Breaking News

ಮುರುಘಾಶ್ರೀನ್ನು ಮೆಗ್ಗಾನ್​​ ಆಸ್ಪತ್ರೆಗೆ ಸ್ಥಳಾಂತರ


ಶಿವಮೊಗ್ಗ:  ಮೆಗ್ಗಾನ್​​ ಆಸ್ಪತ್ರೆಗೆ ಮುರುಘಾಶ್ರೀಗಳನ್ನ ಕೋರ್ಟ್ ಆದೇಶದ ಮೇರೆಗೆ ಸ್ಥಳಾಂತರ ಮಾಡಲಾಗಿದೆ.

ಆರೋಗ್ಯ ತಪಾಸಣೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಹೃದ್ರೋಗ ವಿಭಾಗದಲ್ಲಿ ತಪಾಸಣೆ ನಡೆಸಲು ಕರೆದೊಯ್ಯಲಾಗಿದೆ. ವ್ಯಾನ್​​​​ ಇಳಿಯುತ್ತಿದ್ದಂತೆ ವೀಲ್​​​ಚೇರ್​​ನಲ್ಲಿ ಕರೆದೊಯ್ದ ಸಿಬ್ಬಂದಿ, ನಿನ್ನೆ ಸಂಜೆ 6.35ಕ್ಕೆ DAR ವ್ಯಾನ್​​ನಲ್ಲಿ ಶ್ರೀಗಳನ್ನು ಕರೆತರಲಾಯ್ತು. ಶಿವಮೊಗ್ಗ ಜೈಲ್​​ಗೆ ಕರೆದೊಯ್ದು ರಿಜಿಸ್ಟರ್​ ಮಾಡಿಸಲಾಯ್ತು. ಜೈಲ್​​ನಲ್ಲಿ ರಿಜಿಸ್ಟರ್​​​​​​ ಮಾಡಿಸಿದ ನಂತರ ಮೆಗ್ಗಾನ್​​ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಶ್ರೀಗಳ ವೈದ್ಯರು ಹೃದಯ ತಪಾಸಣೆಗಾಗಿ ಕೋರ್ಟ್​ಗೆ ಮನವಿ ಮಾಡಿದ್ದರು.

Share News

About BigTv News

Check Also

ಯುವತಿ ಕುತ್ತಿಗೆಗೆ ಚಾಕು ಇಟ್ಟು ಸರ ದರೋಡೆ ಯತ್ನ: ಕಿಡಿಗೇಡಿ ಬಂಧನ

ಬೆಂಗಳೂರು: ಇಂದಿರಾನಗರದ ಅಂಗಡಿಯೊಂದಕ್ಕೆ ನುಗ್ಗಿ ಯುವತಿಯ ಕುತ್ತಿಗೆಗೆ ಚಾಕು ಇಟ್ಟು ಚಿನ್ನದ ಸರ ದರೋಡೆಗೆ ಯತ್ನಿಸಿದ ಪ್ರಭುರಾಜ್ (40) ಎಂಬಾತನನ್ನು …

Leave a Reply

Your email address will not be published. Required fields are marked *