮೂಲಕ ಪಂಚಮಸಾಲಿ ಮೀಸಲಾತಿ ಎರಡನೇ ಹಂತದ ಹೋರಾಟಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪಂಚಮಸಾಲಿ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಗದಗನಲ್ಲಿಂದು ವಕೀಲರ ಪೂರ್ವಭಾವಿ ಸಭೆ ನಡೆಸಿದ ಸ್ವಾಮೀಜಿ 2 ಎ ಮೀಸಲಾತಿ ಬಗ್ಗೆ ಸ್ಪಷ್ಟತೆ ಪಡೆಯಲು ವಕೀಲರ ಸಂಘಟನೆಗೆ ಕರೆ ನೀಡಿದರು.
ಸೆಪ್ಟೆಂಬರ್ 22 ನೇ ತಾರೀಖು ಬೆಳಗಾವಿಯ ಗಾಂಧಿ ಭವನದಲ್ಲಿ ಪಂಚಮಸಾಲಿ ವಕೀಲರ ಪರಿಷತ್ ಆಯೋಜನೆ ಮಾಡಲಾಗಿದೆ ಸದನದಲ್ಲಿ ಸಮಾಜದ ಶಾಸಕರು ಈ ಕುರಿತು ಮಾತನಾಡಲ್ಲಿಲ್ಲ ಆದ್ದರಿಂದ ವಕೀಲರ ಮೂಲಕ ಒತ್ತಡ ತರಲು ಈ ಹೋರಾಟ ಅನಿವಾರ್ಯ ಆಗಿದೆ ಶಾಸಕರ ಮನಸ್ಸು ಪರಿವರ್ತನೆ ಮಾಡಲು ವಕೀಲರ ಬೃಹತ್ ಹೋರಾಟಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ, ಕಾನೂನಾತ್ಮಕವಾಗಿ ಹೋರಾಟ ಮಾಡುವ ಕುರಿತು ಚರ್ಚಿಸಲಾಗುವುದು ಎಂದಿದ್ದಾರೆ. ವಿಧಾನ ಸಭೆ ಅಧಿವೇಶನದಲ್ಲಿ ಸಮಾಜದ ಶಾಸಕರಿಗೆ ವಿಧಾನಸಭಾ ಅಧ್ಯಕ್ಷರು ಅವಮಾನ ಮಾಡಿದ್ದಾರೆ ನಿಯಮ 69ರ ಅಡಿ ಮಾತನಾಡಲು ಅವಕಾಶ ನೀಡಬೇಕಿತ್ತು ಆದರೆ ಇದನ್ನು ಸಮಾಜದ ಶಾಸಕರು ಪ್ರಶ್ನಿಸಲಿಲ್ಲ ಇವೆಲ್ಲದರ ಕುರಿತು 10 ಹಿರಿಯ ವಕೀಲರ ಸಮಿತಿ ರಚನೆ ಮಾಡಿ ಮುಂದಿನ ಹೋರಾಟದ ಕುರಿತು ರೂಪರೇಖೆಗಳನ್ನು ಸಿದ್ದ ಪಡಿಸಲಾಗುವುದು ಎಂದು ಸ್ವಾಮೀಜಿ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

