Breaking News

ಗದಗ

ಬೈಕ್‌ ಮತ್ತು ಕಾರ್‌ ನಡುವೆ ಅಪಘಾತ ಗಾಯಾಳುಗಳು ಆಸ್ಫತ್ರಗೆ ದಾಖಲು

ಗದಗ; 112 ತುರ್ತು ಸಹಾಯವಾಣಿಗೆ ಗದಗ ಜಿಲ್ಲೆಯ ಗಜೇಂದ್ರಗಡ ಶಹರದಿಂದ ಅಪಘಾತದ ಕುರಿತು ಕರೆ ಬಂದಿದ್ದು ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ಕಾರು ಮತ್ತು ಬೈಕ್ ನಡುವೆ ಡಿಕ್ಕಿಯಾಗಿದು, ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯವಾಗಿದೆ, ಸ್ಥಳಕ್ಕೆ ಬೇಟಿ ನೀಡಿದ ಪೋಲಿಸ್‌ ಸಿಬ್ಬಂದಿಗಳು ಸ್ಥಳಿಯ ಸರ್ಕಾರಿ ಆಸ್ಪತ್ರೆಗೆ ಗಾಯಾಳುಗಳನ್ನು ದಾಖಲು ಮಾಡಲಾಗಿದೆ. ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ 112 ಪೋಲಿಸ್‌ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ. ಗಜೇಂದ್ರಗಡ ಪೋಲಿಸ್‌ ಠಾಣೆಯಲ್ಲಿ ಪ್ರಕರಣಕ್ಕೆ …

Read More »

ರಾಜ್ಯಪಾಲರ ಭಾಷಣ ಕಾಂಗ್ರೇಸ್‌ ಪಕ್ಷದ ಪ್ರಣಾಳಿಕೆ ; ಶಾಸಕ ಸಿ.ಸಿ.ಪಾಟೀಲ ಟೀಕೆ

ವಿಧಾನ ಮಂಡಲದಲ್ಲಿ ಇಂದು ರಾಜ್ಯಪಾಲರು ಮಂಡಿಸಿದ ಭಾಷಣವು ರಾಜ್ಯದ ಅಭಿವೃದ್ಧಿಯ ದಿಕ್ಸೂಚಿಯಂತಾಗಿರದೇ, ಅದು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಂತಿತ್ತು ಎಂದು ಮಾಜಿ ಸಚಿವರು ಮತ್ತು ನರಗುಂದ ಶಾಸಕರಾದ ಸಿ.ಸಿ ಪಾಟೀಲರು ಟೀಕಿಸಿದ್ದಾರೆ. ಕರ್ನಾಟಕದ ಹಿತಾಸಕ್ತಿಯ ರಕ್ಷಣೆ ತಮ್ಮ ಉದ್ದೇಶವೆಂದು ರಾಜ್ಯಪಾಲರ ಬಾಯಿಂದ ಹೇಳಿಸಲಾಗಿದೆ. ಆದರೆ ವಾಸ್ತವದಲ್ಲಿ ನಮ್ಮ ಬಿಜೆಪಿ ಸರ್ಕಾರವು ರಾಜ್ಯದ ಸಮಗ್ರ ಹಿತಾಸಕ್ತಿ ರಕ್ಷಿಸಲು ಜಾರಿಗೊಳಿಸಿದ್ದ ಅನೇಕ ಯೋಜನೆಗಳ ಬಗ್ಗೆ ಇಂದಿನ ರಾಜ್ಯಪಾಲರ ಭಾಷಣದಲ್ಲಿಚಕಾರ ಕೂಡ ಎತ್ತಿಲ್ಲ. ಒಟ್ಟಾರೆ ಈ …

Read More »

ಜೂಜಾಟದಲ್ಲಿ ತೊಡಗಿದ್ದ, ಆರೋಪಿಗಳ ಬಂಧನ,ಹಣ ವಶಕ್ಕೆ ಪಡೆದ ಪೋಲಿಸ್ ಅಧಿಕಾರಿಗಳು

ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟ್ ಎಲೆಗಳ ಸಹಾಯದಿಂದ ತಮ್ಮ ಲಾಭಕ್ಕೋಸ್ಕರ ಜನರಿಂದ ಹಣ ಪಡೆದು ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ, ಗದಗ ಜಿಲ್ಲೆಯ ತಾಲ್ಲೂಕಿನ ವಿವಿಧ ಪ್ರದೇಶದಲ್ಲಿ ಪೋಲಿಸ್‌ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಜೂಜಾಟದ ಹಣ ವಶಪಡಿಸಿಕೊಂಡು, ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ, ಇನ್ನು ಸಾರ್ವಜನಿಕ ರಿಂದ ಸ್ಥಳದಲ್ಲಿ ಬಾಂಬೆ ಓಸಿ ಮೂಲಕ ತಮ್ಮ ಲಾಭಕ್ಕೋಸ್ಕರ ಜನರಿಂದ ಹಣ ಪಡೆದು ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿದ ಪೋಲಿಸರು …

Read More »

ಪಾಸ್‌ ಪಡೆಯುವ ಸಮಯದಲ್ಲಿ ನೂಕು ನುಗ್ಗಲು ಸ್ಥಳಕ್ಕೆ ಪೋಲಿಸ್‌ರ ಬೇಟಿ

ಗದಗ ನಗರದ ಹೊಸ ಬಸ್ಸ್‌ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಬಸ್ಸ ಪಾಸ್‌ ನೀಡುವ ಸಮಯದಲ್ಲಿ ನೂಕನುಗ್ಗಲು ಉಂಟಾಗಿರುವ ಕಾರಣ ಸ್ಥಳೀಯ ಅಧಿಕಾರಿಯಗಳು ಬಸ್ಸ ನಿಲ್ದಾಣದಿಂದ ಪೋಲಿಸ್‌ ತುರ್ತ ಸಹಾವಾಣಿ ಕೆರೆ ಮಾಡಿದ್ದಾರೆ ತದನಂತರದಲ್ಲಿ ಕೂಡಲೇ ಸ್ಥಳಕ್ಕೆ ತೆರಳಿದ 112 ಸಿಬ್ಬಂದಿಗಳು ಸಮಸ್ಯೆ ಪರಿಶೀಲಿಸಿ ನಿಲ್ದಾಣದಲ್ಲಿ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸುವ ಸಂದರ್ಭದಲ್ಲಿ ನೂಕು ನುಗ್ಗಲು ಮಾಡಿದ ಕೀಡಿಗೇಡಿಗಳಿಗೆ ತಿಳಿ ಹೇಳಿ ಸಮಸ್ಯೆ ಬಗೆಹರಿಸಲಾಗಿರುತ್ತದೆ. ಎಂದು ತಿಳಿದು ಬಂದಿದೆ ಗದಗ ಜಿಲ್ಲೆ ಹೊಸ …

Read More »

ನರಗುಂದ ಠಾಣೆ ಮೆಟ್ಟಿಲು ಏರಿದ ಅಣ್ಣ – ತಮ್ಮಂದಿರ ಜಗಳ …

ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ 112 ತುರ್ತು ಸಹಾಯವಾಣಿಗೆ ಚಿಕ್ಕನರಗುಂದ ಗ್ರಾಮದಲ್ಲಿ ಜಗಳದ ಕುರಿತು ಕರೆ ಬಂದಿದ್ದು ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ಅಣ್ಣ ತಮ್ಮಂದಿರ ನಡುವೆ ಜಗಳವಾಗಿದ್ದು, ಸ್ಥಳದಲ್ಲಿ ಸಮಸ್ಯೆ ಬಗೆಹರಿಯದ ಕಾರಣ ಮುಂದಿನ ಕ್ರಮಕ್ಕಾಗಿ ನರಗುಂದ ಸ್ಥಳೀಯ ಪೊಲೀಸ್ ಠಾಣೆಗೆ ಪ್ರಕರಣವನ್ನು ಹಸ್ತಂತರಿಸಲಾಗಿದೆ. ಕ್ಷುಲಕ ಕಾರಣಕ್ಕಾಗಿ ಜಗಳವಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸಧ್ಯ ಪ್ರಕರಣ ನರಗುಂದ ಪೋಲಿಸ್‌ ಠಾಣೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ,

Read More »

ಆಸ್ತಿಗಾಗಿ ಅಣ್ಣನಿಂದ ತಮ್ಮನ ಕೊಲೆ

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಡಹುಟ್ಟಿದ ತಮ್ಮನನ್ನೇ ಕೊಡಲಿಯಿಂದ ಹೊಡೆದು ಭೀಕರವಾಗಿ ಕೊಲೆಗೈದ ಘಟನೆ ಶುಕ್ರವಾರ ಮಧ್ಯಾಹ್ನ ಜರುಗಿದೆ. ಗದಗ ಜಿಲ್ಲೆಯ ರೋಣ ಪಟ್ಟಣದ ಬಳಿಯ ಜಮೀನಿನಲ್ಲಿ ಇಂದು ಮಧ್ಯಾಹ್ನ ಜರುಗಿದ್ದು, ಶೇಕಪ್ಪ ನವಲಗುಂದ (36) ಎಂಬಾತನೇ ಕೊಲೆಗೀಡಾದ ವ್ಯಕ್ತಿ. ಮೃತ ಶೇಕಪ್ಪ ಹುಬ್ಬಳ್ಳಿಯ ಬಿ ಆರ್ ಟಿಸಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಕಲಹ ನಡೆದಿತ್ತು ಎನ್ನಲಾಗಿದ್ದು, ಇಂದು …

Read More »

ನರಗುಂದ ಅನುಮಾನಾಸ್ಪದ ವ್ಯಕ್ತಿಯ ಓಡಾಟ ಪೋಲಿಸ್‌ ರಿಂದ ವ್ಯಕ್ತಿಯ ಬಂಧನ

ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಅನುಮಾನಾಸ್ಪದ ಓಡಾಟ ಕುರಿತು ಕರೆ ಬಂದಿದ್ದು ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಬೇಟಿ ನೀಡಿದ ಪೋಲಿಸ್‌ ಅಧಿಕಾರಿಗಳು ವ್ಯಕ್ತಿ ಒಬ್ಬ ನನ್ನು ಬಂಧನ ಮಾಡಿದ್ದಾರೆ , 112 ತುರ್ತು ಸಹಾಯವಾಣಿಗೆ ಕರೆ ಬಂದ ಹಿನ್ನಲೆ ಇ.ಆರ.ವಿ. ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ಒಬ್ಬ ವ್ಯಕ್ತಿಯನ್ನು ಸ್ಥಳೀಯರು ಹಿಡದಿದ್ದು ಆತನನ್ನು ಸ್ಥಳೀಯ ಪೊಲೀಸ ಠಾಣೆಗೆ ಒಪ್ಪಿಸಿರುತ್ತಾರೆ. ವ್ಯಕ್ತಿ ಅರೆ ಪ್ರಜ್ಞೆ ವ್ಯವಸ್ಥೆಯಲ್ಲಿ ಇದ್ದ ಕಾರಣ ಸ್ಥಳೀಯರು …

Read More »

ಅತ್ಯಾಚಾರದ ಆರೋಪಿಗೆ 25 ವರ್ಷ ಜೈಲು, 50 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ಆದೇಶ.

ಗದಗ ; ಅಪ್ರಾಪ್ತೆಯೋರ್ವಳನ್ನು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿ, ಜೀವ ಬೆದರಿಕೆ ಹಾಕಿದ್ದ ಆರೋಪಿತನ ಮೇಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗದಗ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯವು ಅಪರಾಧಿಗೆ ಶಿಕ್ಷೆ ವಿಧಿಸಿದೆ. ಪ್ರಕರಣದ ಆರೋಪಿ, ಸವದತ್ತಿ ತಾಲೂಕಿನ ತೆರದಕೊಪ್ಪ ಗ್ರಾಮದ ಮೌಲಾಸಾಬ ಇಮಾಮಸಾಬ ದೊಡ್ಡಮನಿ ನೊಂದ ಬಾಲಕಿಯು ಅಪ್ರಾಪ್ತೆಯೆಂದು ತಿಳಿದಿತ್ತು.ಹೀಗಿದ್ದರೂ, ಅವಳಿಗೆ ಪ್ರಾಣ ಬೆದರಿಕೆ ಹಾಕಿ, ಒತ್ತಾಯಪೂರ್ವಕವಾಗಿ ಸವದತ್ತಿ ತಾಲೂಕಿನ ಮುನವಳ್ಳಿಗೆ ಕರೆದುಕೊಂಡು ಹೋಗಿ, ಅಲ್ಲಿಂದ ಬೈಕ್‌ನಲ್ಲಿ ಹತ್ತಿಸಿಕೊಂಡು …

Read More »

ನರಗುಂದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ

ಗದಗ ; ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ವಿವಿದೋದ್ಧೇಶಗಳ ಸಂಘ ನರಗುಂದ ವತಿಯಿಂದ SSLC ಮತ್ತು PUC ವಿದ್ಯಾರ್ಥಿಗಳಿಗೆ ನಿನ್ನೆ ದಿನ ಪ್ರತಿಭಾ ಪುರಸ್ಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ನರಗುಂದ ಮತಕ್ಷೇತ್ರದ ಶಾಸಕರಾದ ಸಿ.ಸಿ.ಪಾಟೀಲ್‌ ಅವರ ಪುತ್ರ ಉಮೇಶಗೌಡ ಪಾಟೀಲ್‌ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ದೂರೆಸ್ವಾಮಿ ವಿರಕ್ತಮಠದ ಶ್ರೀಗಳು ಹಾಗೂ ಸಾಧನೆ ಮಾಡಿದ ಮಕ್ಕಳ ಪೋಷಕರು ಹಾಗೂ ನರಗುಂದ ಪಟ್ಟಣದ ಸಮಸ್ತ …

Read More »

ಅಕ್ರಮ ಮದ್ಯ ಮಾರಟಗಾರರ ಬಂಧನ , ಹಣ ಮದ್ಯ ಜಪ್ತಿ

ಗದಗ ಜಿಲ್ಲೆಯಲ್ಲಿ ದಿನಾಂಕ: 17.06.2023 ರಿಂದ 23.06.2023 ಇಲ್ಲಿಯವರೆಗೆ ಸಾರ್ವಜನಿಕ ಸ್ಥಳದಲ್ಲಿ ಪಾಸ್ ಪರ್ಮಿಟ್ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಗದಗ ಜಿಲ್ಲೆಯ ವಿವಿಧ ತಾಲ್ಲೂಕಿನ ಪೋಲಿಸ ಅಧಿಕಾರಿಗಳು ಅಕ್ರಮ ಮದ್ಯ ಮತ್ತು ಹಣ ವಶಪಡಿಸಿಕೊಂಡು ಆರೋಪಿ ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗದಗ ಜಿಲ್ಲೆಯ ರೋಣ , ಹಾಗೂ ಗದಗ ಗ್ರಾಮೀಣ ಭಾಗದ ಪೋಲಿಸ್‌ ಅಧಿಕಾರಿಗಳು, ಹಾಗೂ ಮಳಗುಂದ ಹಾಗೂ ಶಿರಹಟ್ಟಿ, ಹಾಗೂ …

Read More »