BigTv News
October 30, 2022
Breaking News, ಜಿಲ್ಲೆ, ಶಿವಮೊಗ್ಗ
ಶಿವಮೊಗ್ಗ: ಬಿಜೆಪಿಯನ್ನ ತೊಲಗಿಸಬೇಕು ಎಂಬುದೇ ಬಿಜೆಪಿಯವರ ಸಂಕಲ್ಪ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂಕಲ್ಪ ಯಾತ್ರೆಯನ್ನು ಟೀಕಿಸಿದ್ದಾರೆ. ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಈ ಸಂಕಲ್ಪ ಯಾತ್ರೆಗೆ ಹಣ ನೀಡಿ ಜನರನ್ನು ಕರೆದುಕೊಂಡು ಬಂದಿದ್ದಾರೆ. ಅದಕ್ಕಾಗಿ ಕಾರ್ಯಕ್ರಮದಲ್ಲಿ ಜನರು ಕುಳಿತುಕೊಳ್ಳುತ್ತಿಲ್ಲ. ಬಿಜೆಪಿಯವರು ಅಂದ್ರೆ ಡೋಂಗಿಗಳು, ಸುಳ್ಳು ಹೇಳುವವರು ಎಂದು ವ್ಯಂಗ್ಯವಾಡಿದ್ದಾರೆ. ‘ಬಿಜೆಪಿಯವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಇಲ್ಲ. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಆರ್‌ಎಸ್‍ಎಸ್ …
Read More »
BigTv News
October 28, 2022
Breaking News, ಜಿಲ್ಲೆ, ಶಿವಮೊಗ್ಗ
‘ ಶಿವಮೊಗ್ಗ: ಕೆಲವು ತಿಂಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ಬಜರಂಗ ದಳದ ಕಾರ್ಯಕರ್ತ ಹರ್ಷ ಅವರ ಕುಟುಂಬದ ಸದಸ್ಯರಿಗೆ ಕಿಡಿಗೇಡಿಗಳು ಕೊಲೆ ಬೆದರಿಕೆ ಹಾಕಿದ್ದಾರೆಂಬ ಆರೋಪದ ಬಗ್ಗೆ ತನಿಖೆ ನಡೆಸಲಾಗಿದೆ. ಆದರೆ ಈವರೆಗೆ ಬೆದರಿಕೆ ಹಾಕಿರುವುದಕ್ಕೆ ಪೂರಕವಾದ ಅಂಶಗಳು ಕಂಡುಬಂದಿಲ್ಲ ಎಂದು ಶಿವಮೊಗ್ಗ ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇವಲ ಹರ್ಷ ಸಹೋದರಿ ಅಶ್ವಿನಿ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಶಿವಮೊಗ್ಗಕ್ಕೆ ರಕ್ಷಣೆ ನೀಡಲು ಇಲಾಖೆ …
Read More »
BigTv News
October 21, 2022
Breaking News, ಜಿಲ್ಲೆ, ಶಿವಮೊಗ್ಗ
ಶಿವಮೊಗ್ಗ: ಅಕ್ಟೋಬರ್ 22ರ ಶನಿವಾರ ಸಂಜೆ 5 ಗಂಟೆಗೆ ವಿಜ್ಞಾನ ಮೈದಾನದಲ್ಲಿ ‘ಸಾವರ್ಕರ್ ಸಾಮ್ರಾಜ್ಯ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 1944ರಲ್ಲಿ ವೀರ್ ಸಾವರ್ಕರ್ ಅವರು ಶಿವಮೊಗ್ಗಕ್ಕೆ ಭೇಟಿ ನೀಡಿದ ನೆನಪಿಗಾಗಿ ‘ಸಮಗಮ’ ಮತ್ತು ‘ಶ್ರೀಗಂಧ’ ಸಂಘಟನೆಗಳು ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿವೆ. “ಹೆಚ್ಚಿನ ಜನರು ಸಾವರ್ಕರ್ ಅವರನ್ನು ಗೌರವಿಸುತ್ತಾರೆ, ಆದರೆ ಕೆಲವರು ಅವರನ್ನು …
Read More »
BigTv News
October 20, 2022
Breaking News, ಜಿಲ್ಲೆ, ಶಿವಮೊಗ್ಗ
ಶಿವಮೊಗ್ಗ: ನಗರದಲ್ಲಿ ಅಭಿಮಾನಿಗಳಿಂದ ನಟ ಪುನೀತ್ ರಾಜಕುಮಾರ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಮಾಡಲಾಯಿತು. ಮೂರು ಸಾವಿರ ಜನರಿಗೆ ಬಾಡೂಟ ಬಡಿಸಿ, ಯುವಕರು ತಮ್ಮ ನೆಚ್ಚಿನ ನಟನಿಗೆ ನಮನ ಸಲ್ಲಿಸಿದರು. ವಿದ್ಯಾನಗರದ ಯಾಲಕಪ್ಪನಕೇರಿಯ ಶ್ರೀ ವೀರಕೇಸರಿ ಯುವಕರ ಸಂಘದ ವತಿಯಿಂದ ನಟ ಪುನೀತ್ ರಾಜಕುಮಾರ್ ಮೊದಲ ವರ್ಷದ ಪುಣ್ಯ ಸ್ಮರಣೆ ಮಾಡಲಾಯಿತು. ಬಿ.ಹೆಚ್.ರಸ್ತೆ ಪಕ್ಕದಲ್ಲೇ ವಿದ್ಯಾನಗರದಲ್ಲಿ ವಿವಿಧ ಹೂವುಗಳಿಂದ ಅಲಂಕೃತ ಮಂಟಪ ನಿರ್ಮಿಸಲಾಗಿತ್ತು. ಅದರಲ್ಲಿ ನಟ ಪುನೀತ್ ರಾಜಕುಮಾರ್ …
Read More »
BigTv News
October 19, 2022
Breaking News, ಜಿಲ್ಲೆ, ಶಿವಮೊಗ್ಗ
ಶಿವಮೊಗ್ಗ : ರಾಜ್ಯದಲ್ಲಿ ಮತ್ತೆ ಧರ್ಮದ ದಂಗಲ್ ಶುರುವಾಗಿದ್ದು, ಹಲಾಲ್ ಮುಕ್ತ ದೀಪಾವಳಿಗೆ ಹಿಂದೂಪರ ಸಂಘಟನೆಗಳು ಕರೆಕೊಟ್ಟಿವೆ. ಈ ಬಗ್ಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದು, ನಾನು ನನ್ನ ಜೀವನದಲ್ಲಿ ಹಲಾಲ್ ಕಟ್ ಮಾಂಸ ತಿಂದಿಲ್ಲ, ಮುಂದೆಯೂ ತಿನ್ನೋದಿಲ್ಲ ಎಂದಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ನನಗೆ ಹಲಾಲ್ ಕಟ್ಟೋ, ಹಲ್ಕ ಕಟ್ಟೋ ಗೊತ್ತಿಲ್ಲ. ನಾವು ಏಕೆ ನಮ್ಮ ದೇವರಿಗೆ ಹಲಾಲ್ ಕಟ್ ಮಾಂಸ ಎಡೆ ಇಡೋಣ …
Read More »
BigTv News
September 22, 2022
Breaking News, ಶಿವಮೊಗ್ಗ
ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಗೆ ಮುರುಘಾಶ್ರೀಗಳನ್ನ ಕೋರ್ಟ್ ಆದೇಶದ ಮೇರೆಗೆ ಸ್ಥಳಾಂತರ ಮಾಡಲಾಗಿದೆ. ಆರೋಗ್ಯ ತಪಾಸಣೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ತಪಾಸಣೆ ನಡೆಸಲು ಕರೆದೊಯ್ಯಲಾಗಿದೆ. ವ್ಯಾನ್ ಇಳಿಯುತ್ತಿದ್ದಂತೆ ವೀಲ್ಚೇರ್ನಲ್ಲಿ ಕರೆದೊಯ್ದ ಸಿಬ್ಬಂದಿ, ನಿನ್ನೆ ಸಂಜೆ 6.35ಕ್ಕೆ DAR ವ್ಯಾನ್ನಲ್ಲಿ ಶ್ರೀಗಳನ್ನು ಕರೆತರಲಾಯ್ತು. ಶಿವಮೊಗ್ಗ ಜೈಲ್ಗೆ ಕರೆದೊಯ್ದು ರಿಜಿಸ್ಟರ್ ಮಾಡಿಸಲಾಯ್ತು. ಜೈಲ್ನಲ್ಲಿ ರಿಜಿಸ್ಟರ್ ಮಾಡಿಸಿದ ನಂತರ ಮೆಗ್ಗಾನ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಶ್ರೀಗಳ ವೈದ್ಯರು …
Read More »
BigTv News
September 13, 2022
Breaking News, ಜಿಲ್ಲೆ, ಶಿವಮೊಗ್ಗ
ಶಿವಮೊಗ್ಗ : ರೈಲು ಹತ್ತುವಾಗಲೇ ಕಾಲು ಜಾರಿ ಬಿದ್ದು ತಂದೆ, ಮಗ ಮೃತಪಟ್ಟಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ನಡೆದಿದೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ 78 ವರ್ಷದ ಮೋಹನ್ ಪ್ರಸಾದ್ ಹಾಗೂ ಅವರ ಪುತ್ರ 38 ವರ್ಷದ ಅಮರನಾಥ್ ಮೃತರು. ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಬೆಂಗಳೂರಿಗೆ ತೆರಳುವ ಸಲುವಾಗಿ ತಂದೆ ಮಗ ತಾಳಗುಪ್ಪ – ಬೆಂಗಳೂರು – ಮೈಸೂರು ರೈಲು ಹತ್ತುವಾಗ ಮೊದಲು ಮಗ ರಾಜೇಂದ್ರ …
Read More »
BigTv News
August 27, 2022
Breaking News, ಜಿಲ್ಲೆ, ಶಿವಮೊಗ್ಗ
ಶಿವಮೊಗ್ಗ: ಈ ಬಾರಿಯ ಗಣೇಶೋತ್ಸವ ಮೆರವಣಿಗೆಯಲ್ಲಿಯಾರೂ ಡಿಜೆ ಬಳಸುವಂತಿಲ್ಲ. ಪ್ರತಿ ವರ್ಷವೂ ಡಿಜೆ ಅನ್ನು ಬ್ಯಾನ್ ಮಾಡುತ್ತಿದ್ದೆವು. ಹಾಗೆಯೇ ಈ ವರ್ಷವೂ ಡಿಜೆ ಬ್ಯಾನ್ ಮಾಡುತ್ತಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕುರಿತಂತೆ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆದಿದ್ದೆವು. ಡಿಸಿ ಅವರು ಯಾರು ಮೆರವಣಿಗೆ ವೇಳೆ ಡಿಜೆ ಬಳಸುವಂತಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಹಾಗಾಗಿ ಸಾರ್ವಜನಿಕರು ಈ ಆದೇಶ ಪಾಲಿಸಬೇಕು …
Read More »
BigTv News
August 25, 2022
Breaking News, ಜಿಲ್ಲೆ, ಶಿವಮೊಗ್ಗ
ಶಿವಮೊಗ್ಗ: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಅನಾಮಧೇಯ ವ್ಯಕ್ತಿಯಿಂದ ಜೀವ ಬೆದರಿಕೆ ಪತ್ರ ಬಂದಿದೆ. ಅವರ ಆಪ್ತ ಸಹಾಯಕ ಈ ಕುರಿತಾಗಿ ಜಿಲ್ಲಾ ಪೊಲೀಸ್ ಅಧ್ಯಕ್ಷರಿಗೆ ದೂರು ನೀಡಿದ್ದಾರೆ. ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ಈಶ್ವರಪ್ಪ ನಿವಾಸಕ್ಕೆ ಬೆದರಿಕೆ ಪತ್ರ ಬಂದಿದೆ. ಪತ್ರದಲ್ಲಿ ಸ್ವಾತಂತ್ರ್ಯಕ್ಕೆ ಹೋರಾಡಿದ ಟಿಪ್ಪು ಸುಲ್ತಾನ್ ಬಗ್ಗೆ ನೀನು ಮುಸ್ಲಿಂ ಗೂಂಡಾ ಎಂದು ಹೇಳಿದೆಯಲ್ಲ, ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಕಾಲೇಜು ಕಟ್ಟಡ ಕಟ್ಟಲು ನಮ್ಮ …
Read More »
BigTv News
August 17, 2022
Breaking News, ಜಿಲ್ಲೆ, ಶಿವಮೊಗ್ಗ
ಶಿವಮೊಗ್ಗ: ನಗರದಲ್ಲಿ ವೀರ ಸಾರ್ವಕರ್ ಮತ್ತು ಟಿಪ್ಪು ಫೋಟೋ ಗಲಾಟೆ ನಡೆದಿತ್ತು. ಆದ್ರೆ ಗಲಾಟೆಗೆ ಸಂಬಂಧಪಡದ 20 ವರ್ಷದ ಪ್ರೇಮ್ ಸಿಂಗ್ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿದ್ದರು. ಚಾಕು ಇರಿತಕ್ಕೆ ಸಂಬಂಧಿಸಿದಂತೆ ತಡರಾತ್ರಿಯೇ ಇಬ್ಬರನ್ನು ಬಂಧಿಸಲಾಗಿತ್ತು. ಶಿವಮೊಗ್ಗದ ಫಲಕ್ ಪ್ಯಾಲೇಸ್ ಹಿಂದೆ ಅವಿತುಕೊಂಡಿದ್ದ ಆರೋಪಿಯ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದಾರೆ. ಜಬೀವುಲ್ಲಾ ಬಂಧನಕ್ಕೆ ಮುಂದಾಗಿದ್ದ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದನು. ಚಾಕು ತೋರಿಸಿ ಪರಾರಿಯಾಗಲು ಜಬೀವುಲ್ಲಾ ಪ್ರಯತ್ನಿಸಿದ್ದನು. ಈ ವೇಳೆ …
Read More »